ಭಾರತದಲ್ಲಿ ತೆರೆಯಲಿದೆ ವಿಶ್ವದರ್ಜೆಯ 'ಆಪಲ್' ಸ್ಟೋರ್!

|

ಭಾರತದಲ್ಲಿ ಆಪಲ್ ಕಂಪೆನಿಯ ಐಫೋನ್‌ಗಳು, ಮ್ಯಾಕ್‌ಬುಕ್ಸ್ ಮತ್ತು ಐಪ್ಯಾಡ್‌ಗಳಂತಹ ಉತ್ಪನ್ನಗಳನ್ನು ಇನ್ಮುಂದೆ ಥರ್ಡ್ ಪಾರ್ಟಿ ಮಾರಾಟಗಾರರ ಮೂಲಕ ಖರೀದಿಸಬೇಕಾದ ಪ್ರಮೇಯ ಬರುವುದಿಲ್ಲ. ಏಕೆಂದರೆ, ಎಫ್‌ಡಿಐ ಹೂಡಿಕೆ ನಿಯಮದಲ್ಲಿ ಸಡಿಲಿಕೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ನಿಯಮ ಸ್ವಾಗತಿಸಿರುವ ಆಪಲ್ ಕಂಪೆನಿ, ಶೀಘ್ರವೇ ದೇಶದಲ್ಲಿ ತನ್ನದೇ ಮೊಟ್ಟ ಮೊದಲ ಅಧಿಕೃತ ಆಪಲ್ ಸ್ಟೋರ್ ತೆರೆಯುವುದಾಗಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಭಾರತದಲ್ಲಿ ತೆರೆಯಲಿದೆ ವಿಶ್ವದರ್ಜೆಯ 'ಆಪಲ್' ಸ್ಟೋರ್!

ಹೌದು, ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಚಿಲ್ಲರೆ ಪ್ಲಾಟ್‌ಫಾರ್ಮ್‌ಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆಪಲ್, ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಆನ್‌ಲೈನ್ ಸ್ಟೋರ್ ಅನ್ನು ಮೊದಲು ತೆರೆಯಲಿದೆ. ಹಾಗೆಯೇ, 2020 ರಲ್ಲಿ ಭಾರತದಲ್ಲಿ ತನ್ನ ಮೊದಲ ಚಿಲ್ಲರೆ ಅಂಗಡಿಯನ್ನು ತೆರೆಯಲಿದೆ ಎನ್ನಲಾಗಿದೆ. ಭಾರತದಲ್ಲಿ ಆನ್‌ಲೈನ್ ಮತ್ತು ಮಳಿಗೆಗಳಲ್ಲಿ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಆಪಲ್ ಹೇಳಿರುವುದನ್ನು ಬ್ಲೂಮ್‌ಬರ್ಗ್ ವರದಿ ಮಾಡಿದೆ.

"ನಾವು ಭಾರತದಲ್ಲಿ ನಮ್ಮ ಗ್ರಾಹಕರನ್ನು ಪ್ರೀತಿಸುತ್ತೇವೆ ಮತ್ತು ಪ್ರಪಂಚದಾದ್ಯಂತದ ಆಪಲ್ ಗ್ರಾಹಕರು ಆನಂದಿಸುವ ಅದೇ ಅನುಭವ ಮತ್ತು ಕಾಳಜಿಯೊಂದಿಗೆ ಆನ್‌ಲೈನ್ ಮತ್ತು ಅಂಗಡಿಯಲ್ಲಿ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ. ಪ್ರಧಾನಿ ಮೋದಿ ಮತ್ತು ಅವರ ತಂಡದ ಬೆಂಬಲ ಮತ್ತು ಶ್ರಮವನ್ನು ನಾವು ಪ್ರಶಂಸಿಸುತ್ತೇವೆ. ನಾವು ಭಾರತದ ಮೊದಲ ಆಪಲ್ ಚಿಲ್ಲರೆ ಅಂಗಡಿಗೆ ಗ್ರಾಹಕರನ್ನು ಸ್ವಾಗತಿಸಲು ಒಂದು ದಿನ ಎದುರು ನೋಡುತ್ತಿದ್ದೇವೆ ಎಂದು ಆಪಲ್ ಕಂಪೆನಿ ಹೇಳಿರುವುದು ವರದಿಯಾಗಿದೆ.

