Home
ಸುದ್ದಿಜಾಲ

ಆಪಲ್‌ನಿಂದ ಗುಡ್‌ ನ್ಯೂಸ್‌! ಆದರೆ ಈ ಆಯ್ಕೆಯು ಇಲ್ಲಿ ಮಾತ್ರ ಲಭ್ಯ!

ಆಪಲ್‌ ಕಂಪೆನಿ ತನ್ನ ಆಪಲ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಆಪಲ್‌ ಕಾರ್ಡ್‌ ಬಳಕೆದಾರರು ಇನ್ಮುಂದೆ ಜಿರೋ ಬ್ಯಾಲೆನ್ಸ್‌ ಸೇವಿಂಗ್ಸ್‌ ಅಕೌಂಟ್‌ ಅನ್ನು ಒಪನ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಶುಲ್ಕವಾಗಲಿ, ಮಿನಿಮಮ್‌ ಬ್ಯಾಲೆನ್ಸ್‌ ಕೂಡ ಇಡಬೇಕಾದ ಅನಿವಾರ್ಯತೆಯಿಲ್ಲ ಎನ್ನಲಾಗಿದೆ.

ಹೌದು, ಆಪಲ್‌ ಕಂಪೆನಿ ಯುಎಸ್‌ನಲ್ಲಿರುವ ತನ್ನ ಬಳಕೆದಾರರಿಗೆ ಆಪಲ್‌ ಕಾರ್ಡ್‌ನಲ್ಲಿ ಹೊಸ ಆಯ್ಕೆಯನ್ನು ನೀಡಿದೆ. ಆಪಲ್‌ ಕಾರ್ಡ್‌ ಮೂಲಕ ಸೇವಿಂಗ್ಸ್‌ ಅಕೌಂಟ್‌ ಸೆಟ್‌ ಮಾಡುವ ಬಳಕೆದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಡೈಲಿ ಕ್ಯಾಶ್‌ನಿಂದ ಗಳಿಸಿದ ಹಣದ ಮೇಲೆ ಬಡ್ಡಿಯನ್ನು ಕೂಡ ಗಳಿಸಬಹುದಾಗಿದೆ. ಹಾಗಾದ್ರೆ ಆಪಲ್‌ ಕಾರ್ಡ್‌ ಮೂಲಕ ಸೇವಿಂಗ್ಸ್‌ ಅಕೌಂಟ್‌ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌ನಿಂದ ಗುಡ್‌ ನ್ಯೂಸ್‌! ಆದರೆ ಈ ಆಯ್ಕೆಯು ಇಲ್ಲಿ ಮಾತ್ರ ಲಭ್ಯ!

ಆಪಲ್‌ ಕಂಪೆನಿ ಆಪಲ್‌ ಕಾರ್ಡ್‌ ಮೂಲಕ ಜಿರೋ ಸೇವಿಂಗ್ಸ್‌ ಅಕೌಂಟ್‌ ತೆರೆಯುವುದಕ್ಕೆ ಅವಕಾಶ ನೀಡಿದೆ. ಇದಲ್ಲದೆ ಈ ಸೇವಿಂಗ್ಸ್‌ ಅಕೌಂಟ್‌ನಲ್ಲಿ ಹಣ ಇಡುವುದಕ್ಕೆ ಹಾಗೂ ಯಾವುದೇ ಸಮಯದಲ್ಲಿ ಸೇವಿಂಗ್ಸ್ ಡ್ಯಾಶ್‌ಬೋರ್ಡ್ ಮೂಲಕ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಅಲ್ಲದೆ ನೀವು ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಅಥವಾ ಆಪಲ್‌ ಕ್ಯಾಶ್ ಕಾರ್ಡ್‌ಗೆ ಹಣ ವರ್ಗಾಯಿಸಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವಂತಿಲ್ಲ ಎನ್ನಲಾಗಿದೆ.

ಆಪಲ್‌ನಿಂದ ಗುಡ್‌ ನ್ಯೂಸ್‌! ಆದರೆ ಈ ಆಯ್ಕೆಯು ಇಲ್ಲಿ ಮಾತ್ರ ಲಭ್ಯ!

ಆಪಲ್‌ ಕಾರ್ಡ್‌ ಬಳಸಿ ಸೇವಿಂಗ್ಸ್‌ ಅಕೌಂಟ್‌ ಅನ್ನು ಸೆಟ್‌ ಮಾಡವುದು ಹೇಗೆ?

ನಿಮ್ಮ ವಾಲೆಟ್‌ ಅಪ್ಲಿಕೇಶನ್‌ನಲ್ಲಿ ಆಪಲ್‌ ಕಾರ್ಡ್‌ ಬಳಸಿಕೊಂಡು ಸೇವಿಂಗ್ಸ್‌ ಅಕೌಂಟ್‌ ಅನ್ನು ತೆರೆಯುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
* ಮೊದಲಿಗೆ ವಾಲೆಟ್‌ ಅಪ್ಲಿಕೇಶನ್‌ನಲ್ಲಿ ಮೂರು ಡಾಟ್‌ಗಳಿರುವ ವೃತ್ತದ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ ಡೈಲಿ ಕ್ಯಾಶ್‌
* ಇದೀಗ ಸೇವಿಂಗ್ಸ್‌ ಅನ್ನು ಸೆಟ್‌ ಮಾಡಿ.

