ಆಪಲ್‌ ಕಂಪೆನಿಯಿಂದ ಹೊಸ ವಾಟರ್ ಬಾಟಲ್‌ ಲಾಂಚ್‌! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

|

ಟೆಕ್‌ ದಿಗ್ಗಜ ಆಪಲ್‌ ಕಂಪೆನಿ ಟೆಕ್‌ ವಲಯದಲ್ಲಿ ಈಗಾಗಲೇ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ತನ್ನ ಐಫೋನ್‌ಗಳ ಮೂಲಕ ಭಾರಿ ಸದ್ದು ಮಾಡುವ ಆಪಲ್‌ ಕಂಪೆನಿ ಇದೀಗ ವಾಟರ್‌ ಬಾಟಲ್‌ ಮೂಲಕ್ ಸೌಂಡ್‌ ಮಾಡಿದೆ. ಅಂದರೆ ಆಪಲ್‌ ಕಂಪೆನಿ 4,600ರೂ. ಬೆಲೆಬಾಳುವ ವಾಟರ್‌ಬಾಟಲ್‌ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಆಪಲ್‌ ಕಂಪೆನಿ ವಾಟರ್‌ ಬಾಟಲ್‌ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ 4,600ರೂ.ಬೆಲೆಬಾಳುವ ವಾಟರ್‌ ಬಾಟಲ್‌ ಲಾಂಚ್‌ ಮಾಡಿದೆ. ಅಂದಾಜು 1,900ರೂ ಬೆಲೆ ಬಾಳುವ ಪಾಲಿಶ್ ಬಟ್ಟೆಯನ್ನು ಅನಾವರಣಗೊಳಿಸಿದ ಆಪಲ್‌ ಕಂಪೆನಿ ಇದೀಗ ಹೈಡ್ರೇಟ್‌ಸ್ಪಾರ್ಕ್‌ ಎನ್ನುವ ಹೊಸ ವಾಟರ್‌ ಬಾಟಲ್‌ ಪರಿಚಯಿಸಿದೆ. ಸದ್ಯ ಹೈಡ್ರೇಟ್‌ಸ್ಪಾರ್ಕ್‌ ವಾಟರ್‌ ಬಾಟಲ್‌ ಅನ್ನು ಆಪಲ್‌ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಹಾಗಾದ್ರೆ ಈ ವಾಟರ್‌ ಬಾಟಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌ ಕಂಪೆನಿ

ಆಪಲ್‌ ಕಂಪೆನಿ ಹೈಡ್ರೇಟ್‌ಸ್ಪಾರ್ಕ್‌ ಎನ್ನುವ ವಾಟರ್‌ ಬಾಲ್‌ ಪರಿಚಯಿಸಿದೆ. ಇದು ಆಪಲ್‌ನ ವೆಬ್‌ಸೈಟ್ ಮತ್ತು ರಿಟೇಲ್‌ ಸ್ಟೋರ್‌ಗಳಲ್ಲಿ $59.95 (ಅಂದಾಜು 4,600ರೂ)ಬೆಲೆಗೆ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಈ ವಾಟರ್‌ ಇದು US ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಇನ್ನು ಈ ಸ್ಮಾರ್ಟ್ ವಾಟರ್ ಬಾಟಲ್ ನೀವು ದೈನಂದಿನ ನೀರನ್ನು ಎಷ್ಟು ಪ್ರಮಾಣದಲ್ಲಿ ಕುಡಿಯುತ್ತೀರಿ ಅನ್ನೊದನ್ನ ಟ್ರ್ಯಾಕ್‌ ಮಾಡಲಿದೆ. ಅಲ್ಲದೆ ಇದನ್ನು ನಿಮ್ಮ ಆಪಲ್ ಹೆಲ್ತ್‌ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇದು ಕೆಳಭಾಗದಲ್ಲಿ ಎಲ್ಇಡಿ ಸಂವೇದಕವನ್ನು ಹೊಂದಿದ್ದು ಅದು ನೀರಿನ ಸೇವನೆಯನ್ನು ಗ್ರಹಿಸುತ್ತದೆ ಮತ್ತು ಬ್ಲೂಟೂತ್ ಸಂಪರ್ಕದ ಮೂಲಕ ಆಪಲ್‌ ಹೆಲ್ತ್‌ ಅಪ್ಲಿಕೇಶನ್‌ಗೆ ಆಲರ್ಟ್‌ ಸಂದೇಶ ಕಳುಹಿಸಲಿದೆ.

