Home
ಸುದ್ದಿಜಾಲ

ಅಗಸ್ಟ್ ಆರಂಭದಲ್ಲಿ ಆಪಲ್ ನ ಕ್ರೆಡಿಟ್ ಕಾರ್ಡ್ ಗಳು ಬರುವ ಸಾಧ್ಯತೆ

By Gizbot Bureau

ಮಾರ್ಚ್ ತಿಂಗಳಲ್ಲಿ ಆಪಲ್ ಸಂಸ್ಥೆ ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸುವ ವಿಚಾರವು ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ಆ ಬಗ್ಗೆ ಇದುವರೆಗೂ ನಾವು ಹೆಚ್ಚು ವಿಚಾರಗಳನ್ನು ಕೇಳಿಲ್ಲ.

ಬ್ಲೂಮ್ ಬರ್ಗ್ ವರದಿ

ಬ್ಲೂಮ್ ಬರ್ಗ್ ವರದಿ

ಇದೀಗ ಬ್ಲೂಮ್ ಬರ್ಗ್ ವರದಿಯೊಂದು ಅಗಸ್ಟ್ ಆರಂಭದಲ್ಲಿ ಆಪಲ್ ಕ್ರೆಡಿಟ್ ಕಾರ್ಡ್ ಗಳು ಬಿಡುಗಡೆಗೊಳ್ಳಲಿವೆ ಎಂದು ತಿಳಿಸಿದೆ. ಈ ಬೇಸಿಗೆಯಲ್ಲೇ ಆಪಲ್ ಕ್ರೆಡಿಟ್ ಕಾರ್ಡ್ ಗಳು ಸಿದ್ಧವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕಾರ್ಡ್ ತಯಾರಿಕೆಯ ಟ್ರ್ಯಾಕ್ ನಲ್ಲಿದೆ ಎಂದು ತಿಳಿದುಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಪಾಲುದಾರಿಕೆ:

ಪಾಲುದಾರಿಕೆ:

ಈ ರೀತಿಯ ಪ್ರೊಡಕ್ಟ್ ಗಳನ್ನು ಬಿಡುಗಡೆಗೊಳಿಸುವುದು ಅಷ್ಟು ಸುಲಭದ ವಿಚಾರವಲ್ಲ. ಅದರಲ್ಲೂ ಆಪಲ್ ನಂತಹ ಸಂಸ್ಥೆ ಗೋಲ್ಡ್ ಮನ್ ಸ್ಯಾಚ್ ನಂತಹ ವಿಭಿನ್ನ ಕಾರ್ಪೋರೇಟ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿ ಕಾರ್ಯ ನಿರ್ವಹಿಸುವುದು ಬಹಳ ವಿಶೇಷ ಸಂಗತಿಯಾಗಿದೆ.ಹಲವಾರು ಜವಾಬ್ದಾರಿಗಳನ್ನು ಎರಡೂ ಸಂಸ್ಥೆಗಳು ಹಂಚಿಕೊಂಡಿವೆ ಆದರೆ ಹೊಸ ತಂತ್ರಜ್ಞಾನದ ವಿಚಾರದಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸಿದೆ ಎಂದು ಬ್ಲೂಮ್ ಬರ್ಗ್ ವರದಿ ಹೇಳುತ್ತಿದೆ.

ಬ್ಯಾಂಕ್ ನಲ್ಲಿ ಕೋರಿಕೆ:

ಬ್ಯಾಂಕ್ ನಲ್ಲಿ ಕೋರಿಕೆ:

ಈ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಯಂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾಡುವುದಕ್ಕಾಗಿ ಆಪಲ್ ಸಂಸ್ಥೆ ಬ್ಯಾಂಕ್ ಗಳನ್ನು ಕೋರಿದೆಯಂತೆ. ಆದರೆ ಆಪಲ್ ಮೊದಲು ತಿಳಿಸಿದ ಕೆಲವು ಕಾರ್ಡಿನ ಲಕ್ಷಣಗಳು ಹಾಗೆಯೇ ಉಳಿದಿವೆ ಎಂದು ಹೇಳಲಾಗುತ್ತಿದೆ.

ಅಧಿಕೃತ ಪ್ರಕಟಣೆ ಆಗಿಲ್ಲ:

ಅಧಿಕೃತ ಪ್ರಕಟಣೆ ಆಗಿಲ್ಲ:

ಆಪಲ್ ಸಂಸ್ಥೆ ಇದುವರೆಗೂ ಅಗಸ್ಟ್ ನಲ್ಲಿ ಕ್ರೆಡಿಟ್ ಕಾರ್ಡ್ ನ್ನು ರಿಲೀಸ್ ಮಾಡುವ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಕಳೆದ ಹಲವು ವಾರಗಳಿಂದ ಆಪಲ್ ಸಂಸ್ಥೆಯ ಕೆಲಸಗಾರರು ಮತ್ತು ರಿಟೇಲ್ ಕೆಲಸಗಾರರು ಕಾರ್ಡ್ ನ್ನು ಟೆಸ್ಟ್ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಐಓಎಸ್ 12.4 ಗೆ ಬೆಂಬಲ :

ಐಓಎಸ್ 12.4 ಗೆ ಬೆಂಬಲ :

ಅಗಸ್ಟ್ ನಲ್ಲಿ ಬಿಡುಗಡೆಯೆಂಬುದೇ ಆದರೆ ಕಾರ್ಡ್ ಈಗಾಗಲೇ ಸಿದ್ಧಗೊಂಡಿದೆ ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಐಓಎಸ್ 12.4 ನ ಬೆಂಬಲವನ್ನು ಇದು ಹೊಂದಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇನ್ನು ಕೆಲವೇ ವಾರಗಳಲ್ಲಿ ಆಪಲ್ ಕ್ರೆಡಿಟ್ ಕಾರ್ಡ್ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದು ಮಾತ್ರ ಸತ್ಯ.

Best Mobiles in India

English summary
Apple credit card might be launched in early August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+