Home
ಸುದ್ದಿಜಾಲ

ಸಾಲ ಪಡೆಯುವವರಿಗೆ ಶಾಕ್‌!...ಆಪಲ್‌ನಿಂದ ಮಹತ್ತರ ನಿರ್ಧಾರ

ಇತ್ತೀಚಿನ ದಿನಗಳಲ್ಲಿ ಲೋನ್‌ ಅಪ್ಲಿಕೇಶನ್‌ಗಳ ಸಂಖ್ಯೆ ಸಾಕಷ್ಟಿವೆ. ಆದರೆ ಇದರಲ್ಲಿ ಗ್ರಾಹಕರಿಗೆ ಸಾಲ ನೀಡುವ ಆ್ಯಪ್‌ಗಳಿಗಿಂತ ಬಳಕೆದಾರರ ಡೇಟಾ ಕದಿಯುವ ಆ್ಯಪ್‌ಗಳ ಸಂಖ್ಯೆಯ ಸಾಕಷ್ಟಿದೆ. ಇದೀಗ ಆಪಲ್‌ ತನ್ನ ಆ್ಯಪ್‌ ಸ್ಟೋರ್‌ನಿಂದ ಆರು ಲೋನ್‌ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದೆ.

ಹೌದು, ಆಪಲ್‌ ತನ್ನ ಆ್ಯಪ್‌ ಸ್ಟೋರ್‌ನಲ್ಲಿದ್ದ ಆರು ಲೋನ್‌ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದೆ. ಈ ಆ್ಯಪ್‌ಗಳು ಗ್ರಾಹಕರ ಡೇಟಾ ಕದಿಯುವ ಹಾಗೂ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಹಾನಿಕಾರಕ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾದ್ರೆ ಆಪಲ್‌ ಆ್ಯಪ್‌ ಸ್ಟೋರ್‌ನಿಂದ ಕಿಕ್‌ಔಟ್‌ ಆದ ಆರು ಲೋನ್‌ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಾಲ ಪಡೆಯುವವರಿಗೆ ಶಾಕ್‌!...ಆಪಲ್‌ನಿಂದ ಮಹತ್ತರ ನಿರ್ಧಾರ

ಆ್ಯಪ್‌ಸ್ಟೋರ್‌ನಿಂದ ಆರು ಲೋನ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌
ಆಪಲ್‌ನ ಆ್ಯಪ್‌ಸ್ಟೋರ್‌ನಿಂದ ಆರು ಆ್ಯಪ್‌ಗಳಿಗೆ ಗೇಟ್‌ಪಾಸ್‌ ನೀಡಲಾಗಿದೆ. ಈ ಆ್ಯಪ್‌ಗಳಲ್ಲಿ ಪಾಕೆಟ್ ಕ್ಯಾಶ್, ವೈಟ್ ಕ್ಯಾಶ್, ಗೋಲ್ಡನ್ ಕ್ಯಾಶ್ ಮತ್ತು ಓಕೆ ರೂಪಾಯಿ ಸೇರಿವೆ. ಈ ಆ್ಯಪ್‌ಗಳು ಬಳಕೆದಾರರಿಂದ ಸೂಕ್ಷ್ಮ ಮಾಹಿತಿ ಕದಿಯುವ ಹಾಗೂ ಅನಗತ್ಯ ಶುಲ್ಕಗಳನ್ನು ವಿಧಿಸುತ್ತಿವೆ ಎಂದು ವರದಿಯಾಗಿತ್ತು. ಜೊತೆಗೆ ಸಾಲಗಾರರಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅನೈತಿಕ ತಂತ್ರಗಳನ್ನು ಈ ಆ್ಯಪ್‌ಗಳು ಬಳಸಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಈ ಆ್ಯಪ್‌ಗಳನ್ನು ಬ್ಯಾನ್‌ ಮಾಡಿರುವುದಾಗಿ ಆ್ಯಪ್‌ಸ್ಟೋರ್‌ ಹೇಳಿದೆ.

ಇದಲ್ಲದೆ ಸಾಲಗಾರರ ವೈಯಕ್ತಿಕ ಫೋಟೋಗಳು ಮತ್ತು ಸಂಪರ್ಕ ಮಾಹಿತಿಯನ್ನು ಕದಿಯುವುದು. ಒಂದು ವೇಳೆ ಸಾಲಗಾರರು ಮರುಪಾವತಿ ಮಾಡುವುದು ತಡವಾದರೆ ಅವರ ಸಂಪರ್ಕಗಳಿಗೆಲ್ಲಾ ಅವರ ಸಾಲದ ಸ್ಟೇಟಸ್‌ ಬಗ್ಗೆ ಮಾಹಿತಿ ಕಳುಹಿಸುವುದು ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೆಲ್ಲವನ್ನು ಅವಲೋಕಿಸಿರುವ ಆ್ಯಪ್‌ ಸ್ಟೋರ್‌ ಈ ಮಾದರಿಯ ಲೋನ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌ ನೀಡಿದೆ.

