ಆಪಲ್ WWDC 2021 ಈವೆಂಟ್‌ ಡೇಟ್‌ ಫಿಕ್ಸ್‌! ಈ ಭಾರಿ ನಿರೀಕ್ಷೆ ಏನು?

|

ಆಪಲ್‌ ಸಂಸ್ಥೆಯ ಬಹು ನಿರೀಕ್ಷಿತ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2021ರ ವಾರ್ಷಿಕ ಡೆವಲಪರ್ ಸಮ್ಮೇಳನವನ್ನು ಆಯೋಜಿಸಲು ಸಿದ್ದತೆ ನಡೆಸಿದೆ. ಇನ್ನು ಕರೊನ ವೈರಸ್‌ನ ಇನ್ನೂ ಕೂಡ ಹರಡುತ್ತಲೆ ಇರುವುದರಿಂದ WWDC 2021 ಅನ್ನು ಆನ್‌ಲೈನ್‌ನಲ್ಲಿ ಆಯೋಜಿಸಲು ಮುಂದಾಗಿದೆ. ಅದರಂತೆ ಆಪಲ್‌ ಸಂಸ್ಥೆಯು ಮಹತ್ವದ ಈ ಸಮ್ಮೇಳನಕ್ಕೆ ಮುಹೂರ್ತ ಕೂಡಾ ನಿಗದಿಪಡಿಸಿದೆ.

ಆಪಲ್

ಹೌದು, ಆಪಲ್ ಸಂಸ್ಥೆ ಅಂತಿಮವಾಗಿ ತನ್ನ ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2021 ಅನ್ನು ಘೋಷಿಸಿದೆ. ಇನ್ನು ಈ ಬಹುನಿರೀಕ್ಷಿತ ಆಪಲ್ ಈವೆಂಟ್ ಜೂನ್ 7 ರಂದು ಪ್ರಾರಂಭವಾಗಲಿದ್ದು ಜೂನ್ 11 ರವರೆಗೆ ನಡೆಯಲಿದೆ. 5 ದಿನಗಳ ಈವೆಂಟ್‌ನಲ್ಲಿ ಆಪಲ್‌ ಸಂಸ್ಥೆ ಬಿಡುಗಡೆ ಮಾಡಲಿರುವ ಉತ್ಪನ್ನಗಳ ಬಗ್ಗೆ ಘೋಷಿಸಲಾಗುತ್ತದೆ. ಅಲ್ಲದೆ ಘೋಷಿಸಲಾದ ಎಲ್ಲವನ್ನೂ ವಾಸ್ತವಿಕವಾಗಿ ಘೋಷಿಸಲಾಗುತ್ತದೆ. ಹಾಗಾದ್ರೆ ಈ ವರ್ಷದ WWDC ಈವೆಂಟ್‌ನಲ್ಲಿ ಏನನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್

ಕೊರೊನಾವೈರಸ್ ನ ಅಲೆ ಇನ್ನು ಕೂಡ ಜಾಗತಿಕವಾಗಿ ಕಾಡುತ್ತಿರುವುದರಿಂದ WWDC 2021 ಆನ್‌ಲೈನ್ ಈವೆಂಟ್ ಆಗಿರುತ್ತದೆ. ಆಪಲ್‌ನ ಈ ಈವೆಂಟ್ ಮುಂದಿನ ತಲೆಮಾರಿನ ಐಒಎಸ್, ಐಪ್ಯಾಡೋಸ್, ವಾಚ್‌ಓಎಸ್, ಮ್ಯಾಕೋಸ್ ಮತ್ತು ಟಿವಿಓಎಸ್ ಆವೃತ್ತಿಗಳ ಆಗಮನದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೆ ಈ ವರ್ಷ, ಐಒಎಸ್ 15, ಐಪ್ಯಾಡೋಸ್ 15, ವಾಚ್‌ಒಎಸ್ 8, ಮ್ಯಾಕೋಸ್ ಬಿಗ್ ಸುರ್‌ಗೆ ಅಪ್‌ಗ್ರೇಡ್ ಮತ್ತು ಟಿವಿಒಎಸ್ 15 ನಿರೀಕ್ಷಿಸಲಾಗಿದೆ. ಈ ಎಲ್ಲಾ ಆವೃತ್ತಿಗಳು ಬಳಕೆದಾರರಿಗೆ ಸುಧಾರಣೆಗಳು ಮತ್ತು ಹೊಸ ಫೀಚರ್ಸ್‌ಗಳನ್ನು ತರುವ ನಿರೀಕ್ಷೆಯಿದೆ.

