Just In
- 5 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 6 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 7 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 9 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಪಂದ್ಯಕ್ಕಾಗಿ ಲಕ್ನೋಗೆ ಬಂದಿಳಿದ ಹಾರ್ದಿಕ್ ಪಡೆ
- Movies
ಅತಿಥಿ ಪಾತ್ರದ ಮೂಲಕ ನಟನೆಗೆ ಮರಳಿದ ಸನಾತನಿ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಪಲ್‌ನ ಎಲ್ಲಾ ಪ್ರಾಡಕ್ಟ್‌ಗಳಲ್ಲಿ 'i' ಎಂಬುದರ ರಹಸ್ಯ ಅರ್ಥ ಇದೇನೇ...!
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ದಿನನಿತ್ಯ ಜೀವನದ ಮೂಲಭೂತ ವಸ್ತುಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ನಿಂದ ಯಾರನ್ನು ಬೇಕಾದರೂ ಯಾವುದೇ ಸಂದರ್ಭಗಳಲ್ಲಿ ಸಂಪರ್ಕಿಸುವ ಉಪಯೋಗವಿದೆ. ಅಷ್ಟು ಮಾತ್ರವಲ್ಲದೇ ಅಂಗೈಯಲ್ಲಿ ಎಲ್ಲಾ ರೀತಿಯ ಮನರಂಜನೆ ಪಡೆಯುವ ಅವಕಾಶವು ಸಹ ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗಿದೆ. ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಇಂದು ಎಲ್ಲರ ಕಣ್ಣು ಇರುವುದು ಐಫೋನ್(iPhone) ಮೇಲೆ. ಎಷ್ಟೋ ಜನರಿಗೆ ಐಫೋನ್ ಕೊಳ್ಳುವುದು ಒಂದು ರೀತಿಯ ಮಹಾದಾಸೆಯು ಸಹ ಆಗಿದೆ.
ಅಂದಹಾಗೆ ಆಪಲ್ ಕಂಪನಿಯ ಐಫೋನ್(iPhone) ಅನ್ನು ಹಲವರು ಬಳಸಿರಬಹುದು ಅಥವಾ ಇನ್ನೂ ಬಳಸದೇ ಅದರ ಬಳಕೆ ಬಗ್ಗೆ ಆಕಾಂಕ್ಷೆ ಹೊಂದಿರುವವರು ಇರಬಹುದು. ಆಪಲ್‌ನ ಐಫೋನ್(iPhone) ಪ್ರಿಯರಿಗೆ 'iPhone' ನಲ್ಲಿ 'i' ಎಂದರೇ ಏನು ಎಂಬ ಬಗ್ಗೆ ಕುತೂಹಲ ಹುಟ್ಟಿದೆ. ಅಂದ್ರೆ 'i' ಎಂಬುದರ ಸಂಕ್ಷಿಪ್ತದ ಬಗ್ಗೆ ಐಫೋನ್ ಪ್ರಿಯರಿಗೆ ಮಾಹಿತಿ ಬೇಕಂತೆ. ಆದ್ದರಿಂದ ಇಂದಿನ ಲೇಖನದಲ್ಲಿ ಐಫೋನ್ ಪ್ರಿಯರೆಲ್ಲಾ iPhone' ನಲ್ಲಿ 'i' ಎಂದರೇ ಏನು ಎಂಬುದನ್ನು ಸ್ಲೈಡರ್ ಕ್ಲಿಕ್ಕಿಸಿ ಓದಿರಿ.

ಐಫೋನ್ ಲುಕ್
ಹೆಚ್ಚಿನ ಸಂಖ್ಯೆಯ ಜನರು ಆಪಲ್ ಪ್ರಾಡಕ್ಟ್ ಅನ್ನು ಚಾಯ್ಸ್ ಮಾಡಲು ಇರುವ ಪ್ರಮುಖ ಕಾರಣ ಆಪಲ್ ಪ್ರಾಡಕ್ಟ್‌ಗಳ ಅದ್ಭುತವಾದ ಲುಕ್ ಆಗಿದೆ. ಅದಲ್ಲದೇ ಆಪಲ್ ಪ್ರಾಡಕ್ಟ್‌ಗಳು ವಿಶೇಷ ಫೀಚರ್, ಉತ್ತಮ ಹಾರ್ಡ್‌ವೇರ್ ಅನ್ನು ಸಹ ಹೊಂದಿರುವುದರಿಂದ ಹೆಚ್ಚು ಆಕರ್ಷಿಸುತ್ತವೆ.

