Home
ಸುದ್ದಿಜಾಲ

ಫ್ರೀ ಫ್ರೀ ಫ್ರೀ..! iPhone ಕ್ಯಾಮೆರಾದಲ್ಲಿ ದೋಷ.. ಆಪಲ್​​ನಿಂದ ಉಚಿತ ಸರ್ವೀಸ್; ಹಣವೂ ವಾಪಸ್

ಆಪಲ್‌ (Apple) ಕಂಪನಿಯು ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ನಿಮ್ಮ ಐಫೋನ್‌ ಕ್ಯಾಮೆರಾದಲ್ಲಿ ಸಮಸ್ಯೆ ಇದ್ದರೆ, ಉಚಿತವಾಗಿ ಸರಿಪಡಿಸಲಾಗುತ್ತದೆ. ಹೌದು, ಐಫೋನ್​ 14 ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ದೋಷವಿದ್ದರೆ, ಅದನ್ನು ಉಚಿತವಾಗಿ ಸರಿಪಡಿಸಲಾಗುತ್ತದೆ ಎಂದು ಆಪಲ್​ ಕಂಪನಿ ಘೋಷಿಸಿದೆ. 2023ರ ಏಪ್ರಿಲ್​​ 10 ರಿಂದ 2024ರ ಏಪ್ರಿಲ್​ 28 ನಡುವೆ ತಯಾರಿಸಲಾದ ಮೊಬೈಲ್​ಗಳನ್ನು ರಿಪೇರಿ ಮಾಡಿಕೊಡುವುದಾಗಿ ಆಪಲ್ ತಿಳಿಸಿದೆ. ಒಂದು ವೇಳೆ ನಿಮ್ಮ ಐಪೋನ್ 14 ಪ್ಲಸ್ (iPhone 14 Plus) ಕ್ಯಾಮೆರಾದಲ್ಲಿ ದೋಷವಿದ್ದರೆ, ಫ್ರೀ ಸರ್ವೀಸ್ ಪಡೆಯಲು ಹೀಗೆ ಮಾಡಿ.

ಹೌದು, ಆಪಲ್ ಕಂಪನಿಯು 2023ರ ಏಪ್ರಿಲ್​​ನಿಂದ 2024ರ ಏಪ್ರಿಲ್​ ನಡುವೆ ಖರೀದಿಸಿದ ಐಫೋನ್​​ಗಳಲ್ಲಿನ ಕ್ಯಾಮೆರಾ ದೋಷವನ್ನು ಉಚಿತವಾಗಿ ಸರಿಪಡಿಸಲು ಮುಂದಾಗಿದೆ. ಇದಕ್ಕೆ ಹೊಸ ಉಚಿತ ದುರಸ್ತಿ ಕಾರ್ಯಕ್ರಮವನ್ನು ಘೋಷಿಸಿದೆ. ಕಂಪನಿಯು ತಿಳಿಸಿದ ನಿಗದಿತ ಅವಧಿಯಲ್ಲಿ ಐಫೋನ್​ 14 ಸರಣಿಯ ಫೋನ್‌ಗಳ ಕ್ಯಾಮೆರಾದಲ್ಲಿ ಸಮಸ್ಯೆ ಉಂಟಾಗಿದೆ. ಕ್ಯಾಮೆರಾದಿಂದ ತೆಗೆದ ಫೋಟೋ ಪ್ರಿವ್ಯೂವ್​ ಆಗುತ್ತಿಲ್ಲ ಎಂದು ಬಳಕೆದಾರರು ಸಮಸ್ಯೆ ಬಿಚ್ಚಿಟ್ಟಿದ್ದಾರೆ. ಹೀಗಾಗಿ, ಕಂಪನಿಯು ಕ್ಯಾಮೆರಾ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡಲು ಮುಂದಾಗಿದೆ.

iPhone ಕ್ಯಾಮೆರಾದಲ್ಲಿ ಸಮಸ್ಯೆ! ಆಪಲ್​​ನಿಂದ ಫ್ರೀ ಸರ್ವೀಸ್ ಘೋಷಣೆ

ಫ್ರೀ ಸರ್ವೀಸ್​ ಪಡೆಯಲು ಏನು ಮಾಡಬೇಕು?

ನಿಮ್ಮ ಐಪೋನ್ 14 ಪ್ಲಸ್ ಮೊಬೈಲ್‌ನ ಕ್ಯಾಮೆರಾದಲ್ಲಿ ದೋಷ ಉಂಟಾಗಿದೆಯೇ ಎಂದು ಪರಿಶೀಲಿಸಿ. ಸಮಸ್ಯೆ ಇರುವುದು ಕಂಡುಬಂದರೆ ಅದನ್ನು ಉಚಿತವಾಗಿ ಸರಿಪಡಿಸಬಹುದು. ನೀವು ಅಧಿಕೃತ ಸೇವಾ ಕೇಂದ್ರಕ್ಕೆ ಮೊಬೈಲ್ ಅನ್ನು​ ತೆಗೆದುಕೊಂಡು ಹೋಗಬೇಕು. ಅದಕ್ಕೂ ಮೊದಲು, ನಿಮ್ಮ ಫೋನ್ ಫ್ರೀ ಸರ್ವೀಸ್​ಗೆ ಅರ್ಹವಾಗಿದೆಯೇ? ಎಂದು ಪರಿಶೀಲಿಸಬೇಕು. ಇದಕ್ಕಾಗಿ ಆಪಲ್‌ನ ಅಧಿಕೃತ ಪುಟಕ್ಕೆ ಹೋಗಬೇಕು. ಅಲ್ಲಿ ನಿಮ್ಮ ಫೋನಿನ ಸರಣಿ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ, ನಾವು ಈ ಕೆಳಗೆ ತಿಳಿಸಿದ ಹಂತಗಳನ್ನು ಪೂರ್ಣಗೊಳಿಸಬೇಕು.

