ಪೋಲಿ ಮೆಸೇಜ್ ಡಿಲೀಟ್ ಮಾಡಿದ್ರೂ ಹೆಂಡ್ತಿ ಕೈಗೆ ಸಿಕ್ಕಿಬಿದ್ದ: ಆಮೇಲೆ ಆ್ಯಪಲ್ ವಿರುದ್ಧ ಕಂಪ್ಲೇಟ್!
ಐಫೋನ್ ಮೂಲಕ ಲೈಂಗಿಕ ಕಾರ್ಯಕರ್ತೆಯರಿಗೆ ಮೆಸೇಜ್ ಮಾಡಿ ಗಂಡನೊಬ್ಬ ಹೆಂಡತಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ ಲೈಂಗಿಕ ಕಾರ್ಯಕರ್ತೆಯರಿಗೆ ಕಳುಹಿಸಿದ ಮೆಸೇಜ್‌ಗಳನ್ನು ಡಿಲೀಟ್ ಮಾಡಿಯೂ ಪತ್ನಿ ಕೈಗೆ ತಗಲಾಕಿಕೊಂಡಿದ್ದಾನೆ. ಗಂಡ ಕಳುಹಿಸಿ ಡಿಲೀಟ್ ಮಾಡಿದ್ದ ಮೆಸೇಜ್‌ಗಳನ್ನು ಪತ್ನಿ ನೋಡಿ ಡಿವೋರ್ಸ್ ಕೂಡ ಕೊಟ್ಟಿದ್ದಾಳೆ. ಮಾಡಿದ ತಪ್ಪಿಗೆ ಗಂಡ ಜೀವನಾಂಶವಾಗಿ 5 ಮಿಲಿಯನ್ ಪೌಂಡ್ ಹಣವನ್ನು ಕೊಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ Apple ಕಂಪನಿಯ ವಿರುದ್ಧ ಸಿಟ್ಟಿಗೆದ್ದಿದ್ದಾನೆ. ಕೋರ್ಟ್‌ನಲ್ಲಿ ಪ್ರಕರಣ ಸಹ ದಾಖಲಿಸಿದ್ದಾನೆ. ಇದು ದೊಡ್ಡ ಬ್ಯುಸಿನೆಸ್ ಮ್ಯಾನ್ ಒಬ್ಬನ ಅಸಲಿ ಕಥೆ. ಅಷ್ಟಕ್ಕೂ ಗಂಡ ಡಿಲೀಟ್ ಮಾಡಿದ್ದ ಮೆಸೇಜ್ ಅನ್ನು ಪತ್ನಿ ನೋಡಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..!
Apple ಕಂಪನಿಯ ಐಫೋನ್ಗಳು ಗೌಪ್ಯತೆಗೆ ಹೆಸರುವಾಸಿ. iPhoneನಿಂದ ಡಿಲೀಟ್ ಮಾಡಲಾದ ಮೆಸೇಜ್, ಫೋಟೋ ಅಥವಾ ವಿಡಿಯೋಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ಬಹುತೇಕರು ಐಫೋನ್ ಖರೀದಿಗೆ ಒಲವು ತೋರುತ್ತಾರೆ. ಆದರೆ, ಐಫೋನ್‌ನ ಫೀಚರ್ ಕೈಕೊಟ್ಟರೆ? ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಗಂಭೀರ ಸ್ವರೂಪದ ಸಮಸ್ಯೆಗಳನ್ನೇ ಎದುರಿಸಬೇಕು. ಇದಕ್ಕೆ ಸಾಕ್ಷಿ ಎಂಬಂತಿದೆ ಈ ಘಟನೆ.

