ಆಪಲ್ ಐಪ್ಯಾಡ್ ಪ್ರೋ: ಬೆಲೆ, ವಿಷೇಷತೆಗಳ ಸಂಪೂರ್ಣ ವಿವರ..!!

ಹೊಸದಾಗಿ 10.5 ಇಂಚಿನ ಒಂದು ಆವೃತ್ತಿ ಮತ್ತು 12.9 ಇಂಚಿನ ಮತ್ತೊಂದು ಆವೃತ್ತಿ ಲಾಂಚ್ ಆಗಿದೆ. ಈ ಹಿನ್ನಲೆಯಲ್ಲಿ ಇವುಗಳ ವಿಶೇಷತೆ ಗಳು ಇಲ್ಲಿದೆ.

By Precilla Dias
|

ಆಪಲ್ ಈ ಬಾರಿಯ WWDC 2017 ಸಮಾವೇಶದಲ್ಲಿ ಆಪಲ್ ಐಪ್ಯಾಡ್ ಪ್ರೋ ಆಪ್ಡೇಟ್ ಮಾಡಲ್ ಬಿಡುಗಡೆ ಮಾಡಿದ್ದು, ಹೊಸದಾಗಿ 10.5 ಇಂಚಿನ ಒಂದು ಆವೃತ್ತಿ ಮತ್ತು 12.9 ಇಂಚಿನ ಮತ್ತೊಂದು ಆವೃತ್ತಿ ಲಾಂಚ್ ಆಗಿದೆ. ಈ ಹಿನ್ನಲೆಯಲ್ಲಿ ಇವುಗಳ ವಿಶೇಷತೆ ಏನು ಎಂಬುದನ್ನು ಮುಂದಿನಂತೆ ನೋಡುವ.

ಆಪಲ್ ಐಪ್ಯಾಡ್ ಪ್ರೋ: ಬೆಲೆ, ವಿಷೇಷತೆಗಳ ಸಂಪೂರ್ಣ ವಿವರ..!!

ಈ ಐಪ್ಯಾಡ್ ಪ್ರೋ ಮಾಡಲ್ ಗಳಲ್ಲಿ ಹಿಂದಿನಂತೆ ರೆಟಿನಾ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿವೆ. ಈಗಾಗಲೇ ಕೇಲವು ದೇಶಗಳಲ್ಲಿ ಈ ಪ್ಯಾಡ್ ಗಳು ದೊರೆಯುತ್ತಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದೆ.

ಡಿಸ್ ಪ್ಲೇ ಹೇಗೆದೆ..?

ಡಿಸ್ ಪ್ಲೇ ಹೇಗೆದೆ..?

ಹೊಸದಾಗಿ ಬಿಡುಗಡೆಗೊಂಡಿರುವ ಆಪಲ್ ಐಫೋನ್ ಪ್ರೋ ನಲ್ಲಿ ರೆಟಿನಾ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ನ್ಯೂ ಟ್ರೂ ಕಲರ್ ಟೋನ್ ಪ್ಯಾನಲ್ ಹೊಂದಿದೆ. HDR ಸಪೋರ್ಟ್ ಮಾಡಲಿದ್ದು, 600nit ಬ್ರೈಟ್ನೆಸ್ ಇದರಲ್ಲಿದೆ.

10.5 ಇಂಚಿನ ಐಪ್ಯಾಡ್ ಪ್ರೋ 2224X1668 ಪಿಕ್ಸಲ್ ಗುಣಮಟ್ಟವನ್ನು ಹೊಂದಿದ್ದರೇ, 12.9 ಇಂಚಿನ ಆವೃತ್ತಿಯೂ 2720X2048 ಪಿಕ್ಸಲ್ ಗುಣಮಟ್ಟದಾಗಿದೆ.

ಹಾರ್ಡ್ ವೇರ್ ಬಗ್ಗೆ:

ಹಾರ್ಡ್ ವೇರ್ ಬಗ್ಗೆ:

ಈ ಪ್ಯಾಡ್ ಗಳು ಆಪಲ್ 10X ಫ್ಯೂಷನ್ ಚಿಪ್ ನೊಂದಿಗೆ ಸಿಕ್ಸ್ ಪೋಸೆಸರ್ ಕೋರ್ ಮತ್ತು ಟ್ವೆಲ್ ಗ್ರಾಫಿಕ್ಸ್ ಕೋರ್ಟ್ ಗಳನ್ನು ಹೊಂಇದೆ. ಇದರೊಂದಿಗೆ ಹಿಂದಿನ ಪ್ಯಾಡ್ ಗಳಿಗಿಂತ 30% ಹೆಚ್ಚು CPU ಪರ್ಫರ್ಮೆನ್ಸ್ ಮತ್ತು 40% ಹೆಚ್ಚು GPU ಪರ್ಫರ್ಮೆನ್ಸ್ ಹೊಂದಿದೆ. ಒಟ್ಟು ಮೂರು ಸ್ಟೋರೆಜ್ ಆವೃತ್ತಿಯಲ್ಲಿ ಈ ಪ್ಯಾಡ್ ಗಳು ದೊರೆಯಲಿದ್ದು, 64 GB, 256 GB, 512 GB ಯಲ್ಲಿ ಲಭ್ಯವಿದೆ.

