ಆಗಸ್ಟ್‌ನಲ್ಲಿ ಮೇಡ್‌ ಇನ್‌ ಇಂಡಿಯಾ ಐಫೋನ್‌ X ಲಾಂಚ್..! ಬೆಲೆ ಇಳಿಕೆಗೆ ಸಿದ್ಧವಾಗಿದೆ ಮಾರ್ಕೆಟ್..!

By Gizbot Bureau
|

ಜಗತ್ತಿನಲ್ಲಿ ಗುಣಮಟ್ಟದಿಂದಲೇ ಗ್ರಾಹಕರನ್ನು ಸೆಳೆದಿರುವ ಹಾಗೂ ತನ್ನದೇ ಆದ ಬ್ರಾಂಡ್ ಮೌಲ್ಯವನ್ನು ಹೊಂದಿರುವ ಆಪಲ್‌ ಕಂಪನಿಯು ಮೇಡ್‌ ಇನ್‌ ಇಂಡಿಯಾದ ಐಫೋನ್‌ಗಳನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಸ್ಥಳೀಯ ಫಾಕ್ಸ್‌ಕಾನ್‌ ಘಟಕದಲ್ಲಿ ಜೋಡಿಸಲ್ಪಟ್ಟಿರುವ ಟಾಪ್‌ ಎಂಡ್‌ ಐಫೋನ್‌ಗಳು ಆಗಸ್ಟ್‌ನಲ್ಲಿ ಇಂಡಿಯನ್ ಮಾರ್ಕೆಟ್‌ನಲ್ಲಿ ಕಾಲಿಡಲಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದರಿಂದ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾದ ಭಾರತದಲ್ಲಿ ಬೆಲೆ ಕುಸಿತ ಕಾಣುವುದು ಖಂಡಿತ. ಒಂದಿಷ್ಟು ಅನುಮೋದನೆಗಳು ಬಾಕಿಯಿದ್ದು, ಆಗಸ್ಟ್ ವೇಳೆಗೆ ಭಾರತ ನಿರ್ಮಿತ ಐಫೋನ್ XR ಮತ್ತು ಐಫೋನ್ XS ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ನೋ ಕಾಮೆಂಟ್‍

ನೋ ಕಾಮೆಂಟ್‍

ಆಗಸ್ಟ್ ವೇಳೆಗೆ ಭಾರತ ನಿರ್ಮಿತ ಐಫೋನ್‌ಗಳನ್ನು ಬಿಡುಗಡೆ ಮಾಡುವ ಕುರಿತು ಆಪ್‌ಲ್ ಕಂಪನಿಯು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅದಲ್ಲದೇ ಫಾಕ್ಸ್‌ಕಾನ್‌ ಕಂಪನಿಯು ಕೂಡ ತನ್ನ ಗ್ರಾಹಕರ ಅಥವಾ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ಮಾಹಿತಿ ನೀಡುವುದಿಲ್ಲ ಎಂದಿದ್ದು, ಮೇಡ್‌ ಇನ್ ಇಂಡಿಯಾ ಐಫೋನ್‌ಗಳ ಬಿಡುಗಡೆಗೆ ಅನಿಶ್ಚಿತತೆ ಮುಂದುವರೆದಿದೆ.

ಆಪಲ್ ಸೂತ್ರ

ಆಪಲ್ ಸೂತ್ರ

ಸ್ಥಳೀಯ ಜೋಡಣೆ ಘಟಕಗಳನ್ನು ವಿಸ್ತರಿಸುವುದರಿಂದ ತೆರಿಗೆ ಉಳಿಸಬಹುದೆಂದು ಆಪಲ್‌ ಕಂಪನಿ ಕಂಡುಕೊಂಡಿದೆ. ಸಂಪೂರ್ಣ ನಿರ್ಮಿತ ಸಾಧನಗಳ ಆಮದು ಮಾಡಿಕೊಳ್ಳುವಾಗ ವಿಧಿಸುವ ಆಮದು ತೆರಿಗೆ ಹೆಚ್ಚಿರುತ್ತದೆ. ಈ ಕಾರಣದಿಂದ ಸ್ಥಳೀಯವಾಗಿ ಐಫೋನ್‌ ತಯಾರಿಸಲು ಆಪಲ್‌ ಉತ್ಸುಕವಾಗಿದೆ. ಇದರ ಜೊತೆ ಭಾರತದಲ್ಲಿ ತನ್ನದೇ ಆದ ರಿಟೇಲ್‌ ಸ್ಟೋರ್‌ಗಳನ್ನು ತೆರೆಯಲು ಕೂಡ ಮುಂದಾಗುತ್ತಿದೆ. ಆಪಲ್‌ನ ಸಾಧನಗಳು ಲಕ್ಷಾಂತರ ಭಾರತೀಯರಿಂದ ಅಪೇಕ್ಷಿಸಲ್ಪಟ್ಟಿವೆ. ಆದರೆ, ಐಫೋನ್‌ಗಳ ಪ್ರೀಮಿಯಂ ಬೆಲೆಯ ಕಾರಣದಿಂದ ಚೀನಾದ ಒನ್‌ಪ್ಲಸ್‌ನಂತಹ ಕಂಪನಿಗಳ ಎದುರು ಮಾರುಕಟ್ಟೆಯ ಪಾಲನ್ನು ಶೇ.1ಕ್ಕೆ ಸೀಮಿತಗೊಳಿಸಿದೆ. ಸ್ಥಳೀಯ ಉತ್ಪಾದನೆಯು ಆಪಲ್‌ಗೆ ತಮ್ಮ ವಿತರಕರ ಮಾರ್ಜಿನ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಪರೋಕ್ಷವಾಗಿ ಫೋನ್‌ಗಳಿಗೆ ಕಡಿಮೆ ಬೆಲೆ ನೀಡುತ್ತದೆ ಎಂದು ಕ್ಯಾನಲಿಸ್‌ನ ಟೆಕ್ ಕನ್ಸಲ್ಟೆನ್ಸಿ ಸಂಶೋಧನಾ ನಿರ್ದೇಶಕ ರುಷಭ್ ದೋಶಿ ಹೇಳುತ್ತಾರೆ.

 ಫಾಕ್ಸ್‌ಕಾನ್‌

ಫಾಕ್ಸ್‌ಕಾನ್‌

ತಮಿಳುನಾಡಿನಲ್ಲಿರುವ ಹೊನ್‌ ಹೈ ಪ್ರೆಸಿಷನ್ ಇಂಡಸ್ಟ್ರೀ ಕಂಪನಿಯ ಸ್ಥಳೀಯ ಘಟಕ ಫಾಕ್ಸ್‌ಕಾನ್‌, ಈ ವರ್ಷದಿಂದ ಭಾರತದಲ್ಲಿ ಐಫೋನ್ X ಆವೃತ್ತಿಯ ಸಾಧನಗಳನ್ನು ಜೋಡಿಸಲು ಪ್ರಾರಂಭಿಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಇನ್ನು, ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಪಲ್‌ ಕಂಪನಿ ಕಡಿಮೆ ಬೆಲೆಯ ಐಫೋನ್ SE, ಐಫೋನ್‌ 6S ಮತ್ತು ಐಫೋನ್‌ 7 ಮಾದರಿಗಳನ್ನು ಬೆಂಗಳೂರಿನ ಟೆಕ್ ಹಬ್‌ನಲ್ಲಿರುವ ವಿಸ್ಟ್ರಾನ್ ಕಾರ್ಪ್‌ನ ಸ್ಥಳೀಯ ಘಟಕದಲ್ಲಿ ಜೋಡಿಸುತ್ತಿದೆ.

