Home
ಸುದ್ದಿಜಾಲ

ಅಂಬಾನಿಯ 'ರಿಲಯನ್ಸ್ ರಿಟೇಲ್'ಗಾಗಿ ಇ-ಕಾಮರ್ಸ್ ಪಾಲಿಸಿ ತಂದಿತೆ ಮೋದಿ ಸರ್ಕಾರ?!

By Bhaskar N J

ಭಾರತದ ಟೆಲಿಕಾಂ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಜಿಯೋ ಇದೀಗ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೃಹತ್‌ ಇ-ಕಾಮರ್ಸ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಅಂಬಾನಿ ಇನ್ನೇನು 'ರಿಲಯನ್ಸ್ ರಿಟೇಲ್' ಇ ಕಾಮರ್ಸ್ ಸಂಸ್ಥೆಯನ್ನು ಲಾಂಚ್ ಮಾಡುತ್ತಾರೆ ಎನ್ನುವ ವೇಳೆಯಲ್ಲಿಯೇ ಕೇಂದ್ರ ಸರ್ಕಾರ ದೇಶದಲ್ಲಿ ಇ-ಕಾಮರ್ಸ್ ಪಾಲಿಸಿ ತರಲು ಹೊರಟಿದೆ.!

ಹೌದು, ಇದು ಕಾಕತಾಳಿಯವೋ ಉದ್ದೇಶಪೂರ್ವಕವೋ ಗೊತ್ತಿಲ್ಲ. ಆದರೆ, ದೇಶದಲ್ಲಿ ಇ-ಕಾಮರ್ಸ್ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾದ ನಂತರ, ಪರೋಕ್ಷವಾಗಿ ರಿಲಯನ್ಸ್ ಸಂಸ್ಥೆಯ 'ರಿಲಯನ್ಸ್ ರಿಟೇಲ್' ತೆರೆಯಲು ಕೇಂದ್ರ ಸರಕಾರ ಸಹಾಯ ಮಾಡುತ್ತಿದೆಯೋ ಎಂಬ ಅನುಮಾನ ಮೂಡಿದೆ. ಇದನ್ನು ಮಾರುಕಟ್ಟೆ ತಜ್ಞರು ಕೂಡ ವಿಶ್ಲೇಷಿಸಿ ಹೌದೆನ್ನುತ್ತಿದ್ದಾರೆ.

ಅಂಬಾನಿಯ 'ರಿಲಯನ್ಸ್ ರಿಟೇಲ್'ಗಾಗಿ ಇ-ಕಾಮರ್ಸ್ ಪಾಲಿಸಿ ತಂದಿತೆ ಮೋದಿ ಸರ್ಕಾರ?!

'ಇಂಡಿಯಾ ಫಸ್ಟ್‌' ನೀತಿಗೆ ಒತ್ತು ನೀಡುವ ಸಲುವಾಗಿ ಈ ಹೊಸ ಇ-ಕಾಮರ್ಸ್ ಪಾಲಿಸಿಯನ್ನು ತರುತ್ತಿರುವುದಾಗಿ ಕೇಂದ್ರ ಹೇಳಿಕೊಂಡಿದ್ದರೂ ಸಹ, ಅಂಬಾನಿ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಹಾಗಾದರೆ, ದೇಶದಲ್ಲಿ ಜಾರಿಯಾಗುತ್ತಿರುವ ಇ-ಕಾಮರ್ಸ್ ಪಾಲಿಸಿಗಳು ಅಂಬಾನಿ ಪರವಾಗಿವೆಯೇ ಎಂಬುದನ್ನು ಮುಂದೆ ನೋಡೋಣ.

ಇ-ಕಾಮರ್ಸ್ ಪಾಲಿಸಿ

ಇ-ಕಾಮರ್ಸ್ ಪಾಲಿಸಿ

ಕೇಂದ್ರ ಸರಕಾರನೂತನ ಇ-ಕಾಮರ್ಸ್ ಪಾಲಿಸಿ ತರಲು ಹೊರಟಿದೆ. ಇದರ ಕರಡು ಕೂಡ ಸಿದ್ಧವಾಗಿದೆ. ಆನ್‌ಲೈನ್‌ ಮಾರುಕಟ್ಟೆಯ ಮೇಲೆ ‘ಸರಕಾರದ ನಿಯಂತ್ರಣ' ಸಾಧಿಸಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. 'ಇಂಡಿಯಾ ಫಸ್ಟ್‌' ನೀತಿಗೆ ಒತ್ತು ನೀಡುವ ಸಲುವಾಗಿ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುವಂತಹ ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ.

