Just In
- 35 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 55 min ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 3 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೇಜಾನ್ ನಲ್ಲಿ ಐಫೋನ್ 11 ಪ್ರೀಆರ್ಡರ್ ಗೆ ಅವಕಾಶ- ಬ್ಯಾಂಕ್ ಗಳಿಂದ ಆಫರ್ ಗಳ ಧಮಾಕ
ಇದೀಗ ನೀವು ಹೊಸ ಆಪಲ್ ಐಫೋನ್ 11,ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ನ್ನು ಅಮೇಜಾನ್ ನಲ್ಲಿ ಪ್ರೀಆರ್ಡರ್ ಮಾಡಬಹುದು. ಹೊಸ ಐಫೋನ್ ಗಳು ಆಫರ್ ಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಅದರಲ್ಲಿ ಎಕ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಗಳು, ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಫ್ಲ್ಯಾಟ್ ರಿಯಾಯಿತಿಗಳು, ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಮತ್ತು ಹೆಚ್ಎಸ್ ಬಿಸಿ ಕಾರ್ಡ್ ಮತ್ತು ಆಕ್ಸಿಸ್ ಬ್ಯಾಂಕ್ ಇಎಂಐ ಟ್ರ್ಯಾನ್ಸ್ಯಾಕ್ಷನ್ ಗಳಲ್ಲಿ ಕ್ಯಾಷ್ ಬ್ಯಾಕ್ ಗಳು ಕೂಡ ಸೇರಿವೆ.

ಪ್ರೀಬುಕ್ಕಿಂಗ್ ಆರಂಭ:
ಇದೀಗ ಐಫೋನ್ 11 ನ್ನು ಪ್ರೀಬುಕ್ ಮಾಡುವುದಕ್ಕೆ ಅವಕಾಶವಿದ್ದು ಸೆಪ್ಟೆಂಬರ್ 27 ರಿಂದ ಶಿಪ್ಪಿಂಗ್ ಪ್ರಾರಂಭವಾಗುತ್ತದೆ. ಆದರೆ ನೀವೆಷ್ಟು ಪಾವತಿ ಮಾಡಬೇಕಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಆಫರ್ ಗಳು:
ಮೊದಲನೆಯದಾಗಿ ಹಳೆಯ ಫೋನ್ ಗಳಿಗೆ ನಿಮಗೆ 7,200 ರ ವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಾಗುತ್ತದೆ. ನಿಮ್ಮ ಹಳೆಯ ಫೋನಿನ ಟ್ರೇಡ್, ಡಿವೈಸಿನ ಮಾಡೆಲ್ ಮತ್ತು ಕಂಡೀಷನ್ನಿನ ಮೇಲೆ ಅದು ನಿರ್ಧಾರವಾಗುತ್ತದೆ.
ಒಂದು ವೇಳೆ ಐಫೋನ್ 11 ಮತ್ತು ಐಫೋನ್ 11 ಪ್ರೋವನ್ನು ನೀವು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ ಬಳಸಿ ಪಾವತಿಸುವುದಾದರೆ ನಿಮಗೆ 6000 ರುಪಾಯಿ ವರೆಗೆ ನೇರ ರಿಯಾಯಿತಿ ಲಭ್ಯವಾಗುತ್ತದೆ. ಇದರಲ್ಲಿ ಇಎಂಐ ಟ್ರಾನ್ಸ್ಯಾಕ್ಷನ್ ಕೂಡ ಇರುತ್ತದೆ.ಐಫೋನ್ 11 ಪ್ರೋ ಮ್ಯಾಕ್ಸ್ ಗೆ 7,000 ರುಪಾಯಿ ರಿಯಾಯಿತಿ ಸಿಗುತ್ತದೆ.

