ಆಪಲ್ ಇಂಡಿಯಾದ ಆದಾಯ ಮತ್ತು ನಿವ್ವಳ ಲಾಭವು ಮೊದಲ ಬಾರಿಗೆ ಕುಸಿದಿದೆ!

|

ಐಫೋನ್ ಎಕ್ಸ್‌ಆರ್ ಮಾದರಿಯ ಭರ್ಜರಿ ಮಾರಾಟದ ನಡುವೆಯೂ ಕಳೆದ ಹಣಕಾಸು ವರ್ಷದಲ್ಲಿ ಆಪಲ್ ಇಂಡಿಯಾದ ಆದಾಯ ಮತ್ತು ನಿವ್ವಳ ಲಾಭವು ಮೊದಲ ಬಾರಿಗೆ ಕುಸಿದಿದೆ. ರೂಪಾಯಿ ದುರ್ಬಲಗೊಳ್ಳುತ್ತಿರುವುದರಿಂದ ಬೆಲೆ ಏರಿಕೆ ಮತ್ತು ಹೆಚ್ಚಿನ ಆಮದು ಸುಂಕದ ಪರಿಣಾಮವಾಗಿ ಕಂಪನಿಯ ಆದಾಯವು 19% ಕುಸಿದು 10,538.3 ಕೋಟಿ ರೂ.ಗೆ ತಲುಪಿದ್ದರೆ, ಲಾಭವು 70% ಕ್ಕಿಂತಲೂ ಹೆಚ್ಚು ಕುಸಿದು 262.3 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿಯ ರಿಜಿಸ್ಟ್ರಾರ್‌ನ ಇತ್ತೀಚಿನ ನಿಯಂತ್ರಕ ದಾಖಲಾತಿಗಳು ತಿಳಿಸಿವೆ.

ಭಾರತದಲ್ಲಿ

ಹೌದು, ಕಳೆದ ವರ್ಷ ಭಾರತದಲ್ಲಿ ಆಪಲ್‌ನ ಐಫೋನ್ಗಳ ಮಾರಾಟವು ಅತ್ಯಂತ ಕೆಟ್ಟದಾಗಿದೆ ಮತ್ತು ಐಫೋನ್‌ಗಳ ಸಾಗಣೆಗಳು ಮೊದಲ ಬಾರಿಗೆ ಕುಸಿಯುತ್ತಿವೆ ಎಂದು ಮೊಬೈಲ್ ಮಾರುಕಟ್ಟೆ ಟ್ರ್ಯಾಕರ್‌ಗಳು ಹೇಳಿವೆ. ಈ ಬಗ್ಗೆ ಮಾತನಾಡಿರುವ ವ್ಯಾಪಾರ ವೇದಿಕೆ ವೆರಾಟೆಕ್ ಇಂಟೆಲಿಜೆನ್ಸ್ ಸಂಸ್ಥಾಪಕ ಮೋಹಿತ್ ಯಾದವ್ ಅವರು, ''ಜಾಗತಿಕ ಪ್ರವೃತ್ತಿಯನ್ನು ಅನುಸರಿಸಿ, ಆಪಲ್ ಇಂಡಿಯಾದ ಆದಾಯವು ಕಳೆದ ಹಣಕಾಸು ವರ್ಷದಲ್ಲಿ 19% ನಷ್ಟು ಇಳಿಕೆಯಾಗಿದೆ, ಇದು 2018ರಲ್ಲಿ ಸಂಸ್ಥೆಯ 19% ಗಳಿಕೆಗೆ ವಿರುದ್ಧವಾಗಿದೆ" ಎಂದು ಹೇಳಿದ್ದಾರೆ.

