ಬಹಿರಂಗವಾಯ್ತು ಐಫೋನ್ 15 ಸರಣಿ ಲಾಂಚ್ ಈವೆಂಟ್ ಡೇಟ್; ಏನೆಲ್ಲಾ ನಿರೀಕ್ಷೆ?
ಟೆಕ್ ದೈತ್ಯ ಆಪಲ್ ಕಂಪೆನಿಯ ಐಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇದೇ ಕಾರಣಕ್ಕೆ ಪ್ರತಿ ಭಾರಿಯು ಆಪಲ್ ಐಫೋನ್ ಲಾಂಚ್ ಈವೆಂಟ್ ಬಗ್ಗೆ ಸಾಕಷ್ಟು ಕುತೂಹಲ ಇರುತ್ತದೆ. ಇದೀಗ ಈ ವರ್ಷ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಐಫೋನ್ 15 ಸರಣಿ ಲಾಂಚ್ ಈವೆಂಟ್ ಡೇಟ್ ರಿವೀಲ್ ಆಗಿದೆ.
ಹೌದು, ಆಪಲ್ ಐಫೋನ್ 15 ಸರಣಿ ಲಾಂಚ್ ಈವೆಂಟ್ ದಿನಾಂಕ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 13 ರಂದು ಐಫೋನ್ 15 ಸರಣಿ ಲಾಂಚ್ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. ಇದೇ ದಿನಾಂಕ ಅಧಿಕೃತವಾಗುವ ಸಾಧ್ಯತೆ ಕೂಡ ಇದೆ. ಹಾಗಾದ್ರೆ ಐಫೋನ್ 15 ಸರಣಿಯಲ್ಲಿ ಏನೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಕಂಪೆನಿ ಎಂದಿನಂತೆ ಈ ಭಾರಿಯು ಕೂಡ ಸೆಪ್ಟೆಂಬರ್‌ನಲ್ಲಿಯೇ ಹೊಸ ಐಫೋನ್ ಲಾಂಚ್ ಈವೆಂಟ್ ನಡೆಸಲು ತಯಾರಿ ನಡೆಸಿದೆ. ಈ ಭಾರಿಯ ಲಾಂಚ್ ಈವೆಂಟ್‌ನಲ್ಲಿ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಲಿದೆ. ಆದರೆ ಇಲ್ಲಿಯವರೆಗೂ ಆಪಲ್ ಕಂಪೆನಿ ಲಾಂಚ್ ಈವೆಂಟ್ ಡೇಟ್ ಅಧಿಕೃತ ಮಾಡಿಲ್ಲ. ಆದರೆ ಆನ್‌ಲೈನ್‌ನಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಆಪಲ್ ಕಂಪೆನಿ ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 13 ರಂದು ರಜೆ ತೆಗೆದುಕೊಳ್ಳದಂತೆ ಸೂಚನೆ ನೀಡಿದೆ. ಅಂದರೆ ಅದೇ ದಿನದಂದು ಐಫೋನ್ 15 ಸರಣಿ ಲಾಂಚ್ ಈವೆಂಟ್ ನಡೆಯಬಹುದು ಎಂದು ಹೇಳಲಾಗಿದೆ.
ಇನ್ನು ಇದೇ ದಿನಾಂಕ ಅಧಿಕೃತ ಲಾಂಚ್ ಈವೆಂಟ್ ಡೇಟ್ ಆಗಿರಲಿದೆ ಎನ್ನಲಾಗಿದೆ. ಏಕೆಂದರೆ ಆಪಲ್ ಕಂಪೆನಿ ಯಾವಾಗಲೂ ತನ್ನ ಐಫೋನ್ ಲಾಂಚ್ ಈವೆಂಟ್ ಅನ್ನು ಸೆಪ್ಟೆಂಬರ್‌ನ ಮೊದಲ ಎರಡು ವಾರಗಳಲ್ಲಿ ಇರಿಸುತ್ತದೆ. ಅದರಂತೆ ಸೆಪ್ಟೆಂಬರ್ 13 ರಂದು ಐಫೋನ್ 15 ಸರಣಿ ಲಾಂಚ್ ಈವೆಂಟ್ ನಡೆದರೆ, ಐಫೋನ್ 15 ಮುಂಗಡ ಬುಕಿಂಗ್ ಸೆಪ್ಟೆಂಬರ್ 15 ರಿಂದ ಶುರುವಾಗುವ ನಿರೀಕ್ಷೆಯಿದೆ.
