ಆಪಲ್ ಐಫೋನ್ 11 ಪ್ರೀಆರ್ಡರ್ ಫ್ಲಿಪ್ ಕಾರ್ಟ್ ನಲ್ಲಿ ಸೆ.20 ರಿಂದ ಪ್ರಾರಂಭ

By Gizbot Bureau
|

ಆಪಲ್ ತನ್ನ ನೂತನ ಫ್ಲ್ಯಾಗ್ ಶಿಪ್ ಐಫೋನ್ 11 ಸರಣಿಯನ್ನು ಇದೇ ತಿಂಗಳು ಜಗತ್ತಿನಾದ್ಯಂತ ಬಿಡುಗಡೆಗೊಳಿಸುತ್ತಿದೆ ಮತ್ತು ಭಾರತದಲ್ಲಿ ಸೆ.27 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಕಂಪೆನಿ ಈಗಾಗಲೇ ತಿಳಿಸಿದೆ. ಫೋನ್ ಬಿಡುಗಡೆಯಂದು ಪ್ರೀ-ಆರ್ಡರ್ ಮಾಡಲು ಅವಕಾಶ ನೀಡಲಾಗುವ ದಿನಾಂಕದ ಬಗ್ಗೆ ಯಾವುದೇ ಪ್ರಕಟಣೆಯನ್ನು ಮಾಡಿರಲಿಲ್ಲ.

ಹೊಸ ಐಫೋನ್

ಆದರೆ ಇದೀಗ ವರದಿಗಳು ಸಲಹೆ ನೀಡುವಂತೆ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಪ್ರೀ ಆರ್ಡರ್ ಮಾಡಲು ನಾಳೆಯಿಂದ ಅಂದರೆ ಸೆಪ್ಟೆಂಬರ್ 20 ರಿಂದ ಅವಕಾಶ ಇರಲಿದೆ.

ಹೊಸ ಐಫೋನ್ ಗಳ ಎಲ್ಲಾ ಫೀಚರ್ ಗಳು ಮತ್ತು ಐಫೋನ್ 11, ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಮೂರೂ ಫೋನ್ ಗಳಲ್ಲಿರುವ ವಿಭಿನ್ನತೆಯನ್ನು ವಿವರಿಸಲಾಗಿದೆ.

ಆಪಲ್ ಐಫೋನ್ 11, ಐಫೋನ್ 11 ಪ್ರೋ, ಐಫೋನ್ 11 ಪ್ರೋ ಮ್ಯಾಕ್ಸ್ ಬೆಲೆ ಮತ್ತು ಭಾರತದಲ್ಲಿನ ಲಭ್ಯತೆ :

ಐಫೋನ್ 11 ನೇರಳೆ, ಕಪ್ಪು, ಹಸಿರು, ಹಳದಿ, ಬಿಳಿ ಮತ್ತು ಸದ್ಯದಲ್ಲೇ ಕೆಂಪು ಬಣ್ಣಗಳ ಆಯ್ಕೆಯಲ್ಲೂ ಲಭ್ಯವಾಗಲಿದೆ. ಈ ಫೋನಿನ ಭಾರತೀಯ ಬೆಲೆ ಆರಂಭಿಕವಾಗಿ Rs. 64,900. ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಗಳ ಬೆಲೆ ಕ್ರಮವಾಗಿ Rs. 99,900 ಮತ್ತು Rs. 1,09,900.

ಈ ಫೋನ್ ಗಳು ಮಿಡ್ ನೈಟ್ ಹಸಿರು, ಸ್ಪೇಸ್ ಗ್ರೇ, ಬೆಳ್ಳಿಯ ವರ್ಣ ಮತ್ತು ಚಿನ್ನದ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ಆಪಲ್ ಸೆಪ್ಟೆಂಬರ್ 27 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಈ ಫೋನ್ ಗಳು ಲಭ್ಯವಾಗುತ್ತದೆ ಎಂಬುದನ್ನು ಪ್ರಕಟಿಸಲಾಗಿತ್ತು.

