ಐಫೋನ್ ಮತ್ತು ಐಪ್ಯಾಡ್ ಖರೀದಿಗೆ 23,000 ರೂ ಕ್ಯಾಶ್‌ಬ್ಯಾಕ್: ಕಾಂಬೊ ಆಫರ್

By Suneel
|

ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್‌ ಮತ್ತು ಐಪ್ಯಾಡ್ ಖರೀದಿಸಿದವರು, 23,000 ರೂವರೆಗೆ ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಹೌದು, ಆಪಲ್ ಮತ್ತು ಸಿಟಿಬ್ಯಾಂಕ್ ತಮ್ಮ ಗ್ರಾಹಕರಿಗೆ ಕಾಂಬೊ ಆಫರ್ ನೀಡಲು ಪಾಲುದಾರಿಕೆ ಹೊಂದಿದ್ದು, ಐಫೋನ್‌ ಮತ್ತು ಐಪ್ಯಾಡ್ ಖರೀದಿಸುವವರಿಗೆ ಕಾಂಬೊ ಆಫರ್ ನೀಡಲು ನಿರ್ಧರಿಸಿವೆ. ಗ್ರಾಹಕರು ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಖರೀದಿಸುವ ಮೂಲಕ ರೂ.23,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಕಾಂಬೋ ಆಫರ್ ಇನ್ನೊಂದು ರೀತಿಯಲ್ಲಿಯೂ ವರ್ಕ್ ಆಗಲಿದ್ದು, ಐಪ್ಯಾಡ್ ಬದಲು, ಲೇಟೆಸ್ಟ್‌ ಮಾಡೆಲ್‌ನ ಎರಡೂ ಐಫೋನ್‌ಗಳನ್ನು ಖರೀಸುವ ಮೂಲಕವು 23,000 ರೂ ಕ್ಯಾಶ್‌ಬ್ಯಾಕ್‌ ಅನ್ನು ಪಡೆಯಬಹುದು. ಆಪಲ್-ಸಿಟಿಬ್ಯಾಂಕ್'ನ 'ಐಫೋನ್-ಐಫ್ಯಾಡ್' ಕಾಂಬೊ ಆಫರ್ ಕೇವಲ ಆಫ್‌ಲೈನ್‌ ಆಪಲ್‌ನ ಅಧಿಕೃತ ಮರುಮಾರಾಟಗಾರರಲ್ಲಿ ಮಾತ್ರ ಲಭ್ಯ. ಕ್ಯಾಶ್‌ಬ್ಯಾಕ್‌ ಮತ್ತು ಖರೀದಿ ಬಗ್ಗೆ ಇನ್ನಷ್ಟು ಮುಖ್ಯ ಮಾಹಿತಿಗಳನ್ನು ಮುಂದೆ ಓದಿರಿ.

ಸಿಟಿಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಗ್ರಾಹಕರು

ಸಿಟಿಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಗ್ರಾಹಕರು

ಅಂದಹಾಗೆ ಆಪಲ್ ಐಫೋನ್ ಮತ್ತು ಐಪ್ಯಾಡ್ ಖರೀದಿಸಿ ಕ್ಯಾಶ್‌ಬ್ಯಾಕ್‌ ಪಡೆಯುವ ಅವಕಾಶ ಕೇವಲ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಮಾತ್ರ. ಆಫರ್‌ ಪ್ರಕಾರ ಡಾಕ್ಯುಮೆಂಟ್ ಅನ್ನು ಗ್ಯಾಜೆಟ್ 360 ಆಕ್ಸೆಸ್‌ ಮಾಡುತ್ತದೆ. ಅಲ್ಲದೇ ಐಫೋನ್ ಮತ್ತು ಐಪ್ಯಾಡ್ ಅನ್ನು ಒಂದೇ ದಿನ ಒಂದೇ ಸ್ಟೋರ್‌ನಲ್ಲಿ ಒಂದೇ ಸಿಟಿಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ನಿಂದ ಖರೀದಿಸಿದವರಿಗೆ ಮಾತ್ರ ಈ ಆಫರ್. ಅಲ್ಲದೇ ಖರೀದಿ ವೇಳೆ ಒಂದೇ ಮೊಬೈಲ್‌ ನಂಬರ್ ಅನ್ನು ನೀಡಬೇಕು ಎಂದು ಹೇಳಲಾಗಿದೆ.

