Home
ಸುದ್ದಿಜಾಲ

ಆಪಲ್ ಸ್ಟೋರ್ ಈಗ ಬೆಂಗಳೂರಿನಲ್ಲಿ: ಸಂಪೂರ್ಣ ವಿವರ ಇಲ್ಲಿದೆ!

ತಂತ್ರಜ್ಞಾನ ದೈತ್ಯ ಆಪಲ್ ತನ್ನ ಮೂರನೇ ರಿಟೇಲ್ ಸ್ಟೋರ್ ಅನ್ನು ಇಂದು (ಸೆ.2) ನಮ್ಮ ಬೆಂಗಳೂರಿನಲ್ಲಿ ಆರಂಭಿಸುತ್ತಿದೆ. Apple Hebbal Store ಎಂಬ ಹೆಸರಿನಲ್ಲಿ ಆರಂಭವಾಗುತ್ತಿರುವ ಈ ಹೊಸ ಸ್ಟೋರ್‌ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತೆರೆಯುತ್ತಿದ್ದು, ನಮ್ಮ ಕರ್ನಾಟಕ ರಾಜ್ಯದ ಜನತೆ ಸೇರಿದಂತೆ ಭಾರತದ ಗ್ರಾಹಕರಿಗೆ ಹೊಸ ಶಾಪಿಂಗ್ ಮತ್ತು ತಂತ್ರಜ್ಞಾನ ಅನುಭವ ನೀಡುವ ಭರವಸೆಯನ್ನು ತಂದಿದೆ. ಹಾಗಾದರೆ, ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ Apple Hebbal Store ಕುರಿತು ನಾವೆಲ್ಲರೂ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಆಪಲ್ ಹೆಬ್ಬಾಳ!
ಆಪಲ್ ಹೆಬ್ಬಾಳದ ಬಳಿ ಇರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಮೊದಲ ಮಹಡಿಯಲ್ಲಿ ರಿಟೇಲ್ ಸ್ಟೋರ್ ಅನ್ನು ತೆರೆಯುತ್ತಿದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಮೊದಲ ಮಹಡಿಯಲ್ಲಿ ಇರುವ ಈ ಅಂಗಡಿಯನ್ನು ತಲುಪಲು ಗ್ರಾಹಕರು ಮುಖ್ಯ ಪ್ರವೇಶದ್ವಾರದಿಂದ ಒಳನುಗ್ಗಿ ಬಲಭಾಗದ ಎಸ್ಕಲೇಟರ್ ಮೂಲಕ ಏರಬಹುದು. Apple store Bangalore ತನ್ನ ವಿಶಾಲ ಗಾಜಿನ ಗೋಡೆಗಳು, ನೈಸರ್ಗಿಕ ಬೆಳಕು ಮತ್ತು ಹಸಿರು ಅಲಂಕಾರಗಳಿಂದ ವಿಶೇಷವಾಗಿ ಕಂಗೊಳಿಸುತ್ತದೆ.

ಆಪಲ್ ಸ್ಟೋರ್ ಈಗ ಬೆಂಗಳೂರಿನಲ್ಲಿ: ಸಂಪೂರ್ಣ ವಿವರ ಇಲ್ಲಿದೆ!

ಅಂಗಡಿಯಲ್ಲಿ 15 ರಾಜ್ಯಗಳಿಂದ ಬಂದಿರುವ 70 ಸಿಬ್ಬಂದಿ ಗ್ರಾಹಕರಿಗೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ. ಉತ್ಪನ್ನಗಳನ್ನು ಅರ್ಥಮಾಡಿಕೊಳ್ಳಲು, ಹೋಲಿಕೆ ಮಾಡಲು ಮತ್ತು ಖರೀದಿ ನಿರ್ಧಾರ ಕೈಗೊಳ್ಳಲು ಅವರು ನೆರವಾಗಲಿದ್ದಾರೆ. ಆಪಲ್ ಹೆಬ್ಬಾಳ ಕೇವಲ ಶಾಪಿಂಗ್ ಸ್ಥಳವಷ್ಟೇ ಅಲ್ಲ, ಸಮುದಾಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಸ್ಥಳೀಯ ಕಲಾವಿದರು ಮತ್ತು ಕ್ರಿಯೇಟರ್‌ಗಳ ಕೃತಿಗಳನ್ನು ಪ್ರದರ್ಶಿಸುವ ಸಾಧ್ಯತೆಗಳಿವೆ.

ಉತ್ಪನ್ನ ಅನುಭವ ಮತ್ತು ಸೇವೆಗಳು
ಹೊಸ Apple retail store Indiaಯಲ್ಲಿ ಗ್ರಾಹಕರು ಐಫೋನ್‌ಗಳು, ಮ್ಯಾಕ್‌ಬುಕ್‌ಗಳು, ಐಪ್ಯಾಡ್‌ಗಳು, ಆಪಲ್ ವಾಚ್‌ಗಳು, ಏರ್‌ಪಾಡ್‌ಗಳು ಸೇರಿದಂತೆ ಎಲ್ಲಾ ಆಪಲ್ ಉತ್ಪನ್ನಗಳನ್ನು ಅನ್ವೇಷಿಸಬಹುದು. ಜೊತೆಗೆ Apple Pencil ಮತ್ತು HomePod ಮುಂತಾದ ಪರಿಕರಗಳೂ ಲಭ್ಯ. ಅಂಗಡಿಯಲ್ಲಿ ನೇರವಾಗಿ ಉತ್ಪನ್ನಗಳನ್ನು ಪ್ರಯೋಗಿಸಲು ಅವಕಾಶವಿದ್ದು, ಖರೀದಿಗೆ ಮುನ್ನ ಗ್ರಾಹಕರು ಅನುಭವ ಪಡೆಯಬಹುದು. ಬೆಂಗಳೂರಿಗರಿಗೆ ಈಗ ಸುಲಭವಾಗಿ ಅವಕಾಶ ದೊರೆತಿದೆ.