ಹೌದು, ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರಿಗೆ ಇಂಥದ್ದೊಂದು ಅನುಭವ ಆಗಿದೆ. ಐಫೋನ್‌ನಲ್ಲಿ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ ಬಳಿಕವೂ ಹೆಂಡತಿ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಇದರಿಂದ ಹೆಂಡತಿ ವಿಚ್ಛೇದನ ಕೊಟ್ಟಿದ್ದಾಳೆ. ಇತ್ತ Apple ಸಂಸ್ಥೆ ವಿರುದ್ಧ ಕೊಂಪಗೊಂಡಿರುವ ಆ ವ್ಯಕ್ತಿ ಕೋರ್ಟ್‌ನಲ್ಲಿ ದೂರು ದಾಖಲಿಸಿ, ನ್ಯಾಯದ ಮೊರೆ ಹೋಗಿದ್ದಾರೆ. ತಾನು ಡಿಲೀಟ್ ಮಾಡಿದ ಮೆಸೇಜ್ ಅನ್ನು ಪತ್ನಿ ನೋಡಿದ ಪರಿಣಾಮ ಡಿವೋರ್ಸ್ ಆಗಿದೆ. ಇದಕ್ಕೆ Apple ಸಂಸ್ಥೆಯೇ ಕಾರಣ ಎಂದು ಆರೋಪಿಸಿದ್ದಾನೆ.
ಲೈಂಗಿಕ ಕಾರ್ಯಕರ್ತೆಯರಿಗೆ ಮಾಡಿದ್ದ ಆ.. ಮೆಸೇಜ್!
Apple ಸಂಸ್ಥೆ ವಿರುದ್ಧ ದೂರು ದಾಖಲಿಸಿರುವ ಈ ವ್ಯಕ್ತಿ ತನ್ನ ಐಫೋನ್ನಲ್ಲಿನ ಐಮೆಸೇಜ್ ಆ್ಯಪ್ನಲ್ಲಿ ವಿವಿಧ ಸೆಕ್ಸ್ ಕಾರ್ಯಕರ್ತೆಯರೊಂದಿಗೆ ಮೆಸೇಜ್ ವಿನಿಮಯ ಮಾಡಿಕೊಂಡಿದ್ದಾನೆ. ಬಳಿಕ ಆ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಈ ಮೆಸೇಜ್‌ಗಳನ್ನು ಪತ್ನಿ ಬೇರೊಂದು ಡಿವೈಸ್ನಲ್ಲಿ ನೋಡಿದ್ದಾಳೆ. ಮುಂದೆ ಆಗಿದ್ದೆಲ್ಲಾ ದುರಂತವೇ ಸರಿ!
ಗಂಡನ ನಡವಳಿಕೆಯಿಂದ ನೊಂದ ಆ ಪತ್ನಿ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಇದಕ್ಕೆ ಪ್ರತಿಯಾಗಿ ಆಕೆಗೆ ಐದು ಮಿಲಿಯನ್ ಪೌಂಡ್ಗಳಷ್ಟು ಹಣವನ್ನು ಪತಿರಾಯ ಪರಿಹಾರವಾಗಿ ಕೊಡಬೇಕಾಗುತ್ತದೆ. ಐಮೆಸೇಜಿಂಗ್ ಆ್ಯಪ್ನಿಂದ ಡಿಲೀಟ್ ಆಗಿದ್ದ ಮೆಸೇಜ್‌ಗಳು ಪತ್ನಿಗೆ ಕಣ್ಣಿಗೆ ಬೀಳದೇ ಹೋಗಿದ್ದರೆ, ತಾನು ಡಿವೋರ್ಸ್ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುತ್ತಿರಲಿಲ್ಲ ಎಂದು Apple ವಿರುದ್ಧ ಗಂಡ ಕೆರಳಿ ಕೆಂಡವಾಗಿದ್ದಾನೆ.
ಡಿಲೀಟ್ ಆದ ಮೆಸೇಜ್ ಪತ್ನಿ ಕಣ್ಣಿಗೆ ಬಿದ್ದಿದ್ದು ಹೇಗೆ?
ಫೋನ್‌ನಲ್ಲಿ ಮೆಸೇಜ್ ಡಿಲೀಟ್ ಆಗಿದ್ದರೂ ಅವು ಕ್ಲೌಡ್ ಸ್ಟೋರೇಜ್‌ನಲ್ಲಿ ಹಾಗೆಯೇ ಇದ್ದವು. ಇನ್ನು, ಆತನ ಮನೆಯವರೆಲ್ಲರೂ ಐಫೋನ್ ಬಳಸುತ್ತಿದ್ದರಿಂದ ಒಂದೇ ಆ್ಯಪಲ್ ಐಡಿ ನೀಡಲಾಗಿತ್ತು. ಆ ಐಡಿ ಬಳಸಿ ಐಮ್ಯಾಕ್ ಕಂಪ್ಯೂಟರ್ ಮೂಲಕ ಹೆಂಡತಿ ಆತ ಲೈಂಗಿಕ ಕಾರ್ಯಕರ್ತೆಯರಿಗೆ ಕಳುಹಿಸಿದ್ದ ಮೆಸೇಜ್ ನೋಡಿದ್ದಾಳೆ. ಇದೀಗ, ಆಕೆ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ.