ಬ್ಯಾಂಕ್ ರಿಯಾಯಿತಿಗಳು:
ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ ಕನಿಷ್ಟ 2000 ರುಪಾಯಿ ಟ್ರಾನ್ಸ್ಯಾಕ್ಷನ್ ಮಾಡಿದರೆ 5% ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ಒಂದು ವೇಳೆ ನೀವು ಆಕ್ಸಿಸ್ ಬ್ಯಾಂಕ್ ಇಎಂಐ ಆಯ್ಕೆ ಬಳಸಿ ಪಾವತಿಸಲು ಇಚ್ಛಿಸಿದರೆ 5% ಇನ್ಸೆಂಟ್ ರಿಯಾಯಿತಿಯು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಇಎಂಐ ಮತ್ತು 10% ಇನ್ಸೆಂಟ್ ರಿಯಾಯಿತಿ ಆಕ್ಸಿಸ್ ಬ್ಯಾಂಕ್ ಡೆಬಿಟ್ ಇಎಂಐ ಟ್ರಾನ್ಸ್ಯಾಕ್ಷನ್ ಗೆ ಲಭ್ಯವಾಗುತ್ತದೆ. ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡಿನಲ್ಲಿ 5% ಇನ್ಸೆಂಟ್ ರಿಯಾಯಿತಿ ಗರಿಷ್ಟ 250 ರುಪಾಯಿವರೆಗೆ ಸಿಗುತ್ತದೆ.

ಆಪಲ್ ಐಫೋನ್ 11 ಲಭ್ಯತೆ ಮತ್ತು ಬೆಲೆ:
ಇದೀಗ ಐಫೋನ್ 11 ನಿಂದ ಪ್ರಾರಂಭಿಸೋಣ. ಇದು ನಿಮಗೆ 64GB, 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ.ಇದರ ಪ್ರಾರಂಭಿಕ ಬೆಲೆ ಅಂದರೆ 64ಜಿಬಿ ಸ್ಟೋರೇಜ್ ಆಯ್ಕೆಯ ಫೋನಿಗೆ 64,900 ರುಪಾಯಿಗಳು. ಇತರೆ ಎರಡು ವೇರಿಯಂಟ್ 128ಜಿಬಿ 69,900 ರುಪಾಯಿ ಮತ್ತು 256ಜಿಬಿ ಆಯ್ಕೆಯ ಫೋನ್ 79,900 ರುಪಾಯಿ ಬೆಲೆಗೆ ಸಿಗುತ್ತದೆ.

