ಆಪಲ್ ಐಫೋನ್ 5: ಹೊಸ ಸುದ್ದಿ ಏನು

By Varun
|

ಆಪಲ್ ಐಫೋನ್ 5: ಹೊಸ ಸುದ್ದಿ ಏನು
ಆಪಲ್ ಐಫೋನ್ ಬರೋದು ಸೆಪ್ಟೆಂಬರ್ 12 ಅಂತ ಒಂದು ಕಡೆ ಗುಮಾನಿ ಎದ್ದಿದ್ರೆ ಮತ್ತೊಂದು ಕಡೆ ಅದು ಹಿಂದಿನ ಐಫೋನ್ ಗಿಂತಾ ದೊಡ್ಡ ಸ್ಕ್ರೀನ್ ಜೊತೆ ಬರಲಿದೆ ಅಂತ ಕೆಲವರು ಹೇಳಿದ್ರೆ, ಮತ್ತೊಂದು ಕಡೆ ಐಫೋನ್ 5 ಗೆ ಚಿಕ್ಕದಾದ ಡಾಕ್ ಇರುತ್ತೆ ಅಂತ ಕೂಡ ಸುದ್ದಿ ಬಂದಿದೆ.

ಅದೆಲ್ಲಕ್ಕಿಂತಾ ಬಂದಿರುವ ಹೊಸ ಸುದ್ದಿ ಏನೆಂದರೆ ಆಪಲ್ ಸೆಪ್ಟಂಬರ್ 12 ಕ್ಕೆ ಐಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಅಂದೇ ಪ್ರೀ-ಆರ್ಡರ್ ತೆಗೆದುಕೊಳ್ಳಲಿದೆ ಅಂತಾ imore ಎಂಬ ಬ್ಲಾಗ್ ಪ್ರಕಟಿಸಿದೆ. ಇದಷ್ಟೇ ಅಲ್ಲದೆ ಅವತ್ತು ಬುಕ್ ಮಾಡಿದರೆ ಸೆಪ್ಟೆಂಬರ್ 21 ಕ್ಕೆ ಐಫೋನ್ 5 ಪ್ರೀ-ಬುಕ್ ಮಾಡಲಿರುವ ಗ್ರಾಹಕರಿಗೆ ತಲುಪಿಸಲಿದೆ.

ಇದು ಅಮೇರಿಕಾ ಗ್ರಾಹಕರಿಗೆಮಾತ್ರ ಅನ್ವಯಿಸಲಿದ್ದು, ಇತರೆ ದೇಶಗಳ ಗ್ರಾಹಕರು ಪ್ರೀ-ಆರ್ಡರ್ ಮಾಡಲು ಅಕ್ಟೋಬರ್ 5 ರ ವರೆಗೂ ಕಾಯಬೇಕಾಗಬಹುದು ಎಂದು ಪ್ರಕಟಿಸಿದೆ.

ಇದುವರೆಗೂ ಆಪಲ್ ತನ್ನ ಯಾವುದೇ ಸಾಧನದ ಬಿಡುಗಡೆಗೂ ಮುನ್ನ ಪ್ರೀ-ಆರ್ಡರ್ ತೆಗೆದುಕೊಂಡಿಲ್ಲವಾದರೂ, ಆಗಸ್ಟ್ 29 ಕ್ಕೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಬಿಡುಗಡೆಯಾಗುತ್ತಿರುವುದರಿಂದ ಆಪಲ್ ಈ ಬಾರಿ ಪ್ರೀ-ಆರ್ಡರ್ ತೆಗೆದುಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X