ಚಂದ್ರನ ಮೇಲೆ ಮಾನವ ಕಾಲಿಟ್ಟಿದ್ದು ನಿಜವೇ..? ಇಲ್ಲಿದೇ ಸಾಕ್ಷಿ..?

|

ಮೊದಲ ಬಾರಿಗೆ ಚಂದ್ರನ ಮೇಲೆ ಮಾನವನನ್ನು ಇಳಿಸಿದವರು ನಾವೇ ಮೊದಲು ಎಂದು ಹೇಳುವ ಅಮೆರಿಕಾ, ಇದಕ್ಕಾಗಿ ಹಲವು ಸಾಕ್ಷಿಗಳನ್ನು ನೀಡಿದೆ. ಅಲ್ಲಿ ಮೊದಲ ಬಾರಿಗೆ ಕಾಲಿಟ್ಟ ಗುರುತಿಗೆ ತೆಗೆದುಕೊಂಡ ಚಿತ್ರಗಳು ಸೇರಿದಂತೆ ಸಾಕಷ್ಟು ವಿಷಯಗಳನ್ನು ಬಹಿರಂಗಗೊಳಿಸಿತ್ತು. ಆದರೆ ಇಂದಿಗೂ ಸಹ ಅಮೆರಿಕಾ ಚಂದ್ರನಲ್ಲಿ ಕಾಲಿಟ್ಟಿಲ್ಲ ಎನ್ನುವ ವಾದವನ್ನು ಮಾಡುವ ಹಲವು ಮಂದಿ ಇಂದು ನಮ್ಮ ನಿಮ್ಮ ನಡುವೆ ಇದ್ದಾರೆ. ಇದಕ್ಕೆ ಕಾರಣ ಮತ್ತೊಮ್ಮೆ ಅಮೆರಿಕಾಕ್ಕೆ ಮಾನವನನ್ನು ಚಂದ್ರನ ಅಂಗಳಕ್ಕೆ ಕಳುಹಿಸುವ ಪ್ರಯತ್ನವನ್ನು ಏಕೆ ಮಾಡಿಲ್ಲ ಎನ್ನುವ ಪ್ರಶ್ನೇಯನ್ನು ಮಾಡುತ್ತಿದ್ದಾರೆ.

ಚಂದ್ರನ ಮೇಲೆ ಮಾನವ ಕಾಲಿಟ್ಟಿದ್ದು ನಿಜವೇ..? ಇಲ್ಲಿದೇ ಸಾಕ್ಷಿ..?

ಇವುಗಳ ನಡುವೆಯೇ ಟ್ವಿಟ್ ವೊಂದು ವೈರಲ್ ಆಗಿದ್ದು, ಮೊದಲ ಬಾರಿಗೆ ಚಂದ್ರನಲ್ಲಿ ಕಾಲಿಟ್ಟ ಆಪೋಲೊ 11 ನಲ್ಲಿ ಪ್ರಯಣಿಸಿ, ಚಂದ್ರನಲ್ಲಿ ಓಡಾಡಿದ ಆಸ್ಟ್ರೋನಟ್ ಬುಜ್ ಅರ್ಡಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೊವೊಂದನ್ನು ಆಪ್‌ಲೋಡ್ ಮಾಡಿದ್ದು, ಇದರಲ್ಲಿ ಇರುವ ಫೋಟೋ ಚಂದ್ರಯಾನಕ್ಕೆ ಸಾಕ್ಷಿಯಾಗಲಿದೆ ಎನ್ನುವ ಮಾತು ಕೇಳಿ ಬಂದಿದ್ದು, ವಿರೋಧಿಗಳ ಬಾಯಿ ಮುಚ್ಚಿಸುವ ಕಾರ್ಯಕ್ಕಾಗಿ ಈ ಫೋಟೋ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

88 ವರ್ಷದ ಹಿರಿಯ ಆಸ್ಟ್ರೋನಟ್:

88 ವರ್ಷದ ಹಿರಿಯ ಆಸ್ಟ್ರೋನಟ್:

ಅಮೆರಿಕಾ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸದ ತಂಡದ ಭಾಗಿಯಾಗಿದ್ದ 88 ವರ್ಷದ ಹಿರಿಯ ಆಸ್ಟ್ರೋನಟ್ ಬುಜ್ ಅರ್ಡಿನ್ ಟ್ವಿಟರ್ ನಲ್ಲಿ ತಾವು ಚಂದ್ರನ ಅಂಗಳದಿಂದ ಹಿಂದಿರುಗಿ ಬಂದ ಸಂದರ್ಭದಲ್ಲಿ ಅಲ್ಲಿಂದ ತಂದಿದ್ದ ಕಲ್ಲು ಮತ್ತು ಮಣ್ಣಿಗೆ ಕಷ್ಟಮ್ ಫಾರ್ಮ್ ಅನ್ನು ಭರ್ತಿ ಮಾಡಿದ್ದ ಪ್ರತಿಯ ಫೋಟೋವನ್ನು ಹಾಕಿದ್ದಾರೆ.