ಕ್ಯಾಮೆರಾ ಚೆನ್ನಾಗಿದೆ:

ಕ್ಯಾಮೆರಾ ಚೆನ್ನಾಗಿದೆ:

ಈ ಎರಡು ಆಪಲ್ ಐಪ್ಯಾಡ್ ಪ್ರೋ ಟ್ಯಾಬ್ಲೆಟ್ ಗಳ ಹಿಂಭಾಗದಲ್ಲಿ 12 MP ಐಸಿಗೆಟ್ ಮೈನ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರೊಂದಿಗೆ ಟ್ರೂ ಟೋನ್ ಫ್ಲಾಷ್, 4K ವಿಡಿಯೋ ರೆಕಾರ್ಡಿಂಗ್ ಮತ್ತು ಸ್ಲೋ ಮೊಷನ್ ವಿಡಿಯೋ ಮಾಡಲಿದೆ. ಇದರೊಂದಿಗೆ ಮುಂಭಾಗದಲ್ಲಿ 7 MP ಕ್ಯಾಮೆರಾವನ್ನು ಅಳವಡಿಸಿದ್ದು, FHD ವಿಡಿಯೋ ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ.

ಸಾಫ್ಟ್ ವೇರ್ ಕುರಿತು:

ಸಾಫ್ಟ್ ವೇರ್ ಕುರಿತು:

ಈ ಎರಡು ಮಾದರಿಯ ಐ ಪ್ಯಾಡ್ ಪ್ರೋ ಮಾಡಲ್ ಗಳಲ್ಲಿ iOS 11 ಕಾಣಬಹುದಾಗಿದೆ. ಇದು ಹೊಸ ಹೊಸ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ ನೀವು ಮಲ್ಟಿ ವಿಂಡೋ ಆಪ್ ಬಳಕೆ ಮಾಡಬಹುದಾಗಿದೆ. ಬಳಕೆದಾರರಿಗೆ ಹೊಸ ಅನುಭವನ್ನು ಇದು ನೀಡಲಿದೆ.

ಬ್ಯಾಟರಿ ಮತ್ತು ಇತರೇ ವಿಶೇಷತೆ:

ಬ್ಯಾಟರಿ ಮತ್ತು ಇತರೇ ವಿಶೇಷತೆ:

ಈ ಎರಡು ಆವೃತ್ತಿಯ ಐಪ್ಯಾಡ್ ಫ್ರೋ ಗಳಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಕಾಣಬಹುದಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಸಫೋರ್ಟ್ ಮಾಡಲಿವೆ. USB 3 ಚಾರ್ಜಿಂಗ್ ಅವಕಾಶವಿದ್ದು, 4G, Wi-Fi, GPS ಬ್ಲೂಟೂತ್ ಸಫೋರ್ಟ್ ಮಾಡಲಿದೆ.

ಬೆಲೆಗಳು:

ಬೆಲೆಗಳು:

ಐಪ್ಯಾಡ್ ಪ್ರೋನ ಎರಡು ಆವೃತ್ತಿಗಳು ಒಟ್ಟು ಮೂರು ಬಣ್ಣಗಳಲ್ಲ ದೊರೆಯಲಿದೆ. ರೋಸ್ ಗೋಲ್ಡ್, ಸ್ಪೆಸ್ ಗ್ರೇ, ಗೋಲ್ದ್ ಮತ್ತು ಸಿಲ್ವರ್ ಬಣ್ಣದಲ್ಲಿ ಮಾರಾಟವಾಗುತ್ತಿದೆ.

  • 10.5 ಇಂಚಿನ Wi-Fi ಆವೃತ್ತಿ ಬೆಲೆ: 64GB-$649, 256GB-$749, 512GB- $949
  • 10.5 ಇಂಚಿನ Wi-Fi ಮತ್ತು 4G ಆವೃತ್ತಿ ಬೆಲೆ: 64GB-$779, 256GB-$879, 512GB- $1079
  • 12.9 ಇಂಚಿನ Wi-Fi ಆವೃತ್ತಿ ಬೆಲೆ: 64GB-$799, 256GB-$899, 512GB- $1099
  • 12.9 ಇಂಚಿನ Wi-Fi ಮತ್ತು 4G ಆವೃತ್ತಿ ಬೆಲೆ: 64GB-$929, 256GB-$1029, 512GB- $1229

Best Mobiles in India

Read more about:
English summary
At the WWFC 2017 event, Apple iPad Pro models with 10.5-inch and 12.9-inch displays have been launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X