ಆಪಲ್ ಐಫೋನ್ 11 ವೈಶಿಷ್ಟ್ಯತೆ:
ಐಫೋನ್ ಎಕ್ಸ್ಆರ್ ಫೋನಿನ ಯಶಸ್ಸಿನ ಸರಣಿ ಇದಾಗಿದ್ದು ಐಫೋನ್ ಎಕ್ಸ್ ಆರ್ ನಲ್ಲಿ ಗ್ರಾಹಕರು ದೂರುತ್ತಿದ್ದ ಸಿಂಗಲ್ ಕ್ಯಾಮರಾ ಸಮಸ್ಯೆ ಐಫೋನ್ 11 ನಲ್ಲಿ ಪರಿಹಾರವಾಗಿದೆ. ಹಾಗಂದ ಮಾತ್ರಕ್ಕೆ ವರ್ಷದ ಮೊದಲಾರ್ಧದಲ್ಲಿ ಐಫೋನ್ ಎಕ್ಸ್ಆರ್ ನ ಮಾರಾಟವೇನು ಕಡಿಮೆಗೊಂಡಿರಲಿಲ್ಲ. ಅತೀ ಹೆಚ್ಚು ಮಾರಾಟ ಕಂಡ ಆಪಲ್ ಫೋನ್ ಎನ್ನಿಸಿಕೊಂಡಿದೆ.ಐಫೋನ್ 11 ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು ಹೊಸ ವೈಡ್ ಮತ್ತು ಅಲ್ಟ್ರಾ ವೈಡ್ ಕ್ಯಾಮರಾ ವ್ಯವಸ್ಥೆ ಇದು. ಅಪ್ ಡೇಟ್ ಆಗಿರುವ ಸ್ಮಾರ್ಟ್ HDR ಮತ್ತು ಇಮೇಜ್ ಪ್ರೊಸೆಸಿಂಗ್ ಅಲ್ಗೋರಿತ್ತಮ್ ಜೊತೆಗೆ ನೈಟ್ ಮೋಡ್ ನಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
ಅಪ್ ಡೇಟ್ ಆಗಿರುವ ವೈಶಿಷ್ಟ್ಯತೆಗಳಲ್ಲಿ ಆಪಲ್ ನ ಹೊಸ ಎ13 ಬಯೋನಿಕ್ ಚಿಪ್ ಮತ್ತು ಇಮೆನ್ಸ್ ಪವರ್ ಮತ್ತು ಎಐ ಪರಾಕ್ರಮವೂ ಕೂಡ ಪ್ಯಾಕ್ ಆಗಿದೆ. ವೇಗವಾಗಿರುವ ಫೇಸ್ ಐಡಿ, ದೀರ್ಘಾವಧಿ ಬ್ಯಾಟರಿ ಲೈಫ್, ವೇಗದ ಎಲ್ಇಟಿ ಮತ್ತು ಹೊಸ ಬಣ್ಣಗಳ ಆಯ್ಕೆ ಕೂಡ ಇದೆ.6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯನ್ನು ಅಳಡಿಸಲಾಗಿದ್ದು ಉತ್ತಮ ಬಣ್ಣ ಮತ್ತು ಬ್ರೈಟ್ ನೆಸ್ ನ್ನು ಇದು ನೀಡುತ್ತದೆ.
ಭಾರತದಲ್ಲಿ ಮೂರು ವೇರಿಯಂಟ್ ನಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಕಳೆದ ವರ್ಷದ ಫೋನಿನ ಬೆಲೆಗಿಂತ ಈ ವರ್ಷದ ಆಪಲ್ ಫೋನಿನ ಬೆಲೆಯಲ್ಲಿ 10,000 ರುಪಾಯಿ ಕಡಿಮೆಯಾಗಿದೆ ಎಂಬುದು ಕೂಡ ದೊಡ್ಡ ಲಾಭವೇ ಆಗಿದೆ.

ಐಫೋನ್ 11 ಪ್ರೋ ಬೆಲೆ:
ಐಫೋನ್ 11 ಪ್ರೋನಲ್ಲಿ ಮೊದಲ ಬಾರಿಗೆ ಪ್ರೋ ಮಾನಿಕರ್ ನ್ನು ಐಫೋನ್ ನಲ್ಲಿ ಬಳಸಲಾಗಿರುವ ಫೋನ್ ಆಗಿದೆ. ಐಫೋನ್ ಎಕ್ಸ್ಎಸ್ ನ ಕಳೆದ ವರ್ಷದ ಬೆಲೆಯಷ್ಟೇ ಇದರ ಬೆಲೆ ಕೂಡ ನಿಗದಿಯಾಗಿದೆ. 64ಜಿಬಿ ವೇರಿಯಂಟ್ ನ ಆಯ್ಕೆಗೆ 99,900,256ಜಿಬಿ ವೇರಿಯಂಟ್ ಗೆ 1,13,900 ರುಪಾಯಿಗಳು ಮತ್ತು 512ಜಿಬಿ ಸ್ಟೋರೇಜ್ ವೇರಿಯಂಟ್ ನ ಫೋನಿಗೆ 1,31,900 ರುಪಾಯಿಗಳು.