ಭಾರತದಲ್ಲಿ ತೆರೆಯಲಿದೆ ವಿಶ್ವದರ್ಜೆಯ 'ಆಪಲ್' ಸ್ಟೋರ್!

ಆಪಲ್ ಕಂಪೆನಿ ದೇಶದಲ್ಲಿ ಅತ್ಯಂತ ಹೆಚ್ಚಿನ ಮಾರುಕಟ್ಟೆ ಪಾಲು ಪಡೆದುಕೊಳ್ಳುವ ಉದ್ದೇಶ ಹೊಂದಿದೆ. ಹೀಗಾಗಿ ಈಗಾಗಲೇ ಆನ್‌ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ ಐಫೋನ್ ತಲುಪಿಸುವ ಕಾರ್ಯಕ್ಕೆ ಮೊದಲಿಗೆ ಮುಂದಾಗಿದೆ. ಆದರೆ, ಅದರ ಹೊರತಾಗಿಯೂ ಸಿಂಗಲ್ ಬ್ರ್ಯಾಂಡ್ ರಿಟೇಲ್ ಮಳಿಗೆ ಸ್ಥಾಪಿಸಿ, ಅದರ ಮೂಲಕ ಆಪಲ್ ಸ್ಟೋರ್‌ಗಳನ್ನು ಭಾರತಕ್ಕೆ ತರಲು ಸಜ್ಜಾಗಿದೆ ಎಂದು ತಿಳಿದುಬಂದಿದೆ. ಇದರಿಂದ ವಿಶ್ವದರ್ಜೆಯ ಆಪಲ್ ಸ್ಟೋರ್ ಮತ್ತು ಮಾರಾಟ ನಂತರದ ಸೇವೆಗಳು ದೇಶದ ಗ್ರಾಹಕರಿಗೆ ದೊರಕಲಿವೆ.

ಸಿಕ್ಕಿದ್ರೆ ಇಂತಹ ಬಾಸ್‌ಗಳ ಕೈಕೆಳಗೆ ಕೆಲಸ ಸಿಗ್ಬೇಕು!..ಏಕೆ ಗೊತ್ತಾ?ಸಿಕ್ಕಿದ್ರೆ ಇಂತಹ ಬಾಸ್‌ಗಳ ಕೈಕೆಳಗೆ ಕೆಲಸ ಸಿಗ್ಬೇಕು!..ಏಕೆ ಗೊತ್ತಾ?

ಜತೆಗೆ ಚೀನಾ ಜತೆಗಿನ ವಾಣಿಜ್ಯ ಸಮರದ ಬಳಿಕ ದೇಶದಲ್ಲೇ ಹೆಚ್ಚಿನ ಉತ್ಪನ್ನಗಳನ್ನು ಕೂಡ ತಯಾರಿಸಲು ಆಪಲ್ ಮುಂದಾಗಿದ್ದು, ಇದರಿಂದ ಆಮದು ಸುಂಕ ಮತ್ತು ಇತರ ತೆರಿಗೆ ವಿನಾಯಿತಿಯ ಪ್ರಯೋಜನವು ಕಂಪೆನಿಗೆ ಲಭ್ಯವಾಗಲಿದೆ. ದೇಶದ ಕೆಲವು ವಲಯಗಳಿಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಾನದಂಡಗಳನ್ನು ಸರಾಗಗೊಳಿಸುವ ಭಾರತ ಸರ್ಕಾರದ ನಿರ್ಧಾರದಿಂದಾಗಿ ಅಧಿಕೃತ ಆಪಲ್ ಸ್ಟೋರ್ ತೆರೆಯಬಹುದಾದ ಈ ಬೆಳವಣಿಗೆ ಸಂಭವಿಸಿದೆ ಎಂದು ಟೆಕ್ ತಜ್ಞರು ವಿಶ್ಲೇಷಿಸಿದ್ದಾರೆ.

Best Mobiles in India

English summary
According to a report by Bloomberg, Apple is gearing to open its online store in India in the coming months. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X