1. ಮೊದಲು ನಿಮ್ಮ ಐಪೋನ್ 14 ಪ್ಲಸ್ ಫೋನಿನ ಸರಣಿ ಸಂಖ್ಯೆಯನ್ನು ತಿಳಿದುಕೊಳ್ಳಬೇಕು

2. ಇದಕ್ಕಾಗಿ ನೀವು ಸೆಟ್ಟಿಂಗ್‌ಗೆ ಹೋಗಬೇಕು. ಬಳಿಕ ಜನರಲ್​​, ಅಬೌಟ್​ಗೆ ಹೋಗಬೇಕು.

3. ಇಲ್ಲಿ, ನಿಮ್ಮ ಐಪೋನ್ 14 ಪ್ಲಸ್‌ ಮೊಬೈಲ್‌ನ ಸರಣಿ ಸಂಖ್ಯೆ ಕಾಣುತ್ತದೆ. ಈ ಸಂಖ್ಯೆಯನ್ನು ನಿಮ್ಮ ಕ್ಲಿಪ್‌ಬೋರ್ಡ್‌ಗೆ ಕಾಪಿ ಮಾಡಬೇಕು.

4. ಬಳಿಕ ಇಲ್ಲಿ ಕ್ಲಿಕ್ ಮಾಡುವ ಮೂಲಕ ಆಪಲ್‌ನ ಸಪೋರ್ಟ್​ ಪೇಜ್​​ಗೆ ಹೋಗಬೇಕು. ನಂತರ ಅಲ್ಲಿ ನಿಮ್ಮ ಮೊಬೈಲ್​ನ ಸರಣಿಯ ಸಂಖ್ಯೆಯನ್ನು ನಮೂದಿಸಬೇಕು. ಕಾಪಿ ಮಾಡಿದ ಸಂಖ್ಯೆಗಳನ್ನು ಅಲ್ಲಿ ಪೇಸ್ಟ್ ಮಾಡಬೇಕು.

5. ನಂತರ, ನಿಮ್ಮ ಐಪೋನ್ 14 ಪ್ಲಸ್‌ ಮೊಬೈಲ್ ಫ್ರೀ ಸರ್ವೀಸ್​ಗೆ ಅರ್ಹವಾಗಿದೆಯೇ? ಎಂಬುದು ಕೆಳಗಿನ ಪರದೆಯಲ್ಲಿ ಗೋಚರಿಸುತ್ತದೆ. ಕ್ಯಾಮೆರಾದಲ್ಲಿ ಸಮಸ್ಯೆ ಇರುವುದು ಖಚಿತವಾದರೆ ಫ್ರೀ ಸರ್ವೀಸ್ ಲಾಭ ಪಡೆಯಬಹುದು.

ನೀವು ಮೊಬೈಲ್​ ಖರೀದಿಸಿದ ದಿನಾಂಕದಿಂದ ಮೂರು ವರ್ಷಗಳವರೆಗೆ ಕ್ಯಾಮೆರಾ 'ರಿಪೇರಿ ಪ್ರೋಗ್ರಾಂ' ವಾರಂಟಿ​​ ಹೊಂದಿರುತ್ತದೆ. ಕಂಪನಿಯು ಗ್ರಾಹಕರಿಗೆ ದೋಷಗಳನ್ನು ಸರಿಪಡಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಒಂದು ವೇಳೆ ನೀವು, ಐಪೋನ್ 14 ಪ್ಲಸ್‌ ಫೋನಿನಲ್ಲಿನ ಸಮಸ್ಯೆಗಳ ರಿಪೇರಿಗಾಗಿ ಈಗಾಗಲೇ ಹಣ ಪಾವತಿ ಮಾಡಿದ್ದರೆ, ಅದನ್ನು ಮರಳಿ ಪಡೆಯಬಹುದು.

ಫ್ರೀ ಸರ್ವೀಸ್‌ಗೆ ಈ ಷರತ್ತು ಅನ್ವಯ

ನೀವು, ಉಚಿತ ಸರ್ವೀಸ್ ಬಯಸಿದರೆ ಈ ಷರತ್ತು ನಿಮಗೆ ಅನ್ವಯವಾಗುತ್ತದೆ. ಒಂದು ವೇಳೆ ನಿಮ್ಮ ಐಪೋನ್ 14 ಪ್ಲಸ್‌ ಫೋನಿನ ಕ್ಯಾಮೆರಾ ಗಾಜು ಒಡೆದಿದ್ದರೆ, ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ. ಹೀಗಾಗಿ, ನಿಮ್ಮ ಮೊಬೈಲ್ ಫ್ರೀ ಸರ್ವೀಸ್‌ಗೆ ಅರ್ಹವಾಗಿದ್ದರೆ, ಇಂತಹ ಸಮಸ್ಯೆಯನ್ನು ಮೊದಲೇ ಸರಿಪಡಿಸಿಕೊಳ್ಳಬೇಕು. ಬಳಿಕ ಕ್ಯಾಮೆರಾದಲ್ಲಿನ ಸಮಸ್ಯೆಯನ್ನು ಉಚಿತವಾಗಿ ದುರಸ್ತಿ ಪಡಿಸಲು ಸಾಧ್ಯವಾಗಲಿದೆ. ನೀವು ಫೋನಿನ ಬೇರೆ ಸಮಸ್ಯೆಗಳನ್ನು ರಿಪೇರಿ ಮಾಡಿಸಲು ಬಯಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕು.

Best Mobiles in India

English summary
Apple announces Free Repair Program For iPhone 14 Plus Rear Camera Issue: Here is how it works.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+