ಆಪಲ್ ಆಪ್ ಸ್ಟೋರ್ ಅನ್ನು ಕಾಡುತ್ತಿವೆ ಫ್ಲೀಸ್‌ವೇರ್ ಆಪ್ಸ್‌!

|

ಆಪಲ್‌ ಐಫೋನ್‌ ಜಾಗತಿಕವಾಗಿ ಸದಾ ಟ್ರೆಂಡಿಂಗ್‌ನಲ್ಲಿರುವ ಹಾಗೂ ಅತಿ ಹೆಚ್ಚು ಸುಧಾರಿತ ತಂತ್ರಜ್ಞಾನವನ್ನ ಹೊಂದಿರುವ ಬ್ರಾಂಡ್‌. ಇನ್ನು ಆಪಲ್‌ ಐಒಎಸ್‌ ಆಪ್‌ಸ್ಟೋರ್‌ ಅಂದ್ರೆ ಸಾಕಷ್ಟು ವೈವಿಧ್ಯಮಯ ಆಪ್‌ಗಳನ್ನ ಹೊಂದಿರಲಿದೆ ಎಂದು ಹೇಳಲಾಗುತ್ತೆ. ಸದ್ಯ ಅತಿ ಹೆಚ್ಚು ಆಪ್‌ಗ್ರೇಡ್‌ ಆದ ಹಾಗೂ ನಂಬಲಾರ್ಹವಾದ ಆಪ್‌ಗಳನ್ನ ಹೊಂದಿರುವ ಆಪಲ್‌ ಐಒಎಸ್‌ ಆಪ್‌ಸ್ಟೋರ್‌ನಲ್ಲಿಯೇ 30ಕ್ಕೂ ಅದಿಕ ಫ್ಲೀಸ್‌ವೇರ್‌ ಅಪ್ಲಿಕೇಶನ್‌ಗಳು ಇವೆ ಎಂದು ವರದಿಯೊಂದು ಹೇಳಿದೆ.

ಹೌದು

ಹೌದು, ಆಪಲ್‌ ಐಒಎಸ್‌ ಆಪ್‌ ಸ್ಟೋರ್‌ ನಲ್ಲಿ ಅನೇಕ "ಫ್ಲೀಸ್‌ವೇರ್" ಅಪ್ಲಿಕೇಶನ್‌ಗಳಿದ್ದು, ಬಳಕೆದಾರರಿಗೆ ಅರಿವಿಲ್ಲದೆಯೆ ಪ್ರವೇಶ ಶುಲ್ಕವನ್ನ ವಿದಿಸುತ್ತೀವೆ ಅನ್ನುವುದನ್ನ ಭದ್ರತಾ ಸಂಶೋದಕರು ಪತ್ತೆ ಹಚ್ಚಿದ್ದಾರೆ. ಅದಕ್ಕೂ ಮೊದಲು ನೀವು ಫ್ಲೀಸ್‌ವೇರ್ ಅಪ್ಲಿಕೇಶನ್ ಎಂದರೇನು ಅನ್ನೊದನ್ನ ನಾವು ಗಮನಿಸಬೇಕಾಗುತ್ತದೆ. ಫ್ಲೀಸ್‌ವೇರ್‌ ಅಪ್ಲಿಕೇಶನ್‌ಗಳೆಂದರೆ ಪ್ರಯೋಗಿಕ ಅವಧಿಯಲ್ಲಿಯೇ ಇರುವ ಆಪ್‌ಗಲು ಎಂದರ್ಥವಾಗಿದ್ದು, ಈ ಮಾದರಿಯ ಆಪ್ಲಿಕೇಶನ್‌ಗಳನ್ನ ಡೌನ್‌ಲೋಡ್‌ ಮಾಡಿದ ನಂತರವೂ ಬಳಕೆದಾರರಿಗೆ ಶುಲ್ಕವನ್ನ ವಿಧಿಸಲಾಗುತ್ತಿದೆ ಎಂದು ಹೇಳಲಾಗ್ತಿದೆ.

