Apple HomePod: ಆಪಲ್‌ನಿಂದ ಭಾರತದಲ್ಲಿ ಹೋಮ್‌ಪಾಡ್‌ ಸ್ಪೀಕರ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ತನ್ನ ವಿಶೇಷತೆಯಿಂದಲೇ ಸದಾ ಒಂದು ಹೆಜ್ಜೆ ಮುಂದಿರುವ ಆಪಲ್‌ ಕಂಪೆನಿ, ಈ ಹಿಂದೆಯೇ ಸ್ಮಾರ್ಟ್‌ಹೋಮ್‌ ಸ್ಪೀಕರ್‌ ಒಂದನ್ನ ಬಿಡುಗಡೆ ಮಾಡಿತ್ತು. 2018ರಲ್ಲಿ ಯುಎಸ್‌ ನಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಹೋಮ್‌ ಸ್ಪೀಕರ್‌ $349( 24,856.ರೂ,) ಬೆಲೆಯನ್ನ ಹೊಂದಿತ್ತು. ಸದ್ಯ ಈ ಸ್ಪೀಕರ್‌ ಅನ್ನ ಇದೀಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಆಪಲ್‌ ಕಂಪೆನಿ ಮುಂದಾಗಿದೆ ಎಂಬ ಸುದ್ದಿ ಹರಿದಾಡ್ತಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಬಿಡುಗಡೆ ಮಾಡಿದ್ದ ಏಕೈಕ ಸ್ಮಾರ್ಟ್‌ ಸ್ಪೀಕರ್‌ ಹೋಮ್‌ಪಾಡ್ ಸ್ಪೀಕರ್‌ ಇದೀಗ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗ್ತಿದೆ. ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಆಪಲ್ ಕಂಪೆನಿಯ ಹೋಮ್‌ಪಾಡ್ ಸ್ಪೀಕರ್‌ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಕೇವಲ 19,900 ರೂ, ಬೆಲೆಯೊಂದಿಗೆ ಖರೀದಿಸಲು ಲಭ್ಯವಾಗಲಿದ್ದು, ಸ್ಪೇಸ್ ಗ್ರೇ ಮತ್ತು ವೈಟ್ ಎರಡು ಕಲರ್‌ಗಳಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗ್ತಿದೆ.

ಇನ್ನು

ಇನ್ನು ಆಪಲ್‌ ಕಂಪೆನಿಯ ಈ ಸ್ಮಾರ್ಟ್‌ಸ್ಪೀಕರ್‌ ಹೋಮ್‌ಪಾಡ್‌ ಭಾರತದಲ್ಲಿ ಬಿಡುಗಡೆಯಾಗಲಿರುವ ಆಪಲ್‌ನ ಏಕೈಕ ಸ್ಮಾರ್ಟ್‌ಸ್ಪೀಕರ್‌ ಆಗಿದೆ. ಈ ಸ್ಮಾರ್ಟ್‌ ಸ್ಪೀಕರ್‌ ಭಾರತದಲ್ಲಿ ಇಂಗ್ಲಿಷ್‌ ಭಾಷೆಯ ಸಿರಿ ವಾಯ್ಸ್‌ ಅನ್ನ ಬೆಂಬಲಿಸಲಿದ್ದು, ಸಿರಿ ವಾಯ್ಸ್‌ ಮೂಲಕ ಸ್ಮಾರ್ಟ್‌ ಸ್ಪೀಕರ್‌ ಅನನ್ ನಿಯಂತ್ರಿಸಬಹುದಾಗಿದೆ. ಇದಲ್ಲದೆ ಹೋಮ್‌ಪಾಡ್ ಸ್ಪೀಕರ್‌ 172mm ಎತ್ತರ ಮತ್ತು 142mm ಅಗಲವನ್ನು ಹೊಂದಿದ್ದು, 2.5kg ತೂಕವನ್ನು ಹೊಂದಿದೆ.

ಸ್ಮಾರ್ಟ್‌ಸ್ಪೀಕರ್‌

ಈ ಸ್ಮಾರ್ಟ್‌ಸ್ಪೀಕರ್‌ ಕಸ್ಟಮ್‌ ಆಂಪ್ಲಿಫೈಯರ್‌ ಜೊತೆಗೆ ವೂಫರ್‌ ಹೊಂದಿದ್ದು, ಇದು 7 ಆವೃತ್ತಿಯ ಟ್ವಿಟ್ಟರ್‌ ಜೊತೆಗೆ ತನ್ನದೆ ಆದ ಕಸ್ಟಮ್‌ ಆಂಪ್ಲಿಫೈಯರ್‌ ಅನ್ನು ಸಹ ಒಳಗೊಂಡಿದೆ. ಇನ್ನು ಈ ಹೋಮ್‌ಪಾಡ್ ನಲ್ಲಿ ಸಿರಿಯನ್ನ ಸಕ್ರಿಯಗೊಳಿಸಲು ಇದರಲ್ಲಿ 6 ಮೈಕ್ರೋಫೋನ್‌ಗಳನ್ನ ನೀಡಲಾಗಿದೆ. ಆಪಲ್‌ ಫೋನ್‌ ಬಳಕೆದಾರರು ಇದರಲ್ಲಿ ಆಪಲ್‌ ಮ್ಯೂಸಿಕ್‌, ಆಪಲ್‌ ಪಾಡ್‌ಕಾಸ್ಟ್‌ ಹಾಗೂ ಇತರೆ ಮ್ಯೂಸಿಕ್‌ ಮೂಲಕ ಆಡಿಯೋವನ್ನ ಪ್ಲೇ ಮಾಡಬಹುದಾಗಿದೆ.

ಇದಲ್ಲದೆ

ಇದಲ್ಲದೆ ಹೋಮ್‌ಪಾಡ್ ಸ್ಮಾರ್ಟ್‌ ಸ್ಪೀಕರ್‌ ಐಫೋನ್‌, ಐಪ್ಯಾಡ್‌, ಐಪ್ಯಾಡ್‌ ಟಚ್‌, ಆಪಲ್‌ ಟಿವಿ ಅಥವಾ ಮ್ಯಾಕ್‌ನಿಂದ ಏರ್‌ಪ್ಲೇಗೆ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮಿಮೋ ಜೊತೆಗೆ ವೈಫೈ 802.11ac, ಏರ್‌ಪ್ಲೇ, ಬ್ಲೂಟೂತ್‌ 5.0, ಮಲ್ಟಿ ರೂಮ್‌ ಸ್ಪೀಕರ್‌, ಅನ್ನು ಬೆಂಬಲಿಸಿದೆ. ಜೊತೆಗೆ ಇದು ಆಪಲ್‌ A8 ಚಿಪ್‌ ಅನ್ನು ಒಳಗೊಂಡಿದ್ದು, ಸಿಗ್ನಲ್‌ ಪ್ರೊಸೆಸಿಂಗ್‌ಹಾಗೂ ರಿಯಲಕ್‌ ಟೈಂ ಸ್ಟುಡಿಯೋ ಲೆವೆಲ್‌ ಪ್ರೊಸೆಸಿಂಗ್‌ ಅನ್ನು ಹೊಂದಿದೆ.

Best Mobiles in India

English summary
The Apple Homepod comes in a single variant and it is priced at Rs 19,900.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X