 23,000 ಕ್ಯಾಶ್‌ಬ್ಯಾಕ್‌ನ ಆಫರ್ ಅವಧಿ

23,000 ಕ್ಯಾಶ್‌ಬ್ಯಾಕ್‌ನ ಆಫರ್ ಅವಧಿ

ಆಪಲ್ ಮತ್ತು ಸಿಟಿಬ್ಯಾಂಕ್‌ನ, 23,000 ಕ್ಯಾಶ್‌ಬ್ಯಾಕ್‌ನ ಕಾಂಬೊ ಆಫರ್‌ ಅನ್ನು ಶುಕ್ರವಾರ (ನವೆಂಬರ್ 18) ಪ್ರಕಟಿಸಿದ್ದು, ಈ ಆಫರ್ ಡಿಸೆಂಬರ್ 31, 2016 ರವರೆಗೆ ಲಭ್ಯ. ಪ್ರತಿ ಗ್ರಾಹಕರು ಈ ಆಫರ್ ಅವಧಿಯಲ್ಲಿ 4 ಬಾರಿ ಖರೀದಿಗಾಗಿ ವಹಿವಾಟು ನಡೆಸಬಹುದು. ಪ್ರತಿ ತಿಂಗಳಲ್ಲಿ ಎರಡು ಬಾರಿ ವಹಿವಾಟು ಸಾಧ್ಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಕ್ಯಾಶ್‌ಬ್ಯಾಕ್‌ ಆಫರ್ ಯಾವ ಫೋನ್‌ ಖರೀದಿಗೆ ಎಷ್ಟು?

ಕ್ಯಾಶ್‌ಬ್ಯಾಕ್‌ ಆಫರ್ ಯಾವ ಫೋನ್‌ ಖರೀದಿಗೆ ಎಷ್ಟು?

ಗ್ರಾಹಕರು ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಖರೀದಿಯಿಂದ 17,000 ಕ್ಯಾಶ್‌ಬ್ಯಾಕ್‌ ಅನ್ನು ಮತ್ತು ಐಪ್ಯಾಡ್ ಮಿನಿ 2 ಅಥವಾ ಐಪ್ಯಾಡ್ ಮಿನಿ 4 ಖರೀದಿಯಿಂದ ಪಡೆಯಬಹುದು. ಐಪ್ಯಾಡ್ ಏರ್‌ 2 ಖರೀದಿಯಿಂದ 18,000, ಐಪ್ಯಾಡ್ ಪ್ರೊ ಮಾಡೆಲ್‌ ಖರೀದಿಯಿಂದ 23,000 ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಖರೀದಿ ವೇಳೆ ಸ್ಟೋರ್‌ನಲ್ಲಿ 2000 ರೂ ಪ್ರಾಥಮಿಕವಾಗಿ ಉಳಿತಾಯ ಮಾಡಬಹುದು.

ಐಪ್ಯಾಡ್‌ ಪ್ರೊ ಖರೀದಿಯಿಂದ ರೂ.23,000 ಕ್ಯಾಶ್‌ಬ್ಯಾಕ್‌

ಐಪ್ಯಾಡ್‌ ಪ್ರೊ ಖರೀದಿಯಿಂದ ರೂ.23,000 ಕ್ಯಾಶ್‌ಬ್ಯಾಕ್‌

ಗ್ರಾಹಕರು ಐಪ್ಯಾಡ್‌ ಪ್ರೊ ಖರೀದಿಯಿಂದ ರೂ.23,000 ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಎರಡು ಡಿವೈಸ್‌ಗಳ ಖರೀದಿಯಿಂದ 23,000 ಕ್ಯಾಶ್‌ಬ್ಯಾಕ್‌ ಪಡೆಯಬಹುದು.

ಕ್ಯಾಶ್‌ಬ್ಯಾಕ್ ಕ್ರೆಡಿಟ್ ಸಿಟಿಬ್ಯಾಂಕ್‌ಗೆ

ಕ್ಯಾಶ್‌ಬ್ಯಾಕ್ ಕ್ರೆಡಿಟ್ ಸಿಟಿಬ್ಯಾಂಕ್‌ಗೆ

ಅಂದಹಾಗೆ ಮೇಲೆ ತಿಳಿಸಿದ ಡಿವೈಸ್‌ಗಳ ಖರೀದಿಯಿಂದ ಲಭ್ಯವಾಗುವ ಕ್ಯಾಶ್‌ಬ್ಯಾಕ್‌ ಸಿಟಿಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ಗೆ 90 ದಿನಗಳ ಒಳಗಾಗಿ ಸಂದಾಯವಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Apple, Citibank Team Up to Offer Up to Rs. 23,000 Cashback on iPhone, iPad Combo Purchase. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X