ಆಪಲ್‌ನಿಂದ ನೂತನ ಐಪ್ಯಾಡ್ ಮಿನಿ ಅನಾವರಣ

camera_graphic-png
camera_graphic-png
edge_hero-png
edge_hero-png
gallery_together_1
gallery_together_1
hero_black-png
hero_black-png
screen_hero-png
screen_hero-pngಆಪಲ್ ಸಂಸ್ಥೆಯು ನೂತನ ಐಪ್ಯಾಡ್ ಮಿನಿ ಹೊರತರುವುದಾಗಿ ಈಗಾಗಲೆ ಸಾಕಷ್ಟು ವದಂತಿಗಳು ಹಬ್ಬಿದ್ದವು ಆದರೇ ನಿನ್ನೆ ಅಕ್ಟೋಬರ್ 24. 2012 ರಂದು ಆಪಲ್ ಸಂಸ್ಥೆಯು ತನ್ನಯ ನೂತನ ಐಪ್ಯಾಡ್ ಮಿನಿ ಅನಾವರಣ ಗೊಳಿಸುವ ಮೂಲಕ ಎಲ್ಲಾ ಉಹಾ ಪೋಹಗಳಿಗೆ ಹಾಗೂ ಗಾಳಿಸುದ್ಧಿಗಳಿಗೆ ತೆರೆ ಎಳೆದಿದೆ. 7.9-ಇಂಚಿನ ಟಚ್‌ಸ್ಕ್ರೀನ್ ಹಾಗೂ 1024×768 ಪಿಕ್ಸೆಲ್ಸ್ ಹೊಂದಿರುವ ದರ್ಶಕ ಹೊಂದಿರುವ ನೂತನ ಐಪ್ಯಾಡ್ ಮಿನಿಯ ವೈ-ಫೈ ಹೊಂದಿರುವ 16GB ಮಾದರಿಯ ಬೆಲೆ.329 ಅಮೆರಿಕನ್ ಡಾಲರ್ ಆಗಿದೆ ಹಾಗೂ 459 ಅಮೆರಿಕನ್ ಡಾಲರ್ ಬೆಲೆಯ ಐಪ್ಯಾಡ್ ಮಿನಿಯಲ್ಲಿ 16GB, Wi-Fi + ಸೆಲ್ಯುಲಾರ್ (3G ಹಾಗೂ LTE) ಪೀಚರ್ಸ್ ಹೊಂದಿದೆ.
ಆಪಲ್ ಸಂಸ್ಥೆಯ ಪ್ರಕಾರ ನೂತನ ಟ್ಯಾಬ್ಲೆಟ್ ಬಳಕೆದಾರು ಕೈನಲ್ಲೇ ಹಿಡಿದು ಕಾರ್ಯನಿರ್ವಹಿಸಲು ನೆರವಾಗುವಷ್ಟು ಚಿಕ್ಕದಾಗಿದ್ದು 308 ಗ್ರಾಂ ತೂಕವಿರುವುದರಿಂದ ಹಗುರವೆನಿಸುತ್ತದೆ ಎಂದು ತಿಳಿಸಿದೆ. ಅಂದಹಾಗೆ ಆಪಲ್ ಸಂಸ್ಥೆ ಅನಾವರಣ ಗೊಳಿಸಿರುವ ನೂತನ ಐಪ್ಯಾಡ್ ಮಿನಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.
ಐಪ್ಯಾಡ್ ಮಿನಿಯಲ್ಲಿನ ವಿಶೇಷತೆಗಳು.
- ‘ಬ್ಲಾಕ್ ಅಂಡ್ ಸ್ಲೇಟ್’ ಹಾಗೂ ‘ವೈಟ್ ಅಂಡ್‌ಸಿಲ್ವರ್ ಮಾದರಿಗಳಲ್ಲಿ ಲಭ್ಯ’.
- 200 x 134.7 x 7.2 mm ಸುತ್ತಳತೆ.
- ಐಪ್ಯಾಡ್ 2 ನಲ್ಲಿ ಬಳಸಲಾಗಿದ್ದ ಆಪಲ್ A5 ಚಿಪ್‌ಸೆಟ್ ಬೆಂಲಿತ.
- ಸಿರಿ ಬೆಂಬಲಿತವಾಗಿದೆ. ಐಪ್ಯಾಡ್ 2 ನಲ್ಲಿ ಸಿರಿ ಬೆಂಬಲಿತವಿಲ್ಲ.
- ಕೇವಲ ನ್ಯಾನೋ ಸಿಮ್‌ಗೆ ಮಾತ್ರ ಸಹಕರಿಸುತ್ತದೆ.
- 1.2-MP ನ ಮುಂಬದಿಯ ಕ್ಯಾಮೆರಾ ಹಾಗೂ 720p ವಿಡಿಯೋ ಕ್ಯಾಪ್ಚರ್.
- 5-MP ಹಿಂಬದಿಯ ಕ್ಯಾಮೆರಾ f/2.4 ಐಸೈಟ್ ಹಾಗೂ 1080p ವಿಡಿಯೋ ಶೂಟ್.
- 16.3 ವ್ಯಾಟ್-ಅವರ್ ಬ್ಯಾಟರಿ ಇದ್ದು 10 ಗಂಟೆಗಳ ವೆಬ್ ಬ್ರೌಸಿಂಗ್ ಅಥವಾ ವಿಡಿಯೋ ವೀಕ್ಷಿಸ ಬಹುದಾಗಿದೆ.
- ವೈ-ಫೈ ಬಳಸಿದಲ್ಲಿ 9 ಗಂಟೆಗಳ ಬ್ಯಾಕಪ್ ನೀಡುತ್ತದೆ.
- ಲೈಟ್ನಿಂಗ್ ಕನೆಕ್ಟರ್ ಕೂಡಾ ಲಭ್ಯವಿದೆ.


Click it and Unblock the Notifications