ಅಂಬಾನಿಯ ರಂಗ ಪ್ರವೇಶ!

ಅಂಬಾನಿಯ ರಂಗ ಪ್ರವೇಶ!

ಈಗಾಗಲೇ ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಮಾರ್ಟ್, ರಿಲಯನ್ಸ್ ಡಿಜಿಟಲ್‌ ಮೊದಲಾದ ಮುಖೇಶ್ ಅಂಬಾನಿಯ ಇ-ಕಾಮರ್ಸ್ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲಾ ಸಣ್ಣ ಪ್ರಮಾಣದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿರುವುದರಿಂದ, ದೇಶದ ದೊಡ್ಡ ಮಾರುಕಟ್ಟೆ ಪಡೆಯಲು ಅಂಬಾನಿ 'ರಿಲಯನ್ಸ್ ರಿಟೇಲ್' ಇ ಕಾಮರ್ಸ್ ಸ್ಥಾಪಿಸಲು ಮುಂದಾಗಿದ್ದಾರೆ.

ಇದು ಕಾಕತಾಳಿಯವೇ?

ಇದು ಕಾಕತಾಳಿಯವೇ?

ರಿಲಯನ್ಸ್ ರಿಟೇಲ್ ಆರಂಭಕ್ಕೂ ಮುನ್ನ ಆನ್‌ಲೈನ್‌ ಮಾರುಕಟ್ಟೆಯ ಮೇಲೆ ‘ಸರಕಾರದ ನಿಯಂತ್ರಣ' ಸಾಧಿಸಲು ಹೊರಟಿರುವುದನ್ನು ಕಾಕತಾಳಿಯ ಎನ್ನಬಹುದಾದರೂ, ಹಾಗೆ ಒಪ್ಪಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ದೇಶದಾದ್ಯಂತ ಇರುವ ಇ ಕಾಮರ್ಸ್ ಮಾರುಕಟ್ಟೆಯನ್ನು ಸರ್ಕಾರದಿಂದ ವೇದಿಕೆಯನ್ನು ರಿಲಾಯನ್ಸ್ ಕಂಪನಿ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಇ-ಕಾಮರ್ಸ್ ಪಾಲಿಸಿ to ಅಂಬಾನಿ!

ಇ-ಕಾಮರ್ಸ್ ಪಾಲಿಸಿ to ಅಂಬಾನಿ!

ದೇಶದಲ್ಲಿನ ನೂತನ ಇ-ಕಾಮರ್ಸ್ ಪಾಲಿಸಿ ಕರಡು ವಿಷಯಗಳು ಬಹಿರಂಗವಾದ ನಂತರ, ಅಂಬಾನಿ ಒಡೆತನದ 'ರಿಲಯನ್ಸ್ ರಿಟೇಲ್'ಗೆ ಈ ನೂತನ ಇ ಕಾಮರ್ಸ್ ಪಾಲಿಸಿ ಕರಡು ವಿಷಯಗಳು ಹೇಗೆ ಸಹಾಯವಾಗಬಹುದು ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಮಾರುಕಟ್ಟೆಯ ಪೈಪೋಟಿ ಕಡಿಮೆ ಮಾಡಿಕೊಳ್ಳಲು ಅಂಬಾನಿಯ ಪ್ಲಾನ್ ಇದು ಎನ್ನಲಾಗುತ್ತಿದೆ.