ಸೈಬರ್‌

ಸದ್ಯ ಯುಕೆ ಮೂಲದ ಸೈಬರ್‌ ಸೆಕ್ಯುರಿಟಿ ದೈತ್ಯ ಸೋಫೋಸ್‌ನ ಸಂಶೋಧಕರು ಕಳೆದ ವರ್ಷ ಈ ಮಾದರಿಯ ಆಪ್ಲಿಕೇಶನ್‌ಗಳನ್ನ ಪತ್ತೆ ಹಚ್ಚಿದ್ದರು. ಅಲ್ಲದೆ ಈ ಮಾದರಿಯ ವಂಚನೆಯನ್ನ ಸಹ ಹೊಸ ರೀತಿಯ ಆನ್‌ಲೈನ್ ವಂಚನೆ ಎಂದು ಗುರುತಿಸಿದ್ದರು. ಏಕೆಂದರೆ ಈ ಮಾದರಿಯ ಆಪ್‌ಗಳು ಕೇವಲ ಪ್ರಯೋಗಿಕ ಅವಧಿಯಲ್ಲಿರುವ ಆಪ್‌ಗಳಾಗಿರುತ್ತವೆ. ಆಪ್‌ಸ್ಟೋರ್‌ನಲ್ಲಿ ರಂಗುರಂಗಿನ ಮಾಹಿತಿ ನಿಡಿ ಬಳಕೆದಾರರಿಂದ ಪ್ರವೇಶ ಶುಲ್ಕವನ್ನ ಕಬಳಿಸುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿವೆ. ಸದ್ಯ ಇದೇ ರೀತಿಯ ಅಪ್ಲಿಕೇಶನ್‌ಗಳನ್ನು ಹೈಲೈಟ್ ಮಾಡಲು ಆಪಲ್ ಐಒಎಸ್ ಆಪ್ ಸ್ಟೋರ್ ನಲ್ಲಿ ಕಂಡು ಬಂದಿದ್ದು, ಹೆಚ್ಚು ಕಡಿಮೆ 30ಕ್ಕೂ ಅದಿಕ ಆಪ್ಲಿಕೇಶನ್‌ಗಲು ಈ ಮಾದರಿಯಲ್ಲಿವೇ ಎಂದು ತಿಳಿದು ಬಂದಿದೆ.

ಸೋಫೋಸ್‌ನ

ಸೋಫೋಸ್‌ನ ಹೊಸ ವರದಿಯ ಪ್ರಕಾರ, ಹೊಸ ತನಿಖೆಯು ಆಪ್ ಸ್ಟೋರ್‌ನಲ್ಲಿ "30 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು" ಕಂಡುಹಿಡಿದಿದೆ. ಆರಂಭಿಕ 3 ಅಥವಾ 7 ದಿನಗಳ ಪ್ರಾಯೋಗಿಕ ಅವಧಿಯ ನಂತರ ಈ ಅಪ್ಲಿಕೇಶನ್‌ಗಳಲ್ಲಿ ತಿಂಗಳಿಗೆ $ 30 ಅಥವಾ ವಾರಕ್ಕೆ $ 9 ಶುಲ್ಕ ವಿಧಿಸಬಹುದು ಎಂದು ಕಂಪನಿ ಬಹಿರಂಗಪಡಿಸಿದೆ. ಗ್ರಾಹಕರು ಚಂದಾದಾರಿಕೆಯನ್ನು ರದ್ದುಗೊಳಿಸಲು ಮರೆತರೆ, ಅಂತಹ ಬೆಲೆಗಳು ವರ್ಷಕ್ಕೆ $ 360 ಅಥವಾ 8 468 ಆಗಿರುತ್ತದೆ. ಪ್ಲೇ ಸ್ಟೋರ್‌ನಲ್ಲಿನ ಟ್ರೆಂಡ್‌ಗಳಂತೆಯೇ, ಆಪಲ್ ಐಒಎಸ್ ಆಪ್ ಸ್ಟೋರ್‌ನಲ್ಲಿನ ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಇಮೇಜ್ ಸಂಪಾದಕರಾಗಿದ್ದು, ಇತರ ರೀತಿಯ ಫ್ಲೀಸ್‌ವೇರ್ ಅಪ್ಲಿಕೇಶನ್‌ಗಳು ಜಾತಕ, ಫಾರ್ಚೂನ್ ಟೆಲ್ಲಿಂಗ್, ಪಾಮ್ ರೀಡಿಂಗ್, ಕ್ಯೂಆರ್ ಕೋಡ್, ಬಾರ್-ಕೋಡ್ ಸ್ಕ್ಯಾನರ್‌ಗಳು ಮತ್ತು ಫೇಸ್ ಫಿಲ್ಟರ್‌ಗಳನ್ನು ಸಹ ಒಳಗೊಂಡಿವೆ.

ಹೆಚ್ಚಿನ

ಇನ್ನು ಹೆಚ್ಚಿನ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಸಮಯದಲ್ಲಿ ಉಚಿತ ಎಂಬ ಟ್ಯಾಗ್‌ನೊಂದಿಗೆ ಬರುತ್ತವೆ. ಆದರೆ ಅಪ್ಲಿಕೇಶನ್‌ನಲ್ಲಿನ ಡೌನ್‌ಲೋಡ್‌ ಆದ ನಂತರ ಬಳಕೆದಾರರ ವಂಚನೆ ಅನುಭವಿಸುತ್ತಾನೆ. ಆಪ್‌ ಡೌನ್‌ಲೋಡ್ ಆದ ನಂತರ ಸ್ಪಷ್ಟೀಕರಣದ ಸಮಯದಲ್ಲಿ ಸುಲ್ಕ ಪಾವತಿಸಬೇಕಾಗಿರುತ್ತದೆ. ಅಲ್ಲದೆ ಈ ಅಪ್ಲಿಕೇಶನ್‌ಗಳು ಮತ್ತೊಂದು ಆಪ್ ಸ್ಟೋರ್ ಮಾರ್ಗಸೂಚಿಗೆ ವಿರುದ್ಧವಾಗಿವೆ. ಅಂದರೆ ಉಚಿತ ಟ್ಯಾಗ್‌ಗಳ ಬದಲಾಗಿ, ಈ ಅಪ್ಲಿಕೇಶನ್‌ಗಳು ವಾಸ್ತವವಾಗಿ ಉಚಿತ ಪ್ರಯೋಗ ವಾಗಿ ಬರುತ್ತವೆ.

