Home
ಸುದ್ದಿಜಾಲ

ವಿಶ್ವದ ಎಲ್ಲಾ ಜನರಿಗೂ ಇಂಗ್ಲೀಷ್ ಬಿಟ್ಟು ಈ ಭಾಷೆ ಕಲಿಸಿ ಎಂದ ಆಪಲ್ ಸಿಇಒ!!.ಯಾವುದು?

ಮಾತೃ ಭಾಷೆಯ ನಂತರ ಇಂಗ್ಲೀಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಯುವುದಕ್ಕಿಂತಲೂ ಬೇರೆ ಭಾಷೆ ಕಲಿಯಲು ಹೇಳಿದ್ದಾರೆ!

By Bhaskar N J

ಇಂಗ್ಲೀಷ್ ಕಲಿತಿದ್ದರೆ ಮಾತ್ರ ಇಂದು ಉತ್ತಮ ಭವಿಷ್ಯ ದೊರೆಯುತ್ತದೆ ಎಂದು ನೀವೆಂದುಕೊಂಡಿದ್ದೀರಾ ಅಲ್ಲವೇ?. ಆದರೆ, ಜಗತ್ತಿನ ನಂಬರ್ ಮೊಬೈಲ್ ಕಂಪೆನಿ ಆಪಲ್ ಮುಖ್ಯಸ್ಥ ಟಿಮ್‌ ಕುಕ್‌ ಅವರ ಪ್ರಕಾರ ಇಂಗ್ಲೀಷ್ ಗಿಂತಲೂ ಹೆಚ್ಚು ಪ್ರಮುಖವಾದ ಭಾಷೆ ಬೇರೆ ಇದೆ ಎಂದರೆ ನೀವು ನಂಬಲೇಬೇಕು.!!

ಹೌದು, ಲಂಡನ್‌ಗೆ ಭೇಟಿ ನೀಡಿದ ಟಿಮ್‌ ಕುಕ್‌ ಅವರು ಅಲ್ಲಿನ ವುಡ್‌ಬೆರ್ರಿ ಡೌನ್‌ ಕಮ್ಯುನಿಟಿ ಪ್ರೈಮರಿ ಸ್ಕೂಲ್‌ನ ಮಕ್ಕಳ ಜತೆ ಮಾತುಕತೆ ನಡೆಸಿ, ಮಾತೃ ಭಾಷೆಯ ನಂತರ ಇಂಗ್ಲೀಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಯುವುದಕ್ಕಿಂತಲೂ ಬೇರೆ ಭಾಷೆ ಕಲಿಯಲು ಹೇಳಿದ್ದಾರೆ, ಹಾಗಾದರೆ, ಆ ಭಾಷೆ ಯಾವುದು? ಮತ್ತು ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಾಂಶಗಳ ಕೋಡ್!!

ತಂತ್ರಾಂಶಗಳ ಕೋಡ್!!

ಭವಿಷ್ಯದಲ್ಲಿ ವಿದ್ಯಾರ್ಥಿಗಳು ಎರಡನೇ ಭಾಷೆಯಾಗಿ ಇಂಗ್ಲೀಷ್‌ ಕಲಿಯುವುದಕ್ಕಿಂತಲೂ ತಂತ್ರಾಂಶಗಳ ಕೋಡ್‌ ಬರೆಯುವುದನ್ನು ಕಲಿಯುವುದು ಬಹಳ ಮುಖ್ಯವಾದ ಸಂಗತಿ.! ತಂತ್ರಾಂಶಗಳ ಕೋಡ್‌' ಎನ್ನುವುದು ಕೇವಲ ಕಂಪ್ಯೂಟರ್‌ ನಿಪುಣರಿಗೆ ಮಾತ್ರ ತಿಳಿಯುವ ವಿಷಯವಲ್ಲ. ಹಾಗಾಗಿ, ಕೋಡ್ ಬರೆಯುವುದನ್ನು ಎಲ್ಲರೂ ಕಲಿಯಬೇಕು ಎಂದು ಆಪಲ್ ಮುಖ್ಯಸ್ಥ ಟಿಮ್‌ ಕುಕ್‌ ಹೇಳಿದ್ದಾರೆ.!!