ಆಪಲ್ ಕಂಪನಿ ಸ್ಥಾಪನೆ
ಆಪಲ್ ಕಂಪನಿಯನ್ನು 1976 ರ ಏಪ್ರಿಲ್ 1 ರಂದು ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್'ರವರು ಸ್ಥಾಪನೆ ಮಾಡಿದರು. ಇಂದು ಪ್ರಪಂಚದಾದ್ಯಂತದ ಜನರಿಗೆ ಆಪಲ್ ಬ್ರ್ಯಾಂಡ್‌ನ ಐಫೋನ್, ಐಪ್ಯಾಡ್, ಐಪೋಡ್, ಐಟ್ಯೂನ್ಸ್ ಮತ್ತು ಇತರೆ ಪ್ರಾಡಕ್ಟ್‌ಗಳು ಪರಿಚಿತವಾಗಿದ್ದು ದಿನನಿತ್ಯ ಜೀವನದಲ್ಲಿ ಬಳಸಲಾಗುತ್ತಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಮ್ಯಾಕ್ (iMac)
1998 ರಲ್ಲಿ ಐಮ್ಯಾಕ್ಸ್ (iMac) ಆಪಲ್ ಕಂಪನಿಯಿಂದ ಬಿಡುಗಡೆಯಾಯಿತು. ಎಲ್ಲರೂ ಗಮನಿಸಬೇಕಾದ ಮಾಹಿತಿ ಎಂದರೆ ಆಪಲ್‌ನ ಎಲ್ಲಾ ಪ್ರಾಡಕ್ಟ್‌ಗಳಲ್ಲಿ "i' ಅನ್ನು ಪೂರ್ವ ಅಕ್ಷರವಾಗಿ ಬಳಸಲಾಗುತ್ತದೆ. ಬಹುಶಃ ಬಹುಸಂಖ್ಯಾತ ಆಪಲ್ ಪ್ರಿಯರು ಆಪಲ್ ಪ್ರಾಡಕ್ಟ್‌ಗಳಲ್ಲಿನ ಮೊದಲ ಅಕ್ಷರ 'i' ಎಲ್ಲಾ ಪ್ರಾಡಕ್ಟ್‌ಗಳಲ್ಲು ಇರುವುದು ಏಕೆ ಎಂದು ಅಲೋಚಿಸಿಲ್ಲ ಎನಿಸುತ್ತದೆ. ಹಾಗಾದ್ರೆ 'i' ಅಂದ್ರೆ ಏನು ತಿಳಿಯಲು ಮುಂದಿನ ಸ್ಲೈಡರ್ ಕ್ಲಿಕ್ಕಿಸಿ ಓದಿರಿ

'iPhone' ನಲ್ಲಿ 'i' ಎಂದರೆ ಏನು?
ಆಪಲ್‌ನ ಎಲ್ಲಾ ಪ್ರಾಡಕ್ಟ್‌ಗಳಲ್ಲಿ 'i' ಎಂಬುದು 'Internet' ಎಂದಾಗಿದೆ. ಈ ಮಾಹಿತಿಯನ್ನು ಸ್ಟೀವ್ ಜಾಬ್ಸ್'ರವರು 1998 ರಲ್ಲಿ ಐಮ್ಯಾಕ್ (iMac) ಅನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಹೇಳಿದ್ದರು. ಅಂದಹಾಗೆ ಐಮ್ಯಾಕ್ ಅನ್ನು ವಿಶೇಷವಾಗಿ ವೇಗದ ಇಂಟರ್ನೆಟ್ ಆಕ್ಸೆಸ್‌ಗಾಗಿ ವಿನ್ಯಾಸ ಮಾಡಲಾಗಿದೆ.

