Home
ಸುದ್ದಿಜಾಲ

Apple iphone 15pro: ಐಫೋನ್‌ 15 ಪ್ರೊ ಲಾಂಚ್‌! ಟೈಟಾನಿಯಂ ವಿನ್ಯಾಸ, ಏನಿದು ಆಕ್ಷನ್‌ ಬಟನ್‌!

ಆಪಲ್‌ ಕಂಪೆನಿ ವಂಡರ್‌ ಲಸ್ಟ್‌ ಈವೆಂಟ್‌ನಲ್ಲಿ ಐಫೋನ್‌ 15 ಸರಣಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ನಾಲ್ಕು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಐಫೋನ್‌ 15 ಪ್ರೊ ಕೂಡ ಒಂದಾಗಿದೆ. ಐಫೋನ್‌ 15 ಪ್ರೊ ಟೈಟಾನಿಯಂ ವಿನ್ಯಾಸದೊಂದಿಗೆ ಎಂಟ್ರಿ ನೀಡಿರುವ ಮೊದಲ ಐಫೋನ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಹೌದು, ಐಫೋನ್‌ 15 ಪ್ರೊ ಏರೋಸ್ಪೇಸ್-ಗ್ರೇಡ್ ಟೈಟಾನಿಯಂ ವಿನ್ಯಾಸವನ್ನು ಹೊಂದಿದೆ. ಇದು A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಐಫೋನ್‌ 15 ಪ್ರೊನಲ್ಲಿ ಹೊಸ 'ಆಕ್ಷನ್' ಬಟನ್‌ ನೀಡಲಾಗಿದ್ದು, ಐಕಾನಿಕ್‌ ಮ್ಯೂಟ್‌ ಸ್ವಿಚ್ ಅನ್ನು ತೆಗೆದುಹಾಕಲಾಗಿದೆ. ಜೊತೆಗೆ ಸೂಪರ್‌ಫಾಸ್ಟ್ ವರ್ಗಾವಣೆ ವೇಗಕ್ಕಾಗಿ USB 3 ಜೊತೆಗೆ USB-C ಅನ್ನು ಒಳಗೊಂಡಿದೆ. ಇನ್ನುಳಿದಂತೆ ಐಫೋನ್‌ 15 ಪ್ರೊ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ 15 ಪ್ರೊ ಲಾಂಚ್‌! ಟೈಟಾನಿಯಂ ವಿನ್ಯಾಸ, ಏನಿದು ಆಕ್ಷನ್‌ ಬಟನ್‌!

ಐಫೋನ್‌ 15 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಐಫೋನ್‌ 15 ಪ್ರೊ ಟೈಟಾನಿಯಂ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಅನ್ನು ಹೊಂದಿದೆ. ಅಲ್ಲದೆ ಟೆಕ್ಚರರ್ಡ್ ಮ್ಯಾಟ್ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ. ಇದು 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2556 x 1179 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ ಡಿಸ್ಪ್ಲೇ ದುಂಡಾದ ಮೂಲೆಗಳನ್ನು ಹೊಂದಿದ್ದು, ಸುಂದರವಾದ ಕರ್ವ್ಡ್‌ ವಿನ್ಯಾಸವನ್ನು ಅನುಸರಿಸುತ್ತದೆ.

ಐಫೋನ್‌ 15 ಪ್ರೊ ಪ್ರೊಸೆಸರ್‌ ಯಾವುದು?
ಐಫೋನ್‌ 15 ಪ್ರೊ A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಪ್ರತಿ ಸೆಕೆಂಡಿಗೆ 35 ಟ್ರಿಲಿಯನ್ ಕಾರ್ಯಾಚರಣೆಗಳಿಗೆ ಬೆಂಬಲಿಸುವ ಹೊಸ ಆರ್ಕಿಟೆಕ್ಚರ್‌ನೊಂದಿಗೆ ಸುಸಜ್ಜಿತವಾಗಿದೆ. ಅಲ್ಲದೆ ರೇ ಟ್ರೇಸಿಂಗ್‌ಗೆ ಬೆಂಬಲದೊಂದಿಗೆ ಸುಧಾರಿತ GPU ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಆಪಲ್ ಕಂಪೆನಿ ಹೇಳಿದೆ.