ಅವರು ಹೇಳಿದ್ದು ಹೀಗಿತ್ತು.!!

ಅವರು ಹೇಳಿದ್ದು ಹೀಗಿತ್ತು.!!

'ಒಂದು ವೇಳೆ ನಾನು ಫ್ರೆಂಚ್‌ ವಿದ್ಯಾರ್ಥಿಯಾಗಿದ್ದು, ನನಗೆ 10 ವರ್ಷವಾಗಿದ್ದ ಪಕ್ಷದಲ್ಲಿ ಇಂಗ್ಲೀಷ್‌ ಕಲಿಕೆಗಿಂತಲೂ ಕೋಡ್‌ ಬರೆಯುವುದನ್ನು ಕಲಿಯುವುದೇ ಮುಖ್ಯ ಎಂದು ಭಾವಿಸುತ್ತೇನೆ.ನನ್ನ ಮಾತಿನ ಹಿಂದಿನ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು. ವಿಶ್ವದ ಪ್ರತಿಯೊಂದು ಶಾಲೆಯಲ್ಲೂ ಕೋಡಿಂಗ್‌ ಅನ್ನು ಕಲಿಸಬೇಕು,' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.!!

ಕೋಡಿಂಗ್ ಕ್ರಿಯಾಶೀಲತೆಗೆ ಅವಕಾಶ ನೀಡಲಿದೆ.!!

ಕೋಡಿಂಗ್ ಕ್ರಿಯಾಶೀಲತೆಗೆ ಅವಕಾಶ ನೀಡಲಿದೆ.!!

ಕ್ರಿಯಾಶೀಲತೆ ಮುಂದಿನ ಸೀಟಿನಲ್ಲಿದ್ದರೆ, ತಂತ್ರಜ್ಞಾನವು ಹಿಂದಿನ ಸೀಟಿನಲ್ಲಿರುತ್ತದೆ. ಕ್ರಿಯಾಶೀಲತೆ ಅನ್ನುವುದು ಗುರಿ. ಕೋಡಿಂಗ್‌ ಅನ್ನುವುದು ಕ್ರಿಯಾಶೀಲತೆಗೆ ಅವಕಾಶ ಕಲ್ಪಿಸುತ್ತದೆ. ಇವೆರಡನ್ನೂ ನೀವು ಅತ್ಯುತ್ತಮ ಆಲೋಚನೆಯೊಂದಿಗೆ ಮಿಶ್ರಣ ಮಾಡಿ ಯಶಸ್ವಿಯಾಗಬಹುದು ಎಂದು ಟಿಮ್‌ ಕುಕ್‌ ಸಲಹೆ ನೀಡಿದ್ದಾರೆ.!!

ತಂತ್ರಜ್ಞಾನ ಯುಗದ ಪ್ರಾಮುಖ್ಯತೆ!!

ತಂತ್ರಜ್ಞಾನ ಯುಗದ ಪ್ರಾಮುಖ್ಯತೆ!!

ಮಾಹಿತಿ ತಂತ್ರಜ್ಞಾನ ಯುಗದ ಪ್ರಾಮುಖ್ಯವನ್ನು ಆಪಲ್‌ ಸಿಇಒ ಟಿಮ್‌ ಕುಕ್‌ ಅವರು ಜಗತ್ತಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದು, ಎರಡನೇ ಭಾಷೆಯಾಗಿ ಇಂಗ್ಲೀಷ್‌ ಕಲಿಯುವುದಕ್ಕಿಂತಲೂ ತಂತ್ರಾಂಶಗಳ ಕೋಡ್‌ ಬರೆಯುವುದನ್ನು ಕಲಿಯಿರಿ ಎಂದಿದ್ದು, ಕೋಡಿಂಗ್ ಮೌಲ್ಯ ನಿಮಗೆ ಅರ್ಥವಾಗಲಿ ಎಂದು. ಆದರೆ, ಇಂಗ್ಲೀಷ್‌ ಸಹ ಇಂದು ಬೇಕಿದೆ ಎಂದಿದ್ದಾರೆ.!!

Best Mobiles in India

English summary
Apple CEO Tim Cook says it is more important to learn how to code than it is to learn English as a second language.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+