ಸ್ಟೀವ್ ಜಾಬ್ಸ್ ಹೇಳಿದ್ದೇನು?
"ಐಮ್ಯಾಕ್ ವಿಶೇಷವಾಗಿ ವೇಗದ ಇಂಟರ್ನೆಟ್ ಆಕ್ಸೆಸ್ ಮಾಡುವ ಫೀಚರ್‌ಜೊತೆಗೆ 'ಮ್ಯಾಕಿಂತೋಷ್'(Macintosh)' ಪರ್ಸನಲ್ ಕಂಪ್ಯೂಟರ್‌ನ ಸರಳ ಫೀಚರ್ ಆಗಿ ಬಂದಿತು" ಎಂದು ಸ್ಟೀವ್ ಜಾಬ್ಸ್ ಹೇಳಿದ್ದಾರೆ. "ನಾವು ಐಮ್ಯಾಕ್ ಅನ್ನು ಗ್ರಾಹಕರ ನಂ 1 ಪ್ರಾಡಕ್ಟ್ ಆಯ್ಕೆಯಾಗುವಂತೆ ಗುರಿಹೊಂದಿದ್ದೆವು. ಅಲ್ಲದೇ ಸರಳವಾಗಿ ಇಂಟರ್ನೆಟ್ ವೇಗಗೊಳಿಸುವ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಇದಾಗಿರಬೇಕೆಂದು ಗುರಿ ಹೊಂದಿದ್ದರಂತೆ".

'i' ಎಂದರೇ ಸ್ಟೀವ್ ಜಾಬ್ಸ್ ಹೇಳಿದ ಮಾಹಿತಿ ಏನು ಗೊತ್ತೇ?
ಆಪಲ್‌ನ ಪ್ರಾಡಕ್ಟ್‌ಗಳಲ್ಲಿ 'i' ಎಂಬ ಪೂರ್ವ ಅಕ್ಷರವು ವಯಕ್ತಿಕ, ಆದೇಶಿಸು, ಮಾಹಿತಿ, ಸ್ಫೂರ್ತಿ (individual, instruct, inform and inspire) ಎಂಬುದನ್ನು ಸಹ ಸಂಕ್ಷಿಪ್ತ ನೀಡುತ್ತದೆ ಎಂಬುದನ್ನು ಸ್ಟೀವ್ ಜಾಬ್ಸ್'ರವರೇ ಸ್ಲೈಡ್ ಪ್ರದರ್ಶನದಲ್ಲಿ ಹೇಳಿದ್ದರು. ಡಿವೈಸ್‌ಗಳು ಹೆಚ್ಚಾಗಿ ಕಲಿಸುವ ಬಗ್ಗೆ ಗಮನಹರಿಸುತ್ತವೆ. "ನಾವುಗಳು ಸಹ ವಯಕ್ತಿಕ ಕಂಪ್ಯೂಟರ್ ಕಂಪನಿ, ಐಮ್ಯಾಕ್ ಪ್ರಾಡಕ್ಟ್ ನೆಟ್‌ವರ್ಕ್‌ಗಾಗಿ ಉತ್ಪಾದನೆಯಾಗಿದ್ದು, ಇದು ಸಹ ಅತ್ಯುತ್ತಮ ಅದ್ವಿತೀಯ ಉತ್ಪನ್ನವಾಗಿದೆ ".

'i' ತೆಗೆದಲ್ಲಿ ಆಪಲ್ ಪ್ರಾಡಕ್ಟ್‌ಗಳು
ಪ್ರಖ್ಯಾತ 'i' ಪೂರ್ವ ಅಕ್ಷರವನ್ನು ಆಪಲ್ ಕಂಪನಿ ತೆಗೆದಲ್ಲಿ ಇತ್ತೀಚಿನ ಆಪಲ್ ಪ್ರಾಡಕ್ಟ್‌ಗಳನ್ನು ಆಪಲ್ ವಾಚ್, ಆಪಲ್ ಟಿವಿ ಎಂದು ಕರೆಯಲಾಗುತ್ತಿದೆ. ಕಾರಣ ನಾವು ಎಲ್ಲಾ ಡಿವೈಸ್‌ಗಳಿಂದಲೂ ಇಂಟರ್ನೆಟ್‌ಗೆ ಕನೆಕ್ಟ್ ಆಗೇ ಆಗುತ್ತೀವಿ ಎಂಬ ಕಾರಣದಿಂದ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470