ಇದೆಲ್ಲದರ ನಡುವೆ ಐಫೋನ್ 15 ಸರಣಿಯ ಕೆಲವು ಮಾಡೆಲ್‌ಗಳು ಮಾರುಕಟ್ಟೆಗೆ ಲೇಟ್ ಆಗಿ ಎಂಟ್ರಿ ನೀಡುವ ಸಾದ್ಯತೆಯಿದೆ. ಅದರಲ್ಲೂ ಐಫೋನ್ 15 ಪ್ರೊ ನಿಧಾನವಾಗಿ ಬರಲಿದೆ ಎನ್ನಲಾಗಿದೆ. ಏಕೆಂದರೆ OLED ಪ್ಯಾನೆಲ್‌ಗಳ ಗುಣಮಟ್ಟ ಪರೀಕ್ಷೆಯಲ್ಲಿ LG ವಿಫಲವಾಗಿದೆ ಎಂದು ವರದಿಯಾಗಿದೆ. ಆದ್ದರಿಂದ ಮುಂಬರುವ ಐಫೋನ್‌ಗೆ ಇದು ಡಿಸ್‌ಪ್ಲೇಗಳನ್ನು ಪೂರೈಸುವುದಿಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಐಫೋನ್ 15 ಸರಣಿಗೆ ಸ್ಯಾಮ್‌ಸಂಗ್ ಕಂಪೆನಿ OLED ಪ್ಯಾನೆಲ್‌ಗಳನ್ನು ಪೂರೈಸಲಿದೆ ಎನ್ನುವ ಮಾತು ಕೇಳಿ ಬಂದಿದೆ.
ಐಫೋನ್ 15 ಸರಣಿ ಫೀಚರ್ಸ್ ನಿರೀಕ್ಷೆ ಏನು?
ಆಪಲ್ ಕಂಪೆನಿ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಐಫೋನ್ 15 ಸರಣಿಯು ಹೊಸ ಮಾದರಿಯ ಫೀಚರ್ಸ್‌ಗಳಲ್ಲಿ ಬರಲಿದೆ. ಅದರಂತೆ ಐಫೋನ್ 15 ಪ್ಲಸ್ ಫೋನ್ ಕ್ಯಾಮೆರಾ ಸೆನ್ಸಾರ್ ಅನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಐಫೋನ್ 15 ಮಾದರಿಗಳು ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುವುದಿಲ್ಲ ಎನ್ನಲಾಗಿದೆ. ಇದಲ್ಲದೆ ಆಪಲ್ ಐಫೋನ್ 15 ಪ್ರೊ ಮಾಡೆಲ್ ಫೋನ್ ಆಪಲ್ A17 ಚಿಪ್‌ಸೆಟ್ ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಐಫೋನ್ 15 3,877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ ಐಫೋನ್ 15 ಪ್ಲಸ್ 4,912mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಐಫೋನ್ 15 ಪ್ರೊ ಮಾದರಿಯು 3,650mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 4,852mAh ಸಾಮರ್ಥ್ಯದ ಬ್ಯಾಟರಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಆಪಲ್‌ನ ಲೈಟ್‌ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್‌ನೊಂದಿಗೆ ಬರುವ ನಿರೀಕ್ಷೆಯಿದೆ.


Click it and Unblock the Notifications