ಎಲ್ಲಿಂದ ಎಲ್ಲಿಗೆ:

ಚಂದ್ರನಿಂದ ಹಿಂತಿರುಗಿ ಬರುವ ವೇಳೆ ಅಲ್ಲಿಂದ ಕಲ್ಲು ಮತ್ತು ಮಣ್ಣು ತಂದಿದ್ದು, ಇದಕ್ಕಾಗಿ ಕಸ್ಟಮ್ ಫಾರ್ಮ್ ಅನ್ನು ತುಂಬಿದ್ದು ಮತ್ತು ಅದಕ್ಕೆ ಸಾಕ್ಷಿಯಾಗಿ ಇರುವ ಸಹಿಗಳನ್ನು ಹೊಂದಿರುವ ಪ್ರತಿಯೂ ಇದಾಗಿದ್ದು, ಇದರಲ್ಲಿ ಎಲ್ಲಾ ಮಾದರಿಯ ಅಂಶಗಳನ್ನು ಸಫೂರ್ಣವಾಗಿ ಕಾಣಬಹುದಾಗಿದೆ.

ದಶಕಗಳ ಗುದ್ದಾಟ;

ದಶಕಗಳ ಗುದ್ದಾಟ;

ಚಂದ್ರನ ಮೇಲೆ ಮಾನವನ್ನು ಕಳುಹಿಸಲು ಸಾಧ್ಯವಾಗಿರುವುದು ನನಗೆ ಮಾತ್ರ ಎಂಬ ಗತ್ತು ತೋರಿಸುತ್ತಿದ್ದರೆ, ಇತ್ತ ಜಗತ್ತಿನ ಹಲವು ಕಡೆಗಳಲ್ಲಿ ಚಂದ್ರನ ಮೇಲೆ ಮಾನವನನ್ನು ಕಳುಹಿಸಲು ಅಮೆರಿಕಾಕ್ಕೆ ಸಾಧ್ಯವಾಗಿಲ್ಲ ಅದು ಶುದ್ಧ ಸುಳ್ಳು ಎಂದು ವಾದಿಸುವ ಅನೇಕರನ್ನು ಕಾಣಬಹುದು. ಇದರಲ್ಲಿ ಮೊದಲಿಗರು ಎಂದರೆ ರಷ್ಯಾ. ಹೀಗಾಗಿ ಅಮೆರಿಕಾ ಚಂದ್ರಯಾನದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಸಾಕ್ಷಿ ಕೊಟ್ಟ ಅಮೆರಿಕಾ:

ಸಾಕ್ಷಿ ಕೊಟ್ಟ ಅಮೆರಿಕಾ:

ಬುಜ್ ಅರ್ಡಿನ್ ಅವರಿಂದ ಟ್ವಿಟ್ ಮಾಡಿಸುವ ಮೂಲಕ ತನ್ನ ಚಂದ್ರಯಾನದ ಬಗ್ಗೆ ಇದ್ದ ವಿವಾದಗಳಿಗೆ ತೆರೆ ಎಳೆದು, ಸಾಕ್ಷಿಯನ್ನು ತೋರಿಸುವ ಸಲುವಾಗಿ ಈ ಪೋಟೋವನ್ನು ಹಾಕಲಾಗಿದೆ ಎನ್ನುವ ಮಾತನ್ನು ಹಲವರು ಆಡುತ್ತಿದ್ದಾರೆ. ವಿರೋಧಿಗಳು ಇದು ಫೇಕ್ ಎನ್ನುವ ಮಾತುಗಳನ್ನು ಹೊರಹಾಕುತ್ತಿದ್ದಾರೆ.

