ಆಪಲ್ ಐಪ್ಯಾಡ್ 3 ಮಾರ್ಚ್ 7 ಕ್ಕೆ

ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಆಪಲ್ ಇಂಕ್, ತನ್ನ ಹೆಸರುವಾಸಿಯಾದ ಐಪ್ಯಾಡ್ ಟ್ಯಾಬ್ಲೆಟ್ ನ ಮೂರನೇ ಆವೃತ್ತಿಯನ್ನು ಮಾರ್ಚ್ 7ಕ್ಕೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ.
ಸ್ಯಾನ್-ಫ್ರಾನ್ಸಿಸ್ಕೋ ದಲ್ಲಿ ಬಿಡುಗಡೆಯಾಗಲಿದ್ದು, ಐಪ್ಯಾಡ್ ಸ್ಕ್ರೀನ್ ನ ಚಿತ್ರ ಇರುವ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದೆ. ಹೊಸ ಐಪ್ಯಾಡ್ ನಲ್ಲಿ ಹೈ-ಡೆಫಿನಿಶನ್ ಡಿಸ್ಪ್ಲೇ ಹೊಂದಿದ್ದು ಹಿಂದಿನ ಆವೃತ್ತಿಗಿಂತ ಉತ್ತಮವಾದ ಪ್ರೋಸೆಸರ್ ಹಾಗು ನಿಸ್ತಂತು ನೆಟ್ವರ್ಕ್ ಜೊತೆಗೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.
ಇದುವರೆಗೂ ಆಪಲ್ 55 ಮಿಲಿಯನ್ ಐಪ್ಯಾಡ್ ಗಳನ್ನು ಮಾರಾಟ ಮಾಡಿದ್ದು, ತನ್ನ ಟ್ಯಾಬ್ಲೆಟ್ ಗೆ ತೀವ್ರ ಪೈಪೋಟಿ ನೀಡುತ್ತಿರುವ ಸ್ಯಾಮ್ ಸಂಗ್ ಹಾಗು ಅಮೆಜಾನ್ ನ ಕಿಂಡಲ್ ನ ಉತ್ಪಾನ್ನಗಳಿಗೆ ಐಪ್ಯಾಡ್ 3 ಹೇಗೆ ಉತ್ತರ ನೀಡಲಿದೆ ಎಂದುಕಾದು ನೋಡಬೇಕು.
Comments
Best Mobiles in India


Click it and Unblock the Notifications