ಐಫೋನ್ 11 ಪ್ರೋ ವೈಶಿಷ್ಟ್ಯತೆ:
ಟ್ರಿಪಲ್ ಕ್ಯಾಮರಾ, ಎ13 ಬಯೋನಿಕ್ ಚಿಪ್, ಕಡಿಮೆ ಬೆಳಖಿನ ಫೋಟೋಗ್ರಫಿಗಾಗಿ ಹೊಸ ನೈಟ್ ಮೋಡ್, ಹಿಂಭಾಗದಲ್ಲಿ ಹೊಸ ಟೆಕ್ಚಕ್ ಇರುವ ಮ್ಯಾಟ್ ಗ್ಲಾಸ್, ಪ್ರದರ್ಶನದಲ್ಲಿ ಅಭಿವೃದ್ಧಿ ಮತ್ತು ಐಓಎಸ್ 13 ಸೆಕ್ಯುರಿಟಿ ಇತ್ಯಾದಿಗಳು ಈ ಫೋನಿನ ಪ್ರಮುಖ ಹೈಲೆಟ್ ಗಳಾಗಿವೆ. 5.8 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಇದ್ದು ಇದು HDR10 ಗೆ ಬೆಂಬಲ ನೀಡುತ್ತದೆ. Dolby ವಿಷನ್ ಮತ್ತು HLG ಹೈ ಡೈನಾಮಿಕ್ ರೇಂಜ್ (HDR)ಸ್ಟ್ಯಾಂಡರ್ಡ್ ನ್ನು ಕೂಡ ಒಳಗೊಂಡಿದೆ.

ಐಫೋನ್ 11 ಪ್ರೋ ಮ್ಯಾಕ್ಸ್ :
ಇದೆಲ್ಲದಕ್ಕಿಂತ ದೊಡ್ಡ ಫೋನ್ ಐಫೋನ್ 11 ಪ್ರೋ ಮ್ಯಾಕ್ಸ್ 6.5-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಪವರ್ ಗಳೆಲ್ಲದಕ್ಕಿಂತ ಇದರಲ್ಲಿ ಹೊಸ ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಮತ್ತು ಎಐ ಕೆಪಾಬಲಿಟೀಸ್ ಇದೆ. ಐಪೋನ್ 11 ಪ್ರೋ ಮ್ಯಾಕ್ಸ್ ನ ಬ್ಯಾಟರಿ ಲೈಫ್ ಕಳೆದ ವರ್ಷದ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಫೋನಿಗಿಂತ 5 ತಾಸು ಅಧಿಕವಿದೆ. ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ಕಳೆದ ವರ್ಷದ ಬಿಡುಗಡೆಯ ಬೆಲೆಯೇ ಈ ಫೋನಿಗೂ ಕೂಡ ಇದೆ. 64ಜಿಬಿ ಆಯ್ಕೆಗೆ 1,09,900 ರುಪಾಯಿಗಳು, 256ಜಿಬಿ ಆಯ್ಕೆಗೆ 1,23,900 ರುಪಾಯಿಗಳು ಮತ್ತು 512ಜಿಬಿ ವೇರಿಯಂಟ್ ನ ಆಯ್ಕೆಗೆ 1,41,900 ರುಪಾಯಿಯನ್ನು ನಿಗದಿಗೊಳಿಸಲಾಗಿದೆ.
ನಿಮಗೆ ಅಮೆಕ್ಸ್, ಐಸಿಐಸಿಐ, ಅಮೇಜಾನ್ ಪೇ ಐಸಿಐಸಿಐ ಕಾರ್ಡ್, ಹೆಚ್ ಡಿಎಫ್ ಸಿ, ಸಿಟಿ ಬ್ಯಾಂಕ್, ಎಸ್ ಬಿಐ, ಇಂದೂಸ್ಇಂಡಿ,ಎಸ್ ಬ್ಯಾಂಕ್, ಕೋಟಕ್,ಆರ್ ಬಿಎಲ್, ಹೆಚ್ಎಸ್ ಬಿಸಿ, ಸ್ಟ್ಯಾಂಡರ್ಡ್ ಚಾರ್ಟೆಡ್ ಕ್ರೆಡಿಟ್ ಕಾರ್ಡ್ಸ್ ಮತ್ತು ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನಿಮಗೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಾಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470