Home
ಸುದ್ದಿಜಾಲ

ನಿಮಗೆ ಗೊತ್ತೇ? ಆಪಲ್ ಐಫೋನ್ Xನ ಉತ್ಪಾದನಾ ವೆಚ್ಚ ಅದರ ಬೆಲೆಗಿಂತ 50% ಅಗ್ಗ!

ಐಫೋನ್ Xನ ಉತ್ಪಾದನೆಯಲ್ಲಿ ಬಳಸಲಾಗಿರುವ ಬಿಡಿ ಭಾಗಗಳ ಅಂದಾಜು ವೆಚ್ಚವನ್ನು ಕೂಡಿದರೆ ಉತ್ಪಾದನಾ ವೆಚ್ಚ ಪ್ರತೀ ಫೋನ್ ಗೆ $412.75 ಆಗಿದ್ದು ಅದರ ಬೆಲೆಗಿಂತ 59% ಅಗ್ಗವಾಗಿದೆ.

By Tejaswini P G

ನಮಗೆಲ್ಲಾ ತಿಳಿದಿರುವಂತೆ ಇದುವರೆಗೆ ಆಪಲ್ ಮಾರುಕಟ್ಟೆಗೆ ಬಿಟ್ಟಿರುವ ಫೋನ್ಗಳ ಫೈಕಿ ಐಫೋನ್ X ಅತ್ಯಂತ ದುಬಾರಿ ಫೋನ್ ಆಗಿದೆ. ಈ ದುಬಾರಿ ಫೋನ್ ಅನ್ನು ತಯಾರಿಸಲು ಆಪಲ್ ಗೆ ತಗಲುವ ವೆಚ್ಚ ಎಷ್ಟು ಎಂಬ ಅಂದಾಜು ನಿಮಗಿದೆಯೇ? ಮೊಬೈಲ್ ಉದ್ಯಮದ ಮೇಲೆ ಸದಾ ದೃಷ್ಟಿ ನೆಟ್ಟಿರುವ ಕೆಲವು ಚೀನೀಯರು ಈ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿದ್ದು ತನಿಖೆಯೊಂದನ್ನೇ ನಡೆಸಿದ್ದಾರೆ.

ನಿಮಗೆ ಗೊತ್ತೇ? ಆಪಲ್ ಐಫೋನ್ Xನ ಉತ್ಪಾದನಾ ವೆಚ್ಚ ಅದರ ಬೆಲೆಗಿಂತ 50% ಅಗ್ಗ!

ಆಪಲ್ ಐಫೋನ್ X ತಯಾರಿಸಲು ಬಳಸಿರುವ ಬಿಡಿ ಭಾಗಗಳ ಬೆಲೆಗಳ ಕುರಿತು ಮಾಹಿತಿಯನ್ನು ಕಲೆಹಾಕಿರುವ ಇವರು ಐಫೋನ್ X ಉತ್ಪಾದನಾ ವೆಚ್ಚವನ್ನು ಅಂದಾಜುಮಾಡಿದ್ದಾರೆ.

IChunt ನ ವರದಿಯ ಅನುಸಾರ ಐಫೋನ್ Xನ ತಯಾರಿಯ ಅಂದಾಜು ವೆಚ್ಚ ಪ್ರತೀ ಫೋನ್ ಗೆ $412.75. ಮಾರುಕಟ್ಟೆಯಲ್ಲಿ 64GB ಸ್ಟೋರೇಜ್ ಸಾಮರ್ಥ್ಯವುಳ್ಳ ಐಫೋನ್ X ನ ಮೂಲ ಆವೃತ್ತಿಯ ಬೆಲೆ $999 ಆಗಿದ್ದು, ಅದರ ಉತ್ಪಾದನಾ ವೆಚ್ಚ ಅದರ ಬೆಲೆಗಿಂತ ಶೇಕಡಾ 59% ರಷ್ಟು ಅಗ್ಗವಾಗಿದೆ! ನಮಗೆ ತಿಳಿದಿರುವಂತೆ ಐಫೋನ್ X ನ ಅತ್ಯಂತ ದುಬಾರಿ ಬಿಡಿ ಭಾಗವೆಂದರೆ ಅದರ 5.8 ಇಂಚ್ ಸೂಪರ್ ರೆಟೀನಾ ಡಿಸ್ಪ್ಲೇ.

ಈ ಡಿಸ್ಪ್ಲೇ ಸ್ಯಾಮ್ಸಂಗ್ ತಯಾರಿಸಿರುವ ಶ್ರೇಷ್ಠ OLED ಪ್ಯಾನಲ್ ಆಗಿದೆ. ಈ ಉದ್ಯಮದ ಪರಿಣಿತರ ಪ್ರಕಾರ ಆಪಲ್ ಒಂದು ಡಿಸ್ಪ್ಲೇ ಪ್ಯಾನಲ್ ಗೆ ಅಂದಾಜು $80 ಪಾವತಿಸಿದೆ. ಈ ಹಿಂದೆ ಬಂದ ವದಂತಿಗಳ ಪ್ರಕಾರ ಪ್ಯಾನಲ್ ಒಂದರ ಬೆಲೆ ಅಂದಾಜು $100 ರಿಂದ $120 ಎಂದಿತ್ತು.

ಡಿಸ್ಪ್ಲೇಯ ಹೊರತಾಗಿ, ಆಪಲ್ ಐಫೋನ್ Xನಲ್ಲಿದೆ ಇನ್ನೂ ಕೆಲವು ದುಬಾರಿ ಬಿಡಿ ಭಾಗಗಳು. ಐಫೋನ್ Xನಲ್ಲಿರುವ ನೂತನ ಆಪಲ್ ಎ11 ಬಯಾನಿಕ್ ಚಿಪ್ಸೆಟ್ ನ ಬೆಲೆ $26 ಪ್ರತೀ ಚಿಪ್. ಇದರೊಂದಿಗಿರುವ ಕ್ವಾಲ್ಕಮ್ ಮಾಡೆಲ್ ನ ಬೆಲೆ $18. ಇನ್ನು ಐಫೋನ್ Xನ ಫೇಸ್ ಐಡಿ ಸೆನ್ಸರ್ ನ ಬೆಲೆ $25 ಆಗಿದ್ದು, ಫೋನ್ ನ ಮುಂದಿರುವ ಗ್ಲಾಸ್ ಪ್ಯಾನಲ್ ನ ಬೆಲೆ $18.

ಇದರಲ್ಲಿ ಬಳಸಲಾಗಿರುವ ತೋಶಿಬಾದ NAND ಮೆಮೋರಿ ಮಾಡ್ಯೂಲ್ ನ ಬೆಲೆ 256GB ಆವೃತ್ತಿಗೆ $45 ಆಗಿದ್ದು, 3GB ರ್ಯಾಮ್ ನ ಬೆಲೆ $24. ಈ ಪಟ್ಟಿ ಇಲ್ಲಗೇ ಮುಗಿಯುವುದಿಲ್ಲ. ಇನ್ನೂ ಅನೇಕ ಬಿಡಿ ಭಾಗಗಳ ಬೆಲೆಯನ್ನು ಅವರು ಲೆಕ್ಕ ಹಾಕಿದ್ದಾರೆ.

ಹೀಗಿರುವಾಗ ಆಪಲ್ ಪ್ರತೀ ಐಫೋನ್ X ಮಾರಾಟವಾದಾಗ ಅದರಿಂದ 59% ಲಾಭ ಪಡೆಯಲಿದೆ ಎಂದು ನೀವು ಯೋಚಿಸುವುದು ಸಹಜ. ಆದರೆ ಅದು ನಿಜವಲ್ಲ. ಈ ಮೇಲಿನ ಲೆಕ್ಕಾಚಾರದಲ್ಲಿ ಕೆಲವು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಐಫೋನ್ Xನ ತಯಾರಿಯ ಖರ್ಚು, ಲಾಜಿಸ್ಟಿಕ್ಸ್ ವೆಚ್ಚ ,ಅದರ ತಂತ್ರಾಂಶ ಉತ್ಪಾದನಾ ವೆಚ್ಚ ಇತ್ಯಾದಿಗಳನ್ನು ಇಲ್ಲಿ ಗಣನೆಗೆ ಪಡೆದಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.

ಹಾಗೆಯೇ ಐಫೋನ್ X ನಂತೆಯೇ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನಲ್ಲೂ ಆಧುನಿಕ OLED ಡಿಸ್ಪ್ಲೇ ಬಳಸಲಾಗಿದೆ. ಆದರೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ಗೆ ಹೋಲಿಸಿದರೆ , ಐಫೋನ್ X ನ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S8 ನ ಉತ್ಪಾದನಾ ವೆಚ್ಚ $307.50 ಪ್ರತೀ ಫೋನ್ ಎಂದು ಅಂದಾಜುಪಡಿಸಲಾಗಿದ್ದು ಐಫೋನ್ Xನ ಉತ್ಪಾದನಾ ವೆಚ್ಚಕ್ಕಿಂತ ಇದು ಗಣನೀಯವಾಗಿ ಕಡಿಮೆಯಿದೆ.

Best Mobiles in India

English summary
Apple iPhone X’s production cost is estimated to be around $412.75, which is almost 60% cheaper than the retail price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+