ಕಲಾಂ ಅಭಿಮಾನಿಗಳಿಗೆ ಫೇಸ್ ಬುಕ್ ಫ್ಯಾನ್ ಪೇಜ್

Posted By: Staff
ಕಲಾಂ ಅಭಿಮಾನಿಗಳಿಗೆ ಫೇಸ್ ಬುಕ್ ಫ್ಯಾನ್ ಪೇಜ್


ಸ್ಕೂಲಿಗೆ ಹೋಗುವ ಯಾವ ಹುಡುಗ/ಹುಡುಗಿಯನ್ನಾದರೂ ಕೇಳಿ, ಭಾರತದಲ್ಲಿ ಈಗ ಬದುಕಿರುವ ಯಾವ ವ್ಯಕ್ತಿ ನಿಮ್ಮ ರೋಲ್ ಮಾಡಲ್ (ಆದರ್ಶ ವ್ಯಕ್ತಿ) ಎಂದು, ಹತ್ತಕ್ಕೆ ಒಂಬತ್ತು ಮಂದಿ ಅಬ್ದುಲ್ ಕಲಾಂ ಹೆಸರನ್ನು ಹೇಳೇ ಹೇಳುತ್ತಾರೆ.

ತಮ್ಮ ಸಜ್ಜನಿಕೆ, ಸರಳ ಜೀವನ ಹಾಗು ಅದಕ್ಕೂ ಹೆಚ್ಚಾಗಿ ತಮ್ಮ ಹೋರಾಟದ ಬದುಕಿನಿಂದ ಒಬ್ಬ ಪೇಪರ್ ಹಾಕುವ ಹುಡುಗನಾಗಿ ಬೆಳೆದು, ವಿಜ್ಞಾನಿಯಾಗಿ, ರಾಷ್ಟ್ರಪತಿ ಪದವಿಗೆ ಏರುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದ ಅಬ್ದುಲ್ ಕಲಾಂ ಆನ್ಲೈನ್ ನಲ್ಲಿ ತುಂಬಾ ಸಕ್ರೀಯ.

ಅದರಲ್ಲೂ ತಮ್ಮ ವೆಬ್ಸೈಟ್ ನಿಂದಲೇ ಸಾಕಷ್ಟು ಮಕ್ಕಳಿಗೆ ಸಲಹೆ ಸೂಚನೆಯನ್ನೂ ಕೊಡುವ ಅವರು ಈಗ ವಿಶ್ವ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ಚಟುವಟಿಕೆಯ ಬಗ್ಗೆ, ಸಮಾಜದ ವಿವಿಧ ಸ್ಥರಗಳ ಜನರ ಜೊತೆ ಭೇಟಿ ಮಾಡಿದ ಅನುಭವಗಳು, ಅವರ ಯಶೋಗಾಥೆಯ ಬಗ್ಗೆ ತಮ್ಮ ಅನಿಸಿಕೆಗಳನ್ನೂ ಹೇಳಿಕೊಳ್ಳಲು ಬಿಲಿಯನ್ ಬೀಟ್ಸ್ ಎಂಬ ಫ್ಯಾನ್ ಪೇಜ್ ಒಂದನ್ನು ಸೃಷ್ಟಿ ಮಾಡಿದ್ದಾರೆ.

ಈಗಾಗಲೇ ಯೂಟ್ಯೂಬ್ ನಲ್ಲೂ ಸಕ್ರೀಯವಾಗಿರುವ 81 ವರ್ಷದ ತರುಣ ಕಲಾಂ, ಈ ಫ್ಯಾನ್ ಪೇಜ್ ಮೂಲಕ ದೇಶದ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕೆಲಸ ಮಾಡುತ್ತಿರುವ ಸಾಧಕರ ಬಗ್ಗೆ ತಿಳಿಸುತ್ತಾರೆ ಎಂದು ಕಲಾಂ ಅವರ ಇ- ಪತ್ರಿಕೆಯ ಸಲಹೆಗಾರರಾದ ಪೊನ್ರಾಜ್ ತಿಳಿಸಿದ್ದಾರೆ.

ಪ್ರತಿ ದಿನವೂ ಒಂದೊಂದು ಸಾಹಸಗಾಥೆಯ ಬಗ್ಗೆ ಇದರಲ್ಲಿ ಬರೆಯುವ ಉದ್ದೇಶ ಹೊಂದಿರುವ ಕಲಾಂ, ಮಂಗಳವಾರದಂದು ಮೊದಲ ಬಾರಿಗೆ, ತಾವು ಪಾಂಡಿಚೆರಿಯಲ್ಲಿ ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತೆ  ಮೇಡ್ಲೀನ್ ಡಿ ಬ್ಲಿಕ್ ಬಗ್ಗೆ ಬರೆದಿದ್ದಾರೆ.

ನೀವೂ ಕಲಾಂ ಅಭಿಮಾನಿಯಾಗಿದ್ದರೆ, www.facebook.com/kalambillionbeats ಅನ್ನು ಲೈಕ್ ಮಾಡಿ ಪ್ರೇರಣೆ ತೆಗೆದುಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot