Home
ಸುದ್ದಿಜಾಲ

ವಿಮಾನದ ಮೇಲಿಂದ ಕೆಳಗಡೆ ಬಿದ್ದ ಐಫೋನ್‌? ನಂತರ ಏನಾಯ್ತು ಗೊತ್ತಾ?

ಆಪಲ್‌ನ ಉತ್ಫನ್ನಗಳು ಗುಣಮಟ್ಟಕ್ಕೆ ಯಾಕೆ ಹೆಸರುವಾಸಿ ಅನ್ನೊದಕ್ಕೆ ಮತ್ತೊಂದು ಘಟನೆ ಇದೀಗ ಸಾಕ್ಷಿಯಾಗಿದೆ. ವಿಮಾನದ ಮೇಲಿಂದ ಕೆಳಗೆ ಬಿದ್ದ ಐಫೋನ್‌ ಯಾವುದೇ ರೀತಿಯಲ್ಲೂ ಡ್ಯಾಮೇಜ್‌ ಆಗದೇ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಸುದ್ದಿಯೊಂದು ವರದಿಯಾಗಿದೆ. ಡೈಮಂಡ್ ಏವಿಯೇಟರ್ಸ್ ವೇದಿಕೆಯಲ್ಲಿ ಡೇವಿಡ್ ಎಂಬ ಪೈಲಟ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ವಿಮಾನದಲ್ಲಿ ಹೋಗುವಾಗ ತನ್ನ ಐಫೋನ್ X 11,000 ಅಡಿಗಳಷ್ಟು ಕೆಳಗೆ ಬಿದ್ದರು ಯಾವುದೇ ರೀತಿಯಲ್ಲೂ ಡ್ಯಾಮೇಜ್‌ ಆಗಿರಲಿಲ್ಲ ಎಂದು ಹೇಳಿದ್ದಾನೆ.

ಆಪಲ್‌ ಐಫೋನ್‌

ಹೌದು, ಈ ಸುದ್ದಿ ನಿಜಕ್ಕೂ ಆಪಲ್‌ ಐಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಅಂತಾನೆ ಹೆಳಬಹುದು. ಯಾಕಂದ್ರೆ 11,000 ಅಡಿಗಳಷ್ಟು ಎತ್ತರದಿಂದ ಐಫೋನ್‌ ನೆಲಕ್ಕೆ ಬಿದ್ದರು ಯಾವುದೇ ರೀತಿಯ ಡ್ಯಾಮೇಜ್‌ ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಐಫೋನ್ X ಗ್ಲಾಸ್ ಫ್ರಂಟ್ ಮತ್ತು ಬ್ಯಾಕ್ ಪ್ಯಾನಲ್‌ನೊಂದಿಗೆ ಬರುತ್ತದೆ ಎಂಬ ಅಂಶದಿಂದ ಈ ಸುದ್ದಿ, ಎಲ್ಲರನ್ನೂ ಇನ್ನಷ್ಟು ವಿಸ್ಮಯಗೊಳಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏವಿಯೇಟರ್ಸ್

ಡೈಮಂಡ್ ಏವಿಯೇಟರ್ಸ್ ವೇದಿಕೆಯಲ್ಲಿ ಡೇವಿಡ್ ಎಂಬ ಪೈಲಟ್ ಈ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್‌ನಲ್ಲಿ, ಡೇವಿಡ್ ತನ್ನ ಡೈಮಂಡ್ ಡಿಎ 40 ವಿಮಾನವನ್ನು ಕೊಲೊರಾಡೋ ಸ್ಪ್ರಿಂಗ್ಸ್‌ನಿಂದ ಅಟ್ಲಾಂಟಾಗೆ ಹಾರಿಸಿದಾಗ, ಅವನು ತನ್ನ ಬಲಭಾಗದಲ್ಲಿ ಆಸಕ್ತಿದಾಯಕ ಮೋಡದ ರಚನೆಯ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಡೈಮಂಡ್ ಡಿಎ 40 ನಲ್ಲಿರುವ ಚಿಕ್ಕದಾದ ಕಿಟಕಿಗಳ ಮೂಲಕ ಮೋಡಗಳ ಚಿತ್ರವನ್ನು ಕ್ಲಿಕ್ಕಿಸಲು ಅವನು ತನ್ನ ಐಫೋನ್ ಎಕ್ಸ್ ತೆಗೆದಾಗ ಅದು ಅಚಾನಕ್‌ ಆಗಿ ಕೆಳಗಡೆ ಬಿದ್ದಿದೆ.