Today at Apple ಮತ್ತು Genius Bar
ಆಪಲ್ ಸ್ಟೋರ್‌ನಲ್ಲಿ ಪ್ರತಿದಿನ ಉಚಿತವಾಗಿ Today at Apple Bengaluru sessions ನಡೆಯಲಿದೆ. ಇಲ್ಲಿ ಫೋಟೋಗ್ರಫಿ, ಸಂಗೀತ, ಡಿಜಿಟಲ್ ಕಲೆ, ಆಪ್ ಡೆವಲಪ್‌ಮೆಂಟ್ ಮುಂತಾದ ತರಬೇತಿಗಳು ಲಭ್ಯ. ಸಣ್ಣ ವ್ಯವಹಾರಗಳಿಗೆ ತಂತ್ರಜ್ಞಾನ ಉಪಯೋಗಿಸುವ ಮಾರ್ಗದರ್ಶನ ನೀಡಲು ತಜ್ಞರೂ ಇರುತ್ತಾರೆ. ತಾಂತ್ರಿಕ ಸಮಸ್ಯೆಗಳಿಗೆ ನೀವು Apple Genius Bar Indiaಯಲ್ಲಿ ಸಹಾಯ ಪಡೆಯಬಹುದು. ಜೊತೆಗೆ, ಗ್ರಾಹಕರು online order pickup Bangalore Apple store ಮೂಲಕ ತಮ್ಮ ಆರ್ಡರ್‌ಗಳನ್ನು ಅಂಗಡಿಯಲ್ಲಿ ಸ್ವೀಕರಿಸಬಹುದು.

ಆಪಲ್ ಸ್ಟೋರ್ ಈಗ ಬೆಂಗಳೂರಿನಲ್ಲಿ: ಸಂಪೂರ್ಣ ವಿವರ ಇಲ್ಲಿದೆ!

ಆಪಲ್ ಹೇಳಿದ್ದೇನು?
"ಬೆಂಗಳೂರು ನಗರದಲ್ಲಿ ಆಪಲ್ ಹೆಬ್ಬಾಳ ಸ್ಟೋರ್ ಆರಂಭಿಸಿರುವುದು ನಮಗೆ ಹೆಮ್ಮೆ. ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಗ್ರಾಹಕರನ್ನು ಪ್ರೇರೇಪಿಸುವುದು ನಮ್ಮ ಉದ್ದೇಶ." ಎಂದು ಆಪಲ್‌ನ ಹಿರಿಯ ಉಪಾಧ್ಯಕ್ಷೆ ಡೆಯಿರ್ಡ್ರೆ ಒ'ಬ್ರೇನ್ ಅವರು ಹೇಳಿದ್ದಾರೆ. ಮುಂಬೈನ Apple BKC Store ಮತ್ತು ದೆಹಲಿಯ Apple Saket Store ನಂತರ ಆಪಲ್ ಹೆಬ್ಬಾಳ ಇದು ದೇಶದ ಮೂರನೇ ಆಪಲ್ ರಿಟೇಲ್ ಅಂಗಡಿಯಾಗಿದೆ. ಮುಂದಿನ ದಿನಗಳಲ್ಲಿ Pune Koregaon Park Apple Store ಕೂಡ ತೆರೆಯಲು ಸಿದ್ಧವಾಗಿದೆ.

iPhone 17 ಬಿಡುಗಡೆ ನಿರೀಕ್ಷೆ
ಇದೇ ಸೆಪ್ಟೆಂಬರ್ 9 ರಂದು ನಡೆಯಲಿರುವ ಆಪಲ್ ಈವೆಂಟ್‌ನಲ್ಲಿ iPhone 17 India launch ಘೋಷಣೆಯಾಗುವ ನಿರೀಕ್ಷೆ ಇದೆ. iPhone 17 pre-order Bangalore ಮೂಲಕ ಹೊಸ ಮಾದರಿಯನ್ನು ಆರ್ಡರ್ ಮಾಡಿ Apple Hebbal Store ನಲ್ಲಿ ಸ್ವೀಕರಿಸಲು ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ.ತಂತ್ರಜ್ಞಾನ ಪ್ರಿಯರಿಗೆ ನವೀನತೆ, ಗುಣಮಟ್ಟ ಮತ್ತು ವಿಶೇಷ ಅನುಭವಗಳನ್ನು ಪಡೆಯುವಲ್ಲಿ ಭಾರತೀಯರಿಗೆ ಆಪಲ್ ನೆರವಾಗುವ ನಿರೀಕ್ಷೆ ಇದೆ.

Best Mobiles in India

English summary
Bengaluru gets its first Apple Store at Hebbal, bringing premium products, expert services, and community-focused sessions for tech enthusiasts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+