ಪ್ರಮುಖ

ಇನ್ನು ಎರಡೂ ಪ್ರಮುಖ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳಾದ ಆಪಲ್ ಐಒಎಸ್ ಆಪ್ ಸ್ಟೋರ್ ಮತ್ತು ಆಂಡ್ರಾಯ್ಡ್‌ನಲ್ಲಿನ ಗೂಗಲ್ ಪ್ಲೇ ಸ್ಟೋರ್ ಸಮಸ್ಯೆಯಿಂದ ಬಳಲುತ್ತಿವೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ಯಾವುದೇ ಆಪ್‌ ಚಂದಾದಾರರಾಗುವ ಮೊದಲು ಬಳಕೆದಾರರು ಎಚ್ಚರವಾಗಿರಲು ಮತ್ತು ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ವರದಿ ಕೇಳುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ಅಸ್ತಿತ್ವದಲ್ಲಿರುವ ಚಂದಾದಾರಿಕೆಗಳನ್ನು ಸಹ ಪರಿಶೀಲಿಸಬಹುದು. ಆಪಲ್ ಐಒಎಸ್ ಬಳಕೆದಾರರು ಸೆಟ್ಟಿಂಗ್‌ಗಳು" ಅಪ್ಲಿಕೇಶನ್‌ನಲ್ಲಿನ "ಚಂದಾದಾರಿಕೆಗಳು" ವಿಭಾಗಕ್ಕೆ ಹೋಗಬಹುದು. ನೀವು ಈ ವಿಭಾಗವನ್ನು ನೋಡದಿದ್ದರೆ "ಐಟ್ಯೂನ್ಸ್ ಮತ್ತು ಆಪ್ ಸ್ಟೋರ್" ವಿಭಾಗವನ್ನು ಹುಡುಕಿ ನಂತರ ನಿಮ್ಮ ಆಪಲ್ ಐಡಿಯನ್ನು ಟ್ಯಾಪ್ ಮಾಡಿ ಮತ್ತು "ಆಪಲ್ ಐಡಿ ವೀಕ್ಷಿಸಿ" ಆಯ್ಕೆಮಾಡಿ. ಇಲ್ಲಿ ನಿಮ್ಮ ಫೋನ್ ನಿಮ್ಮ ಐಡಿಗೆ ಸೈನ್ ಇನ್ ಮಾಡಲು ಕೇಳುತ್ತದೆ. ಸೈನ್ ಇನ್ ಮಾಡಿದ ನಂತರ ನೀವು "ಚಂದಾದಾರಿಕೆಗಳು" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಬಹುದು.

ಆಂಡ್ರಾಯ್ಡ್

ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್‌ಗೆ ಹೋಗಬಹುದು ಮತ್ತು ಸರಿಯಾದ ಖಾತೆಯೊಂದಿಗೆ ಸೈನ್ ಇನ್ ಆಗಿದ್ದೀರಾ ಎಂದು ಎರಡು ಬಾರಿ ಪರಿಶೀಲಿಸಬಹುದು. ಇಲ್ಲಿ, ಅವರು ಎಡಭಾಗದಲ್ಲಿರುವ ಹ್ಯಾಂಬರ್ಗರ್ ಮೆನು ಐಕಾನ್ ಮೇಲೆ ಟೇಪ್ ಮಾಡಬೇಕಾಗುತ್ತದೆ ಅಥವಾ ಎಡ ಅಂಚಿನಿಂದ ಬಲಭಾಗಕ್ಕೆ ಸ್ವೈಪ್ ಮಾಡಬೇಕಾಗುತ್ತದೆ. ಅಲ್ಲಿ, ನಿಮ್ಮ ಎಲ್ಲಾ ಪ್ರಸ್ತುತ ಚಂದಾದಾರಿಕೆಗಳನ್ನು ನಿರ್ವಹಿಸಲು "ಚಂದಾದಾರಿಕೆಗಳು" ವಿಭಾಗವನ್ನು ನೀವು ನೋಡಬಹುದು. ಈ ಮೂಲಕ ಫ್ಲೀಸ್‌ವೇರ್‌ ಅಪ್ಲಿಕೇಶನ್‌ಗಳಿಂದಾಗುವ ವಂಚನೆಯಿಂದ ಪಾರಾಗಬಹುದು.

Best Mobiles in India

English summary
A new investigation has discovered “more than 30 apps” on the App Store. The company revealed that may of these apps charge about $30 a month or $9 per week after the initial 3 or 7 day trial period.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X