Home
ಸುದ್ದಿಜಾಲ

Apple: ಆಂಡ್ರಾಯ್ಡ್‌ ಮೊಬೈಲ್ ಬಳಕೆದಾರರಿಗೆ ಆಪಲ್‌ನಿಂದ ಗುಡ್ ನ್ಯೂಸ್; ಆಂಡ್ರಾಯ್ಡ್‌ಗೆ ಆಪಲ್‌ ಟಿವಿ ಸೇವೆ ವಿಸ್ತರಣೆ !

ಆಂಡ್ರಾಯ್ಡ್ ಬಳಕೆದಾರರಿಗೆ ಆಪಲ್ (Apple) ಸಂಸ್ಥೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಆಪಲ್ ಸಂಸ್ಥೆ ಅಂತಿಮವಾಗಿ ತನ್ನ ಆಪಲ್ ಟಿವಿ (Apple TV) ಅಪ್ಲಿಕೇಶನ್ ಸರ್ವಿಸ್‌ ಅನ್ನು ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ನೀಡಲು ಸಿದ್ದತೆ ಆರಂಭಿಸಿದೆ. ಈ ಹಿಂದೆ ಈ ಅಪ್ಲಿಕೇಶನ್ ಅನ್ನು ಕೇವಲ ಐಫೋನ್‌ ಮತ್ತು ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಆದರೆ ಈಗ ಆಪಲ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಕಂಪನಿಯು ಈ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ಬ್ಲೂಮ್‌ಬರ್ಗ್ ಮಾಹಿತಿ ನೀಡಿದೆ.

ಆಪಲ್‌ ಟಿವಿ ಅಪ್ಲಿಕೇಶನ್ ವಿಶೇಷವಾಗಿ ಆಪಲ್ ಟಿವಿ+ ಮೂಲಗಳಾದ ಕೆಲವು ಶೋಗಳು, ಚಲನಚಿತ್ರಗಳು ಮತ್ತು ಆಪಲ್ ಸಂಸ್ಥೆ ನಿರ್ಮಿಸಿದ ಸಾಕ್ಷ್ತ್ರಗಳನ್ನು ಒಳಗೊಂಡಂತೆ ವಿವಿಧ ವಿಷಯವನ್ನು ಸ್ಟ್ರೀಮಿಂಗ್ ಮಾಡಲು ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ HBO ಮತ್ತು ಶೋ ಟೈಮ್‌ನಂತಹ ಇತರ ಆಪಲ್ ಟಿವಿ ಚಾನಲ್‌ಗಳಿಗೆ ಚಂದಾದಾರರಾಗಲು ಅನುಮತಿ ನೀಡುತ್ತದೆ.

ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಆಪಲ್ ಟಿವಿ ಅಪ್ಲಿಕೇಶನ್ ವಿಸ್ತರಿಸಲು ಮುಂದಾದ ಆಪಲ್

ವೈವಿಧ್ಯಮಯ ಸ್ಟ್ರೀಮಿಂಗ್ ಆಯ್ಕೆಗಳಿಗಾಗಿ ಏಕೀಕೃತ ವೇದಿಕೆ ನೀಡಲಿದ್ದು. ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಸ್ಟೋರ್‌ನಿಂದ ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ಖರೀದಿಸಬಹುದು ಅಥವಾ ಬಾಡಿಗೆ ಪಡೆಯಬಹುದು ಇದರ ಜೊತೆಗೆ ಶುಕ್ರವಾರ ರಾತ್ರಿಯ ಬೇಸ್‌ಬಾಲ್ ಮತ್ತು MLS ಸೀಸನ್ ಪಾಸ್ ಸೇರಿದಂತೆ ಲೈವ್ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ.