ಕೊನೆಯಾಗದ ವಿವಾದ:

ಕೊನೆಯಾಗದ ವಿವಾದ:

ಅಮೆರಿಕಾ ಸಹ ಮಾನವ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿಯನ್ನು ಒದಗಿಸಲು ವಿಫಲವಾಗಿರುವ ಹಿನ್ನಲೆ ಮತ್ತು ವಿರೋಧಿಗಳು ಮಂಡಿಸುತ್ತಿರುವ ಅರ್ಥಪೂರ್ಣವಾದರಿಂದಾಗಿ ಈ ವಿವಾದ ಕೊನೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಶಾಕಿಂಗ್ ನ್ಯೂಸ್!!..ಚಂದ್ರನ ಮೇಲೆ ನೀರಿದೆ ಎಂದು ಭಾರತದ ಸಹಾಯದಿಂದ 'ನಾಸಾ' ಸ್ಪಷ್ಟನೆ!!

ಶಾಕಿಂಗ್ ನ್ಯೂಸ್!!..ಚಂದ್ರನ ಮೇಲೆ ನೀರಿದೆ ಎಂದು ಭಾರತದ ಸಹಾಯದಿಂದ 'ನಾಸಾ' ಸ್ಪಷ್ಟನೆ!!

ಚಂದ್ರನ ಮೇಲ್ಮೈಯಾದ್ಯಂತ ನೀರಿದೆ. ಆದರೆ, ಚಂದ್ರನ ಮೇಲ್ಮೈನಲ್ಲಿರುವ ನೀರಿನ ಅಂಶವನ್ನು ಸುಲಭವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವಾದರೂ ಒಟ್ಟಾರೆ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೆ ಬಿಡುಗಡೆ ಮಾಡಿದೆ.!!

ಹೌದು, ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ಒ ಡಾಟಾ ವಿಶ್ಲೇಷಣೆ ಮೂಲಕ ನಾಸಾ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ನಾಸಾ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಸಂಶೋಧನೆ ಇದು ಎಂದು ವಿಜ್ಞಾನಿಗಳು ತಿಳಸಿದ್ದಾರೆ

ಕೆಲವೇ ದಿನಗಳ ಅಂತರದಲ್ಲಿ ಚಂದ್ರನ ಮೇಲೆ ನೀರಿರಬಹುದಾದ ಎರಡು ವಿಶ್ಲೇಷಣೆಗಳು ನಾಸಾ ವಿಜ್ಞಾನಿಗಳಿಂದ ಪ್ರಕಟವಾಗಿದ್ದು, ಈ ಮೊದಲು ಚಂದ್ರನ ಮೇಲಿನ ಪರ್ಸೀವರೆನ್ಸ್ ವ್ಯಾಲಿ ಜಾಗ ಅತ್ಯಂತ ನಿಗೂಢವಾಗಿದೆ ಎಂದು ಹೇಳಲಾಗಿತ್ತು. ಹಾಗಾದರೆ, ಎರಡೂ ವರದಿಗಳಲ್ಲಿಯೂ ಚಂದ್ರನ ಮೇಲೆ ನೀರು ಇದೆ ಎಂದು ಹೇಳಲು ಕಾರಣಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಚಂದ್ರನ ಮೇಲ್ಮೈಯಾದ್ಯಂತ ನೀರು!!

ಚಂದ್ರನ ಮೇಲ್ಮೈಯಾದ್ಯಂತ ನೀರು!!

ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಕಳಿಸಲಾಗಿದ್ದ ನಾಸಾದ ಎಲ್ಆರ್ ಉಪಕರಣದಿಂದ ಚಂದ್ರನ ಮೇಲ್ಮೈಯಾದ್ಯಂತ ನೀರು ಇರುವ ಅಂಶವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಚಂದ್ರಯಾನ-1 ಕ್ಕೆ ಬಳಸಿಕೊಳ್ಳಲಾಗಿದ್ದ ಚಂದ್ರನ ಖನಿಜ ಮಾಪಕದಿಂದ ಪಡೆಯಲಾಗಿದ್ದ ಡಾಟಾದ ಸಹಾಯದಿಂದ ಹೊಸ ಮಾಹಿತಿಯೊಂದು ಲಭ್ಯವಾಗಿದೆ.!!

ನಿಖರವಾಗಿದೆ ಮಾಹಿತಿ!!

ನಿಖರವಾಗಿದೆ ಮಾಹಿತಿ!!

ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಹೊಸ ಮಾಹಿತಿ ಇದಾಗಿದೆ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನೀರಿರುವ ಸೂಚನೆ ಲಭಿಸಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಚಂದ್ರನ ಮೇಲ್ಮೈಯಾದ್ಯಂತ ನೀರಿದೆ ಎಂದು ಹೇಳಲಾಗಿದೆ.!!

