ನ್ಯೂ ಪ್ಯಾಡ್ ಬಂತು, ಐಪ್ಯಾಡ್ 2 ನ ಬೆಲೆ ಕಡಿತ ಆಯ್ತು.

Posted By: Varun
ನ್ಯೂ ಪ್ಯಾಡ್ ಬಂತು, ಐಪ್ಯಾಡ್ 2 ನ ಬೆಲೆ ಕಡಿತ ಆಯ್ತು.

ಆಪಲ್ ನೆನ್ನೆ ಹೊಸ ಐಪ್ಯಾಡ್ ಟ್ಯಾಬ್ಲೆಟ್ ಆದ ನ್ಯೂ ಪ್ಯಾಡ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಮತ್ತೊಂದು ಶಾಕ್ ಕೊಟ್ಟಿದೆ. ಅದೇನೆಂದರೆ ಐಪ್ಯಾಡ್ 2 ನ ಬೆಲೆಯನ್ನು 100 ಡಾಲರ್ (ಅಂದಾಜು 5000 ರೂಪಾಯಿ) ಕಡಿತ ಗೊಳಿಸಿದೆ.

ಇದರಿಂದಾಗಿ ಐಪ್ಯಾಡ್ 2 ನ 16 ಜಿಬಿ ವೈ-ಫೈ ಆವೃತ್ತಿ, 24500 ರೂಪಾಯಿಗೆ ಬರಲಿದ್ದು 16 GB ವೈ-ಫೈ+3G ಆವೃತ್ತಿ 32,900 ರೂಪಾಯಿಗೆ ಸಿಗಲಿದೆ.

ಅದೇ ನ್ಯೂ ಐಪ್ಯಾಡ್ ಮಾಡಲ್ ಗಳು ಮಾರ್ಚ್ 16 ರಿಂದ ಮಾರುಕಟ್ಟೆಯಲ್ಲಿ ಸಿಗಲಿದ್ದು ಭಾರತದಲ್ಲಿ ಯಾವಾಗ ಪದಾರ್ಪಣೆ ಮಾಡಲಿದೆಯೆಂದು ಇನ್ನೂ ಖಚಿತವಾಗಿಲ್ಲ.

Please Wait while comments are loading...
Opinion Poll

Social Counting