100ರಷ್ಟು ದೇಶೀಯ ಉತ್ಪನ್ನ ದಾಸ್ತಾನು

100ರಷ್ಟು ದೇಶೀಯ ಉತ್ಪನ್ನ ದಾಸ್ತಾನು

ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ. ಈ ರಿಯಾಯಿತಿ ವಿದೇಶಿ ಮೂಲದ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್‌ ಮತ್ತು ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಫ್ಲಿಪ್‌ಕಾರ್ಟ್‌ಗೆ ಸಿಗಲಾರದು. ಇದು ಬರಲಿರುವ ರಿಲಯನ್ಸ್ ರಿಟೇಲ್‌ಗೆ ಮಾತ್ರವೇ ಅತ್ಯುತ್ತಮ ಅವಕಾಶವನ್ನು ಒದಗಿಸಿದಂತಾಗುತ್ತದೆ.

ವಿದೇಶಿ ಹೂಡಿಕೆ ಜಾರಿ ನಿರ್ದೇಶನಾಲಯ

ವಿದೇಶಿ ಹೂಡಿಕೆ ಜಾರಿ ನಿರ್ದೇಶನಾಲಯ

ಶೇ.49 ಮೀರದಂತೆ ವಿದೇಶಿ ಹೂಡಿಕೆ ಹೊಂದಿರುವ ಇ-ಕಾಮರ್ಸ್ ಕಂಪನಿಗಳಲ್ಲಿ ಭಾರತೀಯ ಮೂಲದ ಸ್ಥಾಪಕರಿಗೆ ಹೆಚ್ಚಿನ ಹಕ್ಕು, ಅಧಿಕಾರ ಒದಗಿಸುವಂತೆಯೂ ಕರಡು ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ವಿದೇಶಿ ಹೂಡಿಕೆ ಕುರಿತ ವಿವಾದಗಳನ್ನು ನಿರ್ವಹಿಸಲು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ತೆರೆಯುತ್ತಿರುವುದು ಇತರೆ ಇ ಕಾಮರ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಎಂದು ಹೇಳಲಾಗುತ್ತಿದೆ.

ಪೈಪೋಟಿಗೆ ಕಡಿವಾಣ!

ಪೈಪೋಟಿಗೆ ಕಡಿವಾಣ!

ಬಿಗ್‌ ಬಿಲಿಯನ್ ಆಫರ್‌ಗಳು ಮತ್ತು ಇ ಕಾಮರ್ಸ್ ಕಂಪೆನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಇದು ದೇಶದ ಶೇಕಡಾ 55-60ರಷ್ಟು ಆನ್‌ಲೈನ್‌ ಮಾರುಕಟ್ಟೆಯನ್ನು ಆಳುತ್ತಿರುವ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಕಂಟ್ರೋಲ್ ಮಾಡಲು ಇರುವ ನೀತಿ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ.

ಒಂದು ಕುಟುಂಬಕ್ಕೆ ಇ- ಕಾಮರ್ಸ್ ಪಾಲಿಸಿ?

ಒಂದು ಕುಟುಂಬಕ್ಕೆ ಇ- ಕಾಮರ್ಸ್ ಪಾಲಿಸಿ?

ಇ-ಕಾಮರ್ಸ್ ಪಾಲಿಸಿಯಲ್ಲಿ ಇಂಡಿಯಾ ಫಸ್ಟ್‌ ನೀತಿಗೆ ಒತ್ತು ನೀಡಲಾಗಿದೆ. ಆದರೆ, ದೇಶೀಯ ಹೂಡಿಕೆ, ದರ ಕಡಿತಗಳಿಗೆ ಗರಿಷ್ಠ ಅವಧಿ ಪಾಲಿಸಿಗಳು ಅಂಬಾನಿ ಉದ್ಯಮಕ್ಕೆ ಪೂರಕವಾಗುವಂತೆ ಕಾಣುತ್ತಿವೆ. ಇವು ದೇಶದಲ್ಲಿ ಮೊದಲ ಬಾರಿಗೆ ಬರಲಿರುವ ಇ- ಕಾಮರ್ಸ್ ಪಾಲಿಸಿ, ಒಂದು ಕುಟುಂಬಕ್ಕೆ ನೆರವಾಗುತ್ತದೆ ಎಂದು ಹೇಳಲು ಕಾರಣಗಳಾಗಿವೆ.

Best Mobiles in India

English summary
Reliance Industries chairman Mukesh Ambani is the man who has his finger on the pulse of Indian consumer.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+