ಬಂದೇ ಬಿಡ್ತು Apple iOS 18.2 ಅಪ್ಡೇಟ್; ಯಾವೆಲ್ಲಾ ವೈಶಿಷ್ಟ್ಯಗಳಿವೆ? ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ
Apple iOS 18.2 Released: ಆಪಲ್ ತನ್ನ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ನೀಡಿದೆ. ಐಫೋನ್ ಬಳಕೆದಾರರಿಗಾಗಿ ಬಹುನಿರೀಕ್ಷಿತ ಆಪಲ್ 18.2 (Apple iOS 18.2) ಅಪ್ಡೇಟ್ ಬಿಡುಗಡೆಯಾಗಿದೆ. ಹೌದು, ಐಓಎಸ್ 18.2 (iOS 18.2) ಅಪ್ಡೇಟ್ ಅನ್ನು ಆಪಲ್ ಇಂಟೆಲಿಜೆನ್ಸ್ ಫೀಚರ್ಸ್‌ಗಳೊಂದಿಗೆ ಪರಿಚಯಿಸುವುದಾಗಿ ಕಂಪನಿ ಹೇಳಿತ್ತು. ಅದರಂತೆ, ಬುಧವಾರ ಈ ಅಪ್ಡೇಟ್ ಲಾಂಚ್ ಮಾಡಿದೆ. ಈ ವೈಶಿಷ್ಟ್ಯ ಚೀನಾ ಮತ್ತು ಯುರೋಪಿಯನ್ ಯೂನಿಯನ್ ಬಿಟ್ಟು ಎಲ್ಲ ದೇಶಗಳಲ್ಲಿ ಲಭ್ಯವಿದೆ. ಬನ್ನಿ, ಈ ಐಓಎಸ್ 18.2 ಅಪ್ಡೇಟ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳಿವೆ ಎಂಬುವುದನ್ನು ತಿಳಿಯೋಣ.
ಐಓಎಸ್ 18.2 ಅಪ್ಡೇಟ್ ಎಲ್ಲಾ ಐಫೋನ್ ಮೊಬೈಲ್‌ಗಳಲ್ಲಿ ಲಭ್ಯವಿರಲಿದೆ. ಆದರೆ, ಹೊಸ ಆಪಲ್ ಇಂಟೆಲಿಜೆನ್ಸ್ ಫೀಚರ್ಸ್ ಐಫೋನ್ 16 (iPhone 16), ಐಫೋನ್ 15 ಪ್ರೊ (iPhone 15 Pro) ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಫೋನಿನಲ್ಲಿ ಮಾತ್ರ ಲಭ್ಯವಿದೆ. ಕಂಪನಿಯು ಇಂಟೆಲಿಜೆನ್ಸ್ ಫೀಚರ್ಸ್‌ಗಳನ್ನು ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಯುಕೆ ಸೇರಿದಂತೆ ಇನ್ನಿತರ ದೇಶಗಳಲ್ಲೂ ಪರಿಚಯಿಸಲಿದೆ.

ಐಓಎಸ್ 18.2 ಅಪ್ಡೇಟ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳಿವೆ?
ಆಪಲ್ ಕಂಪನಿಯು WWDC 2024ರಲ್ಲಿ ಬಹುನಿರೀಕ್ಷಿತ ಆಪಲ್ ಇಂಟೆಲಿಜೆನ್ಸ್ ಘೋಷಿಸಿತು. ಆದರೆ, ಇದು iOS 18 ಅಪ್ಡೇಟ್‌ನೊಂದಿಗೆ ಲಭ್ಯವಾಗಲಿಲ್ಲ. ಆಪಲ್‌ನ ಇತ್ತೀಚಿನ 18.2 ಅಪ್ಡೇಟ್‌ನಲ್ಲಿ ಸಿರಿ, ಜೆನ್‌ಮೋಜಿ, ವಿಜುವಲ್ ಇಂಟೆಲಿಜೆನ್ಸ್, ಇಮೇಜ್ ಪ್ಲೇಗ್ರೌಂಡ್, ಅಡ್ವಾನ್ಸ್ಡ್ ರೈಟಿಂಗ್ ಟೂಲ್ಸ್ ಮತ್ತು ಚಾಟ್‌ಜಿಪಿಟಿ ಇಂಟಿಗ್ರೇಶನ್ ಸೇರಿದಂತೆ ಮುಂತಾದ ಎಐ ಫೀಚರ್ಸ್ ಲಭ್ಯವಿದೆ.
ಆಪಲ್ ಇಂಟೆಲಿಜೆನ್ಸ್ ಬಳಸುವುದು ಹೇಗೆ?
ಪ್ರಸ್ತುತ ಆಪಲ್‌ನ ಐಒಎಸ್ 18.2 ಅಪ್ಡೇಟ್ ಡೌನ್‌ಲೋಡ್ ಮಾಡಲು ಲಭ್ಯವಿದೆ. ನಿಮ್ಮ ಐಫೋನ್ 15 ಪ್ರೊ ಅಥವಾ ಐಫೋನ್ 16 ಸರಣಿಯ ಮೊಬೈಲ್‌ನಲ್ಲಿ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬಳಸಬಹುದು. ನಿಮ್ಮ ಫೋನಿನಲ್ಲಿ ಐಒಎಸ್ 18.2 ಅಪ್ಡೇಟ್ ಮಾಡುವ ಸರಳ ವಿಧಾನವನ್ನು ತಿಳಿಯಲು ಮುಂದೆ ಓದಿ.
- ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ (Settings) ಓಪನ್ ಮಾಡಿ.
- ಬಳಿಕ ಜನರಲ್ (General) ಆಯ್ಕೆಯ ಮೇಲೆ ಕ್ಲಿಕ್ಕಿಸಿ.
- ಆಪಲ್ ಇಂಟೆಲಿಜೆನ್ಸ್ ಮತ್ತು ಸಿರಿಯನ್ನು ಆಯ್ಕೆ ಮಾಡಿ.
- ಸಿರಿ ಮತ್ತು ಆಪಲ್ ಇಂಟೆಲಿಜೆನ್ಸ್ ಎರಡಕ್ಕೂ ಇಂಗ್ಲಿಷ್ (US) ಆಯ್ಕೆ ಮಾಡಿ.
- ಸಾಫ್ಟ್‌ವೇರ್ ಅಪ್ಡೇಟ್ (Software Update) ಮೇಲೆ ಕ್ಲಿಕ್ ಮಾಡಿ.
- ಬಳಿಕ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಅನ್ನು ಕ್ಲಿಕ್ಕಿಸಿ
- ಇಷ್ಟು ಮಾಡಿದ್ರೆ ಐಒಎಸ್ 18.2 ಅಪ್ಡೇಟ್ ಡೌನ್‌ಲೋಡ್ ಆಗಲಿದೆ.
ಇಮೇಜ್ ಪ್ಲೇಗ್ರೌಂಡ್ ಬಳಸುವುದು ಹೇಗೆ?
ಆಪಲ್ ಇಂಟೆಲಿಜೆನ್ಸ್ ಡೌನ್‌ಲೋಡ್ ಆದ ಬಳಿಕ ಮತ್ತು ನಿಮ್ಮ ಐಫೋನ್ ಅನ್ನು ಐಈಎಸ್ 18.2 ಅಪ್ಡೇಟ್ ಮಾಡಿದ ಬಳಿಕ ಇಮೇಜ್ ಪ್ಲೇಗ್ರೌಂಡ್ ಬಳಸಬಹುದು.
* ನಿಮ್ಮ ಐಫೋನಿನಲ್ಲಿ ಇಮೇಜ್ ಪ್ಲೇಗ್ರೌಂಡ್ ಅಪ್ಲಿಕೇಶನ್ ಓಪನ್ ಮಾಡಿ.
* ಇಮೇಜ್ ಪ್ಲೇಗ್ರೌಂಡ್, ಜೆನ್ಮೋಜಿ ಮತ್ತು ಇತರೆ ಅಪ್ಡೇಟ್ ಡೌನ್‌ಲೋಡ್ ಮಾಡಿ.
* ಡೌನ್‌ಲೋಡ್ ಬಳಿಕ ಇಮೇಜ್ ಪ್ಲೇಗ್ರೌಂಡ್ ಅಪ್ಲಿಕೇಶನ್ ತೆರೆಯಿರಿ.
* ಅಲ್ಲಿ ಆಡ್ ಬಟನ್ (Add button) ಟ್ಯಾಪ್ ಮಾಡಿ ಮತ್ತು ಆಯ್ಕೆ ಮಾಡಿ
* ಬಳಿಕ ಥೀಮ್‌ಗಳು, ಕಾಸ್ಟೂಮ್ಸ್ ಅಥವಾ ಆಸ್ಸೆಸರೀಸ್ ಆಯ್ಕೆ ಮಾಡಿ.
* ವಿಶ್ಯೂಲ್ ರಚಿಸಲು ಟೆಕ್ಸ್ಟ್ ಪ್ರಾಂಪ್ಟ್ ಹಾಕಿ.
* ಬಳಿಕ ನಿಮ್ಮ ಫೋನಿನ ಗ್ಯಾಲರಿಯಲ್ಲಿರುವ ಫೋಟೋಗಳನ್ನು ಬಳಸಿ.
* ಫೋಟೋಗೆ ಅನಿಮೇಷನ್ ಮತ್ತು ಇಲ್ಲಸ್ಟ್ರೇಶನ್ ಸ್ಟೈಲ್ಸ್ ಆಯ್ಕೆಮಾಡಿ.
* ಫೋಟೋವನ್ನು ನಿಮ್ಮ ಗ್ಯಾಲರಿಯಲ್ಲಿ ಸೇವ್ ಮಾಡಲು ಟ್ಯಾಪ್ ಮಾಡಿ ಅಥವಾ ಮೆಸೇಜ್ ಅಥವಾ ಇತರೆ ಅಪ್ಲಿಕೇಶನ್‌ಗಳ ಮೂಲಕ ಶೇರ್ ಮಾಡಿ.


Click it and Unblock the Notifications