ಆಪಲ್‌

ಇನ್ನು ಆಪಲ್‌ ಕಂಪೆನಿಯ ಈ ವಾಟರ್‌ ಬಾಟಲ್‌ ಎರಡೂ ಮಾದರಿಯಲ್ಲಿ ಲಭ್ಯವಾಗಲಿದೆ. ಇವುಗಳನ್ನು ಹೈಡ್ರೇಟ್‌ಸ್ಪಾರ್ಕ್‌ ಪ್ರೊ ಮತ್ತು ಹೈಡ್ರೇಟ್‌ಸ್ಪಾರ್ಕ್‌ ಪ್ರೊ ಸ್ಟೀಲ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಎರಡು ಮಾದರಿಯ ವಾಟರ್‌ಬಾಟಲ್‌ಗಳ ಬೆಲೆ ಕ್ರಮವಾಗಿ $59.95 ಮತ್ತು $79.95 ಆಗಿದೆ. ಇದಲ್ಲದೆ ಹೈಡ್ರೇಟ್‌ಸ್ಪಾರ್ಕ್‌ ಪ್ರೊ ಸ್ಟೀಲ್‌ ಸಿಲ್ವರ್ ಮತ್ತು ಬ್ಲಾಕ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗಲಿದೆ. ಇನ್ನು ಹೈಡ್ರೇಟ್‌ಸ್ಪಾರ್ಕ್‌ ಪ್ರೊ ಕಪ್ಪು ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ.

ಆಪಲ್‌

ಇದಲ್ಲದೆ ಆಪಲ್‌ ಕಂಪೆನಿ ಇತ್ತೀಚಿಗೆ ತನ್ನ ಆಪ್‌ಸ್ಟೋರ್‌ ಅನ್ನು ಅಪ್ಡೇಟ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಔಟ್‌ಡೇಟೆಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡಲು ಮುಂದಾಗಿದೆ. ಬಹಳ ದಿನಗಳಿಂದಲೂ ಯಾವುದೇ ಅಪ್ಡೇಟ್‌ ಪಡೆಯದ ಅಪ್ಲಿಕೇಶನ್‌ಗಳು ಆಪ್‌ಸ್ಟೋರ್‌ನಿಂದ ಕಿಕ್‌ಔಟ್‌ ಆಗಲಿವೆ. ಸದ್ಯ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಆಪಲ್‌ ಕಂಪೆನಿ ಎಚ್ಚರಿಕೆಯ ಇಮೇಲ್‌ ರವಾನಿಸಿದೆ. ಈ ಇಮೇಲ್‌ ತಲುಪಿದ 30 ದಿನಗಳಲ್ಲಿ ಅಪ್ಲಿಕೇಶನ್‌ ಅಪ್ಡೇಟ್‌ ಆಗದೆ ಹೋದರೆ ಅಪ್‌ಸ್ಟೋರ್‌ನಿಂದ ಆಪ್ಲಿಕೇಶನ್‌ಗೆ ಗೇಟ್‌ಪಾಸ್‌ ಸಿಗಲಿದೆ.

ಇಮೇಲ್‌

ಇಮೇಲ್‌ ತಲುಪಿದ ಮೂವತ್ತು ದಿನಗಳ ಒಳಗೆ ಅಪ್ಲಿಕೇಶನ್‌ ಅಪ್ಡೇಟ್‌ ಮಾಡಿದರೆ ಆಪ್ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳು ಮುಂದುವರೆಯಲಿವೆ. ಈ ಅಪ್ಲಿಕೇಶನ್‌ಗಳನ್ನು ಹೊಸ ಬಳಕೆದಾರರು ಡೌನ್‌ಲೋಡ್‌ ಮಾಡಲು ಸಾಧ್ಯವಾಗಲಿದೆ ಎಂದು ಆಪಲ್‌ ಕಂಪೆನಿ ಹೇಳಿದೆ. ಒಂದು ವೇಳೆ ಅಪ್ಲಿಕೇಶನ್‌ ಡೆವಲಪರ್‌ 30 ದಿನಗಳಲ್ಲಿ ಯಾವುದೇ ನವೀಕರಣವನ್ನು ಸಲ್ಲಿಸದಿದ್ದರೆ, ಅಪ್ಲಿಕೇಶನ್ ಅನ್ನು ಆಪ್‌ ಸ್ಟೋರ್‌ನಿಂದ ತೆಗೆದುಹಾಕಲಾಗುತ್ತದೆ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.

Most Read Articles
Best Mobiles in India

English summary
apple HidrateSpark Pro Water Bottle Costs A Whopping Rs. 4,600

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X