ಐಫೋನ್‌ 15 ಪ್ರೊ ಕ್ಯಾಮೆರಾ ಸೆಟ್‌ಅಪ್‌
ಐಫೋನ್‌ 15 ಪ್ರೊ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಸೂಪರ್-ಹೈ-ರೆಸಲ್ಯೂಶನ್ ಫೋಟೋಗಳಿಗೆ ಬೆಂಬಲವನ್ನು ನೀಡಲಾಗಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಲೆನ್ಸ್‌ ಹಾಗೂ 12-ಮೆಗಾಪಿಕ್ಸೆಲ್ 3x ಟೆಲಿಫೋಟೋ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಕ್ಯಾಮೆರಾದಲ್ಲಿ 15x ವರೆಗೆ ಡಿಜಿಟಲ್ ಜೂಮ್ ಆಯ್ಕೆ ನೀಡಲಾಗಿದೆ.

ಐಫೋನ್‌ 15 ಪ್ರೊ ಬ್ಯಾಟರಿ ಬ್ಯಾಕ್‌ಅಪ್‌
ಐಫೋನ್‌ 15 ಪ್ರೊ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು ಯುಎಸ್‌ಬಿ ಸಿ ಪೋರ್ಟ್‌ ಚಾರ್ಜಿಂಗ್‌ ಅನ್ನು ಹೊಂದಿದೆ. ಇದನ್ನು 15W MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಅಲ್ಲದೆ 7.5W Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಆಪಲ್ ಕಂಪೆನಿ ಹೇಳಿರುವಂತೆ ಈ ಐಫೋನ್‌ 10 ಗಿಗಾಬಿಟ್ ವರ್ಗಾವಣೆ ವೇಗಕ್ಕಾಗಿ ಯುಎಸ್‌ಬಿ 3 ಬೆಂಬಲದೊಂದಿಗೆ ಹ್ಯಾಂಡ್‌ಸೆಟ್ ಯುಎಸ್‌ಬಿ ನಿಯಂತ್ರಕವನ್ನು ಸಹ ಹೊಂದಿದೆ.

ಏನಿದು ಆಕ್ಷನ್‌ ಬಟನ್‌
ಐಫೋನ್‌ 15 ಪ್ರೊನಲ್ಲಿ ಮ್ಯೂಟ್‌ ಬಟನ್‌ ಬದಲಿಗೆ 'ಆಕ್ಷನ್' ಬಟನ್‌ ಅನ್ನು ನೀಡಲಾಗಿದೆ. ವಾಯ್ಸ್‌ ರೆಕಾರ್ಡಿಂಗ್ ಅನ್ನು ತ್ವರಿತವಾಗಿ ಪ್ರಾರಂಭಿಸುವಂತಹ ಇತರ ಕಾರ್ಯಗಳನ್ನು ನಿರ್ವಹಿಸಲು ಇದನ್ನು ಪ್ರೋಗ್ರಾಮ್ ಮಾಡಬಹುದು. ಆಕ್ಷನ್‌ ಬಟನ್‌ ಸೈಲೆಂಟ್ ಮೋಡ್, ಫೋಕಸ್, ಕ್ಯಾಮೆರಾ, ಫ್ಲ್ಯಾಶ್‌ಲೈಟ್, ವಾಯ್ಸ್ ಮೆಮೊ, ಟ್ರಾನ್ಸ್‌ಲೇಟ್11, ಮ್ಯಾಗ್ನಿಫೈಯರ್, ಶಾರ್ಟ್‌ಕಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಐಫೋನ್‌ 15 ಪ್ರೊ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಐಫೋನ್‌ 15 ಪ್ರೊ ಬೇಸ್‌ ಮಾಡೆಲ್‌ 128GB ಮಾದರಿಗೆ 1,34,900 ರೂ. ಬೆಲೆ ಹೊಂದಿದೆ. ಇನ್ನು ಐಫೋನ್‌ 15 ಪ್ರೊ ಪ್ರಿ ಬುಕಿಂಗ್‌ ಸೆಪ್ಟೆಂಬರ್ 15 ರಂದು ಸಂಜೆ 05:30 ಕ್ಕೆ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 22 ರಿಂದ ಶಿಪ್ಪಿಂಗ್ ಪ್ರಾರಂಭವಾಗುತ್ತದೆ.

Best Mobiles in India

English summary
Apple Event: iPhone 15 Pro with titanium chassis Launched: Price and Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+