ಆಪಲ್ ಐಫೋನ್ 16 ಬಗ್ಗೆ ಬಂತು ಬಿಗ್ ಅಪ್ಡೇಟ್! ಇದನ್ನು ಕೇಳಿ ಟೆಕ್ ವಲಯವೇ ಶಾಕ್!
ಆಪಲ್ ಕಂಪೆನಿ ಮುಂದಿನ ವರ್ಷ ಪರಿಚಯಿಸಲಿರುವ ಐಫೋನ್ 16 ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಐಫೋನ್ ಅಂದ್ರೆನೆ ಹಾಗೇ ತಯಾರಿಕೆಯಾ ಹಂತದಿಂದ ಹಿಡಿದು ಬಿಡುಗಡೆ ಆಗಿ ಗ್ರಾಹಕರ ಕೈ ಸೇರುವವರೆಗೂ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತವೆ. ಅದೇ ಹಾದಿಯಲ್ಲಿ ಐಫೋನ್ 16 ಕೂಡ ಸಾಗಿದೆ. ಇದರ ವಿನ್ಯಾಸ ಹಾಗೂ ಚಿಪ್‌ಸೆಟ್‌ಬಗ್ಗೆ ಸಂಚಲನ ಮೂಡಿಸುವ ವಿಚಾರಗಳು ವರದಿ ಆಗುತ್ತಿವೆ.
ಹೌದು, ಐಫೋನ್ 16 ಸರಣಿಯ ಮಾದರಿಗಳು ಇತ್ತೀಚಿನ A18 ಚಿಪ್‌ಸೆಟ್‌ನೊಂದಿಗೆ ಬರುತ್ತವೆ ಎಂದು ವರದಿಯಾಗಿದೆ. ಈ ಸರಣಿಯಲ್ಲಿ ಬರುವ ನಾಲ್ಕು ಐಫೋನ್ 16 ಮಾದರಿಗಳು ಕೂಡ ಒಂದೇ ಚಿಪ್‌ಸೆಟ್‌ನೊಂದಿಗೆ ಬರುತ್ತವೆ ಎಂದು ಹೇಳಲಾಗ್ತಿದೆ. ಇದು ಆರಂಭಿಕ iOS 18 ಮೂಲ ಕೋಡ್ iPhone 16 ಸರಣಿಯ ವಿವರಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಐಫೋನ್ 16 ಸರಣಿಯ ಪ್ರೊಸೆಸರ್ ವಿವರ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 16 ಪ್ರೊಸೆಸರ್ ವಿಶೇಷತೆ ಏನು?
ಐಫೋನ್ 16 ಮಾದರಿಗಳು A18 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರುತ್ತವೆ. ಆಪಲ್ ಕಂಪೆನಿ ಎಲ್ಲಾ ಮಾದರಿಗಳಲ್ಲಿ ಕಾರ್ಯಕ್ಷಮತೆಯನ್ನು ಏಕರೂಪವಾಗಿಡಲು A18 ಚಿಪ್‌ಸೆಟ್ ಅನ್ನು ಬಳಸಬಹುದು ಎಂದು ವರದಿಯಾಗಿದೆ. ಈ ಚಿಪ್‌ನಲ್ಲಿರುವ t8140 ಸಿಸ್ಟಮ್ ಎಲ್ಲಾ iPhone 16 ಮಾದರಿಗಳಿಗೆ ಶಕ್ತಿಯನ್ನು ನೀಡುತ್ತದೆ ಎನ್ನಲಾಗಿದೆ. ಇನ್ನು ಆಪಲ್ ಕ್ರಮವಾಗಿ A18 Pro ಮತ್ತು A18 SoC ಯೊಂದಿಗೆ ಪ್ರೊ ಮತ್ತು ಪ್ರೊ ಅಲ್ಲದ ಮಾದರಿಗಳ ನಡುವೆ ವ್ಯತ್ಯಾಸವನ್ನು ನೀಡುತ್ತದೆಯೇ ಎಂಬುದು ಬಹಿರಂಗವಾಗಿಲ್ಲ.

ಹಾಗೇ ನೋಡಿದರೆ ಆಪಲ್ ಕಳೆದ ವರ್ಷದ A16 ಬಯೋನಿಕ್ ಚಿಪ್‌ಸೆಟ್ ಮತ್ತು ಹೊಸ A17 Pro ಚಿಪ್‌ಸೆಟ್‌ನೊಂದಿಗೆ ಪ್ರೊ ರೂಪಾಂತರಗಳೊಂದಿಗೆ ಐಫೋನ್ 15 ಮಾಡೆಲ್ ಪರಿಚಯಿಸುತ್ತ. A17 Pro ಬ್ರ್ಯಾಂಡ್‌ನಿಂದ ಇನ್ನೂ 3nm ಫ್ಯಾಬ್ರಿಕೇಶನ್, ಹೆಚ್ಚುವರಿ GPU ಕೋರ್ ಮತ್ತು ವರ್ಧಿತ ಗಡಿಯಾರದ ವೇಗದೊಂದಿಗೆ ಅತ್ಯಂತ ಶಕ್ತಿಶಾಲಿ SoC ಎಂದು ಹೇಳಲಾಗಿದೆ.
ಇನ್ನು ಆಪಲ್ ಕಂಪೆನಿ ಐಫೋನ್ 16 ಸರಣಿಯನ್ನು ಮುಂದಿನ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಇದರ ಡಿಸೈನ್, ತಯಾರಿಕ ಹಂತದ ವಿವರಗಳು ಬಹಿರಂಗವಾಗುತ್ತಲೇ ಇವೆ. ಇದು ಐಫೋನ್ 16 ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಇದರ ಕ್ಯಾಮೆರಾ ವಿಚಾರವಾಗಿಯೂ ಹಲವು ವಿಚಾರಗಳು ಬಹಿರಂಗವಾಗಿದ್ದು, ಇದು ಇನ್ನಷ್ಟು ಸದ್ದು ಮಾಡುವ ಸೂಚನೆ ನೀಡಿವೆ.

ಇದಲ್ಲದೆ ಐಫೋನ್ 16 ಸರಣಿಯಲ್ಲಿ ಮೀಸಲಾದ ಕ್ಯಾಪ್ಚರ್ ಬಟನ್ ಆಯ್ಕೆ ನೀಡುವುದಾಗಿಯು ಕೂಡ ವರದಿಯಾಗಿದೆ. ಇದು ತ್ವರಿತವಾಗಿ ವಿಡಿಯೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ಲೂಮ್ ಬರ್ಗ್ ವರದಿ ಮಾಡಿದೆ. ಇನ್ನು ಸಾಮಾನ್ಯ ಬಟನ್‌ಗಳಿಗಿಂತ ಭಿನ್ನವಾಗಿ ಇದು ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ನೀವು ಅದನ್ನು ಒತ್ತಿದಾಗ ಕ್ಯಾಪ್ಚರ್ ಬಟನ್ ಭೌತಿಕವಾಗಿ ಚಲಿಸುವುದಿಲ್ಲ. ಬದಲಾಗಿ, ಇದು ಹ್ಯಾಪ್ಟಿಕ್ ಫೀಡ್‌ಬ್ಯಾಕ್ ಎಂಬ ತಂತ್ರಜ್ಞಾನವನ್ನು ಬಳಕೆ ಮಾಡಲಿದ್ದು, ನೀವು ಅದನ್ನು ಸ್ಪರ್ಶಿಸಿದಾಗ ಪ್ರತಿಕ್ರಿಯೆಯನ್ನು ಪಡೆಯಬಹುದಾಗಿದೆಯಂತೆ. ಈ ಮೂಲಕ ಸೂಕ್ಷ್ಮ ಬಟನ್ ಆಯ್ಕೆ ಪಡೆದಿರುತ್ತದೆ ಎಂದು ತಿಳಿದುಬಂದಿದೆ.
ಐಫೋನ್ 16 ನಲ್ಲಿ ಈ ಬಟನ್ ಅನ್ನು ಫೋನ್‌ನ ಬಲಭಾಗದಲ್ಲಿ ಇರಿಸಲಾಗುವುದು ಎಂದು ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ಬಟನ್‌ನ ವಿಶೇಷ ಫೀಚರ್ಸ್ ಏನೆಂದರೆ ನೀವು ಯಾವ ರೀತಿಯ ಒತ್ತುತ್ತೀರೋ ಅದರ ಆಧಾರದ ಮೇಲೆ ಬಟನ್ ವಿಭಿನ್ನ ಕೆಲಸಗಳನ್ನು ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಸಾಮಾನ್ಯವಾಗಿ ಪ್ರೆಸ್ ಮಾಡಿದ್ರೆ ಫೋಟೋಗಳನ್ನು ತೆಗೆಯಲು ಅನುಕೂಲ ಮಾಡಿಕೊಡುತ್ತದೆ. ಅದರಂತೆ ಗಟ್ಟಿಯಾಗಿ ಒತ್ತಿದ್ರೆ ವಿಡಿಯೋ ರೆಕಾರ್ಡಿಂಗ್ ಮಾಡಲು ಅನುಮತಿ ನೀಡುತ್ತದೆ ಎಂದು ತಿಳಿದುಬಂದಿದೆ.

ಇನ್ನು ಆಪಲ್ ಕಂಪೆನಿ ಈ ವರ್ಷ ತನ್ನ ಬಹು ನಿರೀಕ್ಷಿತ ಐಫೋನ್ 15 ಅನ್ನು ಬಿಡುಗಡೆ ಮಾಡಿದೆ. ಇದು 6.1 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಡೈನಾಮಿಕ್ ಐಲ್ಯಾಂಡ್ ನಾಚ್ ಅನ್ನು ಈ ಫೋನ್‌ನಲ್ಲಿ ವಿಶೇಷವಾಗಿ ಕಾಣಬಹುದು. ಇದರೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸರ್ ಆಯ್ಕೆ ನೀಡಲಾಗಿದ್ದು, ಕ್ಯಾಮೆರಾ ವಿಚಾರದಲ್ಲಿ ಬೃಹತ್ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಈ ಫೋನ್ ಆಪಲ್‌ನ A16 ಬಯೋನಿಕ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವುದರಿಂದ ಪ್ರೊಸೆಸರ್ ಕೂಡ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ.


Click it and Unblock the Notifications








