ಐಫೋನ್ 13 ಫೋನ್ ಬೆಲೆಯಲ್ಲಿ ಭಾರಿ ಕಡಿತ! ಐಫೋನ್ ಖರೀದಿಗೆ ಇದುವೇ ಬೆಸ್ಟ್ ಟೈಂ!
ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ಸಂಸ್ಥೆಯ ಐಫೋನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆಪಲ್ ಕಂಪೆನಿಯ ಐಫೋನ್‌ಗಳನ್ನು ಖರೀದಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಸದ್ಯ ಇದೀಗ ಐಫೋನ್ ಖರೀದಿಸಬೇಕು ಅನ್ನೊರಿಗೆ ಆಪಲ್ ಕಂಪೆನಿ ಗುಡ್ ನ್ಯೂಸ್ ನೀಡಿದೆ. ತನ್ನ ಐಫೋನ್ 13 ಮೇಲೆ ಅಮೆಜಾನ್ ಇಂಡಿಯಾದಲ್ಲಿ 5,000ರೂಪಾಯಿಗಳ ಬೆಲೆಯನ್ನು ಕಡಿತಗೊಳಿಸಿದೆ. ಈ ಬೆಲೆ ಕಡಿತ ಐಫೋನ್ 13 ರ ಎಲ್ಲಾ ಸ್ಟೋರೇಜ್ ರೂಪಾಂತರಗಳಿಗೆ ಮಾನ್ಯವಾಗಲಿದೆ.

ಹೌದು, ಆಪಲ್ ಐಫೋನ್ 13 ರ ಬೆಲೆಯಲ್ಲಿ ಐದು ಸಾವಿರ ರೂ. ಕಡಿತ ಮಾಡಲಾಗಿದೆ. ಇದರಿಂದ ನೀವು ಐಫೋನ್ 13 ಅನ್ನು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಅಮೆಜಾನ್ ಕೂಡ ಐಫೋನ್ 13 ಖರೀದಿಸುವವರಿಗೆ ಭರ್ಜರಿ ಕ್ಯಾಶ್‌ಬ್ಯಾಕ್ ಕೂಡ ನೀಡುತ್ತಿದೆ. ಇದರಿಂದ ನೀವು 10 ಸಾವಿರ ರೂ.ಗಳವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಆಪಲ್ ಐಫೋನ್ 13 ಮೇಲೆ ಏನೆಲ್ಲಾ ರಿಯಾಯಿತಿ ಲಭ್ಯವಿದೆ. ಬೆಲೆ ಕಡಿತದ ನಂತರ ಬೆಲೆ ಎಷ್ಟು? ಇದೆಲ್ಲದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೆಲೆ ಇಳಿಕೆಯ ನಂತರದ ಬೆಲೆ?
ಆಪಲ್ ಕಂಪೆನಿ ಐಫೋನ್13 ಮೇಲೆ 5,000 ರೂ. ಬೆಲೆ ಕಡಿತವನ್ನು ಮಾಡಿದೆ. ಜೊತೆಗೆ ಅಮೆಜಾನ್ ಪ್ಲಾಟ್‌ಫಾರ್ಮ್ ICICI ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್13 ಖರೀದಿಸುವವರಿಗೆ 6,000ರೂ. ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ಇದರಿಂದ ನೀವು ಐಫೋನ್ 13 ಮೇಲೆ 11,000 ರೂಪಾಯಿಗಳವರೆಗೆ ಬಿಗ್ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದರಿಂದ ಐಫೋನ್13 128GB ಸ್ಟೋರೇಜ್ ರೂಪಾಂತರವು ಈಗ 79,900 ರೂ.ಗಳ ಬದಲಾಗಿ 74,900 ರೂ.ಗಳಿಗೆ ಲಭ್ಯವಾಗಲಿದೆ. ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆತರೆ ಕೇವಲ 68,900ರೂಗಳಲ್ಲಿ ಈ ಐಫೋನ್ ನಿಮ್ಮ ಕೈ ಸೇರಲಿದೆ.

ಇನ್ನು ಐಫೋನ್ 13 256GB ಮತ್ತು 512GB ರೂಪಾಂತರಗಳು ಈಗ ಕ್ರಮವಾಗಿ 84,900ರೂ. (89,900ರೂ. ಬದಲಿಗೆ) ಮತ್ತು 1,04,900 (1,09,900ರೂ. ಬದಲಿಗೆ) ರೂ.ಗಳಿಗೆ ಲಭ್ಯವಾಗಲಿದೆ. ICICI ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 256GB ಮತ್ತು 512GB ರೂಪಾಂತರಗಳಿಗೆ ಕ್ಯಾಶ್‌ಬ್ಯಾಕ್ ಆಫರ್ ದೊರೆಯಲಿದೆ. ಆಗ ಈ ಇವುಗಳ ಬೆಲೆ ಕ್ರಮವಾಗಿ 78,900ರೂ. ಮತ್ತು 98,900ರೂ. ಬೆಲೆಗೆ ಖರೀದಿಸಬಹುದಾಗಿದೆ. ಆದರೆ 90 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಕ್ಯಾಶ್‌ಬ್ಯಾಕ್ ನಿಮ್ಮ ಕಾರ್ಡ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ ಅನ್ನೊದನ್ನ ಗಮನಿಸಬೇಕಿದೆ.

ಐಫೋನ್ 13 ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, 1200 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಇದು ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ ಮತ್ತು ಮಿಂಚಿನ ಕೇಬಲ್ ಮೂಲಕ ಚಾರ್ಜ್ ಮಾಡುವ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಐಫೋನ್ 13 ಮಿಡ್‌ನೈಟ್, ಬ್ಲೂ, ಪಿಂಕ್, ಸ್ಟಾರ್‌ಲೈಟ್ ಮತ್ತು ಪ್ರಾಡಕ್ಟ್ ರೆಡ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.


Click it and Unblock the Notifications








