Home
ಸುದ್ದಿಜಾಲ

Apple Event 2023: ಐಫೋನ್‌ 15 ಪ್ಲಸ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ, ಏನಿದರ ವಿಶೇಷತೆ?

ಟೆಕ್‌ ದಿಗ್ಗಜ ಆಪಲ್‌ ಕಂಪೆನಿ ತನ್ನ 'ವಂಡರ್‌ ಲಸ್ಟ್‌' ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಆಪಲ್‌ 15 ಸರಣಿಯನ್ನು ಅನಾವರಣಗೊಳಿಸಿದೆ. ಇದರಲ್ಲಿ ಆಪಲ್‌ ಐಫೋನ್‌ 15 ಪ್ಲಸ್‌ ಮಾದರಿಯು 6.7 ಇಂಚಿನ ಡಿಸ್‌ಪ್ಲೇ ಮೂಲಕ ಗಮನಸೆಳೆದಿದೆ. ಇದು ಕಳೆದ ವರ್ಷ ಐಫೋನ್ 14 ಪ್ರೊನಲ್ಲಿ ಪರಿಚಯಿಸಲಾದ A16 ಬಯೋನಿಕ್ ಚಿಪ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹೌದು, ಆಪಲ್‌ ಐಫೋನ್‌ 15 ಪ್ಲಸ್‌ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಬಹುತೇಕ ಐಫೋನ್‌ 15 ಮಾದರಿಯ ಫೀಚರ್ಸ್‌ಗಳನ್ನು ಹೊಂದಿದ್ದರೂ ಡಿಸ್‌ಪ್ಲೇ ಗಾತ್ರದಲ್ಲಿ ವಿಭಿನ್ನವಾಗಿದೆ. ಇದರ ಡಿಸೈನ್‌ ಹಾಗೂ ಪ್ಯಾನಲ್‌ ಲುಕ್ ಐಫೋನ್‌ 15 ಗಿಂತ ಭಿನ್ನವಾಗಿದೆ. ಹಾಗಾದ್ರೆ ಐಫೋನ್‌ 15 ಪ್ಲಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Apple Event 2023: ಐಫೋನ್‌ 15 ಪ್ಲಸ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಐಫೋನ್‌ 15 ಪ್ಲಸ್‌ ಡಿಸ್‌ಪ್ಲೇ ರಚನೆ ಹೇಗಿದೆ?
ಐಫೋನ್‌ 15 ಪ್ಲಸ್‌ ಡಿಸ್‌ಪ್ಲೇ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಡಾಲ್ಬಿ ವಿಷನ್ ವಿಷಯಕ್ಕೆ ಬೆಂಬಲವನ್ನು ಹೊಂದಿದೆ.

ಐಫೋನ್‌ 15 ಪ್ಲಸ್‌ ಪ್ರೊಸೆಸರ್‌ ಸಾಮರ್ಥ್ಯವೇನು?
ಐಫೋನ್‌ 15 ಪ್ಲಸ್‌ A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಕಳೆದ ವರ್ಷ ಐಫೋನ್ 14 ಪ್ರೊ ಮಾದರಿಯಲ್ಲಿ ಪರಿಚಯಿಸಲಾಗಿತ್ತು. ಇದಲ್ಲದೆ ಐಫೋನ್‌ 15 ಪ್ಲಸ್‌ ಎರಡನೇ ತಲೆಮಾರಿನ ಅಲ್ಟ್ರಾ ವೈಡ್ ಬ್ಯಾಂಡ್ ಚಿಪ್ (UWB) ಅನ್ನು ಸಹ ಹೊಂದಿದ್ದು, ಹೆಚ್ಚಿನ ಜನಸಂದಣಿಯ ಪ್ರದೇಶದಲ್ಲಿಯು ಸಹ ನಿಮ್ಮ ಸ್ನೇಹಿತರನ್ನು ಸರ್ಚ್‌ ಮಾಡುವುದಕ್ಕೆ ಇದು ಸಹಾಯ ಮಾಡಲಿದೆ.

ಐಫೋನ್‌ 15 ಪ್ಲಸ್‌ ಕ್ಯಾಮೆರಾ ವಿನ್ಯಾಸವೇನು?
ಐಫೋನ್ 15 ಪ್ಲಸ್‌ ಕ್ಯಾಮೆರಾ ಕೂಡ ಆಕರ್ಷವಾಗಿದ್ದು, 48 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್‌ ಹೊಸ 2x ಟೆಲಿಫೋಟೋ ಜೂಮ್ ಅನ್ನು ಹೊಂದಿದೆ ಎಂದು ಆಪಲ್‌ ಕಂಪನಿ ತಿಳಿಸಿದೆ. ಇದು ಸುಧಾರಿತ ಬೊಕೆ ಮೋಡ್‌ಗಾಗಿ ಸುಧಾರಿತ ಪೋರ್ಟ್ರೇಟ್ ಮೋಡ್ ಅನ್ನು ಸಹ ಹೊಂದಿದೆ.