ಹೀಗೆ ಮಾಡಿದರೆ ನಿಮ್ಮ ಸೇವಿಂಗ್ಸ್‌ ಅಕೌಂಟ್‌ ಅನ್ನು ಸೆಟ್‌ ಮಾಡಲಾಗುತ್ತದೆ. ಇದರಲ್ಲಿ ನೀವು ಸ್ವೀಕರಿಸುವ ಎಲ್ಲಾ ಡೈಲಿ ಕ್ಯಾಶ್‌ ಡೆಪಾಸಿಟ್‌ ಆಟೋಮ್ಯಾಟಿಕ್‌ ಆಗಿರುತ್ತದೆ. ಅಲ್ಲದೆ ನಿಮ್ಮ ಡೆಪಾಸಿಟ್‌ಗೆ ತಕ್ಕಂತೆ ಬಡ್ಡಿಯನ್ನು ಕೂಡ ನೀವು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಬಳಕೆದಾರರು ಯಾವುದೇ ಸಮಯದಲ್ಲಿ ತಮ್ಮ ಆಪಲ್‌ ಕ್ಯಾಶ್‌ ಬ್ಯಾಲೆನ್ಸ್‌ಗೆ ಡೈಲಿ ಕ್ಯಾಶ್ ಅನ್ನು ಸೇರಿಸಬಹುದಾಗಿದೆ. ಇನ್ನು ಈ ಆಯ್ಕೆಯನ್ನು ಬಳಸಬೇಕಾದರೆ ಬಳಕೆದಾರರು ಹದಿನೆಂಟು ವರ್ಷ ತುಂಬಿದವರಾಗಿರಬೇಕು. ಜೊತೆಗೆ iOS 16.4 ಅಥವಾ ನಂತರದ ಐಫೋನ್ ಮಾದರಿಯಲ್ಲಿ ಮಾತ್ರ ಈ ಫೀಚರ್ಸ್‌ ಲಭ್ಯವಾಗಲಿದೆ.

ಆಪಲ್‌ನಿಂದ ಗುಡ್‌ ನ್ಯೂಸ್‌! ಆದರೆ ಈ ಆಯ್ಕೆಯು ಇಲ್ಲಿ ಮಾತ್ರ ಲಭ್ಯ!

ಸೇವಿಂಗ್ಸ್‌ ಅಕೌಂಟ್‌ನಲ್ಲಿ ಮನಿ ಡೆಪಾಸಿಟ್‌ ಮಾಡುವುದು ಹೇಗೆ?

* ಮೊದಲಿಗೆ ನಿಮ್ಮ iPhone ಅನ್ನು ಅನ್‌ಲಾಕ್ ಮಾಡಿ
* ನಂತರ Wallet ಅಪ್ಲಿಕೇಶನ್ ತೆರೆಯಿರಿ ಮತ್ತು Apple ಕಾರ್ಡ್ ಆಯ್ಕೆಮಾಡಿ.
* ಇದರಲ್ಲಿ ಸೇವಿಂಗ್ಸ್‌ ಅಕೌಂಟ್‌ ಅನ್ನು ಆಯ್ಕೆ ಮಾಡಿ
* ನಂತರ ಕ್ಯಾಶ್‌ ಡೆಪಾಸಿಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
* ನೀವು ಡೆಪಾಸಿಟ್‌ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು ಡೆಪಾಸಿಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
* ನೀವು ಹಣವನ್ನು ಸೇರಿಸಲು ವಾಲೆಟ್‌ಗೆ ಲಿಂಕ್ ಮಾಡಿದ ಖಾತೆಯನ್ನು ಆಯ್ಕೆಮಾಡಿ
* ಇದೀಗ ಸೈಡ್ ಬಟನ್ ಅನ್ನು ಡಬಲ್ ಕ್ಲಿಕ್ ಮಾಡಿ, ಇದಕ್ಕೆ ನೀವು ಫೇಸ್ ಐಡಿ, ಟಚ್ ಐಡಿ ಅಥವಾ ನಿಮ್ಮ ಪಾಸ್‌ಕೋಡ್‌ನೊಂದಿಗೆ ದೃಢೀಕರಿಸುವ ಅಗತ್ಯವಿದೆ.
* ಇನ್ನು ನೀವು ಆಪಲ್ ಕಾರ್ಡ್ ಸೇವಿಂಗ್ಸ್‌ನೊಂದಿಗೆ ಗರಿಷ್ಠ $250,000 ಮೊತ್ತವನ್ನು ಡೆಪಾಸಿಟ್‌ ಮಾಡಬಹುದಾಗಿದೆ.

Best Mobiles in India

English summary
Apple Card: Apple anounced a zero-balance savings account with no fees
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+