ಕರ್ನಾಟಕ ಹೈಕೋರ್ಟ್‌ ಸಂಪೂರ್ಣ ಕಂಪ್ಯೂಟರ್ ಮಯ

By Shwetha
|

ಕರ್ನಾಟಕ ಹೈಕೋರ್ಟ್ ಶೀಘ್ರದಲ್ಲೇ ಡಿಜಿಟಲ್ ಮಾರ್ಗವನ್ನು ಅನುಸರಿಸಲಿದೆ. ಪಿಟಿಶನ್ ಭರ್ತಿ ಮಾಡುವುದರಿಂದ ಹಿಡಿದು ನ್ಯಾಯ ತೀರ್ಮಾನದವರೆಗೆ ಎಲ್ಲವೂ ಕಂಪ್ಯೂಟರ್ ಮಯವಾಗಲಿದೆ. ಇನ್ನು ಕಾಗದ ಇಲ್ಲದೆ ಕಂಪ್ಯೂಟರೀಕೃತ ಸೇವೆಯನ್ನು ನ್ಯಾಯಾಲಯದಲ್ಲಿ ಕಾಣಬಹುದಾಗಿದೆ.

ಕರ್ನಾಟಕ ಹೈಕೋರ್ಟ್‌ ಸಂಪೂರ್ಣ ಕಂಪ್ಯೂಟರ್ ಮಯ

ಓದಿರಿ: ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಬೆಂಗಳೂರಿನಲ್ಲಿರುವ 40 ಕೋರ್ಟ್ ಹಾಲ್‌ಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತಿದ್ದು, ಹುಬ್ಬಳ್ಳಿ - ಧಾರವಾಡ ಮತ್ತು ಕಲಬುರ್ಗಿಯ 20 ಕೋರ್ಟ್ ಹಾಲ್‌ಗಳು ಇದರಲ್ಲಿ ಸೇರಿವೆ. ಯುಎಸ್, ಯುಕೆ ಮತ್ತು ಸಿಂಗಪೂರಿನಲ್ಲಿರುವ ನ್ಯಾಯಾಲಯ ವ್ಯವಸ್ಥೆಗಳನ್ನು ಅರಿತುಕೊಂಡು ಹೂ ಕೋರ್ಟ್ ಈ ರೀತಿಯ ಪ್ರಯೋಗವನ್ನು ಮಾಡಿದೆ.

ಪೆನ್ ಡ್ರೈವ್ ಅಥವಾ ಪೇಪರ್ ಬಳಸಿ ಪಿಟಿಶನ್ ಭರ್ತಿಮಾಡುವ ವ್ಯವಸ್ಥೆಯನ್ನು ಪಿಟಿಶನರ್‌ಗಳು ಇನ್ನು ಹೊಂದಲಿದ್ದಾರೆ. ನಂತರ ಕೋರ್ಟ್ ಇದನ್ನು ಸ್ಕ್ಯಾನ್ ಮಾಡಿ ನಂತರ ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ಕ್ರಿಮಿನಲ್, ಸಿವಿಲ್, ಮೊದಲಾದವಕ್ಕೆ ಸಂಬಂಧಿಸಿ ಓರ್ವ ನ್ಯಾಯಾಧೀಶರಿಗೆ ಪಿಟಿಶನ್‌ಗಳನ್ನು ನೀಡಲಾಗುತ್ತದೆ.

ಓದಿರಿ: ಬೆಂಗಳೂರು ಪೋಲೀಸರು ಇನ್ನು ವಾಟ್ಸಾಪ್‌ನಲ್ಲಿ 24x7 ಡ್ಯೂಟಿ

ಇನ್ನು ನ್ಯಾಯಾಧೀಶರಿಗೆ ಟೇಬಲ್ ಟಚ್ ಸ್ಕ್ರೀನ್ ಕಂಪ್ಯೂಟರ್‌ಗಳು ಮತ್ತು ದೊಡ್ಡ ಪರದೆಗಳುಳ್ಳ ಟಿವಿಯನ್ನು ಕೋರ್ಟ್ ಹಾಲ್‌ಗಳಲ್ಲಿ ಒದಗಿಸಲಾಗುತ್ತದೆ. ನ್ಯಾಯಾಧೀಶರು, ವಕೀಲರು ಮತ್ತು ಕೋರ್ಟ್‌ನಲ್ಲಿ ಕುಳಿತಿರುವ ಇತರರು ಟಿವಿ ಪರದೆಯಲ್ಲಿ ಡಾಕ್ಯುಮೆಂಟ್‌ಗಳನ್ನು ಕಾಣಬಹುದು.

Best Mobiles in India

English summary
The Karnataka High Court will soon go digital in keeping with Bengaluru's reputation as India's silicon city . The court will digitise everything from the filing of petitions to judgment delivery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X