ಐಫೋನ್‌ 15 ಪ್ಲಸ್‌ ಕ್ಯಾಮೆರಾ ಫೀಚರ್ಸ್‌
ಇದಲ್ಲದೆ ನೈಟ್‌ ಕ್ಯಾಮೆರಾ ಮೋಡ್, ಲೈವ್ ಫೋಟೋಗಳು ಮತ್ತು ಆಕ್ಷನ್ ಮೋಡ್‌ಗೆ ಸುಧಾರಣೆಗಳನ್ನು ಪರಿಚಯಿಸುತ್ತದೆ. ಹೆಚ್ಚುವರಿಯಾಗಿ, ಸೆಲ್ಫಿ ಕ್ಯಾಮೆರಾ ಈಗ ಸ್ವಯಂ-ಫೋಕಸ್ ಮತ್ತು ಪೋರ್ಟ್ರೇಟ್‌ ಲೈಟಿಂಗ್‌ ಅನ್ನು ಹೊಂದಿದೆ.ಈ ಆಯ್ಕೆಯು ಆಟೋಮ್ಯಾಟಿಕ್‌ ಮೆಷಿನ್‌ ಲರ್ನಿಂಗ್‌ ಅನ್ನು ಬಳಸಲಿದೆ. ಅಲ್ಲದೆ ಮಾನವ ಮತ್ತು ಪ್ರಾಣಿಗಳ ವಿಷಯಗಳ ಚಿತ್ರಗಳನ್ನು ಕ್ಲಿಕ್ ಮಾಡುವಾಗ ಪೋರ್ಟ್ರೇಟ್ ಮೋಡ್ ಅನ್ನು ಆನ್ ಮಾಡುವ ಮೂಲಕ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಐಫೋನ್‌ 15 ಪ್ಲಸ್‌ ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ಐಫೋನ್‌ 15 ಪ್ಲಸ್‌ ಹಿಂದೆಂದಿಗಿಂತಲೂ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಐಫೋನ್ 15 ಮಾದರಿಯು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಬಂದಿರುವ ಮೊದಲ ಐಫೋನ್‌ ಸರಣಿ ಆಗಿದೆ. ಈ ಮೂಲಕ ತನ್ನ 10-ವರ್ಷ-ಹಳೆಯ ಲೈಟ್ನಿಂಗ್ ಪೋರ್ಟ್‌ ಅನ್ನು ಈ ಭಾರಿ ಕೈ ಬಿಟ್ಟಿದೆ. ಐಫೋನ್ 15 ಪ್ಲಸ್‌ನಲ್ಲಿ ಆಪಲ್ ತನ್ನ ಸ್ಯಾಟ್‌ಲೈಟ್‌ ಕನೆಕ್ಟಿವಿಟಿ ಸರ್ವಿಸ್‌ ಅನ್ನು ಇನ್ನಷ್ಟು ಅಪ್ಡೇಟ್‌ ಮಾಡಿದೆ. US ನಲ್ಲಿ AAA ಏಕೀಕರಣದೊಂದಿಗೆ ಅಪ್‌ಗ್ರೇಡ್ ಮಾಡಲಾಗುತ್ತಿದೆ ಮತ್ತು ಸಾಮಾನ್ಯ ಸೇವೆಯು ಈ ವರ್ಷ ಹೆಚ್ಚಿನ ದೇಶಗಳಿಗೆ ಬರಲಿದೆ ಎಂದು ಆಪಲ್‌ ಕಂಪೆನಿ ಹೇಳಿದೆ.

ಐಫೋನ್‌ 15 ಪ್ಲಸ್‌ ಬೆಲೆ ಮತ್ತು ಲಭ್ಯತೆ
ಆಪಲ್‌ ಕಂಪೆನಿ ಹೇಳಿರುವಂತೆ ಐಫೋನ್‌ 15 ಪ್ಲಸ್‌ ಬೆಲೆಯು US ನಲ್ಲಿ $899 (ಅಂದಾಜು 74,482ರೂ) ಬೆಲೆಯನ್ನು ಹೊಂದಿದೆ. ಆದರೆ ಇದು ಭಾರತದಲ್ಲಿ ಯಾವ ಬೆಲೆಯಲ್ಲಿ ಲಭ್ಯವಾಗಲಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಲಾಗಿಲ್ಲ. ಭಾರತದ ಬೆಲೆ ವಿವರಗಳನ್ನು ಶೀಘ್ರದಲ್ಲೇ ಅಪ್ಡೇಟ್‌ ಮಾಡಲಾಗುವುದು.

Best Mobiles in India

English summary
Apple Event 2023: iPhone 15 Plus with 48 MP Main Camera Launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+