Home
ಸುದ್ದಿಜಾಲ

ಇಂದು iPhone SE 4 ಲಾಂಚ್: ಎಷ್ಟು ಐಫೋನ್ ಬರಲಿವೆ.. ಲೈವ್ ವೀಕ್ಷಣೆ ಹೇಗೆ? ಬೆಲೆ ಲೀಕ್

ಐಫೋನ್ SE 4 ಬಿಡುಗಡೆ ದಿನ ಕೊನೆಗೂ ಬಂದಿದೆ. ಆಪಲ್ ಇಂದು ಈ ವರ್ಷದ (2025) ತನ್ನ ಮೊದಲ ಸಮಾರಂಭವನ್ನು ಆಯೋಜಿದೆ. ಹೌದು, ಕಂಪನಿಯು ಹೊಸ ಐಫೋನ್ SE 4 ಅನ್ನು ಟೆಕ್ ಜಗತ್ತಿನ ಮುಂದೆ ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಕಾರ್ಯಕ್ರಮದಲ್ಲಿ ಆಪಲ್ ಯಾವೆಲ್ಲಾ ಸಾಧನಗಳನ್ನು ಬಿಡುಗಡೆ ಮಾಡಲಿದೆ ಎಂಬ ಬಗ್ಗೆ ಈವರೆಗೆ ಮಾಹಿತಿ ನೀಡಿಲ್ಲ. ಆದರೆ, ಆಪಲ್ ಸಿಇಒ ಟಿಮ್ ಕುಕ್ ಅವರ ಟೀಸರ್ ಒಂದು ವಿಷಯದ ಬಗ್ಗೆ ಸುಳಿವು ನೀಡಿದೆ. ಬನ್ನಿ, ಈ ಸಮಾರಂಭವನ್ನು ಲೈವ್ ವೀಕ್ಷಿಸುವುದು ಎಲ್ಲಿ? ಭಾರತದಲ್ಲಿ ಹೊಸ ಐಫೋನ್ ಬೆಲೆ ಎಷ್ಟು? ಎಂಬಿತ್ಯಾದಿ ವಿವರಗಳು ಇಲ್ಲಿದೆ.

ಆಪಲ್​ ಕಂಪನಿ ಕಳೆದ ವರ್ಷ ಬಹುನಿರೀಕ್ಷಿತ ಐಫೋನ್​ 16 ಸರಣಿಯನ್ನು ಬಿಡುಗಡೆ ಮಾಡಿತ್ತು. ಇಂದು (ಫೆಬ್ರವರಿ 19) ಅಗ್ಗದ ಆಪಲ್ ಐಫೋನ್ SE 4 (iPhone SE 4) ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡುತ್ತಿದೆ. ಐಫೋನ್ ಪ್ರಿಯರು ಈ ಹೊಸ ಫೋನಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಬೆಲೆ ಕಡಿಮೆ ಇರುತ್ತದೆ ಮತ್ತು ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಐಫೋನ್ SE 3 ಫೋನಿಗೆ ಹೋಲಿಸಿದರೆ ಇದು ದೊಡ್ಡ ಡಿಸ್ಪ್ಲೇ, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಹೊಂದಿದೆ.

ಇಂದು iPhone SE 4 ಬಿಡುಗಡೆ: ಲೈವ್ ವೀಕ್ಷಣೆ ಹೇಗೆ? ಬೆಲೆ, ವಿಶೇಷತೆಗಳೇನು?

ಐಫೋನ್ SE 4 ಬಿಡುಗಡೆ ಕಾರ್ಯಕ್ರಮ ವೀಕ್ಷಣೆ ಎಲ್ಲಿ?

ಆಪಲ್‌ನ ಈ (ಫೆಬ್ರವರಿ 19) ಸಮಾರಂವನ್ನು ಕಂಪನಿಯ YouTube ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಸೋಶಿಯಲ್ ಮೀಡಿಯಾಗಳಲ್ಲಿಯೂ ಲೈವ್ ವೀಕ್ಷಿಸಬಹುದು. ಇದು ಭಾರತೀಯ ಕಾಲಮಾನ ರಾತ್ರಿ 10.30 ರ ಸುಮಾರಿಗೆ ಪ್ರಾರಂಭವಾಗಲಿದೆ. ಕಂಪನಿಯಿಂದ ಕೆಲವು ಹೊಸ ಅಪ್ಡೇಟ್‌ ನಿರೀಕ್ಷಿಸಬಹುದು.

ಭಾರತದಲ್ಲಿ ಐಫೋನ್ SE 4 ಬೆಲೆ (ನಿರೀಕ್ಷಿತ)

ಮೊದಲೇ ಹೇಳಿದಂತೆ, ಐಫೋನ್ SE 4 ಬಹಳಷ್ಟು ಜನರನ್ನು ಆಕರ್ಷಿಸಿದೆ. ಇದರ ಬೆಲೆ ಐಫೋನ್ 15 ಗಿಂತಲೂ ಕಡಿಮೆ ಇರುತ್ತದೆ. ಈ ಐಫೋನನ್ನು 43,490 ರೂ. ($499) ಬೆಲೆಗೆ ಪರಿಚಯಿಸುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಐಫೋನ್ SE 4 ಬೆಲೆ 50 ಸಾವಿರ ರೂ.ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಆಪಲ್‌ ಐಫೋನ್ SE 4 ಜೊತೆಗೆ ಹೊಸ ಪವರ್‌ಬೀಟ್ಸ್ ಪ್ರೊ 2 ಇಯರ್‌ಬಡ್‌ ಸಹ ಬಿಡುಗಡೆ ಮಾಡಲಿದೆ.

ಇಂದು iPhone SE 4 ಬಿಡುಗಡೆ: ಲೈವ್ ವೀಕ್ಷಣೆ ಹೇಗೆ? ಬೆಲೆ, ವಿಶೇಷತೆಗಳೇನು?

ಹೊಸ ಐಫೋನ್ SE 4 ಫೀಚರ್ಸ್‌

ಐಫೋನ್ SE 4 ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಈ ಕಾಂಪ್ಯಾಕ್ಟ್ ಐಫೋನ್ ಡಿಸ್ಪ್ಲೇಯನ್ನು OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿರಲಿದೆ. ಇದು 460ppi ಪಿಕ್ಸೆಲ್ ಸಾಂದ್ರತೆಯನ್ನು ಬೆಂಬಲಿಸಲಿದೆ. ಸಪೋರ್ಟ್‌ ಮಾಡಲಿದೆ. ಮುಂಬರುವ ಐಫೋನ್ SE 4 ಮೊಬೈಲ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ. ಇದು ಫ್ಲ್ಯಾಷ್‌ ಲೈಟ್ ಜೊತೆಗೆ ಬರುತ್ತದೆ. ಈ ಹೊಸ ಐಫೋನ್ SE 4 ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.

ಈ ಅಗ್ಗದ ಐಫೋನ್ SE 4 ಅನ್ನು ಬಯೋನಿಕ್ A18 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿಶೇಷವಾಗಿ ಐಫೋನ್ 16 ಬಯೋನಿಕ್ A18 ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಸರಾಗವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಐಫೋನ್ 16 ಸರಣಿಯಂತೆ, ಐಫೋನ್ SE 4 ಸಹ 8GB RAM ಅನ್ನು ಹೊಂದಿರುತ್ತದೆ. ಐಫೋನ್ SE 4 ಅನ್ನು ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗುವುದು.

Best Mobiles in India

English summary
Apple iPhone SE 4 to launch today: Where To Watch Live, Expected Price, features And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+