ಇನ್ನು ಬಳಕೆದಾರರ ಕಾಳಜಿಯ ದೃಷ್ಟಿಯಿಂದ ಬಳಕೆದಾರರು ನೀಡಿರುವ ರಿಪೋರ್ಟ್ ಆಧಾರದ ಮೇಲೆ ಈ ರೀತಿಯ ಕ್ರಮ ತೆಗೆದುಕೊಂಡಿದೆ. ಅಷ್ಟೇ ಅಲ್ಲ ಆಪಲ್‌ ಡೆವಲಪರ್‌ ಪ್ರೋಗ್ರಾಂ ಲೈಸೆನ್ಸ್‌ ಒಪ್ಪಂದದಲ್ಲಿ ವಿವರಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಈ ಆ್ಯಪ್‌ಗಳು ಉಲ್ಲಂಘನೆ ಮಾಡಿವೆ ಎನ್ನಲಾಗಿದೆ. ಅಲ್ಲದೆ ಹಣಕಾಸು ಸಂಸ್ಥೆಗಳೊಂದಿಗೆ ತಮ್ಮ ಸಂಬಂಧವನ್ನು ತಪ್ಪಾಗಿ ಪ್ರತಿಪಾದಿಸುತ್ತಿರುವ ಹಲವು ಲೋನ್‌ ಆ್ಯಪ್‌ಗಳು ಕೂಡ ಇದರಲ್ಲಿ ಸೇರಿವೆ.

ಇತ್ತೀಚಿನ ದಿನಗಳಲ್ಲಿ ಲೋನ್‌ ಅಪ್ಲಿಕೇಶನ್‌ಗಳ ಕಿರುಕುಳದಿಂದಾಗಿಯೆ ಎಷ್ಟೋ ಮಂದಿ ಆತ್ಮಹತ್ಯ ಮಾಡಿಕೊಂಡಿರುವ ಪ್ರಕರಣಗಳು ಕೂಡ ನಡೆದಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಕೂಡ ಯುವಕನೊಬ್ಬ ಬೆಂಗಳೂರಿನಲ್ಲಿ ಲೋನ್‌ ಆ್ಯಪ್‌ಗಳ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿಯಾಗಿದ್ದ ಈತ ತನ್ನ ಸ್ನೇಹಿತನಿಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಆ್ಯಪ್‌ಗಳ ಮೂಲಕ ಲೋನ್ ಪಡೆದಿದ್ದ ಎನ್ನಲಾಗಿದೆ. ಆದರೆ ಇತ್ತೀಚಿಗೆ ತನ್ನ ಸ್ನೇಹಿತ ಲೋನ್‌ ಇಎಂಐ ಪಾವತಿಸದ ಹಿನ್ನೆಲೆಯಲ್ಲಿ ಲೋನ್‌ ಆ್ಯಪ್‌ಗಳಿಂದ ಭಾರಿ ಕಾಟವನ್ನು ಎದುರಿಸಿದ್ದ ಯುವಕ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲ ಪಡೆಯುವವರಿಗೆ ಶಾಕ್‌!...ಆಪಲ್‌ನಿಂದ ಮಹತ್ತರ ನಿರ್ಧಾರ

ಲೋನ್‌ ಅಪ್ಲಿಕೇಶನ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ?
ಲೋನ್‌ ಆ್ಯಪ್‌ಗಳಿಂದ ವಂಚನೆಗೆ ಒಳಗಾಗುವುದನ್ನು ನೀವು ತಪ್ಪಿಸಿಕೊಳ್ಳಲು ಸುಲಭ ಮಾರ್ಗವೆಂದರೆ ಲೋನ್‌ ಅಪ್ಲಿಕೇಶನ್‌ಗಳಿಂದ ಸಾಲವನ್ನು ಪಡೆಯಬಾರದು. ಇನ್ನು ನೀವು ಸ್ಮಾರ್ಟ್‌ಫೋನ್‌ಗಳಲ್ಲಿ ಸಾಲ ನೀಡುವುದಾಗಿ ಹೇಳುವ ಲೋನ್‌ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಸೂಕ್ತವಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸೂಕ್ಷ್ಮ ಡೇಟಾಗಳಾದ ಫೋಟೋ ಗ್ಯಾಲರಿ ಮತ್ತು ಸಂಪರ್ಕಗಳಿಗೆ ಪ್ರವೇಶವನ್ನು ಕೇಳುವ ಲೋನ್‌ ಅಪ್ಲಿಕೇಶನ್‌ಗಳನ್ನು ಬಳಸಲೇಬಾರದು. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಡೆವಲಪರ್‌ಗಳ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

Best Mobiles in India

English summary
Apple bans few loan apps from App Store in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+