Apple; 2027ರ ಮೊದಲು ಆಪಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಇಲ್ಲ ! ಟ್ರೆಂಡ್‌ಫೋರ್ಸ್ ವರದಿ
ಟೆಕ್‌ನ ದೈತ್ಯ ಕಂಪನಿಯಾಗಿರುವ ಆಪಲ್ ಐಫೋನ್ (Apple iPhone) ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಿಡುಗಡೆ ಮಾಡುತ್ತಾ ಬಂದಿದ್ದು, ತನ್ನದೇ ಆದ ಗ್ರಾಹಕರ ಬಳಗವನ್ನು ಹೊಂದಿದೆ, ತನ್ನ ಸ್ಮಾರ್ಟ್‌ಫೋನ್‌ಗಳಿಗೆ ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಫೀಚರ್ಸ್‌ಗಳನ್ನು ಅಳವಡಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆ ಹೊಂದಿದ್ದು ಇದರ ಬೇಡಿಕೆ ದಿನೇ ದಿನೇ ಹೆಚ್ಚುತ್ತಲೇ ಇರುವುದನ್ನು ಗಮನಿಸಬಹುದಾಗಿದೆ. ಇದೀಗ ಬಹುತೇಕ ಸ್ಮಾರ್ಟ್‌ಫೋನ್ ಕಂಪನಿಗಳು ಮಡಚಬಹುದಾದ ಫೋನ್‌ಗಳನ್ನು ಬಿಡುಗಡೆ ಮಾಡಲು ಪೈಪೋಟಿ ನಡೆಸುತ್ತಿವೆ, ಆದರೆ ಆಪಲ್ ಸಂಸ್ಥೆ ತನ್ನ ಮಡಚಬಹುದಾದ ಸ್ಮಾರ್ಟ್‌ಫೋನ್ ಜಾರಿಗೆ ತರುವುದು ವಿಳಂಬವಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಆಪಲ್ ತನ್ನ ಮಡಚಬಹುದಾದ iPhone ಅನ್ನು ಅಭಿವೃದ್ಧಿಪಡಿಸುವ ಆರಂಭಿಕ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ತನ್ನ ಮಡಚಬಹುದಾದ ಸ್ಮಾರ್ಟ್‌ಫೋನ್ ಗಳ ಅಸ್ತಿತ್ವದ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಇದು ಮುಂದಿನ ಕೆಲವು ದಿನಗಳಲ್ಲಿ ತನ್ನ ಮಡಿಚಬಹುದಾದ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಪೇಟೆಂಟ್ ನೋಂದಾಯಿಸಲಿದೆ ಎಂದು ಹೇಳಲಾಗುತ್ತಿದೆ.

ಟ್ರೆಂಡ್‌ಫೋರ್ಸ್‌ನ (TrendForce) ವರದಿಯು ಆಪಲ್ 2027 ರ ಒಳಗೆ ತನ್ನ ಫೋಲ್ಡಿಂಗ್ ಸ್ಕ್ರೀನ್ ಫೋನ್ ಅನ್ನು ಪ್ರಾರಂಭಿಸುವುದಿಲ್ಲ ಎಂದು ಹೇಳಿದೆ. ಮಡಚಬಹುದಾದ ಫೋನ್‌ಗಳ ಕ್ರೀಸ್ ಪಡೆಯುವುದು ಆಪಲ್‌ನ ಪ್ರಮುಖ ಹತತ್ವದ ಕಾರ್ಯವಾಗಿದೆ ಮತ್ತು ಈ ಫೋನ್‌ಗಳ ತಯಾರಿಕೆ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆಪಲ್ ತನ್ನ ಮೊದಲ ಫೋಲ್ಡಬಲ್ ಫೋನ್ ಬಿಡುಗಡೆಗೆ ಹೆಚ್ಚು ಸಮಯ ಪಡೆಯುತ್ತಿರುವುದರಿಂದ ಸ್ಯಾಮ್‌ಸಂಗ್, ಒನ್‌ಪ್ಲಸ್, ವಿವೋ ಸೇರಿದಂತೆ ಅನೇಕ ಬ್ರಾಂಡ್‌ಗಳು ಫೋಲ್ಡಬಲ್ ಸ್ಮಾರ್ಟ್‌ಫೋನ್ ತಯಾರಿಸಿ ಸ್ಪರ್ಧೆ ಆರಂಭಿಸಿವೆ.
