ಚೀನಾದಲ್ಲೂ ಉಬರ್ ಟ್ಯಾಕ್ಸಿ ನಿಷೇಧ

Written By:

ಟ್ಯಾಕ್ಸಿಯನ್ನು ಗೊತ್ತುಪಡಿಸುವ ಅಪ್ಲಿಕೇಶನ್ ಬಳಸಿ ಖಾಸಗಿ ಕಾರುಗಳನ್ನು ಸೇವೆಗೆ ಬಳಸುವ ಪ್ರಯೋಹವಾಗಿರುವ ಉಬರ್ ಅನ್ನು ಭಾರತದ ನಂತರ ಇದೀಗ ಚೀನಾದಲ್ಲೂ ನಿಷೇಧಿಸಲಾಗಿದೆ. ಪರವಾನಗಿ ಪಡೆಯದ ಚಾಲಕರು ಈ ಟ್ಯಾಕ್ಸಿಯನ್ನು ಓಡಿಸುತ್ತಿದ್ದು ಪ್ರಯಾಣಿಕರನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಉಬರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು.

ಉಬರ್ ಟ್ಯಾಕ್ಸಿ ಚೀನಾದಲ್ಲೂ ನಿಷೇಧ

ಇನ್ನು ಹೊಸ ನಿಯಮಗಳ ಪ್ರಕಾರ ಪರವಾನಗಿ ಪಡೆದ ಟ್ಯಾಕ್ಸಿಯನ್ನು ಮಾತ್ರ ಚೀನಾದಲ್ಲಿ ಓಡಿಸಬೇಕೆಂದು ಅಲ್ಲಿನ ಸರಕಾರ ತಾಕೀತು ಮಾಡಿದೆ. ತಿಂಗಳ ಹಿಂದೆಯಷ್ಟೇ 27 ವರ್ಷದ ಮಹಿಳೆಯನ್ನು ಚಾಲಕ ಮಾನಭಂಗ ಮಾಡಿದ್ದನ್ನು ಖಂಡಿಸಿ ದೆಹಲಿಯಲ್ಲಿ ಉಬರ್ ಅನ್ನು ನಿಷೇಧಿಸಲಾಗಿತ್ತು.

ಇನ್ನು ಚೀನಾದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉಬರ್ ಅನ್ನು ನಿಷೇಧಿಸಲಾಗಿದ್ದು ಇನ್ನು ಚೀನಾದ ಕಾನೂನು ಪ್ರಕಾರ, ಖಾಸಗಿ ಕಾರು ಚಾಲಕರು ಪ್ರಯಾಣಿಕರನ್ನು ತಮ್ಮ ಲಾಭಕ್ಕಾಗಿ ಬಳಸುವಂತಿಲ್ಲ ಎಂದಾಗಿದೆ.

English summary
After India, Uber ran into trouble in China too as the country banned drivers of private cars from offering services through taxi-hailing apps, citing passenger safety concerns.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot