Home
ಸುದ್ದಿಜಾಲ

ಐಫೋನ್‌ 11 ಖರೀದಿಸುವವರಿಗೆ ಇಲ್ಲಿದೆ ಬಿಗ್‌ ಡಿಸ್ಕೌಂಟ್‌!

ಆಪಲ್‌ನ ಐಫೋನ್‌ 11 ಮತ್ತೊಮ್ಮೆ ಡಿಸ್ಕೌಂಟ್‌ ಪಡೆದುಕೊಂಡಿದೆ. ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 11 ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. 2019 ರಲ್ಲಿ ಬಿಡುಗಡೆ ಆಗಿದ್ದ ಈ ಐಫೋನ್‌ 11 ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ದೇಶದಲ್ಲಿ 64,900ರೂ.ಗಳಿಗೆ ಬಿಡುಗಡೆ ಆಗಿದ್ದ ಈ ಐಫೋನ್‌ ಪ್ರಸ್ತುತ 49,900ರೂ.ಬೆಲೆ ಹೊಂದಿದೆ. ಆದರೆ ಈ ಬೆಲೆಯಲ್ಲೂ ಕೂಡ ಇದೀಗ ಡಿಸ್ಕೌಂಟ್‌ ದೊರೆತ್ತಿದ್ದು ಅತಿ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ ಪ್ಲಾಟ್‌ಫಾರ್ಮ್‌ಗಳು ಐಫೋನ್‌ 11 ಖರೀದಿಸುವವರಿಗೆ ಗುಡ್‌ ನ್ಯೂಸ್‌ ನೀಡಿವೆ. ಖರೀದಿದಾರರಿಗೆ ಎಕ್ಸ್‌ಚೇಂಜ್‌ ಆಫರ್‌ ಜೊತೆಗೆ ಕ್ಯಾಶ್‌ಬ್ಯಾಕ್ ಮತ್ತು ವಿಶೇಷ ಆಫರ್‌ಗಳನ್ನು ನೀಡುತ್ತಿದೆ. ಇದಲ್ಲದೆ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸುವವರಿಗೆ 5% ಡಿಸ್ಕೌಂಟ್‌ ದೊರೆಯಲಿದೆ. ಇದರಿಂದಾಗಿ ಐಫೋನ್‌ 11 ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಹಾಗಾದ್ರೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 11 ಮೇಲೆ ಡಿಸ್ಕೌಂಟ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್

ಅಮೆಜಾನ್

ಅಮೆಜಾನ್ ಇಂಡಿಯಾದಲ್ಲಿ ಐಫೋನ್‌ 11 ಖರೀದಿದಾರರು ವಿಶೇಷ ಡಿಸ್ಕೌಂಟ್‌ ನೀಡಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್‌ ಮೇಲೆ 15,000ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌, ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ 4,000ರೂ.ಗಳ ತನಕ ಡಿಸ್ಕೌಂಟ್‌ ದೊರೆಯಲಿದೆ. ರಿಯಾಯಿತಿ ಇದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ ಎಕ್ಸಚೇಂಜ್ ಆಫರ್‌ನಲ್ಲಿ 15,000ರೂ ತನಕ ಕ್ಯಾಶ್‌ಬ್ಯಾಕ್‌ ಆಫರ್‌ ಪಡೆದುಕೊಂಡರೆ, ಐಫೋನ್‌ 11 ಅನ್ನು ಅಮೆಜಾನ್‌ನಲ್ಲಿ 30,900 ರೂ. ಬೆಲೆಯಲ್ಲಿ ಖರೀದಿಸಬಹುದು.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ನಲ್ಲಿಯೂ ಕೂಡ ಐಫೋನ್ 11ರ ಬೆಲೆ 49,900 ರೂ. ಆಗಿದೆ. ಆದರೆ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಮೂಲಕ 18,850ರೂ. ತನಕ ಆಫರ್‌ ಪಡೆಯಬಹುದು. ಇದರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 11 ನಿಮಗೆ 31,050ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ ಖರೀದಿದಾರರು 'ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್' ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೆ 5% ತನಕ ಕ್ಯಾಶ್‌ಬ್ಯಾಕ್ ಆಫರ್‌ ಕೂಡ ಪಡೆಯಬಹುದು.

ಐಫೋನ್‌ 11 ಫೀಚರ್ಸ್‌

ಐಫೋನ್‌ 11 ಫೀಚರ್ಸ್‌

ಇನ್ನು ಐಫೋನ್ 11 ಫೋನ್ 1792 × 828-ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ 6.1 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದ್ದು, ಈ ಬಯೋನಿಕ್ ಚಿಪ್ 8.5 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ. ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ. ಇನ್ನು ಇದರ ಬ್ಯಾಟರಿ ಬ್ಯಾಕ್‌ಅಪ್‌ ಆಪಲ್‌ ಐಫೋನ್ ಎಕ್ಸ್‌ಆರ್‌ ಫೋನ್‌ ಗಿಂತ ಅಧಿಕವಾಗಿದೆ.

ಐಫೋನ್

ಇನ್ನು ಆಪಲ್‌ ಕಂಪೆನಿ ಈ ವರ್ಷ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಐಫೋನ್‌ಗಳು ಮೇಲ್ಭಾಗದಲ್ಲಿ ಮಾತ್ರೆ ಆಕಾರದ ಕ್ಯಾಮೆರಾ ರಚನೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇರಲಿವೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, ಹೈಟಾಂಗ್ ಇಂಟರ್ನ್ಯಾಷನಲ್ ಸೆಕ್ಯುರಿಟೀಸ್ ವಿಶ್ಲೇಷಕ ಆಪಲ್ ತನ್ನ ಪ್ರೊ ಮಾಡೆಲ್‌ಗಳ ಕ್ಯಾಮೆರಾಗಳ ಸೆನ್ಸಾರ್‌ಗಳನ್ನು ಅಪ್‌ಗ್ರೇಡ್ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ. ಉಳಿದಂತೆ ಇತರೆ ಕ್ಯಾಮೆರಾಗಳು 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಸೆನ್ಸಾರ್‌ನಲ್ಲಿ ಬರಬಹುದು.

ಇನ್ನು ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸ್ಕ್ರೀನ್‌ ಹೊಂದಿರುವ ಸಾಧ್ಯತೆಗಳು ಇವೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಸ್ಕ್ರೀನ್‌ ಹೊಂದಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ ಐಫೋನ್ 14 ಪ್ರೊ ಫೋನಿನ ಆರಂಭಿಕ ಬೆಲೆ $1,099 (ಭಾರತದಲ್ಲಿ ಅಂದಾಜು ಸುಮಾರು 81,200ರೂ. ಎನ್ನಲಾಗಿದೆ) ಕ್ಕೆ ಮಾರಾಟವಾಗಲಿದೆ ಮತ್ತು ಉನ್ನತ ಮಟ್ಟದ ಐಫೋನ್ 14 ಪ್ರೊ ಮ್ಯಾಕ್ಸ್‌ ಫೋನ್ $1,199 (ಭಾರತದಲ್ಲಿ ಸುಮಾರು 88,600ರೂ.) ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Apple’s iPhone 11 was a fairly popular smartphone in India during its life cycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+