ಐಫೋನ್6ನಿಂದ ಭರ್ಜರಿ ಉದ್ಯೋಗ ಸೃಷ್ಟಿ

By Shwetha
|

ಆಪಲ್‌ನ ಮುಂಬರಲಿರುವ ಐಫೋನ್6 ಉತ್ತಮ ವೈಶಿಷ್ಟ್ಯವುಳ್ಳ ಡಿವೈಸ್ ಅನ್ನು ಗ್ರಾಹಕರಿಗೆ ನೀಡಲಿದ್ದು ರೂಮರ್‌ಗಳು ಈ ಸುದ್ದಿಯನ್ನು ಇನ್ನಷ್ಟು ಬಿಸಿಬಿಸಿ ಮಾಡುವಂತೆ ಮಾಹಿತಿಯನ್ನು ನೀಡುತ್ತಿವೆ. ಈ ವರ್ಷದ ಜುಲೈನಲ್ಲಿ ನೆಕ್ಸ್ಟ್ ಜನರೇಶನ್ ಐಫೋನ್ ಬರುವ ಸಾಧ್ಯತೆ ಹೆಚ್ಚು ಕಡಿಮೆ ಖಾತ್ರಿಯಾಗಿದೆ.

ನೆಕ್ಸ್ಟ್ ಜನರೇಶನ್ ಐಫೋನ್ ಉತ್ಪಾದನೆಗಾಗಿ 100,000 ಜನರನ್ನು ಆಪಲ್ ಪಾಲುದಾರ ಫೋಕ್ಸ್‌ಕೋನ್ ನಿಯೋಜಿಸಲಿದ್ದು ಫೋನ್‌ ಬಗೆಗಿನ ಉತ್ಪ್ರೇಕ್ಷೆಯನ್ನು ಇನ್ನಷ್ಟು ಹೆಚ್ಚುಮಾಡಲಿದೆ.

ಆಪಲ್ ಐಫೋನ್ 6 ನಿಂದ ಉದ್ಯೋಗ ಖಾತ್ರಿ

ತೈವಾನ್‌ನ ಇಕೋನಾಮಿಕ್ ಡೈಲಿ ನ್ಯೂಸ್ ಪ್ರಕಾರ ಫೋಕ್ಸ್‌ಕೋನ್ 100,000 ಸಿಬ್ಬಂದಿಗಳನ್ನು ಐಫೋನ್ ತಯಾರಿಕೆಯಲ್ಲಿ ತೊಡಗಿಸಲಿದ್ದು ಕಂಪೆನಿಯ ಹಿಂದಿನ ಉತ್ಪಾದನೆಯ ಐಫೋನ್ 5 ಮತ್ತು ಐಫೋನ್ 6 ಉತ್ಪಾದನೆಯನ್ನು ಇದು ಹಿಂದಿಕ್ಕುವ ಲಕ್ಷಣ ಕಂಡುಬರುತ್ತಿದೆ.

ಸೆಕೆಂಡರಿ ಸಪ್ಲೈಯರ್ ಪೆಗಾಟ್ರೋನ್ ಬೇಡಿಕೆಗಳ ಹಂಚಿಕೆಗಳ 30 ಶೇಕಡದಷ್ಟನ್ನು ಸ್ವೀಕರಿಸಿದ ನಂತರ ತನ್ನ ನೋಂದಾವಣೆಯನ್ನು ಹೆಚ್ಚಿಸಲಿದೆ. ಪೆಗಾಟ್ರೋನ್‌ನೊಂದಿಗೆ, ಆಪಲ್ ಇನ್‌ಸೈಡರ್ ಬರೆಯುವಂತೆ, ಆಪಲ್ ಐಫೋನ್6 ನ ಉತ್ಪಾದನೆಯು ಚೈನಾದಲ್ಲಿ ಉತ್ತಮ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಡೈಲಿ ನ್ಯೂಸ್ ತಿಳಿಸಿದೆ.

ಪೆಗಾಟ್ರೋನ್ 30 ಶೇಕಡದಷ್ಟು ಬೇಡಿಕೆಗಳ ಪೂರೈಕೆಯನ್ನು ನಿರ್ವಹಿಸಲಿದ್ದು ಫೋನ್‌ನ ಹಂಚಿಕೆಯು ಪೆಗಾಟ್ರೋನ್‌ಗೆ ನೇರವಾಗಿ ಲಭ್ಯವಾಗಲಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X