ಆಪಲ್ ಟಿವಿ+ ಕಾರ್ಯಕ್ರಮಗಳನ್ನು ವೀಕ್ಷಿಸಲು ಅಥವಾ MLS ಸೀಸನ್ ಪಾಸ್ ಪಡೆಯಲು ಬಯಸುವ ಆಂಡ್ರಾಯ್ಡ್ ಬಳಕೆದಾರರು ಟಿವಿ.ಆಪಲ್.ಕಾಮ್ (tv.apple.com) ವೆಬ್ ವರ್ಶನ್ ಬಳಸಬೇಕಾಗಿದ್ದು, ಇದು ಉತ್ತಮ ಪರಿಹಾರವಲ್ಲ, ಆದರೆ ಆಪಲ್ ಟಿವಿ+ ಕಾರ್ಯಕ್ರಮ ವೀಕ್ಷಿಸಲು ಇರುವ ಏಕೈಕ ಆಯ್ಕೆ ಇದಾಗಿದೆ. ಭಾರತದಲ್ಲಿ, ಆಪಲ್ ಟಿವಿ+ ಚಂದಾದಾರಿಕೆ ವೆಚ್ಚವು ತಿಂಗಳಿಗೆ 99 ರೂ. ಇದ್ದು ಹೊಸ ಚಂದಾದಾರರಿಗೆ 7 ದಿನಗಳ ಉಚಿತ ಪ್ರಯೋಗವನ್ನು ನೀಡುತ್ತದೆ. ಹೆಚ್ಚುವರಿಯಾಗಿ ನೀವು ಐಫೋನ್, ಐಪ್ಯಾಡ್‌, ಆಪಲ್‌ ಟಿವಿ, ಮ್ಯಾಕ್‌ ಅಥವಾ ಐಪೋಡ್ ಟಚ್‌ನಂತಹ ಹೊಸ ಆಪಲ್ ಡಿವೈಸ್ ಖರೀದಿಸಿದರೆ, ನೀವು ಒಂದು ವರ್ಷದ ಆಪಲ್ ಟಿವಿ+ ಅನ್ನು ಉಚಿತವಾಗಿ ಆನಂದಿಸಬಹುದಾಗಿದೆ. ಉಚಿತ ಅವಧಿಯ ನಂತರ ಮಾಸಿಕ ಶುಲ್ಕ ಅನ್ವಯಿಸುತ್ತದೆ. ಒಂದು ಚಂದಾದಾರಿಕೆ ಆರು ಮಂದಿ ಸದಸ್ಯರಿಗೆ ಹಂಚಲು ಅನುಮತಿ ನೀಡುತ್ತದೆ.

ಆಪಲ್‌ನ ಮತ್ತೊಂದು ಪ್ರಮುಖ ಸೇವೆಯಾದ ಆಪಲ್ ಮ್ಯೂಸಿಕ್ ಅನ್ನು ಆಪಲ್ ಟಿವಿ ಅಪ್ಲಿಕೇಶನ್‌ನಲ್ಲಿ ತರಲಿದೆ. ಈ ಮ್ಯೂಸಿಕ್‌ ಅನ್ನು 2015ರಲ್ಲಿ iOS ನಲ್ಲಿ ಪ್ರತ್ಯೇಕವಾಗಿ ಪ್ರಾರಂಭಿಸಲಾಗಿತ್ತು ಮತ್ತು ಅದೇ ವರ್ಷದ ಆಂಡ್ರಾಯ್ಡ್‌ನಲ್ಲಿ ಲಭ್ಯವಾಯಿತು. ಆಪಲ್ ಟಿವಿ ಅಪ್ಲಿಕೇಶನ್ 2019ರಲ್ಲಿ ಪ್ರಾರಂಭವಾಗಿದ್ದು ಇಲ್ಲಿಯವರೆಗೆ ಐಫೋನ್‌ಗಳಿಗೆ ಮಾತ್ರ ಸೀಮಿತವಾಗಿದೆ.

ಆಪಲ್ ಟಿವಿ ಅಪ್ಲಿಕೇಶನ್‌ನ ಲಭ್ಯತೆಯನ್ನು ಮೊಬೈಲ್ ಸಾಧನಗಳನ್ನು ಮೀರಿ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ವಿಸ್ತರಿಸಲು ಮುದಾಗಿದೆ. ಈ ವಿಸ್ತರಣೆಯಿಂದಾಗಿ ಆಪಲ್ ಟಿವಿ+ ಗೆ ಹೆಚ್ಚಿನ ವೀಕ್ಷಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಅಪ್ಲಿಕೇಶನ್ ಈಗಾಗಲೇ ರೋಕು (Roku), ಅಮೇಜಾನ್ ಫೈರ್ ಸ್ಟಿಕ್ (Amazon Fire Stick), ಪ್ಲೇ ಸ್ಟೇಷನ್ (PlayStation), ಎಕ್ಸ್‌ಬಾಕ್ಸ್ (Xbox), ಎಕ್ಸ್‌ಫಿಇನಿಟಿ (Xfinity) ಕೇಬಲ್ ಬಾಕ್ಸ್‌ಗಳು ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಲಭ್ಯವಿದೆ. ಕಳೆದ ವರ್ಷ, ಆಪಲ್ ಸ್ಥಳೀಯ ವಿಂಡೋಸ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ.

ಆಪಲ್ ಟಿವಿ ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್‌ಗೆ ವಿಸ್ತರಿಸಲು ಮುಂದಾಗಿರುವುದು ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸ ಸುದ್ದಿಯಾಗಿದ್ದು, ಈ ಬದಲಾವಣೆಯು ಐಫೋನ್ ಅಲ್ಲದ ಬಳಕೆದಾರರು ಆಪಲ್ ಟಿವಿ+ ಸೇವೆಯ ಅನುಕೂಲ ಪಡೆಯಲು ಸಹಕಾರಿಯಾಗಿದೆ.

Best Mobiles in India

English summary
Apple is finally start working to bringing its Apple TV app service to Android smartphones and tablets, according to Bloomberg.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+