ಬಹು ನಿರೀಕ್ಷಿತ ಆಪಲ್ ಐಫೋನ್ 12 ಸರಣಿ ಆಕ್ಟೋಬರ್‌ನಲ್ಲಿ ಬಿಡುಗಡೆ!

|

ಜನಪ್ರಿಯ ಆಪಲ್ ಕಂಪೆನಿ ತನ್ನ ಹೊಸತನದ ಫೀಚರ್ಸ್‌ ಐಫೋನ್‌ಗಳಿಂದಲೇ ಗ್ರಾಹಕರ ನೆಚ್ಚಿನ ಬ್ರಾಂಡ್‌ ಎನಿಸಿಕೊಂಡಿದೆ. ಇನ್ನು ಇತ್ತೀಚಿಗಷ್ಟೇ ಹೊಸದಾಗಿ ಬಿಡುಗಡೆ ಮಾಡಿರುವ ಐಫೋನ್ 11 ಸರಣಿ ಫೋನ್‌ಗಳ ಸೌಂಡ್‌ ಮಾರುಕಟ್ಟೆಯಲ್ಲಿ ಇನ್ನು ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಆಪಲ್ ಕಂಪನಿಯ ಮುಂಬರುವ ಐಫೋನ್ 12 ಸರಣಿ ಫೋನ್‌ಗಳ ಬಗ್ಗೆ ಬಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನಲಾಗುತ್ತಿರುವ ಐಫೋನ್ 12 ಸರಣಿಯ ಮೇಲೆ ಬಾರಿ ನಿರೀಕ್ಷೆಗಳ ಗರಿಗೆದರಿದ್ದು, ಇದರ ಬಿಡುಗಡೆ ದಿನಾಂಕ ಕುರಿತು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಆಪಲ್

ಹೌದು, ಆಪಲ್ ಸಂಸ್ಥೆಯು ತನ್ನ ಪ್ರತಿ ಸರಣಿಯಲ್ಲಿಯೂ ಹೊಸತನದ ಫೀಚರ್ಸ್‌ ಪರಿಚಯಿಸುತ್ತ ಬಂದಿದೆ. ಹೀಗಾಗಿ ಈ ಬಾರಿಯ ಐಫೋನ್ 12 ಸರಣಿಯು ಹಲವು ಅಚ್ಚರಿ ಫೀಚರ್ಸ್‌ಗಳನ್ನು ಹೊಂದಿರಲಿವೆ ಎನ್ನಲಾಗ್ತಿದೆ. ಇನ್ನು ಈ ಹೊಸ ಸರಣಿಯ ಐಫೋನ್ 12 ಹೊಸ ಮಾದರಿಯ ಫೀಚರ್ಸ್‌ಗಳನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಆಪಲ್

ಇನ್ನು ಆಪಲ್ ಸಂಸ್ಥೆಯು ಮುಂಬರುವ ಅಕ್ಟೋಬರ್ 12 ರ ನಂತರ ಐಫೋನ್ 12 ಈವೆಂಟ್ ಅನ್ನು ಹೋಸ್ಟ್ ಮಾಡಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಬಹುಶಃ WWDC ಕೀನೋಟ್ ನಂತಹ ಮೊದಲೇ ರೆಕಾರ್ಡ್ ಮಾಡಲಾದ ವೀಡಿಯೊ ಮೂಲಕ ಅನಾವರಣಗೊಳಿಸುವ ಸಾಧ್ಯತೆ ಇದೆ. ಸದ್ಯ ಲಬ್ಯವಾಗಿರುವ ಮಾಹಿತಿ ಪ್ರಕಾರ ಐಫೋನ್‌ ಪ್ರೊಸೆಸರ್ ತನ್ನದೇ ಆದ ಸೋರಿಕೆ ನಿಖರತೆಯ ದಾಖಲೆಯನ್ನು 80 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎನ್ನಲಾಗಿದೆ. ಅಲ್ಲದೆ ಆಪಲ್ ಐಒಎಸ್ ಅನ್ನು ಐಫೋನ್‌ಓಎಸ್ ಎಂದು ಮರುಹೆಸರಿಸುವುದಾಗಿ ಹೇಳಿಕೊಂಡಿದೆ.

ಐಫೋನ್‌ 12

ಸದ್ಯ ಆನ್‌ಲೈನ್‌ ಲೀಕ್‌ ಮಾಹಿತಿ ಪ್ರಕಾರ ಐಫೋನ್‌ 12 ಸರಣಿಯು ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಎಂಬ ಹೆಸರಿನಲ್ಲಿ ಬಿಡುಗಡೆ ಆಗಲಿವೆ ಎನ್ನಲಾಗ್ತಿದೆ. ಅಲ್ಲದೆ ಈ ಮೂರು ಐಫೋನ್‌ಗಳಲ್ಲಿ ಒಂದು ನಾಚ್ ಲೆಸ್‌ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಗೇಮಿಂಗ್, ಫೋಟೊ ಪ್ರೊಸೆಸಿಂಗ್, ವಿಡಿಯೊ ರೆಂಡರಿಂಗ್ ಕೆಲಸಗಳ ವೇಗ ಹೆಚ್ಚಿಸುವ ಸಲುವಾಗಿ ಆಪಲ್ ಐಫೋನ್ 12 ಸರಣಿಯಲ್ಲಿ ಅಧಿಕ RAM ಸಾಮರ್ಥ್ಯ ಒದಗಿಸುವ ಸಾಧ್ಯತೆಗಳಿದೆ. ಹೀಗಾಗಿ ಹೊಸ ಸರಣಿಯು 6GB RAM ಯಿಂದ 12GB RAM ಸಾಮರ್ಥ್ಯದವರೆಗೂ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.

ಐಫೋನ್ 12

ಇನ್ನು ಐಫೋನ್ 12 ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಹಾಗೆಯೇ ಐಫೋನ್ 12 ಪ್ರೊ 6.1 ಇಂಚಿನ ಗಾತ್ರದಲ್ಲಿರಲಿದೆ ಎಂದು UBS ಅನಾಲಿಟಿಕ್ಸ್‌ ತಂಡ ಈ ಹಿಂದೆಯೇ ತಿಳಿಸಿದೆ. ಹಾಗೆಯೇ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಗುಣಮಮಟ್ಟ ಉನ್ನತವಾಗಿರಲಿದ್ದು, ಫೋನ್ ಡಿಸೈನ್ ಆಕರ್ಷಕವಾಗಿರುವ ಜೊತೆಗೆ ಆಯತಾಕಾರದ ಡಿಸ್‌ಪ್ಲೇ ಇರಲಿದ್ದು, ಚೌಕಾಕಾರದ ಕರ್ವ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

Best Mobiles in India

English summary
The new Apple Watch and iPad might still arrive in September though.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X