ಕೌಂಟರ್ಪಾಯಿಂಟ್

ಹಾಂಗ್ ಕಾಂಗ್ ಮೂಲದ ಕೌಂಟರ್ಪಾಯಿಂಟ್ ಟೆಕ್ನಾಲಜಿ ಮಾರ್ಕೆಟ್ ರಿಸರ್ಚ್ 2018ರಲ್ಲಿ ಆಪಲ್ ಐಫೋನ್ ಸಾಗಣೆಯನ್ನು ಸುಮಾರು 1.6-1.7 ಮಿಲಿಯನ್ ಎಂದು ಅಂದಾಜಿಸಿದರೆ, ಸೈಬರ್ ಮೀಡಿಯಾ ರಿಸರ್ಚ್ ಸುಮಾರು 2 ಮಿಲಿಯನ್ ಎಂದು ಅಂದಾಜಿಸಿದೆ. ಇದು 2017ಕ್ಕಿಂತ ಒಂದು ಮಿಲಿಯನ್‌ಗೂ ಹೆಚ್ಚು ಕಡಿಮೆ ಸಾಗಾಣೆ ಎಂದು ಹೇಳಲಾಗಿದೆ. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ಮತ್ತು ಲಾಭ ಎರಡೂ ಪುನರುಜ್ಜೀವನಗೊಳ್ಳಲಿವೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಈ ವರ್ಷ ಆಪಲ್‌ ಸಾಕಷ್ಟು ಬದಲಾವಣೆ ಕಾಣಲಿದೆ ಎಂದು ತಿಳಿಸಿದ್ದಾರೆ.

ಐಫೋನ್ ಎಕ್ಸ್ಆಪ್

ಐಫೋನ್ ಎಕ್ಸ್ಆಪ್ ಬೆಲೆ ಕಡಿತ ಮತ್ತು ಐಫೋನ್ 11ರ ಆಕರ್ಷಕ ಬೆಲೆಗಳ ಕಾರಣದಿಂದಾಗಿ ಆಪಲ್ ಇಂಡಿಯಾವು 2020ರ ಹಣಕಾಸು ವರ್ಷದಲ್ಲಿ ಆದಾಯ ಮತ್ತು ಲಾಭಕ್ಕೆ ತಿರುಗಲಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ಅಸೋಸಿಯೇಟ್ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ. ಸ್ಥಳೀಯ ಜೋಡಣೆಗೆ ಹೆಚ್ಚಿನ ಪ್ರೀಮಿಯಂ ಫೋನ್‌ಗಳನ್ನು ಸೇರಿಸುವುದರಿಂದ ತೆರಿಗೆಗಳಲ್ಲಿ 20% ಉಳಿತಾಯ ಮತ್ತು ಐಫೋನ್ ಎಕ್ಸ್‌ಆರ್ ನಂತಹ ಹಳೆಯ ಮತ್ತು ಬೆಲೆಬಾಳುವ ಮಾದರಿಗಳಿಗೆ ಬೇಡಿಕೆಯಿದೆ ಎಂದು ತರುಣ್ ಪಾಠಕ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಪಲ್ ಸಿಇಒ

ಏಪ್ರಿಲ್-ಜೂನ್ ತ್ರೈಮಾಸಿಕ ಗಳಿಕೆಯ ಕರೆಯಲ್ಲಿ, ಆಪಲ್ ಸಿಇಒ ಟಿಮ್ ಕುಕ್ ವಿಶ್ಲೇಷಕರಿಗೆ ಈ ಅವಧಿಯಲ್ಲಿ ಭಾರತ ಮತ್ತೆ ಪುಟಿದೇಳುವ ಮತ್ತು ಕಂಪನಿಯು ಬೆಳವಣಿಗೆಗೆ ಮರಳಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಬೆಳವಣಿಗೆ ಬಲವಾದ ಎರಡು ಅಂಕೆಗಳಲ್ಲಿದೆ ಎಂದು ಕಂಪನಿ ಹೇಳಿದೆ. ಆಪಲ್ ತನ್ನ ಜುಲೈ-ಸೆಪ್ಟೆಂಬರ್ ಜಾಗತಿಕ ಫಲಿತಾಂಶಗಳನ್ನು ಈ ವಾರ ಪ್ರಕಟಿಸಲಿದೆ. ಇನ್ನು ಕೌಂಟರ್ಪಾಯಿಂಟ್ ರಿಸರ್ಚ್ ಸಂಖ್ಯೆಗಳ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆಪಲ್ ಭಾರತದ ಅಗ್ರ ಹತ್ತು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗೆ ಪ್ರವೇಶ ನೀಡಿದೆ.

Best Mobiles in India

English summary
“Following the global trend, Apple India's revenue has declined by 19% last fiscal in contrast to its gain of 19% in FY18,” said Mohit Yadav, founder of business intelligence platform Veratech Intelligence.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X