Apple iPhone ಫೋಲ್ಡಬಲ್ ಫೋನ್ 2027ಕ್ಕೆ ಬರಬಹುದು:
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಟ್ರೆಂಡ್‌ಫೋರ್ಸ್‌ನ ಇತ್ತೀಚಿನ ವರದಿಯಂತೆ, ಆಪಲ್ 2027ರ ಒಳಗೆ ತನ್ನ ಮೊದಲು ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ ಎಂದು ಹೇಳಿದೆ. ಆದರೆ ಆ ಸ್ಮಾರ್ಟ್‌ಫೋನ್ ಆಗಮಿಸಿದ ಬಳಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕ್ರೀಸ್ ಮತ್ತು ವಿಶ್ವಾಸಾರ್ಹತೆಗೆ ಕಟ್ಟುನಿಟ್ಟಾದ ಅವಶ್ಯಕತೆಗಳೊಂದಿಗೆ ಐಫೋನ್ ತಯಾರಕರು ಸ್ಮಾರ್ಟ್‌ಫೋನ್ ಫೀಚರ್ಸ್ ಮತ್ತು ಕಾರ್ಯಕ್ಷಮತೆಯ ಕುರಿತು ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಫೋಲ್ಡಬಲ್ ಡಿಸ್‌ಪ್ಲೇಗಳ ಪೂರೈಕೆ ಸೇರಿದಂತೆ ವಿವಿಧ ವಸ್ತುಗಳ ತಯಾರಿಯನ್ನು ಪರಿಗಣಿಸಿದ ನಂತರ ಆಪಲ್ 2026 ರ ನಾಲ್ಕನೇ ತ್ರೈಮಾಸಿಕದಿಂದ 2027ರ ಮೊದಲ ತ್ರೈಮಾಸಿಕದ ಒಳಗೆ ತನ್ನ ಮಡಚಬಹುದಾದ ಐಫೋನ್ ಅನ್ನು ಬಿಡುಗಡೆ ಮಾಡಬಹುದು ಎಂದು ಮಾರ್ಚ್‌ನಲ್ಲಿ ಕೊರಿಯಾದ ಔಟ್‌ಲೆಟ್ ಹೇಳಿಕೊಂಡಿದೆ.
ಈ ನಡುವೆ, ಟ್ರೆಂಡ್‌ಫೋರ್ಸ್ 2024 ರಲ್ಲಿ ಮಡಿಚಬಹುದಾದ ಸ್ಮಾರ್ಟ್‌ಫೋನ್‌ಗಳ ಸಾಗಾಣಿಕೆ 17.8 ಮಿಲಿಯನ್ ಯುನಿಟ್‌ಗಳನ್ನು ತಲುಪುತ್ತದೆ ಎಂದು ನಿರೀಕ್ಷಿಸಿದೆ. 2022 ರಲ್ಲಿ 80 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದ ಸ್ಯಾಮ್‌ಸಂಗ್ ಈಗ ವಿವಿಧ ಬ್ರಾಂಡ್‌ಗಳ ಸ್ಪರ್ಧೆಯಿಂದಾಗಿ 50 ಪ್ರತಿಶತ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ತಿಳಿಸಿದೆ. Huawei 2023 ರಲ್ಲಿ ತನ್ನ 4G ಪಾಕೆಟ್ S ನೊಂದಿಗೆ ಗಮನಾರ್ಹವಾಗಿ ಎಂಟ್ರಿ ಕೊಟ್ಟಿದೆ ಮತ್ತು ಈ ವರ್ಷದ Q3 ನಲ್ಲಿ ತನ್ನ ಮೊದಲ ಟ್ರೈ ಫೋಲ್ಡ್ ಫೋನ್ ಬಿಡುಗಡೆಯೊಂದಿಗೆ ಬ್ರ್ಯಾಂಡ್ ಮಾರುಕಟ್ಟೆ ಪಾಲನ್ನು 30 ಪ್ರತಿಶತಕ್ಕೆ ಹೆಚ್ಚಿಸಬಹುದು ಎಂದು ವರದಿ ಮಾಡಿದೆ.
ಶಿಯೋಮಿ, ಒಪ್ಪೋ ಮತ್ತು ವಿವೋ ತಮ್ಮ ಮಡಿಚಬಹುದಾದ ಫೋನ್ ಮಾರಾಟ ಹೆಚ್ಚಿಸಲು ಹೆಣಗಾಡುತ್ತಿವೆ, ಆದರೆ ಮೊಟೊರೊಲಾ ತನ್ನ Razr 40 ಮತ್ತು Razr 40 Ultra ಜೊತೆಗೆ ಭರ್ಜರಿ ಪ್ರವೇಶ ಮಾಡಿರುವುದನ್ನು ಗಮನಿಸಬಹುದು ಎಂದು ವರದಿಯಾಗಿದೆ.
ಆಪಲ್ (Apple) ಫೋಲ್ಡಬಲ್ ಫೋನ್ ಕುರಿತು ನಮಗೆ ತಿಳಿದಿರುವ ಮಾಹಿತಿ:
ಆಪಲ್ (Apple) ಕನಿಷ್ಠ ಎರಡು ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಐಫೋನ್ (iPhone) ಮಾದರಿಗಳ ತಯಾರಿಕೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ ಮತ್ತು ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಡಿಸ್‌ಪ್ಲೇ ಪೂರೈಕೆಯೆನ್ನು ಪಡೆಯಲು ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತದೆ.


Click it and Unblock the Notifications








