2 ಕೋಟಿಗೆ ಹರಾಜಾದ ಆಪಲ್ I ಕಂಪ್ಯೂಟರ್ !

Posted By: Varun
2 ಕೋಟಿಗೆ ಹರಾಜಾದ ಆಪಲ್ I ಕಂಪ್ಯೂಟರ್ !

ಆನೆ ಸತ್ತರೂ ಬೆಲೆ, ಬದುಕಿದ್ದರೂ ಬೆಲೆ ಅಂತ ಗಾದೆಯೊಂದಿದೆ. ಆದರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಇದು ಅನ್ವಯಿಸುವುದಿಲ್ಲ. ಸವಕಳಿ (Depreciation) ಹೆಚ್ಚು ಇರುವ ವಸ್ತುಗಳಲ್ಲಿ ಮೊಬೈಲ್ ಹಾಗು ಕಂಪ್ಯೂಟರುಗಳು ಸೇರಿದ್ದು ಶೋರೂಮ್ ನಿಂದ ಹೊರಬಂದರೆ ಅದರ ಬೆಲೆ ಕಡಿಮೆ ಆದಂತೆಯೇ. ಅಂಥಹುದರಲ್ಲಿ ವಿಶ್ವವಿಖ್ಯಾತ ಆಪಲ್ ಕಂಪ್ಯೂಟರ್ಸ್ ನ ಹಳೆ ಕಂಪ್ಯೂಟರ್ ಒಂದು ಸುಮಾರು 2 ಕೋಟಿಗೆ ಹರಾಜಾಗಿ ಅಚ್ಚರಿ ಮೂಡಿಸಿದೆ.

ಅಂದ ಹಾಗೆ ಹಾರಾಜಾದ ಆ ಕಂಪ್ಯೂಟರ್ ಯಾವುದು ಗೊತ್ತಾ?, ಆಪಲ್ ನ ಸ್ಥಾಪಕರಾದ ಸ್ಟೀವ್ ಜಾಬ್ಸ್ ಹಾಗು ಸ್ಟೀವ್ ವಾಜ್ನಿಯಾಕ್ 1976 ರಲ್ಲಿ ಸಿದ್ಧಪಡಿಸಿದ್ದ ಆಪಲ್ I ಕಂಪೂಟರ್. ಈ ಕಂಪೂಟರ್ ಅನ್ನು ಸ್ಟೀವ್ ಜಾಬ್ಸ್ ಹಾಗು ವಾಜ್ನಿಯಾಕ್, ಮಾನಿಟರ್ ಇಲ್ಲದ, BASIC, ಆಪರೇಟಿಂಗ್ ಸಿಸ್ಟಮ್ ಹಾಗು ಕ್ಯಾಸೆಟ್ ಇಂಟರ್ಫೇಸ್ ಮಾತ್ರ ಇರುವ ಕಂಪ್ಯೂಟರ್ ಅನ್ನು ಸಿದ್ಧಪಡಿಸಿ ಪಾಲೋ ಆಲ್ಟೊ ಕಂಪ್ಯೂಟರ್ ಕ್ಲಬ್ ನಲ್ಲಿ ಇದನ್ನು ಪ್ರದರ್ಶಿಸಿದ್ದರು ಎನ್ನಲಾಗಿದೆ.

1976 ರಲ್ಲಿ ಈ ಜೋಡಿ 150ಕ್ಕೂ ಹೆಚ್ಚು ಕಂಪೂಟರ್ಗಳನ್ನು ತಯಾರಿಸಿ ಹಲವಾರು ಮಳಿಗೆಗೆ ಮಾರಿದ್ದರು. ಅದರಲ್ಲಿ 6 ಕಂಪ್ಯೂಟರುಗಳುಇದುವರೆಗೂ ಮಾತ್ರ ಸುಸ್ಥಿತಿಯಲ್ಲಿದ್ದವಂತೆ.

1976 ನ ಈ ಮಾಡಲ್ ಕಂಪ್ಯೂಟರ್ "Sotheby's" ಎಂಬ ಕಂಪನಿ ನಡೆಸಿದ ಹರಾಜಿನಲ್ಲಿ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬ $374,500 ಕೊಟ್ಟು ಖರೀದಿಸಿದ್ದು ಆಪಲ್ ಉತ್ಪಾದಿತ ಸಾಧನಗಳ ಮೇಲೆಅದರ ಅಭಿಮಾನಿಗಳ ಹುಚ್ಚು ಎಷ್ಟಿದೆ ಎಂಬುದನ್ನು ತೋರಿಸುತ್ತದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot