Home
ಸುದ್ದಿಜಾಲ

ವಿಶ್ವ ಜಾಗತಿಕ ಮಟ್ಟದಲ್ಲಿ ಆಪಲ್‌ನಿಂದ ಇನ್ನೊಂದು ಕಮಾಲ್

ಕ್ಯುಪರ್ಟಿನೋ ದೈತ್ಯ ಐಫೋನ್ 8 ಅನ್ನು ಮುಂದಿನ ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡುವ ಎಲ್ಲಾ ನಿರೀಕ್ಷೆಯನ್ನಿಟ್ಟುಕೊಂಡಿದ್ದು ಆಪಲ್ ಬಳಕೆದಾರರಿಗೆ ಈ ಡಿವೈಸ್ ಮೂಲಕ ಬಂಪರ್ ವ್ಯವಸ್ಥೆಯನ್ನೇ ಒದಗಿಸಲಿದೆ.

By Shwetha Ps

ಆಪಲ್ ಐಫೋನ್ 8 ಲಾಂಚ್‌ಗೆ ಇನ್ನೇನು ಕೆಲವೇ ಮಾಸಗಳು ಬಾಕಿ ಇದ್ದು, ಆಪಲ್ ಕಂಪೆನಿಯು ತನ್ನ ಉತ್ಪನ್ನಗಳನ್ನು ತಡವಾಗಿ ಲಾಂಚ್ ಮಾಡಿದರೂ ಅದರಲ್ಲಿ ಏನಾದರೂ ವಿಶೇಷತೆಗಳನ್ನು ಇರಿಸಿಕೊಂಡು ಬಳಕೆದಾರರಿಗೆ ಅದು ದೊರಕುವಂತೆ ಮಾಡುತ್ತದೆ. ಅದಾಗ್ಯೂ ಡಿವೈಸ್‌ ಲಾಂಚ್ ವಿಳಂಬವಾಗುವುದಕ್ಕೆ ಕೆಲವೊಂದು ಕಾರಣಗಳಿದ್ದು ಅದರಲ್ಲಿ ಮುಖ್ಯವಾಗಿರುವಂತಹದ್ದು ಟಚ್ ಐಡಿ ಇಂಟಿಗ್ರೇಶನ್ ಮತ್ತು ಓಲೆಡ್ ಡಿಸ್‌ಪ್ಲೇಯಲ್ಲಿರುವ ಸಣ್ಣ ಪುಟ್ಟ ದೋಷಗಳಾಗಿದೆ.

ವಿಶ್ವ ಜಾಗತಿಕ ಮಟ್ಟದಲ್ಲಿ ಆಪಲ್‌ನಿಂದ ಇನ್ನೊಂದು ಕಮಾಲ್

ಈ ದೋಷಗಳನ್ನು ಗುರುತಿಸಿರುವಂತಹದ್ದು ಆಪಲ್ ಇನ್‌ಸೈಡರ್ ಆಗಿದ್ದು ಈ ಕಾರಣಗಳಿಂದಾಗಿ ವಿಳಂಬವುಂಟಾಗುತ್ತಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನು ಐಫೋನ್ 8 ಮುಂದಿನ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಕೂಡ ಇದೆ. ಆಪಲ್ ಬಿಡುಗಡೆ ಮಾಡಿರುವ ನಾಲ್ಕನೇ ತ್ರೈಮಾಸಿಕ ಆದಾಯಗಳನ್ನು ಅನುಸರಿಸಿ ಈ ಲಾಂಚ್ ಅನ್ನು ನಿರೀಕ್ಷಿಸಲಾಗಿದೆ.

ಆರ್‌ಬಿಸಿ ವಿಶ್ಲೇಷಕರಾದ ಅಮಿತ್ ದರ್ಯಾನಿಯವರು ಐಫೋನ್ ವಿಳಂಬ ಎಂದಿಗೂ ಉಂಟಾಗುವುದಿಲ್ಲ ಎಂಬುದಾಗಿ ವರದಿಯ ಮೂಲಕ ತಿಳಿಸಿದ್ದಾರೆ. ಆಪಲ್ ತನ್ನ ಐಫೋನ್‌ಗಳ ಮಾರಾಟವನ್ನು 12% ಅಂದಾಜು ಮಾಡಿದ್ದು ಐದು ವರ್ಷಗಳ ಆಪಲ್ ಸರಾಸರಿ ಬೆಳವಣಿಗೆಯು 7% ವಾಗಿದೆ. ಈ ಬೆಳವಣಿಗೆಯ ದೃಷ್ಟಿ ಐಫೋನ್ 8 ರ ಮೇಲೆ ಖಂಡಿತ ಬೀಳಲಿದೆ.

ಇನ್ನೊಬ್ಬ ವಿಶ್ಲೇಷಕರಾದ ರಾಬ್ ಚಿರಾ ಹೇಳುವಂತೆ ಸಪ್ಟೆಂಬರ್ ಅವತರಣಿಕೆಯು ಹಿಂದೆಂದಿಗಿಂತಲೂ ಭಿನ್ನ ಮತ್ತು ಪ್ರಖರವಾಗಿದೆ. ಐಫೋನ್ 8 ರಲ್ಲಿ ಅತ್ಯದ್ಭುತವನ್ನು ಆಪಲ್ ಮಾಡಲಿದೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ ಆದರೆ ಐಫೋನ್ 7ಎಸ್ ಮತ್ತು ಐಫೋನ್ 7 ಪ್ಲಸ್‌ನಲ್ಲಿ ಇಂತಹ ವಿಶೇಷತೆಗಳನ್ನು ಕಂಡುಕೊಳ್ಳಬಹುದಾಗಿದೆ.

ಆಪಲ್‌ನ ಆರ್ಥಿಕ ಸ್ಥಿತಿಗತಿಗಳನ್ನು ಕಂಡಾಗ ಮುಂದಿನ ತ್ರೈಮಾಸಿಕದಲ್ಲಿ ಐಫೋನ್ 7 ಸಿರೀಸ್ ಸಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಐಓಎಸ್ 11 ಐಪ್ಯಾಡ್ ಆಗಿ ಬದಲಾಗಿ ಲ್ಯಾಪ್‌ಟಾಪ್‌ಗಳಿಗೆ ಪರ್ಯಾಯ ವ್ಯವಸ್ಥೆ ಎಂದೆನಿಸಲಿದೆ.

ಯುಬಿಎಸ್ ವಿಶ್ಲೇಷಕರಾದ ಸ್ಟೀವನ್ ಹೇಳುವಂತೆ ಐಫೋನ್ 8 ನ ಅಕ್ಟೋಬರ್ ಲಾಂಚ್ ಸಪ್ಟೆಂಬರ್‌ನ ಲಾಂಚ್ ಮೇಲೆ ಭರವಸೆಯನ್ನಿಟ್ಟಿರುವುದರಿಂದ ಈ ಬಾರಿ ಐಫೋನ್ ಮಾರಾಟವನ್ನು ಅವಲೋಕಿಸಿ ಆಪಲ್ ಭವಿಷ್ಯವನ್ನು ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಧರಿಸಬಹುದಾಗಿದೆ.

Best Mobiles in India

English summary
The analysts are saying this based on the estimated fourth quarter earnings released by Apple yesterday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+