ಆಪಲ್‌

ಇನ್ನು ಆಪಲ್‌ನ ವರ್ಲ್ಡ್‌ವೈಡ್ ಡೆವಲಪರ್ ರಿಲೇಶನ್ಸ್ ಮತ್ತು ಎಂಟರ್‌ಪ್ರೈಸಸ್ ಮತ್ತು ಎಜುಕೇಶನ್ ಮಾರ್ಕೆಟಿಂಗ್ ಉಪಾಧ್ಯಕ್ಷ ಸುಸಾನ್ ಪ್ರೆಸ್ಕಾಟ್ "ನಮ್ಮ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ತಿಳಿಯಲು ಮತ್ತು ಆಪಲ್ ಎಂಜಿನಿಯರ್‌ಗಳೊಂದಿಗೆ ಸಂಪರ್ಕ ಸಾಧಿಸಲು WWDC ಯಲ್ಲಿ ಪ್ರತಿವರ್ಷ ನಮ್ಮ ಡೆವಲಪರ್‌ಗಳನ್ನು ಒಟ್ಟುಗೂಡಿಸಲು ನಾವು ಇಷ್ಟಪಡುತ್ತೇವೆ. ನಮ್ಮ ಆಪಲ್ ಡೆವಲಪರ್‌ಗಳು ಕೆಲಸ ಮಾಡುವ ಮತ್ತು ಪ್ಲೇ ಮಾಡುವ ವಿಧಾನವನ್ನು ಬದಲಾಯಿಸುವಂತಹ ಅಪ್ಲಿಕೇಶನ್‌ಗಳನ್ನು ರಚಿಸುವಾಗ ಅವುಗಳನ್ನು ಬೆಂಬಲಿಸಲು ಹೊಸ ಡಿವೈಸ್‌ಗಳನ್ನು ನೀಡಲು ಉತ್ಸುಕರಾಗಿದ್ದೇವೆ. " ಎಂದು ಹೇಳಿದ್ದಾರೆ.

WWDC 2021

ಇದಲ್ಲದೆ, ವಿದ್ಯಾರ್ಥಿಗಳಿಗೆ ಭಾಗವಹಿಸಲು ಮತ್ತು ಸ್ವಿಫ್ಟ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಲು ಸ್ವಿಫ್ಟ್ ವಿದ್ಯಾರ್ಥಿ ಸವಾಲನ್ನು WWDC ಒಳಗೊಂಡಿರುತ್ತದೆ. ಐಪ್ಯಾಡ್ ಮತ್ತು ಮ್ಯಾಕ್‌ಗಾಗಿ ಸ್ವಿಫ್ಟ್ ಪ್ಲೇಗ್ರೌಂಡ್ ಅಪ್ಲಿಕೇಶನ್ ಮೂಲಕ ಇದನ್ನು ಮಾಡಲಾಗುತ್ತದೆ. ಜೊತೆಗೆ WWDC 2021 ಆನ್‌ಲೈನ್ ಸೆಷನ್‌ಗಳು, ಸ್ಟೇಟ್ ಆಫ್ ದಿ ಯೂನಿಯನ್ ಹಂತಗಳ ಪ್ರಕಟಣೆಗಳು, ತಾಂತ್ರಿಕ ಮಾರ್ಗದರ್ಶನಕ್ಕಾಗಿ ಲ್ಯಾಬ್‌ಗಳು ಮತ್ತು ಡೆವಲಪರ್‌ಗಳಿಗೆ ಆಪಲ್ ಎಂಜಿನಿಯರ್‌ಗಳೊಂದಿಗೆ ಸಂವಹನ ನಡೆಸುವ ಮಾರ್ಗಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ತಂತ್ರಜ್ಞಾನ

ಹೊಸ ತಂತ್ರಜ್ಞಾನ ಮತ್ತು ಹೊಸ ಡಿವೈಸ್‌ಗಳನ್ನು ಪರಿಚಯಿಸಲು ಆಪಲ್‌ ಸಂಸ್ಥೆಗೆ ಇದು ಉತ್ತಮ ವೇದಿಕೆ ಆಗಿದೆ. ಆಪಲ್‌ ಸಂಸ್ಥೆ ಹೇಳಿರುವಂತೆ ಈ ವರ್ಷದ ಈವೆಂಟ್‌ನಲ್ಲಿಯೂ ಕೂಡ ಹೊಸ ಮಾದರಿಯ ಡಿವೈಸ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ಈ ಸಮ್ಮೇಳನದಲ್ಲಿ ಡೆವಲಪರ್ಸ್‌ಗಳು ಭಾಗವಹಿಸಲು ಆಪಲ್ ಸಮ್ಮೇಳನ ಉಚಿತವಾಗಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕ್ಯುಪರ್ಟಿನೋ ಟೆಕ್ ಮೇಜರ್ ಆಪಲ್ ಡೆವಲಪರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಿಡುಗಡೆ ಮಾಡುತ್ತಾರೆ ಎನ್ನಲಾಗಿದೆ.

Best Mobiles in India

English summary
Apple's annual Worldwide Developers Conference 2021 has officially been announced and is scheduled to start on June 7.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X