ಐಮ್ಯಾಕ್ನಲ್ಲಿ ಆ.. ಮೆಸೇಜ್‌ಗಳು ಡಿಲೀಟ್ ಆಗಿರಲಿಲ್ಲ!
ಪ್ರಸ್ತುತ ಐಫೋನ್ ಅನ್ನು Appleನ ಬೇರೆ ಬೇರೆ ಸಾಧನಗಳಿಗೆ ಸಿಂಕ್ರೊನೈಸ್ ಮಾಡಬಹುದು. ಈ ವ್ಯಕ್ತಿಯ ಐಫೋನ್ ಅನ್ನು ಆತನ ಕುಟುಂಬದ ಐಮ್ಯಾಕ್ ಸಿಸ್ಟಂಗೆ ಸಿಂಕ್ರೊನೈಸ್ ಮಾಡಲಾಗಿತ್ತು. ಇಲ್ಲಿ ಈತ ತನ್ನ ಮೊಬೈಲ್ನಲ್ಲಿದ್ದ ಮೆಸೇಜ್ ಅನ್ನು ಡಿಲೀಟ್ ಮಾಡಿದಾಗ ಈತನ ಸಾಧನದಲ್ಲಿ ಮಾತ್ರವೇ ಅದು ಡಿಲೀಟ್ ಆಗಿತ್ತು. ಈತನ ಫೋನ್ ಜೊತೆ ಸಿಂಕ್ರೊನೈಸ್ ಆಗಿದ್ದ ಐಮ್ಯಾಕ್ನಲ್ಲಿ ಆ ಮೆಸೇಜ್ ಡಿಲೀಟ್ ಆಗಿರಲಿಲ್ಲ. ಹೀಗಾಗಿ, ಐಮ್ಯಾಕ್ನಲ್ಲಿ ಆ ಮೆಸೇಜ್‌ಗಳನ್ನು ಓದಲು ಹೆಂಡತಿಗೆ ಸಾಧ್ಯವಾಯಿತು.
ಡಿಲೀಟ್ ಆಗಿಲ್ಲ ಎಂದಿದ್ರೆ ಎಚ್ಚೆತ್ತುಕೊಳ್ಳುತ್ತಿದ್ದೆ
Apple ಸಂಸ್ಥೆಯಿಂದ ತನಗೆ ಬಹಳ ಹಾನಿಯಾಗಿದೆ. ನಾನು ಮೆಸೇಜ್ ಡಿಲೀಟ್ ಮಾಡಿದಾಗ, ಈ ಮೆಸೇಜ್ ಈ ಸಾಧನದಲ್ಲಿ ಮಾತ್ರವೇ ಡಿಲೀಟ್ ಆಗುತ್ತದೆ. ಅಥವಾ, ಈ ಸಾಧನ ಸಿಂಕ್ ಆಗಿರುವ ಬೇರೆ ಡಿವೈಸ್ಗಳಲ್ಲಿ ಮೆಸೇಜ್ ಲಭ್ಯ ಇರುತ್ತದೆ ಎಂದು ಎಚ್ಚರಿಸುವ ವಾರ್ನಿಂಗ್ ಬಂದಿದ್ದರೆ ಸಾಕಾಗುತ್ತಿತ್ತು. ನಾನು ಕೂಡಲೇ ಎಚ್ಚೆತ್ತುಕೊಳ್ಳುತ್ತಿದ್ದೆ. ನನಗೆ ಈ ರೀತಿ ಯಾವುದೇ ವಾರ್ನಿಂಗ್ ಬಂದಿಲ್ಲ ಎಂದು ಆ ವ್ಯಕ್ತಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಅದು ಕ್ಲ್ಯಾಸ್ ಆ್ಯಕ್ಷನ್ ಮೊಕದ್ದಮೆಯಾಗಿ ತಿರುಗಿದೆ.


Click it and Unblock the Notifications