ಕೆಲವೇ ದಿನಗಳಲ್ಲಿ ಎರಡು ವರದಿ!!

ಕೆಲವೇ ದಿನಗಳಲ್ಲಿ ಎರಡು ವರದಿ!!

ನಾಸಾದ ಎಲ್ಆರ್ ಉಪಕರಣದ ವರದಿ ಹಾಗೂ ಚಂದ್ರಯಾನ-1 ಖನಿಜ ಮಾಪಕದಿಂದ ಪಡೆಯಲಾದ ಮಾಹಿತಿಯಿಂದ ನೀರಿರುವ ಸೂಚನೆ ಸ್ಪಷ್ಟವಾಗಿದೆ ಎಂದು ಇದೀಗ ಹೇಳಲಾಗಿದೆ. ಆದರೆ, ಹಾಗೆಯೇ ಕೆಲವೇ ದಿನಗಳ ಹಿಂದಷ್ಟೆ ಚಂದ್ರನ ಮೇಲಿ ಪರ್ಸೀವರೆನ್ಸ್ ವ್ಯಾಲಿ ಎಂಬ ಪ್ರದೇಶ ನಿಗೂಢವಾಗಿದೆ ಎಂದು ಹೇಳಲಾಗಿತ್ತು.!!

ಪರ್ಸೀವರೆನ್ಸ್ ವ್ಯಾಲಿ

ಪರ್ಸೀವರೆನ್ಸ್ ವ್ಯಾಲಿ

ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಮಂಗಳ ಗ್ರಹದ 'ಪರ್ಸೀವರೆನ್ಸ್ ವ್ಯಾಲಿ' ಜಾಗದಲ್ಲಿ ಕಾಣಲಾಗಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ನಾಸಾ ವಿಜ್ಞಾನಿಗಳು ಈ ಮೊದಲು ಹೇಳಿದ್ದರು.!!

ನೀರಿನ ಮೂಲವನ್ನು ಕಂಡುಕೊಳ್ಳಬೇಕು!!

ನೀರಿನ ಮೂಲವನ್ನು ಕಂಡುಕೊಳ್ಳಬೇಕು!!

ಚಂದ್ರನ ಮೇಲೆ ನೀರಿರುವುದನ್ನು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಸಿದ್ದಾರೆ. ಈ ಹೊಸ ಸಂಶೋಧನೆ ಚಂದ್ರನಲ್ಲಿ ನೀರಿನ ಮೂಲವನ್ನು ಕಂಡುಕೊಳ್ಳಲು ಹಾಗೂ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದು ನಾಸಾ ವಿಜ್ಞಾನಿಗಳಿಂದ ತಿಳಿಸಿದ್ದಾರೆ.!!

ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಸೇವೆ: ನಾಸಾ ಯೋಜನೆ..!

ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಸೇವೆ: ನಾಸಾ ಯೋಜನೆ..!

ಮಂಗಳ ಗ್ರಹದ ಬಗ್ಗೆ ಸಾಕಷ್ಟು ಅಧ್ಯಾಯನ ನಡೆಸುವ ಸಲುವಾಗಿ, ರೋವರ್ ಅನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಮತ್ತೊಂದು ಹೊಸ ಪ್ರಾಜೆಕ್ಟ್ ಆಂಭಿಸಿದೆ. ಶೀಘ್ರವೇ ಮಂಗಳನ ಅಂಗಳಕ್ಕೆ ಹೆಲಿಕಾಪ್ಟರ್ ಅನ್ನು ಕಳುಹಿಸಲು ಮುಂದಾಗಿದ್ದು, ಇದರ ಸಹಾಯದಿಂದ ಮಂಗಳನ ಅಂಗಳದ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.

2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ಮತ್ತೊಂದು ರೋವರ್ ನೊಂದಿಗೆ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಈಗಾಗಲೇ ನಾಸಾ ಡ್ರೋನ್ ಮಾದರಿಯ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಿದ್ದು, ಅದರ ಪರೀಕ್ಷೆಯನ್ನು ನಡೆಸುತ್ತಿದೆ. ಈ ಬಗ್ಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಿದೆ.

