Subscribe to Gizbot

ಇನ್ಫೋಸಿಸ್‌ಗೆ ಮತ್ತೊಂದು ಪೆಟ್ಟು!..ಸಿಕ್ಕಾ ಅವರನ್ನು ಹಿಂಬಾಲಿಸಿದ ಸಂಜಯ್!!

Written By:

ವಿಶಾಲ್‌ ಸಿಕ್ಕಾ ರಾಜಿನಾಮೆ ನಂತರ ಇನ್ಫೋಸಿಸ್‌ನಲ್ಲಿ ಪರಿಸ್ಥಿತಿ ಬದಲಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.! ಸಿಕ್ಕಾ ರಾಜಿನಾಮೆಯ ಬೆನ್ನಲ್ಲೇ ಇದೀಗ ಇನ್ಫೋಸಿಸ್‌ ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ಅವರು ಕೂತ ರಾಜಿನಾಮೆ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.!!

ಸಿಕ್ಕಾ ಬೆಂಬಲಿಗರಾಗಿಯೇ ಇದ್ದ ಸಂಜಯ್ ರಾಜಗೋಪಾಲನ್ ಅವರು ಸಿಕ್ಕಾ ಹೊರಬಿದ್ದು ಒಂದು ತಿಂಗಳ ನಂತರ ಇನ್ಫೋಸಿಸ್‌ ಬಿಟ್ಟು ಹೊರಹೋಗುತ್ತಿದ್ದು, ತಮ್ಮ ಲಿಂಕ್ಡ್ ಇನ್‌ ಪ್ರೊಫೆಷನಲ್ ಸಾಮಾಜಿಕ ಜಾಲತಾಣದಲ್ಲಿ 'ಫ್ರೀ ಮ್ಯಾನ್‌' ಎಂದು ಬರೆದುಕೊಂಡಿದ್ದಾರೆ. ಹಾಗಾಗಿ, ಇನ್ಫೋಸಿಸ್‌ ತೊರೆದಿರುವುದು ಅವರಿಗೆ ಖುಷಿಯಾಗಿದೆ ಎನ್ನಲಾಗಿದೆ.!!

ಇನ್ಫೋಸಿಸ್‌ಗೆ ಮತ್ತೊಂದು ಪೆಟ್ಟು!..ಸಿಕ್ಕಾ ಅವರನ್ನು ಹಿಂಬಾಲಿಸಿದ ಸಂಜಯ್!!

ಆಗಸ್ಟ್‌ 2014ರಿಂದ ಸೆಪ್ಟೆಂಬರ್‌ 2017ರ ವರೆಗೆ ಇನ್ಫೋಸಿಸ್‌ನಲ್ಲಿ ಕಾರ್ಯ ನಿರ್ವಹಿಸಿದ್ದ ಸಂಜಯ್ ರಾಜಗೋಪಾಲನ್ ಅವರು ಸಿಕ್ಕಾ ಅವರ ಕೋರಿಕೆ ಮೇರೆಗೆ ಇನ್ಫೋಸಿಸ್ ಸೇರಿದ್ದರು ಎನ್ನಲಾಗಿದೆ. ಸುಮಾರು 12 ಕ್ಕೂ ಅಧಿಕ ಜನರು ಸಿಕ್ಕಾ ಅವರ ಕೋರಿಕೆ ಮೇರೆಗೆ ಇನ್ಫೋಸಿಸ್ ಸೇರಿದ್ದಾಗಿ ಪತ್ರಿಕಾ ಮೂಲಗಳು ತಿಳಿಸಿವೆ.!!

ಇನ್ಫೋಸಿಸ್‌ಗೆ ಮತ್ತೊಂದು ಪೆಟ್ಟು!..ಸಿಕ್ಕಾ ಅವರನ್ನು ಹಿಂಬಾಲಿಸಿದ ಸಂಜಯ್!!

ಇನ್ಫೋಸಿಸ್‌ನ ಮಾಜಿ ಸಿಇಒ ಸಿಕ್ಕಾ ಅವರ ಜತೆ ರಾಜಗೋಪಾಲ್‌ SAP ಲ್ಯಾಬ್ಸ್‌ನಲ್ಲಿದ್ದರು. ಸಿಕ್ಕಾ ರಾಜಿನಾಮೆ ನಂತರ ಹೆಚ್ಚಿನ ಮಂದಿ SAP ಟೀಂನಿಂದ ಹೊರ ಬಂದಿದ್ದಾರೆ. ಈ ಮೊದಲು ಇನ್ಫೋಸಿಸ್‌ನ ನಿರ್ದೇಶಕ ಸ್ಥಾನದಿಂದ ಯೂಸುಫ್ ಬಷಿರ್ ಕೆಳಗಿಳಿದಿದ್ದರು. ಸಿಕ್ಕಾ ಅವರ ಪತ್ನಿ ಕೂಡ ಸಿಕ್ಕಾ ಅವರನ್ನು ಹಿಂಬಾಲಿಸಿದ್ದರು.!!

English summary
Infosys Senior Vice President Sanjay Rajagopalan has resigned from his post.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot