ಮುಂದಿನ ಐಫೋನ್‌ಗಳಲ್ಲಿ ಚಾರ್ಜಿಂಗ್‌ ಪೋರ್ಟ್‌ ಇರೋದೆ ಇಲ್ಲ..!

By Gizbot Bureau
|

2020ರಲ್ಲಿರುವ ಆಪಲ್ ಐಫೋನ್‌ಗಳ ಬಿಡುಗಡೆ ಬಗ್ಗೆ ಈಗಲೇ ಮಾತನಾಡಿದರೆ ಅದು ಸ್ವಲ್ಪ ದೂರದ ಸಂಗತಿ ಅನಿಸುತ್ತದೆ. ಆದರೆ, ಮುಂದಿನ ವರ್ಷ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳ ಆಕಾರ, ಗಾತ್ರ ಮತ್ತು ಫೀಚರ್‌ಗಳಿಗೆ ಸಂಬಂಧಿಸಿದ ಅನೇಖ ಮಾಹಿತಿ ಇಲ್ಲಿದೆ. ಖ್ಯಾತ ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ, 2020 ಮತ್ತು 2021 ರಲ್ಲಿ ಬಿಡುಗಡೆಯಾಗುವ ಮುಂದಿನ ಐಫೋನ್‌ಗಳ ಬಗ್ಗೆ ಅನಿರೀಕ್ಷಿತ ವಿವರವನ್ನು ಹೊರಹಾಕಿದ್ದಾರೆ.

ಐಫೋನ್

9to5Macನಲ್ಲಿ ಪ್ರಕಟವಾದ ವರದಿಯಂತೆ, 2021ರ ಆಪಲ್‌ನ ಪ್ರಮುಖ ಐಫೋನ್ ಲೈಟಿಂಗ್‌ ಫೋರ್ಟ್‌ನ್ನು ಅಂತ್ಯಗೊಳಿಸುತ್ತದೆ. ಕುವೊ ಪ್ರಕಾರ, ಆಪಲ್ ಪೋರ್ಟ್‌ನ್ನು ಯುಎಸ್‌ಬಿ-ಸಿ ಟೈಪ್ ಚಾರ್ಜರ್‌ ಆಗಿಯೂ ಬದಲಾಯಿಸುವುದಿಲ್ಲ, ಆದರೆ, ಚಾರ್ಜಿಂಗ್ ಮತ್ತು ಸಿಂಕ್‌ಗಾಗಿ ಸಂಪೂರ್ಣ ವೈರ್‌ಲೆಸ್ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಆಪಲ್‌ ಮುಂದಾಗಿದೆ.

ಲೈಟಿಂಗ್‌ ಪೋರ್ಟ್‌ ಇರಲ್ಲ

ಲೈಟಿಂಗ್‌ ಪೋರ್ಟ್‌ ಇರಲ್ಲ

ಕ್ಯುಪರ್ಟಿನೋ ಮೂಲದ ಸ್ಮಾರ್ಟ್‌ಫೋನ್ ತಯಾರಕರಿಗೆ ಇದು ದೊಡ್ಡಮಟ್ಟದದ ಬದಲಾವಣೆಯಾಗಿದೆ. ಲೈಟಿಂಗ್‌ ಪೋರ್ಟ್‌ನ್ನು ಐಫೋನ್ 5 ಸರಣಿಗಳಲ್ಲಿ ಮೊದಲು ಪರಿಚಯಿಸಲಾಗಿತ್ತು. ಪ್ರತಿವರ್ಷ ಹೊಸ ಐಫೋನ್‌ಗಳ ಬಿಡುಗಡೆಯೊಂದಿಗೆ ಆಪಲ್ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ.