ವ್ಯಾಪಾರ ಯುದ್ಧ

ವ್ಯಾಪಾರ ಯುದ್ಧ

ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ದಕ್ಷಿಣ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಕೇಂದ್ರವಾಗಿ ಭಾರತವನ್ನು ಇರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಲಿಯನ್ ವೈರ್‌ಲೆಸ್‌ ಸಂಪರ್ಕ ಹಾಗೂ ಅಗ್ಗದ ಕಾರ್ಮಿಕರನ್ನು ಹೊಂದಿರುವ ಮಾರುಕಟ್ಟೆಗೆ ಜಾಗತಿಕ ಕಂಪನಿಗಳು ಪ್ರವೇಶ ಮಾಡಿವೆ. ಸ್ಯಾಮ್‌ಸಂಗ್ ಮತ್ತು ಚೀನಾದ ಒಪ್ಪೊ ಕಂಪನಿ ಸೇರಿ ಜಾಗತಿಕ ಸ್ಮಾರ್ಟ್‌ಫೋನ್ ದೈತ್ಯರು ಭಾರತದಲ್ಲಿ ಮಾರುಕಟ್ಟೆಯನ್ನು ವೇಗವಾಗಿ ವಿಸ್ತರಿಸಿದ್ದರಿಂದ ಭಾರತ ಸ್ಮಾರ್ಟ್‌ಫೋನ್‌ ತಯಾರಿಕೆ ಹಬ್‌ ಆಗುವುದರಲ್ಲಿ ಮುನ್ನುಗ್ಗುತ್ತಿದೆ. ಮತ್ತು ಫಾಕ್ಸ್‌ಕಾನ್‌ನಂತಹ ಗುತ್ತಿಗೆ ತಯಾರಕರು ಕೂಡ ದೇಶೀಯ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದಾರೆ.

ಚೀನಾ - ಯುಎಸ್‌ ಟ್ರೇಡ್‌ ವಾರ್

ಚೀನಾ - ಯುಎಸ್‌ ಟ್ರೇಡ್‌ ವಾರ್

ಸ್ಥಳೀಯ ಬೇಡಿಕೆ ಈಡೇರಿಸುವುದರ ಹೊರತಾಗಿ ಆಪಲ್‌ನಂತಹ ಕಂಪನಿಗಳು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ಪರಿಣಾಮ ಮೃದುಗೊಳಿಸಲು ಭಾರತವನ್ನು ರಫ್ತು ಕೇಂದ್ರವನ್ನಾಗಿ ಬಳಸಿಕೊಳ್ಳಬಹುದು ಎಂದು ತಂತ್ರಜ್ಞಾನ ವಿಶ್ಲೇಷಕರು ಹೇಳುತ್ತಾರೆ. ಇನ್ನು, ಆಪಲ್ ತನ್ನ ಮೊದಲ ತ್ರೈಮಾಸಿಕ ಮಾರಾಟದ ಮುನ್ಸೂಚನೆಯನ್ನು ಕಡಿತಗೊಳಿಸಿದ್ದು, ಚೀನಾದಲ್ಲಿ ಐಫೋನ್ ಮಾರಾಟ ಕುಸಿಯುತ್ತಿದೆ ಎಂದು ಆರೋಪಿಸುತ್ತಿದೆ.ಅಮೆರಿಕ - ಚೀನಾ ನಡುವಿನ ವ್ಯಾಪಾರ ಸಂಬಂಧಗಳ ಸುತ್ತ ಮುಂದುವರಿದಿರುವ ಅನಿಶ್ಚಿತತೆ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ.

ಭಾರತದಿಂದ ಯುರೋಪ್‌ಗೆ ರಫ್ತು

ಭಾರತದಿಂದ ಯುರೋಪ್‌ಗೆ ರಫ್ತು

ಬೆಂಗಳೂರಿನ ವಿಸ್ಟ್ರಾನ್‌ಲ್ಲಿ ಜೋಡಿಸಲಾದ ಐಫೋನ್ 6S ಮತ್ತು ಐಫೋನ್ 7ಗಳನ್ನು ಭಾರತದಿಂದ ಯುರೋಪಿನ ಮಾರುಕಟ್ಟೆಗೂ ರಫ್ತು ಮಾಡಲಾಗುತ್ತಿದೆ ಎಂದು ಹಾಂಗ್‌ಕಾಂಗ್ ಮೂಲದ ಕೌಂಟರ್‌ಪಾಯಿಂಟ್‌ನ ಟೆಕ್ ಸಂಶೋಧಕ ನೀಲ್ ಷಾ ಹೇಳಿದ್ದಾರೆ. ಆದರೆ, ಈ ಬಗ್ಗೆ ವಿಸ್ಟ್ರಾನ್ ಕಂಪನಿಯ ಭಾರತದ ಮುಖ್ಯಸ್ಥರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Best Mobiles in India

Read more about:
English summary
Apple iPhones Might Receive A Price Cut In India: Thank To Made In India iPhones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X