Subscribe to Gizbot

ಆಪಲ್ ಐಫೋನ್ ಗಳ ಬೆಲೆಯಲ್ಲಿ ಭಾರೀ ಏರಿಕೆ..!

Posted By: Precilla Dias

ಕೇಂದ್ರ ಸರಕಾರವೂ ಮೊಬೈಲ್ ಮೇಲಿನ ಕಸ್ಟಮ್ ಡ್ಯೂಟಿಯನ್ನು ಏರಿಕೆ ಮಾಡಿದ ಹಿನ್ನಲೆಯಲ್ಲಿ ಆಪಲ್ ತನ್ನ ಐಫೋನ್ ಗಳ ಬೆಲೆಯನ್ನು ಏರಿಕೆ ಮಾಡಿದೆ ಎನ್ನಲಾಗಿದೆ. ಕಳೆದ ವಾರ ಮಂಡಿಸಿದ ಬಜೆಟ್ ನಲ್ಲಿ ಮೊಬೈಲ್ ಮೇಲೆ ಶೇ.15ರಿಂದ 20 ರಷ್ಟು ಕಷ್ಟಮ್ ಡ್ಯೂಟಿಯನ್ನು ಏರಿಕೆ ಮಾಡಲಾಗಿತ್ತು ಈ ಹಿನ್ನಲೆಯಲ್ಲಿ ಆಪಲ್ ತನ್ನ ಐಫೋನ್ X ಸೇರಿದಂತೆ ಎಲ್ಲಾ ಐಫೋನ್ ಮಾಡಲ್ ಗಳ ಬೆಲೆಯನ್ನು ಹೆಚ್ಚು ಮಾಡಿದೆ.

ಆಪಲ್ ಐಫೋನ್ ಗಳ ಬೆಲೆಯಲ್ಲಿ ಭಾರೀ ಏರಿಕೆ..!

ಆದರೆ ಭಾರತದಲ್ಲಿ ನಿರ್ಮಾಣವಾಗುವ ಐಫೋನ್ SE ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎನ್ನಲಾಗಿದೆ. ಐಫೋನ್ ಬೆಲೆಯಲ್ಲಿನ ಏರಿಕೆಯೂ ತಕ್ಷಣದಿಂದಲೇ ಜಾರಿಗೆ ಬರಲಿದೆ. ಕಾರಣ ಭಾರತದಲ್ಲಿ ದೊರೆಯುವ ಎಲ್ಲಾ ಐಫೋನ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಐಫೋನ್ SEಯನ್ನು ಮಾತ್ರವೇ ಭಾರತದಲ್ಲಿಯೇ ಜೋಡಿಸಲಾಗುತ್ತದೆ. ಇದರಿಂದಾಗಿ ಬೆಲೆಯಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ SE:

ಐಫೋನ್ SE:

ಭಾರತದಲ್ಲಿ ನಿರ್ಮಾಣವಾಗುವ ಐಫೋನ್ SE ಬೆಲೆಯಲ್ಲಿ ಏರಿಕೆಯನ್ನು ಮಾಡಿಲ್ಲ ಎನ್ನಲಾಗಿದೆ. ಐಫೋನ್ SE 32GB ಆವೃತ್ತಿಯ ಬೆಲೆ ರೂ.26,000 ಆಗಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿಯ ಬೆಲೆ ರೂ. 35,000 ಗಳಾಗಿದೆ. ಆನ್ ಲೈನಿನಲ್ಲಿ ಈ ಫೋನ್ ರೂ.20,499ಕ್ಕೆ ದೊರೆಯುತ್ತಿದೆ.

ಐಫೋನ್ X:

ಐಫೋನ್ X:

ಇತ್ತೀಚೆಗೆ ಬಿಡುಗಡೆಯಾದ ಐಫೋನ್ X 64 GB ಆವೃತ್ತಿಯ ಬೆಲೆ ರೂ 95,390 ಆಗಿದ್ದು, 256 GB ಆವೃತ್ತಿಯ ಬೆಲೆ ರೂ, 1,08,930 ಗಳಾಗಿದೆ. ಈ ಹಿಂದೆ ಕ್ರಮವಾಗಿ ರೂ. 92,430 ಮತ್ತು ರೂ. 1,05,720ಕ್ಕೆ ಮಾರಾಟವಾಗುತ್ತಿತ್ತು.

ಐಫೋನ್ 8 ಮತ್ತು ಐಫೋನ್ 8 ಪ್ಲಸ್:

ಐಫೋನ್ 8 ಮತ್ತು ಐಫೋನ್ 8 ಪ್ಲಸ್:

ಐಫೋನ್ 8 64GB ಆವೃತ್ತಿ ಬೆಲೆ ರೂ.66,120 ಗಳಾಗಿದ್ದು, ಐಫೋನ್ 8 256 ಜಿಬಿ ಆವೃತ್ತಿ ರೂ. 79,500ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಫೋನ್ 8 ಪ್ಲಸ್ 64GB ಆವೃತ್ತಿ ಬೆಲೆ ರೂ.77,560 ಗಳಾಗಿದ್ದು, ಐಫೋನ್ 8 ಪ್ಲಸ್ 256 ಜಿಬಿ ಆವೃತ್ತಿ ರೂ. 91,110ಕ್ಕೆ ದೊರೆಯುತ್ತಿದೆ.

ಲಂಚ ಕೊಡದೆ ಆನ್‌ಲೈನಿನಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ..! ಹೇಗೆ..? ಇಲ್ಲಿದೇ ಮಾಹಿತಿ.!

ಐಪೋನ್ 7 ಮತ್ತು ಐಫೋನ್ 7 ಪ್ಲಸ್:

ಐಪೋನ್ 7 ಮತ್ತು ಐಫೋನ್ 7 ಪ್ಲಸ್:

ಐಫೋನ್ 7 32GB ಆವೃತ್ತಿ ಬೆಲೆ ರೂ.53,370 ಗಳಾಗಿದ್ದು, ಐಫೋನ್ 7 128 ಜಿಬಿ ಆವೃತ್ತಿ ರೂ. 61560ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಫೋನ್ 7 ಪ್ಲಸ್ 32 GB ರೂ.68840 ಗಳಾಗಿದ್ದು, ಐಫೋನ್ 7 ಪ್ಲಸ್ 128 ಜಿಬಿ ಆವೃತ್ತಿ ರೂ. 70,180ಕ್ಕೆ ದೊರೆಯುತ್ತಿದೆ.

Honor 9 Lite with four cameras (KANNADA)
ಐಫೋನ್ 6, ಐಫೋನ್ 6s ಮತ್ತು ಐಫೋನ್ 6s ಪ್ಲಸ್:

ಐಫೋನ್ 6, ಐಫೋನ್ 6s ಮತ್ತು ಐಫೋನ್ 6s ಪ್ಲಸ್:

ಐಫೋನ್ 6 ರೂ.31,900ಕ್ಕೆ ದೊರೆಯುತ್ತಿದ್ದು, ಐಫೋನ್ 6s 32 GB ಆವೃತ್ತಿ ರೂ. 42,900ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ 128GB ರೂ.52,100ಕ್ಕೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
apple has increased the prices of all iPhones, including the iPhone X, in India after the Modi government raised the custom duty on mobile phones from 15 per cent to 20 per cent in the Union Budget last week. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot