Home
ಸುದ್ದಿಜಾಲ

1.56 ಕೋಟಿ ರೂ.ಗಳಿಗೆ ಸೇಲ್‌ ಆಯ್ತು ಮೊದಲ ತಲೆಮಾರಿನ ಐಫೋನ್‌! ಯಾಕಿಷ್ಟು ಕ್ರೇಜ್‌ ಅಂತೀರಾ?

ಇದನ್ನು ಕ್ರೇಜ್‌ ಅನ್ನಬೇಕೋ ಇಲ್ಲ ಆ ಡಿವೈಸ್‌ಗಿರುವ ಜನಪ್ರಿಯತೆ ಅನ್ನಬೆಕೋ ತಿಳಿಯುತ್ತಿಲ್ಲ. ಯಾಕಂದ್ರೆ 2007ರಲ್ಲಿ ಬಿಡುಗಡೆಯಾಗಿದ್ದ ಹಳೆಯ ಆಪಲ್‌ ಐಫೋನ್‌ ಇದೀಗ ಬರೋಬ್ಬರಿ 1.56 ಕೋಟಿ ರೂ.ಗಳಿಗೆ ಹರಾಜಾಗಿದೆ. ಇದು ಈ ಫೋನ್‌ ಬಿಡುಗಡೆಯಾಗಿದ್ದಾಗ ಹೊಂದಿದ್ದ ಮೂಲಬೆಲೆಗಿಂತ 300 ಪಟ್ಟು ಹೆಚ್ಚಿದೆ ಅಂದರೆ ನೀವೇ ಊಹಿಸಿಕೊಳ್ಳಿರಿ.

ಹೌದು, ಆಪಲ್‌ ಕಂಪೆನಿಯ ಮೊದಲ ಐಫೋನ್‌ 2007ರಲ್ಲಿ ಬಿಡುಗಡೆಯಾಗಿತ್ತು. ಅಂದಿನ ಮೊದಲ ಐಫೋನ್‌ ಇದೀಗ ಹರಾಜಿನಲ್ಲಿ ಭಾರಿ ಬೆಲೆಗೆ ಮಾರಾಟವಾಗಿದೆ. ಈ ಮೂಲಕ ಐಫೋನ್‌ಗಳಿಗಿರುವ ಕ್ರೇಜ್‌ ಎಂತಹದ್ದು ಅನ್ನೊದನ್ನ ಮತ್ತೊಮ್ಮೆ ನಿರೂಪಿಸಿದೆ. ಅಷ್ಟಕ್ಕೂ ಮೊದಲ ಐಫೋನ್‌ ಮೇಲೆ ಯಾಕಿಷ್ಟು ಪ್ರೀತಿ? ಹರಾಜಿನಲ್ಲಿ ಇಷ್ಟೊಂದು ಬೆಲೆಗೆ ಬಿಕರಿ ಆಗೋದಕ್ಕೆ ಕಾರಣಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

1.56 ಕೋಟಿ ರೂ.ಗಳಿಗೆ ಸೇಲ್‌ ಆಯ್ತು ಮೊದಲ ತಲೆಮಾರಿನ ಐಫೋನ್‌! ಯಾಕಿಷ್ಟು ಕ್ರೇಜ್‌?

ಮೊಬೈಲ್‌ ಮಾರುಕಟ್ಟೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ಆಪಲ್‌ ಕಂಪೆನಿಯ ಐಫೋನ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದೇ ಕಾರಣಕ್ಕೆ ಆಪಲ್‌ ಕಂಪೆನಿಯ ಪ್ರತಿ ಹೊಸ ಸರಣಿಯು ಘೋಷಣೆಯಾದ ದಿನದಿಂದಲೂ ಬಿಡುಗಡೆಯ ತನಕವೂ ಅದೇ ಕ್ರೇಜ್‌ ಉಳಿಸಿಕೊಂಡಿರುತ್ತದೆ. ಅಷ್ಟೇ ಅಲ್ಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಐಫೋನ್‌ಗಳು ಬಿಸಿದೋಸೆಯಂತೆ ಮಾರಾಟವಾಗೋದನ್ನು ನಾವು ನೋಡಿದ್ದೇವೆ. ಆದರೆ ಆಪಲ್‌ ಕಂಪೆನಿಯ ಮೊದಲ ತಲೆಮಾರಿನ ಐಫೋನ್‌ ಹರಾಜಿನಲ್ಲಿ 1.56 ಕೋಟಿ ರೂ.ಗಳಿಗೆ ಮಾರಾಟವಾಗಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಟೆಕ್‌ ಮಾರುಕಟ್ಟೆಯಲ್ಲಿ ಐಫೋನ್‌ಗಳಿಗಿರುವ ಕ್ರೇಜ್ ಇದೇ ಮೊದಲೇನಲ್ಲ. ಹೊಸ ಐಫೋನ್‌ ಮಾರುಕಟ್ಟೆಗೆ ಬರುವ ಮುನ್ನವೇ ಫ್ರಿ ಬುಕಿಂಗ್‌ನಲ್ಲಿಯೇ ಬಹುತೇಕ ಸೋಲ್ಡ್‌ಔಟ್‌ ಆಗಿರುತ್ತವೆ. ಹಾಗಂತ ಈ ಕ್ರೇಜ್‌ ಇಂದು ನೆನ್ನೆಯದಲ್ಲ, ಮೊದಲಿನಿಂದಲೂ ಇದೇ ಅನ್ನೊದಕ್ಕೆ ಮೊದಲ ತಲೆಮಾರಿನ ಐಫೋನ್‌ ಹರಾಜಿನಲ್ಲಿ ಪಡೆದುಕೊಂಡಿರುವ ಬೆಲೆಯೇ ಸಾಕ್ಷಿಯಾಗಿದೆ. ಸದ್ಯ ಈ ಹರಾಜು ಯುರೋಪ್‌ನಲ್ಲಿ ನಡೆದಿದ್ದು, ಹರಾಜಿನಲ್ಲಿ $190,372.80 (Rs 1.56 ಕೋಟಿ) ಪಡೆದುಕೊಂಡಿದೆ.

1.56 ಕೋಟಿ ರೂ.ಗಳಿಗೆ ಸೇಲ್‌ ಆಯ್ತು ಮೊದಲ ತಲೆಮಾರಿನ ಐಫೋನ್‌! ಯಾಕಿಷ್ಟು ಕ್ರೇಜ್‌?

ಸದ್ಯ ಹರಾಜಿನಲ್ಲಿ ಮಾರಾಟವಾಗಿರುವ ಮೊದಲ ತಲೆಮಾರಿನ ಐಫೋನ್‌ ಇನ್ನು ಕೂಡ ಫ್ಯಾಕ್ಟರಿ ಪ್ಯಾಕೇಜಿಂಗ್‌ನಲ್ಲಿದೆ. ಇದು 4GB ಮಾದರಿಯ ಐಫೋನ್‌ ಆಗಿದ್ದು, ಇನ್ನು ಕೂಡ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ. ಆಪಲ್‌ ಐಫೋನ್‌ ಪರಿಚಯಿಸಿದ್ದ ಆಗಿನ ಆಪಲ್‌ನ ಮುಖ್ಯ ಕಾರ್ಯನಿರ್ವಾಹಕ ಸ್ಟೀವ್ ಜಾಬ್ಸ್ ಅವರು ಐಫೋನ್ ಅನ್ನು ಅನಾವರಣಗೊಳಿಸಿದ 16 ವರ್ಷಗಳ ಸ್ಮರಣಾರ್ಥವಾಗಿ ಈ ವರ್ಷ ಮಹತ್ವದ ಹರಾಜನ್ನು ನಡೆಸಲಾಗಿದೆ.

ಇನ್ನು ಈ ಹರಾಜು $10,000 ಆರಂಭಿಕ ಬಿಡ್ ಮೂಲಕ ಪ್ರಾರಂಭವಾಗಿ ಒಟ್ಟು 28 ಬಿಡ್‌ಗಳನ್ನು ನಡೆಸಲಾಗಿದೆ. ಈ ಹರಾಜು ಈ ಹಿಂದೆ ಅಂದರೆ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಹರಾಜಿನ ನೆರಳಿನಲ್ಲೇ ನಡೆದಿದೆ. ಹಿಂದಿನ ಹರಾಜಿನಲ್ಲಿ ಮೊದಲ ತಲೆಮಾರಿನ ಮತ್ತೊ೦ದು ಐಫೋನ್‌ ಅನ್ನು ಬರೋಬ್ಬರಿ 53 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಇದನ್ನು ಯುಎಸ್ ಮೂಲದ LCG ಹರಾಜು ವೆಬ್‌ಸೈಟ್‌ನಲ್ಲಿ ಹರಾಜು ನಡೆಸಲಾಗಿತ್ತು.

ಇದಲ್ಲದೆ, ಮಾರ್ಚ್‌ನಲ್ಲಿ, ಕೂಡ ರೈಟ್ ಹರಾಜು ಎಂಬ ಇನ್ನೊಂದು ಸಂಸ್ಥೆಯು ಇದೇ ರೀತಿಯ ಮೊದಲ-ಪೀಳಿಗೆಯ ಐಫೋನ್‌ ಅನ್ನು $40,320 ಬೆಲೆಗೆ ಹರಾಜು ಮಾಡಿದ್ದು ಕೂಡ ಇತಿಹಾಸ. ಆದರೆ ಈ ಹಿಂದಿನ ಎಲ್ಲಾ ಹರಾಜಿನ ದಾಖಲೆಗಳನ್ನು ಇದೀಗ ಮುರಿದುಹಾಖಿದ್ದು, ಮೊದಲ ತಲೆಮಾರಿನ ಮೊದಲ ಐಫೋನ್‌ ಇದೀಗ ಕೋಟಿ ಬೆಲೆಗೆ ಹರಾಜಾಗುವ ಮೂಲಕ ಎಲ್ಲರ ಗಮನಸೆಳೆದಿದೆ. ಇನ್ನು ಈ ನಿರ್ದಿಷ್ಟ ಐಫೋನ್ ಮಾದರಿಯ ವಿರಳತೆ ಮತ್ತು ಕೊರತೆಯು ಐಫೋನ್ ಸಂಗ್ರಾಹಕರಿಗೆ ನಿಜವಾದ "ಹೋಲಿ ಗ್ರೇಲ್" ಅನ್ನು ಮಾಡುತ್ತದೆ ಎನ್ನಲಾಗಿದೆ.

Best Mobiles in India

English summary
Apple iPhone from 2007 sold for record Rs 1.56 crore in auction! What a craze?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+