ಪ್ರತಿ 2 ವರ್ಷಕ್ಕೊಮ್ಮೆ ಬಿಗ್‌ ಚೆಂಜ್‌

ಪ್ರತಿ 2 ವರ್ಷಕ್ಕೊಮ್ಮೆ ಬಿಗ್‌ ಚೆಂಜ್‌

ಪ್ರತಿ ಎರಡು ವರ್ಷಗಳಿಗೊಮ್ಮೆ ದೊಡ್ಡದಾದ ಹಾಗೂ ಮಹತ್ವದ ಬದಲಾವಣೆಗಳನ್ನು ತರುತ್ತದೆ. ಉದಾಹರಣೆಗೆ, 2013 ರಲ್ಲಿ ಬಂದ ಕ್ರಾಂತಿಕಾರಿ ಐಒಎಸ್ 7 ಅಪ್‌ಡೇಡ್‌ ಐಫೋನ್ ಬಳಕೆದಾರರ ಇಂಟರ್‌ಫೇಸ್‌ನ್ನೆ ಬದಲಾಯಿಸಿತ್ತು. ಹಾಗೆಯೇ, ಆಪಲ್ ತನ್ನ ಪ್ರಮುಖ ಫೋನ್‌ಗಳಾದ 6 ಪ್ಲಸ್, 7 ಪ್ಲಸ್‌ನ ಆವೃತ್ತಿಗಳಿಗೆ ದೊಡ್ಡ ಸ್ಕ್ರೀನ್‌ ಆಯ್ದುಕೊಂಡಿತು.

ಟೆಕ್‌ ಉದ್ಯಮದ ಮೇಲೆ ಪರಿಣಾಮ

ಟೆಕ್‌ ಉದ್ಯಮದ ಮೇಲೆ ಪರಿಣಾಮ

2021ರ ಐಫೋನ್‌ನಲ್ಲಿ ಲೈಟಿಂಗ್ ಪೋರ್ಟ್‌ ಇಲ್ಲ ಎಂದರೆ ಐಫೋನ್‌ನ ವಿನ್ಯಾಸ, ನೋಟ ಮತ್ತು ಭಾವನೆಯಲ್ಲಿ ಹೆಚ್ಚಿನ ಬದಲಾವಣೆ ತರುವ ಸಾಧ್ಯತೆಯಿದೆ. ವೈರ್‌ಲೆಸ್ ರೀತಿಯಲ್ಲಿ ಡಾಟಾ ಸಿಂಕ್ ಮಾಡುವ ಬಗ್ಗೆ ಇಲ್ಲಿ ಸಮಸ್ಯೆ ಅಲ್ಲ. ಆದರೆ, ಸಂಪೂರ್ಣ ವೈರ್‌ಲೆಸ್‌ ಪ್ರಕ್ರಿಯೆ ಟೆಕ್ ಉದ್ಯಮದ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ಏಕೆಂದರೆ, ಕೇಬಲ್ ಕಂಪನಿಗಳು ಮತ್ತು ಹೆಡ್‌ಫೋನ್ ತಯಾರಕರಿಗೆ ಮುಂದಿನ ದಿನಗಳಲ್ಲಿ ಭಾರಿ ಹೊಡೆತ ಬೀಳುವುದು ಗ್ಯಾರಂಟಿ.

ಆನ್‌-ಸೆಲ್‌ ಟಚ್‌ ಒಎಲ್‌ಇಡಿ

ಆನ್‌-ಸೆಲ್‌ ಟಚ್‌ ಒಎಲ್‌ಇಡಿ

ಆಪಲ್ ಲೈಟಿಂಗ್‌ ಫೋರ್ಟ್‌ನ್ನು ಮೊದಲ ಬಾರಿಗೆ ಆಪಲ್‌ನ "ಉನ್ನತ-ಮಟ್ಟದ ಮಾದರಿ"ಯಿಂದ ಒಂದೇ ಬಾರಿಗೆ ತೆಗೆದುಹಾಕಲು ಯೋಜಿಸಲಾಗಿದೆ. ಇದಲ್ಲದೆ, ಆಪಲ್ ಐಫೋನ್ 12 ಸರಣಿಯ ಒಎಲ್ಇಡಿ ಡಿಸ್‌ಪ್ಲೇಗಳನ್ನು ಸಹ ಬಳಸುತ್ತಿದೆ. ಸ್ಯಾಮ್‌ಸಂಗ್ ಡಿಸ್‌ಪ್ಲೇ ಮತ್ತು ಎಲ್‌ಜಿ ಕಂಪನಿಗಳು 2020ರ ಆಪಲ್ ಐಫೋನ್‌ಗಳಿಗೆ ಪೂರೈಕೆದಾರರಾಗಿದ್ದು, ಆನ್-ಸೆಲ್ ಟಚ್ ಒಎಲ್ಇಡಿ ಪ್ಯಾನಲ್‌ನೊಂದಿಗೆ ಐಫೋನ್‌ ಬರಲಿದೆ.

Most Read Articles
Best Mobiles in India

Read more about:
English summary
Apple iPhones Will Likely Skip Charging Ports From 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X