ಐಫೋನ್‌

ಸಾಮಾನ್ಯವಾಗಿ ವಿಮಾನದ ದೊಡ್ಡ ಪ್ಲೆಕ್ಸಿಗ್ಲಾಸ್ ಮೇಲಾವರಣದ ವಿರೂಪವಿಲ್ಲದೆ ಚಿತ್ರಗಳನ್ನು ತೆಗೆಯಲು ಅವಕಾಶ ಮಾಡಿಕೊಡಲಿದೆ. ಇಂತಹ ಸಮಯದಲ್ಲಿ ಐಫೋನ್‌ ಅನ್ನು ಕೆಳಗಡೆ ಬಿಳಿಸಿರುವುದಾಗಿ ಹೇಳಿದ್ದಾನೆ. ಡೇವಿಡ್ ಈ ರೀತಿ "ನೂರಾರು ಚಿತ್ರಗಳನ್ನು" ತೆಗೆದುಕೊಂಡಿದ್ದರೂ ಸಹ, ಆ ದಿನ ಅವನು ತನ್ನ ಐಫೋನ್ ಎಕ್ಸ್ ಅನ್ನು ಈ ಕಿಟಕಿಯ ಮೂಲಕ ಕಳೆದುಕೊಂಡಿದ್ದಾನೆ. ಆದರೆ ಮರುದಿನ ಬೆಳಿಗ್ಗೆ ಡೇವಿಡ್ ಕಳೆದುಹೋದ ಫೋನಿನಲ್ಲಿರುವ ಡೇಟಾವನ್ನು ದೂರದಿಂದಲೇ ಅಳಿಸಲು ಬಯಸಿದ್ದಾನೆ,ಆದರೆ ಅವನ ಐಫೋನ್ ಎಕ್ಸ್ ತನ್ನ ಸ್ಥಳವನ್ನು "ಬ್ಲೈಥ್ ಅರ್ಕಾನ್ಸಾಸ್ ಹತ್ತಿರ" ಇದೆ ಎಂಬ ಮಾಹಿತಿ ರವಾನಿಸಿದೆ.

ಡೇವಿಡ್

ಕುತೂಹಲದಿಂದ, ಡೇವಿಡ್ ತನ್ನ ಐಫೋನ್‌ ಕಳುಹಿಸಿದ್ದ ಲೊಕೇಶನ್‌ ಜಾಗವನ್ನು ನೋಡಲು ಅರ್ಕಾನ್ಸಾಸ್‌ಗೆ ಹಾರಲು ನಿರ್ಧರಿಸಿದರು. ಸೋಯಾಬೀನ್‌ನ ಹೊಲದಲ್ಲಿ ಗಂಟೆಗಳ ಕಾಲ ಸರ್ಚ್‌ ಮಾಡಿದ ನಂತರ ಐಫೋನ್‌ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ. ಐಫೋನ್ ದೊರೆತಾಗ ಅದರ ಮೇಲೆ ಯಾವುದೇ ಗೀರು ಇರಲಿಲ್ಲ, ನನ್ನ ಓಟರ್‌ಬಾಕ್ಸ್ ಕೇಸ್‌ನ ಹಿಂಭಾಗದಲ್ಲಿ ಧೂಳು ಇತ್ತು. ಪರದೆಯು ಪರಿಪೂರ್ಣವಾಗಿತ್ತು ಎಂದು ಡೇವಿಡ್‌ ಹೇಳಿಕೊಂಡಿದ್ದಾನೆ. 11,250 ಅಡಿಗಳಷ್ಟು ಮೇಲಿಂದ ಕೆಳಗಡೆ ಬಿದ್ದರೂ ಐಫೋನ್ ಒಂದೇ ಒಂದು ಗೀರು ಹೊಂದಿರಲಿಲ್ಲ ಎಂಬುದು ಆಪಲ್‌ಗೆ ಪ್ರಶಂಸೆಗೆ ಅರ್ಹವಾಗಿದೆ.

Best Mobiles in India

English summary
A pilot has shared an incident wherein he dropped his iPhone X mid-flight while taking a picture.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+