ಐಫೋನ್‌ನಲ್ಲಿ ಇನ್ಮುಂದೆ ಸಿರಿ ಬಳಸಿ ವಾಟ್ಸ್‌ಆಪ್ ಗ್ರೂಪ್ ಮೆಸೇಜ್ ಕಳುಹಿಸಿ

By GizBot Bureau
|

ವಾಟ್ಸ್ ಆಪ್ ನಲ್ಲಿ ಆಗುತ್ತಿರುವ ಬದಲಾವಣೆಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದ್ದು ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯನ್ನ ವಾಟ್ಸ್ ಆಪ್ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ಈಗ ಆ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಐಫೋನ್ ನ ವಾಟ್ಸ್ ಆಪ್ ಅಪ್ ಡೇಟ್ ಆಗಿದ್ದು ಈಗ ಅದು ಬಳಕೆದಾರರಿಗೆ ವಾಟ್ಸ್ ಆಪ್ ಗ್ರೂಪ್ ಮೆಸೇಜ್ ಗಳನ್ನು ಸಿರಿಯಲ್ಲಿ ಮಾತನಾಡುವ ಮೂಲಕ ನೇರವಾಗಿ ಕಳಿಸುವ ಸೌಲಭ್ಯವನ್ನು ಒದಗಿಸುತ್ತಿದೆ. ಈ ಹಿಂದೆ ಏಕಮಾತ್ರ ವ್ಯಕ್ತಿಗೆ ಮೆಸೇಜ್ ಕಳಿಸುವಂತೆ ವಾಟ್ಸ್ ಆಪ್ ನ್ನು ಸಿರಿ ಜೊತೆ ಏಕೀಕರಣಗೊಳಿಸಲಾಗಿತ್ತು. ಈಗ ಗ್ರೂಪ್ ಮೆಸೇಜ್ ಕಳಿಸುವಂತೆಯೂ ಕೂಡ ಅಪ್ ಡೇಟ್ ಮಾಡಲಾಗಿದೆ.

ಐಫೋನ್‌ನಲ್ಲಿ ಇನ್ಮುಂದೆ ಸಿರಿ ಬಳಸಿ ವಾಟ್ಸ್‌ಆಪ್ ಗ್ರೂಪ್ ಮೆಸೇಜ್ ಕಳುಹಿಸಿ

ಒಂದು ಗುಂಪಿಗೆ ಮೆಸೇಜ್ ಕಳಿಸಬೇಕು ಎಂದಾದರೆ ಕೇವಲ ನೀವು ಸಿರಿಯನ್ನು ಆಕ್ಟಿವೇಟ್ ಮಾಡಿದರಾಯ್ತು ಮತ್ತು ಸೆಂಡ್ ಮೆಸೇಜ್ ಟು ನಿರ್ಧಿಷ್ಟ ಗುಂಪಿನ ಹೆಸರನ್ನು ಹೇಳಿದರೆ ಆ ಗುಂಪಿಗೆ ಮೆಸೇಜ್ ಫಾರ್ವಡ್ ಆಗುತ್ತದೆ. ಸಿರಿಯು ನಿಮ್ಮ ಚಾಟ್ ಲಿಸ್ಟ್ ನಲ್ಲಿರುವ ಗುಂಪಿನ ಹೆಸರನ್ನು ಖಾತ್ರಿಪಡಿಸಿಕೊಳ್ಳುತ್ತದೆ ಮತ್ತು ನೀವು ಯಾವ ಮೆಸೇಜ್ ಕಳಿಸಬೇಕು ಎಂದುಕೊಂಡಿದ್ದೀರೋ ಅದನ್ನು ಹೇಳಿದರೆ ಒಮ್ಮೆಲೆ ಮೆಸೇಜ್ ಸೆಂಡ್ ಆಗುತ್ತದೆ.

ಕುತೂಹಲಕಾರಿ ವಿಚಾರವೆಂದರೆ, ಹೊಸ ಅಪ್ ಡೇಟ್ ನಲ್ಲಿ ಮೀಡಿಯಾ ಪ್ರೀವ್ಯೂ ವೈಶಿಷ್ಟ್ಯತೆಯು ಇದು ಐಓಎಸ್ ನೋಟಿಫಿಕೇಷನ್ ಗಳನ್ನು ಇದು ಒದಗಿಸುತ್ತದೆ. ಇದರಿಂದಾಗಿ ನೀವು ಪ್ರತಿ ಬಾರಿಯೂ ವಾಟ್ಸ್ ಆಪ್ ನ್ನು ಐಫೋನ್ ನಲ್ಲಿ ತೆರೆಯುವ ಅಗತ್ಯವಿಲ್ಲ. ನೋಟಿಫಿಕೇಷನ್ ನೋಡಿಕೊಂಡು ಅಗತ್ಯವಿದ್ದರೆ ಮಾತ್ರ ತೆರೆಯಬಹುದು. ನೋಟಿಫಿಕೇಷನ್ ನಲ್ಲೇ ಮೆಸೇಜ್ ನ ಪ್ರಿವ್ಯೂ ನಿಮಗೆ ಲಭ್ಯವಾಗುತ್ತದೆ.