ಮಾರ್ಸ್ 2020:

ಮಾರ್ಸ್ 2020:

ಈಗಾಗಲೇ ಮಂಗಳ ಅಂಗಳವನ್ನು ತಲುಪಲು ಅಮೆರಿಕಾ ಮತ್ತು ಭಾರತ ಸ್ಪರ್ಧೆಯನ್ನು ನಡೆಸುತ್ತಿದ್ದು, ಇದರ ಮಧ್ಯದಲ್ಲಿಯೇ ಸ್ಪೇಸ್ X ಖಾಸಗಿ ಸಂಸ್ಥೆಯೂ ಮಂಗಳ ಅಂಗಳಕ್ಕೆ ಮಾನವವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಇದೇ ಹಿನ್ನಲೆಯಲ್ಲಿ ನಾಸಾ ಮಾರ್ಸ್ 2020 ಮಿಷನ್ ಆರಂಭಿಸಿದೆ.

ಫೋಟೋ ಕ್ಲಿಕಿಸಲು:

ಫೋಟೋ ಕ್ಲಿಕಿಸಲು:

ಮಾರ್ಸ್ 2020 ರೋವರ್ ಮಿಷನ್ ಯೋಜನೆಯಲ್ಲಿ ನಾಸಾ ಡ್ರೋನ್ ಮಾದರಿಯ ಹೆಲಿಕಾಪ್ಟರ್ ವೊಂದನ್ನು ಹಾರಿಸಲಿದೆ ಎನ್ನಲಾಗಿದೆ. ಇದು ಮಂಗಳ ಅಂಗಳದ ಪರಿಚಯವನ್ನು ವಿಜ್ಞಾನಿಗಳಿಗೆ ತೋರಿಸಿಕೊಡಲಿದೆ ಎನ್ನಲಾಗಿದೆ. ಇದು ಮಂಗಳದ ವಾತಾವರಣಕ್ಕೆ ಹೊಂದಿ ಕೊಂಡು ಕಾರ್ಯನಿರ್ವಹಿಸಲಿದೆ.

ಮೊದಲ ಪ್ರಯತ್ನ:

ಮೊದಲ ಪ್ರಯತ್ನ:

ನಾಸಾ ಇದೇ ಮೊದಲ ಬಾರಿಗೆ ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆಯನ್ನು ರೂಪಿಸಿದ್ದು, ಭಾರೀ ಕುತೂಹಲವನ್ನು ಕೆರಳಿಸಿದೆ. ಇದು ಮುಂದಿನ ಪ್ರಯೋಗಗಳಿಗೆ ಮುನ್ನುಡಿಯಾಗಲಿದೆ. ಮಂಗಳನ ಅಂಗಳದಲ್ಲಿರುವ ಕುತೂಹಲಗಳಿಗೆ ತೆರೆಎಳೆಯುವ ಸಾಧ್ಯತೆಗಳಿದೆ.

ರೋವರ್ ಜೊತೆಗೆ:

ರೋವರ್ ಜೊತೆಗೆ:

ರೋವರ್ ನೊಂದಿಗೆ ಮಂಗಳನ ಅಂಗಳಕ್ಕೆ ಸಾಗುವ ಹೆಲಿಕಾಪ್ಟರ್, ರೋವರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಮಂಗಳ ಗ್ರಹದಲ್ಲಿ ಹಾರಾಟ ನಡೆಸಿ, ದತ್ತಾಂಶಗಳನ್ನು ರೋವರ್‌ಗೆ ತಲುಪಿಸಲಿದ್ದು, ಎರಡನ್ನು ವಿಜ್ಞಾನಿಗಳು ಭೂಮಿಯೊಂದಲೇ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ವಿನ್ಯಾಸ:

ವಿನ್ಯಾಸ:

ಮಂಗಳನಲ್ಲಿ ಹಾರುವ ಹೆಲಿಕಾಪ್ಟರ್ ಕೊಂಚ ಭಿನ್ನವಾಗಿದ್ದು, ಅತೀ ತಾಪಮಾನ ಮತ್ತು ಅತೀ ಶೀತದ ಸಂದರ್ಭದಲ್ಲಿಯೂ ಹಾನಿಯಾಗದಂತೆ ನಿರ್ಮಿಸಲಾಗಿದೆ. 1.8 Kg ತೂಕವಿರುವ ಹೆಲಿಕಾಪ್ಟರ್, ಸೋಲಾರ್ ಸೆಲ್ ಗಳ ಚಾರ್ಜಿಂಗ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸಲಿದೆ. ಟವರ್ ಮಾದರಿಯ ವಿನ್ಯಾಸ ಹೊಂದಿದ್ದು, ಮಧ್ಯಭಾಗದಲ್ಲಿ ರೆಕ್ಕೆಗಳನ್ನು ಹೊಂದಿದೆ.

Most Read Articles
Best Mobiles in India

English summary
Apollo 11 astronauts completed customs forms for their moon trip. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more