ಐಫೋನ್11 ಸರಣಿ ಫೋನ್

ಐಫೋನ್11 ಸರಣಿ ಫೋನ್ ಗಳ ಬಿಡುಗಡೆಯೊಂದಿಗೆ ಆಪಲ್ ಪುನಃ ತನ್ನ ಫ್ಲ್ಯಾಗ್ ಶಿಪ್ ಮಾಡೆಲ್ ಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮತ್ತು ಹೆಚ್ಚುವರಿ ಮಾಡೆಲ್ಸ್ ನ್ನು ಹೊರತಂದಿದೆ. ಕಂಪೆನಿಯು ಐಫೋನ್ 11 ಪ್ರೋ ಡಿಸ್ಪ್ಲೇಯಲ್ಲಿ ಅಪ್ ಗ್ರೇಡ್ ಮಾಡಿದೆ ಮತ್ತು 11 ಪ್ರೋ ಮ್ಯಾಕ್ಸ್ ಎರಡೂ ಫೋನ್ ಗಳು ಸೂಪರ್ ರೆಟಿನಾ XDR ಡಿಸ್ಪ್ಲೇ ಜೊತೆಗೆ 2,000,000:1 ಕಾಂಟ್ರ್ಯಾಸ್ಟ್ ಅನುಪಾತವನ್ನು ಹೊಂದಿದೆ. ಹೊಸ ಐಫೋನ್ ಗಳು ಎ13 ಬಯೋನಿಕ್ ಚಿಪ್ ಸೆಟ್ ನ್ನು ಒಳಗೊಂಡಿದೆ.

ಎಲ್ಲರೂ ಗುರುತಿಸಬೇಕಾಗಿರುವ ಪ್ರಮುಖ ಬದಲಾವಣೆ ಐಫೋನ್ 11 ಪ್ರೋ ಮತ್ತು ಪ್ರೋ ಮ್ಯಾಕ್ಸ್ ನಲ್ಲಿ ಆಗಿರುವುದೇನೆಂದರೆ ಕ್ಯಾಮರಾ ಮಾಡ್ಯೂಲ್. ಟ್ರಿಪಲ್ ಹಿಂಭಾಗದ ಕ್ಯಾಮರಾವನ್ನು ಈ ಬಾರಿ ಆಪಲ್ ಸಂಸ್ಥೆ ಅಳಡಿಸಿದ್ದು ಸಾಕಷ್ಟು ದಿನಗಳಿಂದ ಇದನ್ನು ಸಂಸ್ಥೆಯಿಂದ ನಿರೀಕ್ಷಿಸಲಾಗಿತ್ತು.

ಐಫೋನ್ 11 ಸರಣಿಯ ಪ್ರಮುಖ ವೈಶಿಷ್ಟ್ಯತೆಗಳು

ಐಫೋನ್ 11 ಸರಣಿಯ ಪ್ರಮುಖ ವೈಶಿಷ್ಟ್ಯತೆಗಳು

ಈ ಬಾರಿ ಕಂಪೆನಿಯು ಹೊಸ ಫೀಚರ್ ಗಳನ್ನು ಅಭಿವೃದ್ಧಿ ಪಡಿಸಿದ್ದು ಫೇಸ್ ಐಡಿಯಲ್ಲಿ ಬದಲಾವಣೆ ಮತ್ತು ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮ್ಯಾಟ್ ಫಿನಿಶ್ ಆಗಿರುವ ಹಿಂಭಾಗದ ಗ್ಲಾಸ್ ಪೆನಲ್ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ ಮತ್ತು ಕ್ಯಾಮರಾ ಮಾಡ್ಯೂಲ್ ಗಳ ಡಿಸೈನ್ ಕೂಡ ಅತ್ಯಾಕರ್ಷಕವಾಗಿದೆ. 1 ಲಕ್ಷ ಬಜೆಟ್ ನಲ್ಲಿ ಹೊಸ ಫೋನ್ ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ ಐಫೋನ್ 11 ಗೆ ಖಂಡಿತ ಆದ್ಯತೆ ನೀಡಬಹುದು.

Best Mobiles in India

Read more about:
English summary
Apple iPhone 11 Pre-Orders Starts From September 20 Via Flipkart In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X