ಈ ವೈಶಿಷ್ಟ್ಯವನ್ನು ಐಓಎಸ್ ನಲ್ಲಿ ಹಲವು ದಿನಗಳಿಂದ ಟೆಸ್ಟಿಂಗ್ ಗೆ ಒಳಪಡಿಸಿ ಈಗ ಬಿಡುಗಡೆಗೊಳಿಸಲಾಗುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ಐಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಮೀಡಿಯಾ ಫೈಲ್ ಗಳನ್ನು ಬಳಕೆದಾರರು ಅಗತ್ಯವಿದ್ದರೆ ನೋಟಿಫಿಕೇಷನ್ ಮೂಲಕವೇ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು. ಆದರೆ ಈ ಹೊಸ ವೈಶಿಷ್ಟ್ಯಗಳು ಐಓಎಸ್ 10 ಮತ್ತು ಮೇಲಿನ ವರ್ಷನ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಭಾರತದಲ್ಲಿ, ವಾಟ್ಸ್ ಆಪ್ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ಧ ಸಮರ ಸಾರಿದೆ ಮತ್ತು ಆ ನಿಟ್ಟಿನಲ್ಲಿ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಮುಂದಾಗುತ್ತಿದೆ. ಹೊಸದೊಂದು ವೈಶಿಷ್ಟ್ಯತೆಯ ಬಗ್ಗೆ ಕಂಪೆನಿ ಬಹಳ ಪರೀಕ್ಷೆಗಳನ್ನು ಮಾಡುತ್ತಿದೆ ಅದುವೇ 'ಸಸ್ಪೀಷಿಯಸ್ ಲಿಂಕ್ ಡಿಟೆಕ್ಷನ್’ .

ವರದಿಯ ಪ್ರಕಾರ wabetainfo.com ವೆಬ್ ಸೈಟ್ ವಾಟ್ಸ್ ಆಪ್ ನಲ್ಲಿ ಮುಂಬರುವ ಬದಲಾವಣೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ಪಡೆಯುತ್ತಿದ್ದು, ಬಳಕೆದಾರರಿಗೆ ಯಾವುದೇ ಅನುಮಾನಾಸ್ಪದ ಅಥವಾ ತೊಂದರೆದಾಯಕವಾದ ಲಿಂಕ್ ಗಳು ವಾಟ್ಸ್ ಆಪ್ ನಲ್ಲಿ ಬಂದರೆ ಕೂಡಲೇ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುವ ಒಂದು ವಿಶಿಷ್ಟ ವೈಶಿಷ್ಟ್ಯತೆಯ ಬಗ್ಗೆ ವಾಟ್ಸ್ ಆಪ್ ಬಹಳವಾಗಿ ತಲೆಕೆಡಿಸಿಕೊಂಡಿದೆ ಮತ್ತು ಪರೀಕ್ಷೆಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಆ ಸೌಲಭ್ಯ ಲಭ್ಯವಾಗುವ ಸಾಧ್ಯತೆಗಳಿವೆ.

ಹೆಸರೇ ಸೂಚಿಸುವಂತೆ, ಈ ವೈಶಿಷ್ಟ್ಯವು ಒಂದು ವೇಳೆ ಲಿಂಕ್ ನಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಂದ್ದರೆ ಅದನ್ನು ಬಳಕೆದಾರರಿಗೆ ವಾರ್ನ್ ಮಾಡಿ ತಿಳಿಸುತ್ತದೆ. ಸಸ್ಪೀಷಿಯಸ್ ಲಿಂಕ್ ವೈಶಿಷ್ಟ್ಯವು ಸ್ಪ್ಯಾಮ್ ಲಿಂಕ್ ಅಥವಾ ಡೇಂಜರಸ್ ಆಗಿರುವ ಮೆಸೇಜ್ ಗಳ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸಿ ಅವರು ಆ ಮೆಸೇಜನ್ನು ತೆರೆಯದಂತೆ ಸೂಚನೆಯನ್ನು ನೀಡುತ್ತದೆ.

ಐಫೋನ್‌ನಲ್ಲಿ ಇನ್ಮುಂದೆ ಸಿರಿ ಬಳಸಿ ವಾಟ್ಸ್‌ಆಪ್ ಗ್ರೂಪ್ ಮೆಸೇಜ್ ಕಳುಹಿಸಿ

ವಾಟ್ಸ್ ಆಪ್ ಪ್ರಕಟ ಪಡಿಸಿರುವಂತೆ ಸದ್ಯ ಭಾರತೀಯ ಬಳಕೆದಾರರು ವಾಟ್ಸ್ ಆಪ್ ನಲ್ಲಿ 5 ಕ್ಕಿಂತ ಹೆಚ್ಚು ಮೆಸೇಜ್ ಗಳನ್ನು ಒಮ್ಮೆಲೆ ಫಾರ್ವಡ್ ಮಾಡುವ ಅವಕಾಶವಿರುವುದಿಲ್ಲ ಮತ್ತು ಕ್ವಿಕ್ ಫಾರ್ವರ್ಡ್ ಬಟನ್ ನ್ನು ಸದ್ಯ ಕಂಪೆನಿ ಇಲ್ಲಿನ ಬಳಕೆದಾರರಿಗೆ ರಿಮೂವ್ ಮಾಡಲಿದೆ. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲು ವಾಟ್ಸ್ ಆಪ್ ನಿರ್ಧಾರ ಮಾಡಿದೆ.
Best Mobiles in India

English summary
Apple iPhone users can now send WhatsApp group messages using Siri. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X