ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ 8 ನಲ್ಲಿ ನಿಮಗೊಂದು ಅಚ್ಚರಿ ಕಾದಿದೆ

ಐಫೋನ್ 8 ಪೂರ್ಣ ಪರದೆಯುಳ್ಳ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿರುವ ಓಲೆಡ್ ಡಿಸ್‌ಪ್ಲೇಯನ್ನು ಹೊಂದಿರುವ ಪ್ರಥಮ ಐಫೋನ್ ಆಗಿದೆ.

By Shwetha Ps
|

ಇನ್ನೇನು ಕೆಲವೇ ದಿನಗಳಲ್ಲಿ ಐಫೋನ್ ಹೆಚ್ಚು ಸುಧಾರಿತ ಬಗೆಯಲ್ಲಿ ಹೊರಬರಲಿದೆ. ಆಪಲ್ ಈಗಾಗಲೇ ಈ ಕುರಿತು ಅಧಿಕೃತ ಪ್ರಕಟಣೆಗಳನ್ನು ಹೊರಡಿಸುತ್ತಿದ್ದು ಫೋನ್ ಲಾಂಚ್‌ಗಾಗಿ ನಿಗದಿಪಡಿಸಲಾದ ದಿನ ಸಪ್ಟೆಂಬರ್ 12, 2017 ಆಗಿದೆ. ಐಫೋನ್‌ 8 ನ ಆಗಮನಕ್ಕಾಗಿ ಆಪಲ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ 8 ನಲ್ಲಿ ನಿಮಗೊಂದು ಅಚ್ಚರಿ ಕಾದಿದೆ


ಇನ್‌ವೆಸ್ಟರ್ ಹೊರಡಿಸಿರುವ ಸುದ್ದಿಯ ಪ್ರಕಾರ ಐಫೋನ್‌ಗಳು ಎರಡು ದೊಡ್ಡ ಆವೃತ್ತಿಗಳಲ್ಲಿ ಹೊರಬೀಳಲಿದ್ದು ದೊಡ್ಡ ಓಲೆಡ್ ಡಿಸ್‌ಪ್ಲೇ ಇದರಲ್ಲಿದೆ. 5.85 ಇಂಚಿನ ಅಳತೆಯನ್ನು ಇದು ಪಡೆದುಕೊಂಡಿದ್ದು ಇನ್ನೊಂದು 6.44 ಇಂಚಿನ ಅಳತೆಯಲ್ಲಿದೆ. 2018 ಕ್ಕಾಗಿ ಆಪಲ್ ಇದುವರೆಗೆ ಬಿಡುಗಡೆ ಮಾಡದೇ ಇರುವ ಅತಿ ದೊಡ್ಡ ಸ್ಕ್ರೀನ್ 6 ಇಂಚಿನ ಓಲೆಡ್ ಡಿಸ್‌ಪ್ಲೇಯನ್ನು ಹೊರತರಲಿದೆ. ಐಫೋನ್ 8 ಕೂಡ 5.85 ಇಂಚಿನ ಓಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಸುದ್ದಿ ದೊರಕಿದೆ.

ಆಪಲ್ ತನ್ನ ಐಫೋನ್‌ಗಳಲ್ಲಿ ದೊಡ್ಡ ಸ್ಕ್ರೀನ್‌ಗಳನ್ನು ಬಿಡುಗಡೆ ಮಾಡಿ ಫೋನ್‌ನ ಅಂದವನ್ನು ಹೆಚ್ಚಿಸಲಿದೆ. ಬಳಕೆದಾರರಿಗೆ ಇನ್ನಷ್ಟು ವಿಸ್ತಾರವಾಗಿ ವಿಷಯಗಳನ್ನು ಗ್ರಹಿಸಿಕೊಳ್ಳಲು ದೊಡ್ಡ ಸ್ಕ್ರೀನ್ ನೆರವಾಗಲಿದೆ. ಅಂತೆಯೇ ತನ್ನ ಸ್ಪರ್ಧಿಗಳಿಗೆ ವಿಶೇಷ ರೀತಿಯಲ್ಲಿ ಪೈಪೋಟಿ ನೀಡಲು ಆಪಲ್ ಈ ಹಂತವನ್ನು ಅನುಸರಿಸುತ್ತಿದೆ.

ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ 8 ನಲ್ಲಿ ನಿಮಗೊಂದು ಅಚ್ಚರಿ ಕಾದಿದೆ
Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!

ಆಪಲ್ ಐಫೋನ್ 8 ಬಗ್ಗೆ ಮಾತನಾಡುವುದಾದರೆ ಇದರ ಜೊತೆಗೆ ಐಫೋನ್ 7 ಎಸ್ ಮತ್ತು 7 ಎಸ್ ಪ್ಲಸ್ ಅನ್ನು ಸಪ್ಟೆಂಬರ್ 12 ರಂದು ಆಪಲ್ ಹೊರತರಲಿದೆ. ಆಪಲ್‌ನ ಕ್ಯಾಂಪಸ್‌ನಲ್ಲಿರುವ ಸ್ಟೀವ್ ಜಾಬ್ ಥಿಯೇಟರ್‌ನಲ್ಲಿ ಈ ಈವೆಂಟ್ ಅನ್ನು ಕಂಪೆನಿ ಹಮ್ಮಿಕೊಂಡಿದೆ. 512 ಜಿಬಿ ಸಂಗ್ರಹಣೆ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಳ್ಳಲಿದೆ.

ಐಫೋನ್ 8 ಪೂರ್ಣ ಪರದೆಯುಳ್ಳ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿರುವ ಓಲೆಡ್ ಡಿಸ್‌ಪ್ಲೇಯನ್ನು ಹೊಂದಿರುವ ಪ್ರಥಮ ಐಫೋನ್ ಆಗಿದೆ.

ಜಿಯೋ-ಏರ್‌ಟೆಲ್-ವೊಡಾಗೆ ನೇರ ಚಾಲೆಂಜ್: ಐಡಿಯಾದಿಂದ ಸುಪರ್ ಆಫರ್ಜಿಯೋ-ಏರ್‌ಟೆಲ್-ವೊಡಾಗೆ ನೇರ ಚಾಲೆಂಜ್: ಐಡಿಯಾದಿಂದ ಸುಪರ್ ಆಫರ್

Best Mobiles in India

Read more about:
English summary
The next year’s Apple iPhone 9 will boast big 6-inch displays, claimed by a report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X